ಅಂದು ಹೀಗಿದ್ದ 'ಪರಮೇಶ ಪಾನ್‌ವಾಲಾ' ನಟಿ ಈಗ ಹೇಗಾಗಿದ್ದಾರೆ ನೋಡಿ!
ಇತ್ತೀಚೆಗಷ್ಟೇ ನೆಟ್‌ಫ್ಲಿಕ್ಸ್‌ನಲ್ಲಿ 'ರಾಣಾ ನಾಯ್ಡು' ಅನ್ನೋ ವೆಬ್ ಸಿರೀಸ್ ರಿಲೀಸ್ ಆಗಿತ್ತು. ವಿಕ್ಟರಿ ವೆಂಕಟೇಶ್ ಹಾಗೂ ರಾಣಾ ದಗ್ಗುಬಾಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ 'ರಾಣಾ ನಾಯ್ಡು' ಸೀರಿಸ್‌ನಲ್ಲಿ ಗಮನ ಸೆಳೆದ ಮತ್ತೊಬ್ಬ ನಟಿ ಸುರ್ವೀನ್ ಚಾವ್ಲಾ. ಗ್ಲಾಮರ್ ರೋಲ್‌ನಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ನಟಿ ಬಹಳ ದಿನಗಳ ಬಳಿಕ ಗಮನ ಸೆಳೆದಿದ್ದರು. ಇದೇ ನಟಿಯೀಗ ಬಾತ್‌ಟಬ್‌ನಲ್ಲಿ ಕೂತು ಪೋಸ್ ಕೊಟ್ಟಿದ್ದಾರೆ. ಆ ಫೋಟೊ ವೈರಲ್ ಆಗುತ್ತಿದೆ.
ತೆಲುಗು, ತಮಿಳು, ಪಂಜಾಬಿ, ಹಿಂದಿ ಭಾಷೆಯ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಸುರ್ವೀನ್ ಚಾವ್ಲಾ ಸಿನಿ ಜರ್ನಿ ಕನ್ನಡ ಸಿನಿಮಾದಿಂದ ಆರಂಭ ಆಗಿತ್ತು ಅಂದ್ರೆ ನಂಬ್ತೀರಾ? ಹೌದು ಶಿವರಾಜ್‌ಕುಮಾರ್ ನಟಿಸಿದ್ದ 'ಪರಮೇಶ ಪಾನ್‌ವಾಲಾ' ಈ ನಟಿಯ ಮೊದಲ ಸಿನಿಮಾ. ಕನ್ನಡ ಸಿನಿಮಾದಲ್ಲಿ ನಟಿಸಿದ ಬಳಿಕವೇ ಬೇರೆ ಭಾಷೆಯ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದರು.

ಬಹುಭಾಷಾ ನಟಿ ಸುರ್ವೀನ್ ಚಾವ್ಲಾ ಸಿನಿಮಾಗೆ ಕಾಲಿಡುವುದಕ್ಕೂ ಮುನ್ನ ಕಿರುತೆರೆಯಲ್ಲಿ ಮಿಂಚಿದ್ದರು. 2003 ರಿಂದ 2007ರವರೆಗೆ 'ಕಹಿ ತೋ ಹೋಗಾ', 'ಕಸೌಟಿ ಜಿಂದಗಿ ಕೀ', 'ಕಾಜ್ಜಲ್' ಅಂತಹ ಧಾರಾವಾಹಿಗಳಲ್ಲಿ ಮಿಂಚಿದ್ದರು. ಬಳಿಕ 'ಏಕ್ ಕಿಲಾಡಿ ಏಕ್ ಹಸೀನಾ', ' ಕಾಮಿಡಿ ಸರ್ಕಸ್ ಕೆ ಸೂಪರ್‌ಸ್ಟಾರ್ಸ್', 'ಝಲಕ್ ದಿಖ್ಲಾ ಜಾ 9' ರಿಯಾಲಿಟಿ ಶೋಗಳ ಭಾಗವಾಗಿದ್ದರು. ಅದ್ಯಾವಾಗ ಕಿರುತೆರೆಯಲ್ಲಿ ಮಿಂಚಿದರೋ ಆಗಲೇ ಸಿನಿಮಾ ಮಂದಿಯ ಕಣ್ಣು ಬಿದ್ದಿತ್ತು.
ಮಹೇಶ್ ಬಾಬು ನಿರ್ದೇಶಿಸಿದ 'ಪರಮೇಶ ಪಾನ್‌ವಾಲಾ' ಸಿನಿಮಾದಲ್ಲಿ ಶಿವಣ್ಣನ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ, ಇದೇ ಕೊನೆಯ ಸಿನಿಮಾ. ಮತ್ತೆ ಕನ್ನಡ ಚಿತ್ರರಂಗದ ಕಡೆ ಮುಖ ಕೂಡ ಮಾಡಲಿಲ್ಲ. ಹಿಂದಿ, ಪಂಜಾಬಿ ಸೇರಿದಂತೆ ಹಲವು ದಕ್ಷಿಣ ಭಾರತದ ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ಮಿಂಚಿದರು.
ಆದರೆ, 2015ರವರೆಗೂ ನಟಿ ಸುರ್ವೀನ್ ಚಾವ್ಲಾ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಅದೆಷ್ಟೇ ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಂಡರೂ ಸುರ್ವೀನ್ ಚಾವ್ಲಾ ಸಿನಿಮಾಗಳಲ್ಲಿ ಉಳಿದುಕೊಳ್ಳುವುದು ಕಷ್ಟವಾಗಿತ್ತು. ಹೀಗಾಗಿ 2015 ರಿಂದ ಸುರ್ವೀನ್ ಚಾವ್ಲಾ ಸಿನಿಮಾಗಳಲ್ಲಿ ತೀರಾ ವಿರಳ. ಆದರೆ, ಅವಕಾಶಗಳು ಸಿಗದ ಬೆನ್ನಲ್ಲೇ ವೆಬ್ ಸೀರಿಸ್‌ಗಳ ಕಡೆ ವಾಲಿದ್ದರು.

