"ಆ ಕೆಲಸಕ್ಕೆ ಯಾಕೆ ಕಳಿಸಿದ್ರಿ? ಯಾರು ಮದ್ವೆ ಆಗ್ತಾರೆ ಅಂದಿದ್ರು"; ಕತ್ರಿನಾ ಕೈಫ್ ಎದುರು ತೃಪ್ತಿ ದಿಮ್ರಿ ಭಾವುಕ

ನ್ಯಾಷನಲ್ ಕ್ರಶ್ ಅಂದಾಕ್ಷಣ ಎರಡು ಮೂರು ಮುಖಗಳು ಕಣ್ಮುಂದೆ ಬರೆಯುತ್ತೆ. ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್, ರಶ್ಮಿಕಾ ಮಂದಣ್ಣ ಹೆಸರು ಬರಬಹುದು. ಆದ್ರೀಗ ಹೊಸ ನ್ಯಾಷನಲ್ ಕ್ರಶ್ ಸಿಕ್ಕಿದ್ದಾಗಿದೆ. ಆ ಬಾಲಿವುಡ್‌ ನಟಿಯೇ ತೃಪ್ತಿ ದಿಮ್ರಿ.

ರಣ್‌ಬೀರ್ ಕಪೂರ್ ನಟಿಸಿದ ವಿವಾದಾತ್ಮಕ ಸಿನಿಮಾ 'ಅನಿಮಲ್‌' ಸಿನಿಮಾದಲ್ಲಿ ಸೆಕೆಂಡ್ ಹೀರೋಯಿನ್ ಆಗಿ ನಟಿಸಿದ್ದರು. ಸಿಕ್ಕಾಪಟ್ಟೆ ಬೋಲ್ಡ್ ಕ್ಯಾರೆಕ್ಟರ್‌ನಲ್ಲಿ ತೃಪ್ತಿ ದಿಮ್ರಿ ನಟಿಸಿದ್ದರು. ಇದೇ ಸಿನಿಮಾದಲ್ಲಿ ಮತ್ತೊಬ್ಬ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದರು. ಆದರೆ, ಅನಿಮಲ್ ತೆರೆಕಂಡ ಬಳಿಕ ತೃಪ್ತಿ ದಿಮ್ರಿಗೆ ಯುವಕರು ಬೋಲ್ಡ್ ಆಗ್ಬಿಟ್ಟರು.

Actress Tripti Dimri relatives said no one will marry your daughter to her parents

'ಅನಿಮಲ್' ಸಿನಿಮಾ ರಿಲೀಸ್ ಆದ ಒಂದೆರಡು ದಿನಗಳಲ್ಲಿ ತೃಪ್ತಿ ದಿಮ್ರಿ ನ್ಯಾಷನಲ್ ಕ್ರಶ್ ಆಗಿಬಿಟ್ಟರು. ಇಲ್ಲಿಂದ ಬಾಲಿವುಡ್‌ನ ಬಹುಬೇಡಿಕೆಯ ನಟಿಯರ ಲಿಸ್ಟ್‌ನಲ್ಲಿ ತೃಪ್ತಿ ದಿಮ್ರಿ ಕೂಡ ನಿಲ್ಲುತ್ತಾರೆ. ಈಗ ಕೋಟಿ ಲೆಕ್ಕದಲ್ಲಿ ಸಂಭಾವನೆ ಪಡೆಯುವ ತೃಪ್ತಿ ದಿಮ್ರಿಗೆ ಸಿನಿಮಾ ರಂಗಕ್ಕೆ ಕಾಲು ಇಡುವುದು ಅಷ್ಟು ಸುಲಭದ ಕೆಲಸ ಮಾತಾಗಿರಲಿಲ್ಲ. ಈಕೆ ಸಂಬಂಧಿಕರೇ ವಿರೋಧ ವ್ಯಕ್ತಪಡಿಸಿದ್ದರು. ಈ ನಟಿಯ ಪೋಷಕರಿಗೆ "ಆಕೆಯನ್ನು ಯಾರು ಮದುವೆ ಆಗುತ್ತಾರೆ" ಅಂತ ಹೇಳಿ ಅವಮಾನ ಮಾಡಿದ್ದರಂತೆ. ಈ ವಿಷಯವನ್ನು ಇತ್ತೀಚೆಗೆ ಕತ್ರಿನಾ ಕೈಫ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಬಾಲಿವುಡ್ ನಟಿ ಕತ್ರಿನಾ ಕೈಫ್ ಯೂಟ್ಯೂಬ್ ಚಾನೆಲ್‌ಗೆ ತೃಪ್ತಿ ದಿಮ್ರಿ ಸಂದರ್ಶನ ನೀಡಿದ್ದರು. ಈ ವೇಳೆ ಕತ್ರಿನಾ ಜೊತೆ ಮಾತಾಡುವಾಗ ಸಿನಿಮಾ ರಂಗಕ್ಕೆ ಕಾಲಿಟ್ಟ ವೇಳೆ ಸಂಬಂಧಿಕರ ಪ್ರತಿಕ್ರಿಯೆ ಹೇಗಿತ್ತು ಅನ್ನೋದನ್ನು ಹೇಳಿಕೊಂಡಿದ್ದಾರೆ. ಈ ಸಂದರ್ಶನದಲ್ಲಿ ಕೆಲವು ಭಾವನಾತ್ಮಕ ಹಾಗೂ ವೈಯಕ್ತಿಕ ವಿಷಯಗಳನ್ನು ರಿವೀಲ್ ಮಾಡಿದ್ದಾರೆ. ಇದೇ ವೇಳೆ ತೃಪ್ತಿ ದಿಮ್ರಿಯ ಪೋಷಕರಿಗೆ ಕೆಲವು ಸಂಬಂಧಿಕರು ಕರೆ ಮಾಡಿ, ನಿಮ್ಮ ಮಗಳನ್ನು ಇನ್ಯಾರು ಮದುವೆ ಆಗುತ್ತಾರೆ ಅಂತ ಹೇಳಿದ್ದರಂತೆ.

