ನಾವು ಒಬ್ಬರಿಗೊಬ್ಬರು ಮೋಸ ಮಾಡಲಿಲ್ಲ, ಆದರೂ ದೂರವಾದೆವು: ಬ್ರೇಕಪ್ ಕಾರಣ ಬಿಚ್ಚಿಟ್ಟ ನಟಿ

ಸುಮಾರು ಐದು ವರ್ಷ ಬರಹಗಾರ ಹಿಮಾಂಶು ಶರ್ಮಾ ಜತೆಗೆ ಡೇಟಿಂಗ್ ನಡೆಸುತ್ತಿದ್ದ ನಟಿ ಸ್ವರ ಭಾಸ್ಕರ್, 2019ರ ಜುಲೈನಲ್ಲಿ ಅವರಿಂದ ಬೇರ್ಪಟ್ಟಿದ್ದರು. ಇತ್ತೀಚೆಗೆ ಸ್ವರ ಭಾಸ್ಕರ್, ಹಿಮಾಂಶು ಜತೆಗಿನ ಸಂಬಂಧ ಕಡಿದುಕೊಳ್ಳಲು ಕಾರಣ ಏನೆಂಬುದನ್ನು ಬಿಚ್ಚಿಟ್ಟಿದ್ದರು.

Recommended Video

ರುದ್ರ್ ಜೊತೆಗೆ ಹೇಗೆ ಕಾಲ ಕಳೆಯುತ್ತಿದ್ದಾರೆ ಗೊತ್ತಾ ಗ್ಲಾಮ್ ಮಾ | Filmibeat Kannada

ತಮ್ಮ ಸಂಬಂಧದಲ್ಲಿ ಯಾರೂ ಯಾವುದೇ ತಪ್ಪು ಮಾಡಿರಲಿಲ್ಲ. ಒಬ್ಬರಿಗೊಬ್ಬರು ಮೋಸ ಕೂಡ ಮಾಡಿರಲಿಲ್ಲ. ಆದರೆ ತಮ್ಮ ಸಂಬಂಧದ ಕೆಲವು ವಿಚಾರಗಳಲ್ಲಿ ಇಬ್ಬರಿಗೂ ಒಂದೇ ದಾರಿಯಲ್ಲಿ ನಡೆಯಲು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ ತಮ್ಮ ದಾರಿಗಳನ್ನು ಬದಲಿಸಿಕೊಳ್ಳಲು ನಿರ್ಧರಿಸಲಾಯಿತು ಎಂದು ಸ್ವರ ಹೇಳಿದ್ದಾರೆ.

ಈ ಬ್ರೇಕ್ ಅಪ್ ನಿರ್ಧಾರ ತೆಗೆದುಕೊಳ್ಳುವುದು ತಮಗೆ ಎಷ್ಟು ಕಷ್ಟವಾಗಿತ್ತು ಎಂಬುದನ್ನು ಹೇಳಿಕೊಂಡಿರುವ ಸ್ವರ, ಎಲ್ಲ ಸಂಗತಿಗಳನ್ನೂ ನಿಮಗೆ ನೀವೇ ಬಗೆಹರಿಸಿಕೊಳ್ಳಬೇಕಾಗುತ್ತದೆ. ನಮ್ಮ ವಿಚಾರದಲ್ಲಿ ಅದು ಬಹಳ ದುರದೃಷ್ಟಕರವಾಗಿತ್ತು ಎಂದು ತಿಳಿಸಿದ್ದಾರೆ. ಮುಂದೆ ಓದಿ...

ಯಾರೂ ಯಾವ ತಪ್ಪೂ ಮಾಡಲಿಲ್ಲ

ಯಾರೂ ಯಾವ ತಪ್ಪೂ ಮಾಡಲಿಲ್ಲ

ನನಗೆ ಈ ಮುಂದೆ ಹೆಚ್ಚು ಕೋಪ ಇರಲಿಲ್ಲ. ಈಗಲೂ ನನಗೆ ಕೋಪವಿಲ್ಲ. ಹಾಗೆ ಇದ್ದಿದ್ದರೆ ಈ ಸಂಕಟವನ್ನು ಎದುರಿಸಲು ಅದು ಸಹಾಯ ಮಾಡುತ್ತಿತ್ತು. ಯಾರೂ ಯಾವುದೇ ಕೆಡುಕನ್ನು ಮಾಡಲಿಲ್ಲ. ಯಾರೂ ಯಾವುದೇ ತಪ್ಪನ್ನು ಮಾಡಲಿಲ್ಲ. ಹಾಗೆಯೇ ಯಾರಿಗೂ ಯಾರೂ ವಂಚಿಸಲಿಲ್ಲ. ಆ ಯಾವ ಟಿಪಿಕಲ್ ಸಂಗತಿಗಳೂ ಕಾರಣವಾಗಲಿಲ್ಲ. ಅದೇ ದುರದೃಷ್ಟಕರ' ಎಂದಿದ್ದಾರೆ.