'ಸೇಕ್ರೆಡ್ ಗೇಮ್ಸ್', 'ಡಿಕಪಲ್ಡ್' ಹಾಗೂ ಕಳೆದ ವರ್ಷವಷ್ಟೇ ರಿಲೀಸ್ ಆದ 'ರಾಣಾ ನಾಯ್ಡು' ವೆಬ್ ಸೀರಿಸ್‌ಗಳಲ್ಲಿ ನಟಿ ಸುರ್ವೀನ್ ಚಾವ್ಲಾ ನಟಿಸಿದ್ದರು. ಈ ಎಲ್ಲಾ ವೆಬ್ ಸೀರಿಸ್‌ಗಳು ಸುರ್ವೀನ್ ಚಾವ್ಲಾಗೆ ತಕ್ಕ ಮಟ್ಟಿಗೆ ಹೆಸರು ತಂದುಕೊಟ್ಟಿದ್ದವು. ಸದ್ಯ ಸೈಲೆಂಟ್ ಆಗಿದ್ದ ಸುರ್ವೀನ್ ಚಾವ್ಲಾ ಮತ್ತೆ ಕೆಲವು ಫೋಟೊಗಳಿಂದ ಸುದ್ದಿ ಮಾಡುತ್ತಿದ್ದಾರೆ.
ಹಸಿರು ಬಣ್ಣದ ನೆಕ್‌ಲೈನ್ ಸ್ಲೀವ್‌ಲೆಸ್ ಗೌನ್ ತೊಟ್ಟು ಬಾತ್‌ಟಬ್ ಮೇಲೆ ಕೂತು ಗ್ಲಾಮರಸ್ ಆಗಿ ಪೋಸ್ ಕೊಟ್ಟಿದ್ದಾರೆ. ಡ್ರೆಸ್‌ಗೆ ತಕ್ಕಂತೆ ಹೇರ್ ಸ್ಟೈಲ್, ಹೇರ್ ಸ್ಟೈಲ್‌ಗೆ ತಕ್ಕಂತೆ ಮೇಕಪ್, ಮೇಕಪ್‌ಗೆ ತಕ್ಕಂತೆ ಡಾರ್ಕ್ ರೆಡ್ ಲಿಪ್‌ಸ್ಟಿಕ್ ಹಾಕೊಂಡು ಮಿಂಚುತ್ತಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಅಷ್ಟಕ್ಕೂ ಬಳ ದಿನಗಳ ಬಳಿಕ ಹೊಸ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದು ರಿಲೀಸ್ ಆಗುತ್ತಿದೆ. ಈ ಕಾರಣಕ್ಕೆ ಸುರ್ವೀನ್ ಚಾವ್ಲಾ ಹೀಗೆ ಡಾರ್ಕ್ ಥೀಮ್‌ನಲ್ಲಿ ಪೋಸ್ ಕೊಟ್ಟು ಸದ್ದು ಮಾಡುತ್ತಿದ್ದಾರೆ.
ಅಮೆಜಾನ್ ಪ್ರೈಂ ವಿಡಿಯೋ ನಿರ್ಮಿಸಿರುವ 'ಅಂದೇರಾ'ದಲ್ಲಿ ಸುರ್ವೀನ್ ಚಾವ್ಲಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ಈ ನಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರ ಲಾಂಚ್ ಇವೆಂಟ್‌ನಲ್ಲಿ ಸುರ್ವೀನ್ ಚಾವ್ಲಾ ಹೀಗೆ ಪೋಸ್ ಕೊಟ್ಟು ಕಾಣಿಸಿಕೊಂಡಿದ್ದರು. ಅದೇ ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.


Click it and Unblock the Notifications











