Aishwarya Rai: ಐಶ್ವರ್ಯಾ ರೈ ಡಿವೋರ್ಸ್ ಆದ್ಮೇಲೆ 'ಆಯಿಷಾ ರೈ' ಬದಲಾಯಿಸಿ ಮದ್ವೆ ಆಗ್ತೀನಿ"; ಪಾಕಿಸ್ತಾನ ಮಫ್ತಿಯ ಭಂಡ ಮಾತು!

ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಸಂಸಾರದಲ್ಲಿ ಬಿರುಕು ಬಿಟ್ಟಿದೆ ಎಂಬ ಸುದ್ದಿ ಕೆಲವು ದಿನ ಬಿಸಿ ಬಿಸಿ ಚರ್ಚೆಯಾಗಿತ್ತು. ಇವರಿಬ್ಬರ ವಿಚ್ಛೇದನದ ಸುದ್ದಿ ಅದೇ ವೈರಲ್ ಆದರೂ, ಐಶ್ವರ್ಯಾ ರೈ ಆಗಲಿ, ಅಭಿಷೇಕ್ ಆಗಲಿ ತುಟಿಪಿಟಿಕ್ ಎನ್ನಲಿಲ್ಲ. ಹಲವು ಸಂದರ್ಭಗಳಲ್ಲಿ ನಾವಿಬ್ಬರೂ ಅನ್ಯೋನ್ಯವಾಗಿದ್ದೇವೆ ಅನ್ನೋ ಸಂದೇಶವನ್ನು ಪರೋಕ್ಷವಾಗಿ ಕೊಟ್ಟಿದ್ದರು.

ಇತ್ತೀಚೆಗೆ ಪ್ರಶಸ್ತಿ ಸಮಾರಂಭದಲ್ಲಿ ಅಭಿಷೇಕ್ ಬಚ್ಚನ್ ತನ್ನ ಪತ್ನಿ ಐಶ್ವರ್ಯಾ ರೈ ಹಾಗೂ ಮಗಳಿಗೆ ತಾನು ಗೆದ್ದ ಅವಾರ್ಡ್‌ ಅನ್ನು ಅರ್ಪಿಸಿದ್ದರು. ಇದಾದ ಬಳಿಕ ವಿಚ್ಛೇದನದ ಬಗ್ಗೆ ಮಾತಾಡುತ್ತಿದ್ದವರೆಲ್ಲ ಬಾಯಿ ಮುಚ್ಚಿಕೊಂಡು ಕೂತಿದ್ದರು. ಹೀಗಿರುವಾಗ ಬಚ್ಚನ್ ಕುಟುಂಬದ ಬಗ್ಗೆ ಹಬ್ಬಿದ ವದಂತಿಗಳಿಗೆಲ್ಲ ತೆರೆ ಬಿದ್ದಂತೆ ಆಗಿತ್ತು. ಇದು ಅವರಿಬ್ಬರ ಅಭಿಮಾನಿಗಳಿಗೂ ಸಮಾಧಾನ ತಂದಿದೆ.

After Aishwarya Rai Abhishek Bachchan divorce she will propose for marriage says pakistani Mufti Abdul Qavi

ಈ ಮಧ್ಯೆ ಪಾಕಿಸ್ತಾನದ ತಲೆಕೆಟ್ಟ ಮಫ್ತಿಯೊಬ್ಬ ಐಶ್ವರ್ಯಾ ರೈ ಅನ್ನು ಮದುವೆ ಆಗುತ್ತೇನೆಂದು ಹೇಳಿಕೆ ಕೊಟ್ಟಿದ್ದಾನೆ. ಈತನ ಬೇಜವಾಬ್ದಾರಿ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಭಿಷೇಕ್ ಬಚ್ಚನ್ ಜೊತೆ ವಿಚ್ಛೇದನದ ಬಳಿಕ ಐಶ್ವರ್ಯಾ ರೈ ತಮಗೆ ಮದುವೆಯ ಪ್ರಸ್ತಾಪ ಕಳುಹಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಇದು ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಪಾಕಿಸ್ತಾನದ ವಿವಾದತ್ಮಕ ಮಫ್ತಿ ಅಬ್ದುಲ್ ಕ್ವಾವಿ ಇತ್ತೀಚೆಗೆ ಸಂದರ್ಶನ ನೀಡಿದ್ದರು. ಇದರಲ್ಲಿ ಐಶ್ವರ್ಯಾ ರೈರನ್ನು ಮದುವೆ ಆಗುವ ಬಗ್ಗೆ ಮಫ್ತಿ ಆಸೆ ವ್ಯಕ್ತಪಡಿಸಿದ್ದಾನೆ. "ಐಶ್ವರ್ಯಾ ರೈ ಹಾಗೂ ಅಭಿಷೇಕ್ ಸಂಸಾರದಲ್ಲಿ ಸಮಸ್ಯೆಗಳಿವೆ. ಅವರಿಬ್ಬರು ಬೇರೆಯಾಗಬಹುದೆಂದು ನಾನು ಕೇಳಲ್ಪಟ್ಟಿದ್ದೇನೆ. ಅವರು ವಿಚ್ಛೇದನ ನೀಡಿ ಬೇರೆಯಾಗಬಾರದೆಂದು ನಾನು ಪ್ರಾರ್ಥಿಸುತ್ತೇನೆ. ಒಂದು ವೇಳೆ ಅವರೇನಾದರೂ ಬೇರೆಯಾದರೆ, ಐಶ್ವರ್ಯಾ ರೈ ನನ್ನ ಮುಂದೆ ಮದುವೆಯ ಪ್ರಸ್ತಾಪ ಇಡುತ್ತಾರೆ" ಎಂದು ಮಫ್ತಿ ಅಬ್ದುಲ್ ಕ್ವಾವಿ ಹೇಳಿಕೆ ಕೊಟ್ಟಿದ್ದಾರೆ.

