ಮದ್ವೆ ಯಾವಾಗ ಅಂದಿದ್ದಕ್ಕೆ.. ನಾನಿನ್ನು ಪ್ರೆಗ್ನೆಂಟ್ ಆಗಿಲ್ಲ ಎಂದಿದ್ದ ತಾಪ್ಸಿ ಪನ್ನು; ಮಾರ್ಚ್‌ನಲ್ಲಿ ಕಲ್ಯಾಣ ಅಂತೆ!
ಬಹುಭಾಷಾ ನಟಿ ತಾಪ್ಸಿ ಪನ್ನು ಯಾರಿಗೆ ಗೊತ್ತಿಲ್ಲ ಹೇಳಿ. ತೆಲುಗು, ತಮಿಳು, ಮಲಯಾಳಂ ಸಿನಿಮಾ ಪ್ರೇಮಿಗಳಿಗೂ ಚೆನ್ನಾಗಿಯೇ ಗೊತ್ತು. ಅದೇ ಬಾಲಿವುಡ್ ಸಿನಿಮಾ ಮಂದಿಗೂ ಈ ನಟಿ ಚೆನ್ನಾಗಿಯೇ ಗೊತ್ತು. ಈಕೆ ಕೇವಲ ನಟಿಯಾಗಿ ಅಷ್ಟೇ ಗುರುತಿಸಿಕೊಂಡಿಲ್ಲ. ಸದ್ಯ ಬಾಲಿವುಡ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸುತ್ತಿರುವ ತಾಪ್ಸಿ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ತಾಪ್ಸಿ ಪನ್ನು ನಟಿಸಿದ 'ಡಂಕಿ' ಸಿನಿಮಾ ರಿಲೀಸ್ ಆಗಿದೆ. ಆಕೆಯ ವೃತ್ತಿ ಬದುಕಿನಲ್ಲಿಯೇ 'ಡಂಕಿ' ದೊಡ್ಡ ಸಿನಿಮಾ. ಶಾರುಖ್ ಖಾನ್ ಅಂತಹ ಸೂಪರ್‌ಸ್ಟಾರ್ ಜೊತೆ ನಟಿಸಿದ ನಟಿ ಶೀಘ್ರದಲ್ಲಿಯೇ ಸಿಹಿ ಸುದ್ದಿ ಕೊಡುತ್ತಾರೆ ಅನ್ನೋ ಮಾತು ಬಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ. ಹೌದು, ರಕುಲ್ ಪ್ರೀತ್ ಸಿಂಗ್ ಬಳಿಕ ಈಗ ತಾಪ್ಸಿ ಪನ್ನು ಮದುವೆ ಬಗ್ಗೆ ಗುಲ್ಲೆದ್ದಿದೆ.

ತಾಪ್ಸಿ ಪನ್ನು ನಟಿಸಿದ ಹಲವು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿವೆ. 'ಬೇಬಿ', 'ಪಿಂಕ್', 'ಮುಲ್ಕ್', 'ಬದ್ಲಾ', ಮಿಷನ್ ಮಂಗಲ್' ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ತಾಪ್ಸಿ ನಟಿಸಿದ್ದಾರೆ. ಅದರಲ್ಲಿ ಇತ್ತೀಚೆಗೆ ತೆರೆಕಂಡ 'ಡಂಕಿ' ಸಿನಿಮಾ ಕೂಡ ಸೇರಿಕೊಂಡಿದೆ. ಕೇವಲ ವೃತ್ತಿ ಬದುಕಿನ ಬಗ್ಗೆ ಅಷ್ಟೇ ಮಾತಾಡುತ್ತಿದ್ದ ತಾಪ್ಸಿ ಪನ್ನು ಈಗ 10 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಬಾಯ್‌ಫ್ರೆಂಡ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ಹೌದು ತಾಪ್ಸಿ ಪನ್ನು ತನ್ನ ಬದುಕಿನ ಹೊಸ ಅಧ್ಯಾಯಕ್ಕೆ ಅಣಿಯಾಗುತ್ತಿದ್ದಾರೆ ಅನ್ನೋ ಸುದ್ದು ಹಬ್ಬಿದೆ. ಬಹುಭಾಷಾ ನಟಿ ತಾಪ್ಸಿ ಪನ್ನು ಸುಮಾರು 10 ವರ್ಷಗಳಿಂದ ಬಾಯ್‌ಫ್ರೆಂಡ್ ಮಥಿಯಾಸ್ ಬೋ ಜೊತೆ ಡೇಟಿಂಗ್ ಮಾಡುತ್ತಿದ್ದರು. ಎನ್‌ಡಿಟಿವಿ ವರದಿ ಮಾಡಿರುವ ಪ್ರಕಾರ, ತಾಪ್ಸಿ ಪನ್ನುಇದೇ ಮಾರ್ಚ್ ತಿಂಗಳಲ್ಲಿ ಮಥಿಯಾಸ್ ಬೋರನ್ನು ವಿವಾಹವಾಗಲಿದ್ದಾರೆ ಎಂದು ವರದಿ ಮಾಡಿದೆ.