ತೃಪ್ತಿ ದಿಮ್ರಿ ಸಿನಿಮಾಗೆ ಎಂಟ್ರಿ ಕೊಟ್ಟಾಗ ಆಕೆಯ ಪೋಷಕರು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದರು. ಉತ್ತರಾಖಂಡದ ಸಂಪ್ರದಾಯಸ್ಥ ಕುಟುಂಬದಿಂದ ಬಂದ ತೃಪ್ತಿ ದಿಮ್ರಿ ಬೆಳೆದಿದ್ದು ದೆಹಲಿಯಲ್ಲಿ. ಅಲ್ಲಿಂದ ಮುಂಬೈಗೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವುಕ್ಕೆ ಬಂದಾಗ ಆಕೆಯ ಸಂಬಂಧಿಗಳೇ ವಿರೋಧಿಸಿದ್ದರು. "ನಿಮ್ಮ ಮಗಳನ್ನು ಅಂತಹ ವೃತ್ತಿಗೆ ಯಾಕೆ ಕಳುಹಿಸಿದ್ರಿ? ಅವಳು ಅಲ್ಲಿ ಕೆಟ್ಟಿ ಹೋಗುತ್ತಾಳೆ. ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾಳೆ. ಆಕೆಯನ್ನು ಯಾರೂ ಮದುವೆ ಆಗುವುದಿಲ್ಲ" ಎಂದು ಪೋಷಕರಿಗೆ ಹೇಳಿದ್ದಾಗಿ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Actress Tripti Dimri relatives said no one will marry your daughter to her parents

ಸಂಬಂಧಿಕರ ಈ ಮಾತುಗಳು ಆರಂಭದ ದಿನಗಳಲ್ಲಿ ತೃಪ್ತಿ ದಿಮ್ರಿ ಮೇಲೆ ನೆಗೆಟಿವ್ ಪರಿಣಾಮಗಳು ಬೀರುವುದಕ್ಕೆ ಶುರುವಾಗಿದ್ದವು. ಸಿನಿಮಾ ಕೆಲಸ ಮಾಡುವಾಗ ಇಂತಹ ಮಾತುಗಳಿಂದ ಭಯ ಹುಟ್ಟಿಸುತ್ತಿತ್ತು. ಭಾವನಾತ್ಮಕವಾಗಿ ಕುಗ್ಗಿ ಹೋಗಿದ್ದೆ ಎಂದು ಕತ್ರಿಕಾ ಕೈಫ್ ಮುಂದೆ ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಆಕೆ ತನ್ನನ್ನು ತಾನು ಪ್ರೂವ್ ಮಾಡಿಕೊಳ್ಳಬೇಕು ಅಂತ ನಿರ್ಧರಿಸಿದ್ದರು. ತನ್ನ ಪೋಷಕರ ಮುಂದೆ ಖಾಲಿ ಕೈಯಲ್ಲಿ ಹೋಗಿ ನಿಲ್ಲಬಾರದು ಎಂದು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.

ಆರಂಭದ ದಿನಗಳಲ್ಲಿ ಬಾಲಿವುಡ್‌ನಲ್ಲಿ ಆಫರ್‌ಗಳು ಸಿಗುತ್ತಿರಲಿಲ್ಲ. ಆ ವೇಳೆ ತೃಪ್ತಿ ದಿಮ್ರಿಗೆ ಆತಂಕ ಆಗುತ್ತಿತ್ತು. ಆದರೆ, ಇಂತಹ ಸಂದರ್ಭದಲ್ಲಿ ಆಕೆಯ ಕನಸನ್ನು ನನಸು ಮಾಡಿಕೊಳ್ಳುವುದಕ್ಕೆ ಪೋಷಕರು ಬೆಂಬಲವಾಗಿ ನಿಂತಿದ್ದರು. 'ಲೈಲಾ ಮಜ್ನು' ಸಿನಿಮಾ ತೆರೆಕಂಡ ಬಳಿಕ ಪೋಷಕರು ಹೆಮ್ಮೆ ವ್ಯಕ್ತಪಡಿಸಿದ್ದರು. ಪ್ರೇಕ್ಷಕರು ನಟನೆಯನ್ನು ಮೆಚ್ಚಿಕೊಂಡ ಮೇಲೆ ಸಿನಿಮಾಗಳಲ್ಲಿ ಮುಂದುವರೆಯುವುದಕ್ಕೆ ನಿರ್ಧರಿಸಿದ್ದರು.

More from Filmibeat

English summary
Actress Tripti Dimri relatives said no one will marry your daughter to her parents:
Read more about: bollywood actress filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X