Adipurush case: "ಕುರಾನ್ ಬಗ್ಗೆ ಹೀಗೆ ತಪ್ಪಾಗಿ ಡಾಕ್ಯೂಮೆಂಟರಿ ಮಾಡಿ.. ಮುಂದೇನಾಗುತ್ತೆ ನೋಡಿ: ಅಲಹಾಬಾದ್ ಹೈಕೋರ್ಟ್
'ಆದಿಪುರುಷ್' ಸಿನಿಮಾ ಬಿಡುಗಡೆಯಾದಲ್ಲಿಂದ ವಿವಾದಕ್ಕೆ ಸಿಕ್ಕಿಕೊಂಡಿದೆ. ಸಿನಿಮಾ ಪಾತ್ರಗಳನ್ನು ಬಿಂಬಿಸಿದ ರೀತಿ ಹಾಗೂ ಕೆಲವು ಡೈಲಾಗ್‌ಗಳ ಕೇಳಿ ಪ್ರೇಕ್ಷಕರು ಕೆಂಡಾಮಂಡಲವಾಗಿದ್ದರು. ಕೆಲವರು ವಿರೋಧವನ್ನು ವ್ಯಕ್ತಪಡಿಸಿ, ಸಿನಿಮಾವನ್ನು ಬ್ಯಾನ್ ಮಾಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಸಂಬಂಧ ಅಲಹಾಬಾದ್ ಹೈಕೋರ್ಟ್ ಬುಧವಾರ (ಜೂನ್ 23) ಆ ಅರ್ಜಿಗಳ ವಿಚಾರಣೆಯನ್ನು ನಡೆಸಿತು. ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳಾ ರಾಜೇಶ್ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ಶ್ರೀ ಪ್ರಕಾಶ್ ಸಿಂಗ್ 'ಆದಿಪುರುಷ' ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿನಿಮಾ ಮಾಡುವವರು ಧಾರ್ಮಿಕ ವಿಷಯಗಳಿಂದ ದೂರ ಉಳಿಯಬೇಕು ಎಂದು ಪೀಠ ಅಭಿಪ್ರಾಯ ಪಟ್ಟಿದೆ. ಅಲ್ಲದೆ ನಿಷೇಧವನ್ನು ಕೋರಿ ಸಲ್ಲಿಸಿದ ಅರ್ಜಿ ವಿಚಾರವಾಗಿ ವೈಯಕ್ತಿಕ ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಸೆನ್ಸಾರ್ ಬೋರ್ಡ್‌ಗೆ ನಿರ್ದೇಶನ ನೀಡಿದೆ.
ಇದೇ ವೇಳೆ ಯಾವುದೇ ಧರ್ಮಕ್ಕೆ ಸಂಬಂಧಿಸಿದ ವಿಚಾರಗಳನ್ನು ಸಿನಿಮಾ ತಂಡ ಮುಟ್ಟಲೇಬಾರದು ಎಂದು ಅಭಿಪ್ರಾಯ ಪಟ್ಟಿದೆ. " ಕುರಾನ್, ಬೈಬಲ್ ಅಂತ ವಿಚಾರಗಳನ್ನು ತೆಗೆದುಕೊಳ್ಳಬೇಡಿ. ಯಾವುದೇ ಧರ್ಮದ ವಿಷಯಗಳನ್ನು ತಪ್ಪಾಗಿ ತೋರಿಸಬೇಡಿ. ಕೋರ್ಟ್‌ಗೆ ಯಾವುದೇ ಧರ್ಮವಿಲ್ಲ" ಎಂದು ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಹಾಗೂ ಶ್ರೀಪ್ರಕಾಶ್ ಸಿಂಗ್ ಅವರ ನ್ಯಾಯಪೀಠ ತಾಕೀತು ಮಾಡಿದೆ.
ಇದೇ ವೇಳೆ ನ್ಯಾಯ ಮೂರ್ತಿಗಳು 'ಆದಿಪುರುಷ್' ನಿರ್ಮಾಪಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೌಖಿಕವಾಗಿ ಇದೇ ರೀತಿ ಕುರಾನ್ ಬಗ್ಗೆ ಡ್ಯಾಕ್ಯೂಮೆಂಟರಿ ಮಾಡಿದೆ ಏನಾಗುತ್ತೆ ನೋಡಿ ಎಂದು ಎಚ್ಚರಿಸಿದ್ದಾರೆ.
"ನೀವು ಇದೇ ರೀತಿ ತಪ್ಪಾಗಿ ಕುರಾನ್ ಬಗ್ಗೆ ಸಣ್ಣದೊಂದು ಡಾಕ್ಯೂಮೆಂಟರಿ ಮಾಡಿ. ಮುಂದೇನಾಗುತ್ತೆ ಅಂತ ನೋಡಿ" ಎಂದು ಅಲಹಾಬಾದ್ ನ್ಯಾಯಾಲಯ ಮೌಖಿಕವಾಗಿ ನಿರ್ಮಾಪಕರನ್ನು ಕುಟುಕಿದೆ. ಇಷ್ಟೇ ಅಲ್ಲದೆ "ಆದಿಪುರುಷ್ ಸಿನಿಮಾದ ನಿರ್ಮಾಪಕರು ನ್ಯಾಯಾಲಯಕ್ಕೆ ಹಾಜರಾಗಬೇಕು. ಇದು ತಮಾಷೆಯ ವಿಷಯವಲ್ಲ " ಎಂದು ನ್ಯಾಯಾಲಯ ಹೇಳಿದೆ.


Click it and Unblock the Notifications











