ಜಾಹ್ನವಿ ಕಪೂರ್ 'ಪೆದ್ದಿ' ವಿವಾದ; 'ದಿ ಕೇರಳ ಸ್ಟೋರಿ' ನಟಿ ಆದಾ ಶರ್ಮಾ ಕ್ಲಾಸಿಕ್ ರಿಯಾಕ್ಷನ್
ಇತ್ತೀಚೆಗೆ ಟಾಲಿವುಡ್‌ನ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಸಿನಿಮಾ 'ಪೆದ್ದಿ' ರಿಲೀಸ್ ಆಗಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಜಾಹ್ನವಿ ಕಪೂರ್ ಪಾತ್ರವನ್ನು ಸಿನಿಮಾದಲ್ಲಿ ಗ್ಲಾಮರಸ್ ಆಗಿ ತೋರಿಸಿದ್ದಕ್ಕೂ ವಿವಾದದ ಕಿಡಿ ಹೊತ್ತಿಕೊಂಡಿದೆ. ಜಾಹ್ನವಿ ಕಪೂರ್ ಪಾತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಪಸ್ವರಗಳು ಎದ್ದಿವೆ. ಹೀಗಾಗಿ ಜಾಹ್ನವಿ ಕಪೂರ್ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆನೂ ಚರ್ಚೆಗಳು ನಡೆಯುತ್ತಿವೆ.
ಬಾಲಿವುಡ್‌ನಲ್ಲಿ ನಟ-ನಟಿಯರ ನಡುವೆ ಹೋಲಿಕೆ ಮಾಡುವುದು ಹೊಸದೇನೂ ಅಲ್ಲ. ಅದರಲ್ಲೂ ನಟಿಯರು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವುದು, ಅವರ ನಟನಾ ಶೈಲಿಯ ಬಗ್ಗೆ ಸದಾ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇನ್ನೊಂದು ಕಡೆ ಯಾರಾದರೂ ವಿವಾದಕ್ಕೆ ಸಿಲುಕಿದರೆ, ಆ ಬಗ್ಗೆನೂ ನಿರ್ಭಯವಾಗಿ ಬಾಲಿವುಡ್ ನಟಿಯರು ಕಾಮೆಂಟ್‌ಗಳನ್ನು ಮಾಡುತ್ತಾರೆ.

ಸದ್ಯ 'ಪೆದ್ದಿ' ಸಿನಿಮಾದಲ್ಲಿನ ಜಾಹ್ನವಿ ಕಪೂರ್ ಪಾತ್ರ ವಿವಾದಕ್ಕೆ ಸಿಲುಕಿದೆ. ಈ ಕಾರಣಕ್ಕೆ ಇತ್ತೀಚೆಗೆ ನಡೆದ ಸಕ್ಸಸ್ ಮೀಟ್ ಇವೆಂಟ್‌ನಲ್ಲಿ ಜಾಹ್ನವಿ ಕಪೂರ್ ಗೈರಾಗಿದ್ದಾರೆ. ರಾಮ್ ಚರಣ್ ಕೂಡ ಜಾಹ್ನವಿ ಪಾತ್ರದ ಬಗ್ಗೆ ಮಾತಾಡಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಇದೇ ವಿವಾದಕ್ಕೆ ಸಂಬಂಧಿಸಿದಂತೆ 'ದಿ ಕೇರಳ ಸ್ಟೋರಿ' ಖ್ಯಾತಿಯ ನಟಿ ಅದಾ ಶರ್ಮಾಗೆ ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಅದಾ ಶರ್ಮಾ ನಟಿಯರ ಆಯ್ಕೆ ಬಗ್ಗೆ ಪರೋಕ್ಷ ಹೇಳಿಕೆ ಕೊಟ್ಟಿದ್ದಾರೆ.
ಅದಾ ಶರ್ಮಾ ಕ್ಲಾಸಿಕ್ ರಿಯಾಕ್ಷನ್
ಬಾಲಿವುಡ್ ನಟಿ ಅದಾ ಶರ್ಮಾ ತಮ್ಮ 'ಗವರ್ನರ್' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ನಟಿ ಜಾಹ್ನವಿ ಕಪೂರ್ ಅವರ 'ಪೆದ್ದಿ' ವಿವಾದದ ಬಗ್ಗೆ ಟೈಮ್ಸ್ ನೌ ಸಂದರ್ಶನದ ವೇಳೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅದಾ ಶರ್ಮಾ ಚಿತ್ರರಂಗದಲ್ಲಿ ನಟ-ನಟಿಯರ ಪಾತ್ರಗಳ ಆಯ್ಕೆಯ ಸ್ವಾತಂತ್ರ್ಯ, ಅವರು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಮುಕ್ತ ಅಭಿಪ್ರಾಯ ಹೊರ ಹಾಕಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಜಾಹ್ನವಿ ಕಪೂರ್‌ಗೆ ಅದಾ ಶರ್ಮಾ ಬೆಂಬಲ
ಜಾಹ್ನವಿ ಕಪೂರ್ 'ಪೆದ್ದಿ' ಪಾತ್ರದ ವಿವಾದದ ಬಗ್ಗೆ ಪ್ರಶ್ನೆ ಮಾಡಿದಾಗ, ಅದಾ ಶರ್ಮಾ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ. "ಸಿನಿಮಾರಂಗದಲ್ಲಿ ಪ್ರತಿಯೊಬ್ಬ ನಟನಿಗೂ ಅವರದ್ದೇ ಆದ ವಿಭಿನ್ನ ಜರ್ನಿ ಇರುತ್ತೆ. ಜಾನ್ಹವಿ ಕಪೂರ್ ಸತತವಾಗಿ ವಿಭಿನ್ನ ಹಾಗೂ ಸವಾಲಿನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕಮರ್ಷಿಯಲ್ ಸಿನಿಮಾಗಳ ಜೊತೆಗೆ ಕಂಟೆಂಟ್ ಆಧಾರಿತ ಸಿನಿಮಾಗಳಲ್ಲಿ ನಟಿಸಲು ಅವರು ಹಾಕುತ್ತಿರುವ ಶ್ರಮ ಎದ್ದು ಕಾಣುತ್ತದೆ" ಎಂದು ನಟಿ ಅದಾ ಶರ್ಮಾ ಹೇಳಿದ್ದಾರೆ.

