Triptii Dimri: 'ಅನಿಮಲ್' ಹಾಟ್ ಸೀನ್ ವೈರಲ್: ಡಬಲ್ ಆಯ್ತು ತೃಪ್ತಿ ದಿಮ್ರಿ ಇನ್‌ಸ್ಟಾಗ್ರಾಮ್ ಫಾಲೋವರ್ಸ್!
ಸಿನಿಮಾರಂಗದಲ್ಲಿ ಕೆಲವೊಮ್ಮೆ ಒಳ್ಳೆ ಸಿನಿಮಾಗಳನ್ನು ಕೊಟ್ಟರು ಫೇಮಸ್ ಆಗುವುದಿಲ್ಲ. ಕೆಲವು ಸಿನಿಮಾಗಳಲ್ಲಿ ಮಾಡುವ ಚಿಕ್ಕ ಪಾತ್ರ ಅಥವಾ ಅತಿಥಿ ಪಾತ್ರ ಸಕತ್ ಖ್ಯಾತಿ ತಂದುಕೊಟ್ಟು ಜನರ ನೆನಪಿನಲ್ಲಿ ಉಳಿದುಬಿಡುತ್ತದೆ. ಸದ್ಯಕ್ಕೆ ಕಬೀರ್ ಸಿಂಗ್ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಸಿನಿಮಾದ ನಟಿ ತೃಪ್ರಿ ದಿಮ್ರಿ ಅದಕ್ಕೆ ತಕ್ಕ ಉದಾಹರಣೆಯಾಗಿದ್ದಾರೆ.
ಲೈಲಾ ಮಜ್ನು, ಬುಲ್ ಬುಲ್, ಕ್ವಾಲಾದಂತಹ ಉತ್ತಮ ಸಿನಿಮಾಗಳನ್ನು ನೀಡಿರುವು ನಟಿ ಈಗ ರಣಬೀರ್ ಕಪೂರ್ ಅವರ ಅನಿಮಲ್‌ನಲ್ಲಿ ಸಣ್ಣ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಪಡ್ಡೆ ಹುಡುಗರು ಆಕೆಯ ಇನ್‌ಸ್ಟಾಗ್ರಾಮ್ ಖಾತೆಯನ್ನು ಹುಡುಕಿ ಹುಡುಕಿ ಫಾಲೋ ಮಾಡುವ ಹಾಗಾಗಿದೆ. ಅದು ಕೂಡ ರಣಬೀರ್ ಕಪೂರ್ ಜೊತೆಗಿನ ಆಕೆಯ ಹಾಟ್ ಸೀನ್ ವೈರಲ್ ಆದ ಬಳಿಕ.

'ಬುಲ್‌ಬುಲ್' ತೃಪ್ತಿ ದಿಮ್ರಿಗೆ ಹೆಸರು ತಂದುಕೊಡ್ತು 'ಅನಿಮಲ್'
ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿರುವ 'ಅನಿಮಲ್' ಡಿಸೆಂಬರ್ 1 ರಂದು (ಶುಕ್ರವಾರ) ಭಾರಿ ನಿರೀಕ್ಷೆಗಳ ನಡುವೆ ಬಿಡುಗಡೆಯಾಗಿದ್ದು, ಸಿನಿಮಾ ಭರ್ಜರಿ ಹೊಟ್ ಎನಿಸಿಕೊಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆ ಕಲೆಕ್ಷನ್ ಮಾಡುತ್ತಿರುವ ಸಿನಿಮಾದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ನಟಿಸಿದ್ದು, ನಟಿ ತೃಪ್ತಿ ದಿಮ್ರಿ ಕೂಡ ಕಾಣಿಸಿಕೊಂಡಿದ್ದಾರೆ.
ಆಕ್ಷನ್-ಥ್ರಿಲ್ಲರ್ 'ಅನಿಮಲ್'ನಲ್ಲಿ ಜೋಯಾ ರಿಯಾಜ್‌ನ ಎಂಬ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ಬುಲ್‌ಬುಲ್ ಮತ್ತು ಕ್ವಾಲಾ ಖ್ಯಾತಿಯ ತೃಪ್ತಿ ದಿಮ್ರಿ, ಸಿನಿಮಾ ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲಿ ಅವರ ಜನಪ್ರಿಯತೆ ಹೆಚ್ಚಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸಕತ್ ಫಾಲೋವರ್ಸ್ ಅನ್ನು ಪಡೆಯುತ್ತಿದ್ದಾರೆ.
