IMdbಯಲ್ಲಿ ಶಾರುಖ್ ಖಾನ್ 'ಜವಾನ್'ಗಿಂತ 'ದಿ ಕೇರಳ ಸ್ಟೋರಿ'ಗೆ ಹೆಚ್ಚು ಕ್ರೇಜ್: ಮೇ 5 ಏನಾಗ್ಬಹುದು?

2022, ನವೆಂಬರ್.. 'ದಿ ಕೇರಳ ಸ್ಟೋರಿ'ಯ ಮೊದಲ ಟೀಸರ್ ರಿಲೀಸ್ ಆಗಿತ್ತು. ಈ ಟೀಸರ್ ಅಂದೇ ದೇಶವನ್ನು ಬೆಚ್ಚಿಬೀಳಿಸಿತ್ತು. ಅಲ್ಲಿಂದ ಈ ಸಿನಿಮಾವನ್ನು ವಿರೋಧಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಇದೇ 'ದಿ ಕೇರಳ ಸ್ಟೋರಿ'ಯ ಟ್ರೈಲರ್ ಕೂಡ ಇತ್ತೀಚೆಗೆ ರಿಲೀಸ್ ಆಗಿತ್ತು. ಇದೂ ಕೂಡ ವಿವಾದವನ್ನೇ ಸೃಷ್ಟಿಸಿದೆ. ಕೇರಳದಲ್ಲಿ ಸುಮಾರು 32 ಸಾವಿರ ಮಹಿಳೆಯರು ಕಾಣೆಯಾಗಿದ್ದು, ಇಸ್ಲಾಂಗೆ ಮತಾಂತರಗೊಳಿಸಲಾಗಿದೆ. ಬಳಿಕ ಅವರನ್ನು ಐಸಿಸ್ ಸಂಘಟನೆಗೆ ದಾಖಲು ಮಾಡಲಾಗಿದೆ ಎಂದು ಚಿತ್ರತಂಡ ಹೇಳಿತ್ತು. ಅಲ್ಲದೆ ಇದಕ್ಕೆ ಬೇಕಾಗಿರೋ ಪುರಾವೆಗಳು ಕೂಡ ಇವೆ ಎಂದು ಸಿನಿಮಾದ ನಿರ್ಮಾಪಕ ಹೇಳಿದ್ದಾರೆಂದು ವರದಿಯಾಗಿದ್ದವು.

Adah Sharmas The Kerala Story got More IMdb Rating than Shah Rukh Khan Jawan

'ದಿ ಕೇರಳ ಸ್ಟೋರಿ' ಟ್ರೈಲರ್ ರಿಲೀಸ್ ಆದ ಬಳಿಕ ಕೇರಳದ ರಾಜಕೀಯ ಪಕ್ಷಗಳು ಈ ಸಿನಿಮಾಗೆ ನಿರ್ಬಂಧ ಹೇರುವಂತೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಮೇ 5ರಂದು ರಿಲೀಸ್ ಆಗುತ್ತಿರುವ ಸಿನಿಮಾವನ್ನು ಹೇಗಾದರೂ ಮಾಡಿ ತಡೆಯಲೇ ಬೇಕು ಅಂತ ಶತಪ್ರಯತ್ನ ಮಾಡಲಾಗುತ್ತಿದೆ. ಇದೇ ವೇಳೆ 'ದಿ ಕೇರಳ ಸ್ಟೋರಿ' ಪ್ರೇಕ್ಷಕರಲ್ಲಿ ಕುತೂಹಲವನ್ನು ಕೆರಳಿಸುವಲ್ಲಿ ಯಶಸ್ವಿಯಾಗಿದೆ.

ಈ ವಿವಾದಾತ್ಮಕ ಸಿನಿಮಾದ ಬಗ್ಗೆ ಹುಡುಕಾಡುವವರ ಸಂಖ್ಯೆ ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಬಗ್ಗೆ ಚರ್ಚೆಯಾಗುತ್ತಿವೆ. ಇಷ್ಟೇ ಅಲ್ಲದೆ,IMDbಯ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ 'ದಿ ಕೇರಳ ಸ್ಟೋರಿ' ಟಾಪ್‌ ಸ್ಪಾಟ್‌ನಲ್ಲಿದೆ. ಸುಮಾರು ಶೇ.45.7ರಷ್ಟು ಮಂದಿ ಈ ಸಿನಿಮಾವನ್ನು ಫಾಲೋ ಮಾಡುತ್ತಿದ್ದಾರೆ.

Adah Sharmas The Kerala Story got More IMdb Rating than Shah Rukh Khan Jawan

ಅದೇ ಇನ್ನೊಂದು ಕಡೆ ಶಾರುಖ್ ಖಾನ್ ನಟಿಸುತ್ತಿರುವ ಜವಾನ್ ಸಿನಿಮಾ ಎರಡನೇ ಸ್ಥಾನಕ್ಕೆ ಕುಸಿದಿದೆ. ಬಾಲಿವುಡ್ ಕಿಂಗ್ ಶಾರುಖ್ ಹಾಗೂ ನಿರ್ದೇಶಕ ಅಟ್ಲಿ ಕಾಂಬಿನೇಷನ್‌ನಲ್ಲಿ ಬರ್ತಿರೋ ಮೊದಲ ಸಿನಿಮಾ. ಇದು ಶಾರುಖ್ ಖಾನ್ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಕೂಡ ಹೌದು.

ಇಷ್ಟು ದಿನ 'ಜವಾನ್' ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ ಮೊದಲ ಸ್ಥಾನದಲ್ಲಿತ್ತು. ಈಗ ಕೇವಲ 17.6ರಷ್ಟು ಮಂದಿ 'ಜವಾನ್' ಸಿನಿಮಾವನ್ನು ಫಾಲೋ ಮಾಡುತ್ತಿದ್ದಾರೆ. ಈ ಅಂಕಿ ಅಂಶಗಳನ್ನು ನೋಡಿದರೆ, 'ದಿ ಕೇರಳ ಸ್ಟೋರಿ' ಪ್ರೇಕ್ಷಕರನ್ನು ಸೆಳೆಯುವಲ್ಲಿ ಗೆದ್ದಿದೆ.

ಬಾಲಿವುಡ್ ನಟಿ ಅದಾ ಶರ್ಮಾ ಅಭಿನಯದ 'ದಿ ಕೇರಳ ಸ್ಟೋರಿ' ಕುತೂಹಲವನ್ನೇನೋ ಕೆರಳಿಸಿದೆ. ಹಾಗೇ ವಿವಾದದಲ್ಲೂ ಸಿಲುಕಿದೆ. ಸುದಿಪ್ತೋ ಸೇನ್ ನಿರ್ದೇಶನ ಈ ಸಿನಿಮಾ ಮೇ 5ರಂದು ರಿಲೀಸ್‌ ಆಗುತ್ತಿದೆ. ಆದರೆ, ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ರಿಲೀಸ್ ಆಗುತ್ತಾ ಇಲ್ವಾ? ಅನ್ನೋ ಅನುಮಾನ ಕೂಡ ಇದೆ.

More from Filmibeat

English summary
Adah Sharma's The Kerala Story got More IMdb Rating than Shah Rukh Khan Jawan, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X