ಜತೆಯಾಗಿ ಪಯಣಿಸುವುದೇ ಸಂಬಂಧ

ಜತೆಯಾಗಿ ಪಯಣಿಸುವುದೇ ಸಂಬಂಧ

ಸಂಬಂಧ ಎನ್ನುವುದು ಒಂದು ಜೋಡಿಯಾಗಿ ನಡೆಸುವ ಪ್ರಯಾಣ ಎಂದು ಹೋಲಿಸಿರುವ ಸ್ವರ, ನಾನು ಅದರ ಬಗ್ಗೆ ಯಾವಾಗಲೂ ಯೋಚಿಸುತ್ತಿದ್ದೆ. ನೀವು ಜತೆಯಾಗಿ ಉದ್ಯಾನದಲ್ಲಿ ಹೋಗುತ್ತಿದ್ದೀರಿ ಎಂದರೆ ನೀವು ಜತೆಯಾಗಿ ಪಯಣಿಸುತ್ತಿದ್ದೀರಿ ಎಂದರ್ಥ. ಅದೇ ಸಂಬಂಧ.

ಒಬ್ಬರು ತಮ್ಮ ದಾರಿ ತ್ಯಾಗ ಮಾಡಬೇಕು

ಒಬ್ಬರು ತಮ್ಮ ದಾರಿ ತ್ಯಾಗ ಮಾಡಬೇಕು

ಆದರೆ ನಿಮ್ಮ ಮುಂದೆ ಎರಡೇ ದಾರಿಗಳಿವೆ. ನೀವು ಎಡ ಅಥವಾ ಬಲಕ್ಕೆ ಹೋಗಬೇಕು. ಜತೆಗಾರ ಬಲಕ್ಕೆ ಹೋಗಲು ಬಯಸಿದರೆ, ಮತ್ತೊಬ್ಬರು ಎಡಕ್ಕೆ ಹೋಗಲು ಬಯಸುವ ಜಾಗಕ್ಕೆ ಬಂದಾಗ ಅವರಲ್ಲಿ ಒಬ್ಬರು, ಸರಿ ನಾನು ನನ್ನ ದಾರಿ ಬಿಟ್ಟುಬಿಡುತ್ತೇನೆ. ನಿನ್ನ ಜತೆ ಬರುತ್ತೇನೆ ಎನ್ನಬೇಕು ಎಂದು ಹೇಳಿದ್ದಾರೆ.

ಇತರರ ಆಯ್ಕೆಯನ್ನೂ ಒಪ್ಪಬೇಕು

ಇತರರ ಆಯ್ಕೆಯನ್ನೂ ಒಪ್ಪಬೇಕು

ಒಂದು ವೇಳೆ ಯಾವ ವ್ಯಕ್ತಿಯೂ ತಮ್ಮ ದಿಕ್ಕನ್ನು ಬಿಟ್ಟುಬರಲು ಸಿದ್ಧರಿಲ್ಲ ಎಂದರೆ ನೀವು ಅದಕ್ಕೆ ಗುಡ್‌ಬೈ ಹೇಳಿ, ಬಹುಶಃ ನಮ್ಮ ಪಯಣ ಇಷ್ಟೇ ಇರಬೇಕು ಎಂದು ಅಂದುಕೊಳ್ಳಬೇಕು. ನಾವು ನಮ್ಮ ಆಯ್ಕೆಯನ್ನು ಮಾತ್ರವಲ್ಲ, ಇತರರ ಆಯ್ಕೆಯನ್ನೂ ಒಪ್ಪಿಕೊಳ್ಳಬೇಕು. ನಾವು ಬೆಳೆಯುವುದೆಂದರೆ ಅದೇ. ನನಗೆ ನನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದೆ. ಅದರಿಂದಾಗಿ ಸಾಕಷ್ಟು ಬೆಂಬಲ ಸಿಕ್ಕಿತು ಎಂದು ತಿಳಿಸಿದ್ದಾರೆ.

More from Filmibeat

English summary
Bollywood Actress Swara Bhaskar opens up on her break up with wirter Himanshu Sharma and said, nobody cheated on the other.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X