ಡಬಲ್ ಆಯ್ತು ತೃಪ್ತಿ ದಿಮ್ರಿ ಇನ್‌ಸ್ಟಾಗ್ರಾಮ್ ಫಾಲೋವರ್ಸ್!
ಅನಿಮಲ್ ಸಿನಿಮಾ ರಿಲೀಸ್ ಆಗುವ ಮುನ್ನ ನಟಿ ತೃಪ್ತಿ ದಿಮ್ರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸರಿಸುಮಾರು 600k ಫಾಲೋವರ್ಸ್ ಇದ್ದರು. ಆದರೆ, ರಣಬೀರ್ ಕಪೂರ್ ಅಭಿನಯದ ಸಿನಿಮಾ ದೊಡ್ಡ ಪರದೆಯ ಮೇಲೆ ರಾರಾಜಿಸಿದ ನಂತರ, ನಟಿಯ ಜನಪ್ರಿಯತೆಯು ಗಗನಕ್ಕೇರಿದೆ. ತೃಪ್ತಿ ದಿಮ್ರಿಗೆ ಈಗ ಇನ್‌ಸ್ಟಾಗ್ರಾಮ್ ವೇದಿಕೆಯಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.
ಪ್ರಸ್ತುತ ತೃಪ್ತಿ ದಿಮ್ರಿ ಜನಪ್ರಿಯ ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್‌ನಲ್ಲಿ 1.5 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇದು ದಿನ ದಿನಕ್ಕೂ ಹೆಚ್ಚಾಗುತ್ತಿದ್ದು ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ಅಷ್ಟೊಂದು ಸಕ್ರಿಯವಾಗಿಲ್ಲ.
ತೃಪ್ತಿಯನ್ನು ಫೇಮಸ್ ಮಾಡಿದ 'ಅನಿಮಲ್' ಹಾಟ್ ಸೀನ್‌ಗಳು!?
ಅನಿಮಲ್ ಸಿನಿಮಾದನಲ್ಲಿನ ತೃಪ್ತಿ ದಿಮ್ರಿ ಅಭಿನಯ ಅವರನ್ನು ಗುರುತಿಸುವಂತೆ ಮಾಡಿದೆ. ಕೇವಲ ಮೂರು ದಿನಗಳಲ್ಲಿ ಅವರನ್ನು ಫಾಲೋ ಮಾಡುವವರ ಸಂಖ್ಯೆ ಡಬಲ್ ಆಗಿದೆ. ಇನ್ನು, ಕುತೂಹಲಕಾರಿಯಾಗಿ, ರಣಬೀರ್ ಕಪೂರ್ ಅವರೊಂದಿಗಿನ ಅವರ ಹಾಟ್ ದೃಶ್ಯಗಳು ಇಂಟರ್‌ನೆಟ್‌ನಲ್ಲಿ ಸಕತ್ ವೈರಲ್ ಆಗುತ್ತಿವೆ. ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅವರ ಬೋಲ್ಡ್ ದೃಶ್ಯಗಳು ವೈರಲ್ ಆಗುತ್ತಿವೆ. ಆದರೆ, ಹೆಚ್ಚು ಫೇಮಸ್ ಆಗುತ್ತಿರುವುದು ಮಾತ್ರ ನಟಿ ತೃಪ್ತಿ ದಿಮ್ರಿ.
'ಅನಿಮಲ್' ನಂತರ ತೃಪ್ತಿ ದಿಮ್ರಿ ಮುಂಬರುವ ಸಿನಿಮಾಗಳು
ಅನಿಮಲ್‌ನ ಯಶಸ್ಸಿನಲ್ಲಿ ತೃಪ್ತಿ ಡಿಮ್ರಿ ಮುಂದೆ ಆನಂದ್ ತಿವಾರಿಯವರ ಇನ್ನೂ ಹೆಸರಿಡದ ಚಿತ್ರದಲ್ಲಿ ವಿಕ್ಕಿ ಕೌಶಲ್ ಎದುರು ಕಾಣಿಸಿಕೊಳ್ಳಲಿದ್ದಾರೆ. ಇನ್ನು ರಾಜ್ ಶಾಂಡಿಲ್ಯ ಅವರ ಮುಂದಿನ 'ವಿಕ್ಕಿ ವಿದ್ಯಾ ಕಾ ವೋ ವಾಲಾ' ವೀಡಿಯೊದಲ್ಲಿ ರಾಜ್‌ಕುಮಾರ್ ರಾವ್ ಜೊತೆಗೆ ನಟಿಸಲಿದ್ದಾರೆ.


Click it and Unblock the Notifications