ಕೆಲವು ವರ್ಷಗಳ ಹಿಂದೆ ನಟಿ ತಾಪ್ಸಿ ಪನ್ನುಗೆ ಅವರ ಅಭಿಮಾನಿಗಳು ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದರು. ಆ ವೇಳೆ ತಾಪ್ಸಿ ಪನ್ನು ಫ್ಯಾನ್ಸ್‌ಗೆ ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದರು. "ನನ್ನ ಮದುವೆ ಯಾವಾಗ ಎಂದು ಕೇಳುತ್ತಿದ್ದೀರಿ. ನಾನಿನ್ನು ಗರ್ಭಿಣಿಯಾಗಿಲ್ಲ. ಸದ್ಯಕ್ಕಂತೂ ಮದುವೆ ಆಗಲ್ಲ. ಮಕ್ಕಳು ಬೇಕು ಅಂದಾಗ ಮದುವೆ ಆಗುತ್ತೇನೆ" ಎಂದು ಹೇಳಿದ್ದರು. ಈಗ ತಾಪ್ಸಿ ಪನ್ನು ಮದುವೆ ಆಗುವುದಕ್ಕೆ ಸಜ್ಜಾಗಿದ್ದಾರೆ.
ತಾಪ್ಸಿ ಪನ್ನು 2024, ಮಾರ್ಚ್ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆನ್ನಲಾಗಿದೆ. ರಾಜಸ್ಥಾನದ ಉದಯಪುರದಲ್ಲಿ ಮದುವೆ ಆಗಲಿದ್ದಾರೆ ಎನ್ನಲಾಗಿದೆ. ತಾಪ್ಸಿ ಪನ್ನು ಹಾಗೂ ಮಥಿಯಾಸ್ ಬೋ ಮದುವೆ ಪಂಜಾಬಿ ಹಾಗೂ ಕ್ರಿಶ್ಚಿಯನ್ ಎರಡೂ ಸಂಪ್ರದಾಯದಂತೆ ನಡೆಯಲಿದೆ. ಇವರ ಮದುವೆ ಬಾಲಿವುಡ್ ತಾರೆಯರಿಗೆ ಆಹ್ವಾನ ನೀಡುವುದಿಲ್ಲ ಎಂಬ ಸುದ್ದಿನೂ ಇದೆ.
ಇತ್ತೀಚೆಗೆ ತಾಪ್ಸಿ ಪನ್ನು ನೀಡಿದ ಸಂದರ್ಶನದಲ್ಲಿ ಬಾಯ್‌ಫ್ರೆಂಡ್ ಮಥಿಯಾಸ್ ಬೋರನ್ನು ಮೊದಲ ಭೇಟಿಯಾಗಿದ್ದನ್ನು ರಿವೀಲ್ ಮಾಡಿದ್ದರು. ತಾಪ್ಸಿ ಮೊದಲ ಬಾಲಿವುಡ್ ಸಿನಿಮಾ ಮಾಡುವಾಗ ಮಥಿಯಾಸ್ ಬೋರನ್ನು ಭೇಟಿ ಮಾಡಿದ್ದಾಗಿ ಹೇಳಿಕೊಂಡಿದ್ದರು. " ಮೊದಲ ಭೇಟಿಯಿಂದ ನಾನು ಆ ವ್ಯಕ್ತಿಯೊಂದಿಗೆ ಇದ್ದೇನೆ. ಅವರನ್ನು ಬಿಡುವ ಯಾವುದೇ ಆಲೋಚನೆಯಿಲ್ಲ. ಬೇರೆಯವರನ್ನು ಇಷ್ಟ ಪಡುವುದಿಲ್ಲ. ಯಾಕಂದ್ರೆ, ಈ ರಿಲೇಷನ್‌ಶಿಪ್‌ನಲ್ಲಿ ನಾನು ಖುಷಿಯಾಗಿದ್ದೇನೆ." ಎಂದು ಹೇಳಿದ್ದಾರೆ.


Click it and Unblock the Notifications