ವದಂತಿಗಳಿಗೆ ಅದಾ ಶರ್ಮಾ ಬ್ರೇಕ್
ಚಿತ್ರರಂಗ ಅಂದ್ಮೇಲೆ ಸಮಕಾಲೀನ ನಟಿಯರೊಂದಿಗೆ ತೀವ್ರ ಪೈಪೋಟಿ ಇದ್ದೇ ಇರುತ್ತೆ. ಬಾಲಿವುಡ್‌ನಲ್ಲೂ ಜಾಹ್ನವಿ ಕಪೂರ್ ಹಾಗೂ ಅದಾ ಶರ್ಮಾ ನಡುವೆ ಪೈಪೋಟಿ ಇದೆಯೆಂದು ನಂಬಲಾಗಿತ್ತು. ಆ ವದಂತಿಗಳಿಗೆ ಅದ ಶರ್ಮಾ ಬ್ರೇಕ್ ಹಾಕಿದ್ದಾರೆ. ಚಿತ್ರರಂಗದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ಥಾನವಿದೆ. ಹೀಗಾಗಿ ಪ್ರತಿಯೊಬ್ಬರೂ ಪರಸ್ಪರರ ಬೆಳವಣಿಗೆಯನ್ನು ಗೌರವಿಸುವುದು ಮುಖ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅದಾ ಶರ್ಮಾ ಪ್ರತಿಕ್ರಿಯೆಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅದಾ-ಜಾಹ್ನವಿ ಫುಲ್ ಬ್ಯುಸಿ
ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಸದ್ಯ ಬಾಲಿವುಡ್ ಹಾಗೂ ತೆಲುಗು ಎರಡೂ ಚಿತ್ರರಂಗದಲ್ಲಿಯೂ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ 'ಪೆದ್ದಿ' ರಿಲೀಸ್ ಆಗಿದ್ದು, ವಿಶ್ವದಾದ್ಯಂತ ಭರ್ಜರಿ ಬಾಕ್ಸಾಫೀಸ್ ಕಲೆಕ್ಷನ್ ಆಗುತ್ತಿದೆ. ಇನ್ನೊಂದು ಕಡೆ ಸೌತ್ ಸಿನಿಮಾಗಳಲ್ಲಿ ನಟಿಸಿ, ಬಾಲಿವುಡ್ ಕಡೆ ಗಮನ ಹರಿಸಿರೋ ಅದಾ ಶರ್ಮಾ 'ದಿ ಕೇರಳ ಸ್ಟೋರಿ', 'ಬಸ್ತಾರ್: ದಿ ನಕ್ಸಲ್ ಸ್ಟೋರಿ' ಅಂತಹ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದಾರೆ. ಈಗ ಮನೋಜ್ ಬಾಜಪೇಯಿ ಜೊತೆ ನಟಿಸಿರುವ 'ಗವರ್ನರ್' ರಿಲೀಸ್‌ಗೆ ರೆಡಿಯಾಗಿದೆ.


Click it and Unblock the Notifications