ಮಫ್ತಿಯ ಈ ಹೇಳಿಕೆಗೆ ನಿರೂಪಕ "ನೀವು ಒಬ್ಬರ ಮುಸಲ್ಮಾನರಾಗಿ ಅನ್ಯ ಧರ್ಮದವರನ್ನು ಹೇಗೆ ಮದುವೆ ಆಗುತ್ತೀರಿ?" ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಮಫ್ತಿ ಕೊಟ್ಟ ಉತ್ತರ ಹಲವರ ಕಣ್ಣು ಕೆಂಪಗಾಗುವಂತೆ ಮಾಡಿದೆ. ರಾಖಿ ಸಾವಂತ್ ಇಸ್ಲಾಂಗೆ ಮತಾಂತರಗೊಂಡು 'ಫಾತಿಮಾ' ಆಗಲಿಲ್ಲವೇ? ಎಂದು ಉದಾಹರಣೆ ಕೊಟ್ಟಿದ್ದಾರೆ. ಆಗ ನಿರೂಪಕ ನೀವು ಐಶ್ವರ್ಯಾ ರೈ ಅವರ ಧರ್ಮವನ್ನು ಬದಲಾಯಿಸುತ್ತೀರಾ? ಎಂದು ಮರು ಪ್ರಶ್ನೆ ಹಾಕಿದ್ದಾರೆ. ಅದಕ್ಕೆ ಅಬ್ದುಲ್ ಕ್ವಾವಿ "ಖಂಡಿತ.. ಐಶ್ವರ್ಯಾ ರೈ ಅವರನ್ನು ಆಯಿಷಾ ರೈ ಎಂದು ಕರೆಯುವುದು ಖುಷಿ ಕೊಡುತ್ತದೆ" ಎಂದಿದ್ದಾರೆ.

ಪಾಕಿಸ್ತಾನದ ಮಫ್ತಿ ಅಬ್ದುಲ್ ಕ್ವಾವಿ ಕೊಟ್ಟ ಹೇಳಿಕೆಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಇವರ ಈ ವಿವಾದಾತ್ಮಕ ಸಂದರ್ಶನವನ್ನು ಆಯೇಷಾ ಮಿರ್ಜಾ ಟಾಕ್ಸ್ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಹಾಗಂತ ಅಬ್ದುಲ್ ಕ್ವಾವಿ ಇಂತಹ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಐಶ್ವರ್ಯಾ ರೈ ಬಗ್ಗೆ ಇಂತಹ ಅಸಂಬಂಧ ಹೇಳಿಕೆಗಳನ್ನು ನೀಡಿ ನೆಟ್ಟಿಗರಿಂದ ಚೀಮಾರಿ ಹಾಕಿಸಿಕೊಂಡಿದ್ದಾನೆ.

ಇನ್ನು ಕೆಲವು ತಿಂಗಳ ಹಿಂದಷ್ಟೆ ಅಭಿಷೇಕ್ ಬಚ್ಚನ್ ಉತ್ತಮ ನಟ ಪ್ರಶಸ್ತಿ ಪಡೆದಿದ್ದರು. ಆ ವೇಳೆ ತಮ್ಮ ಭಾಷಣದಲ್ಲಿ ಪತ್ನಿ ಐಶ್ವರ್ಯಾ ರೈ ಹಾಗೂ ಪುತ್ರಿ ಆರಾಧ್ಯಾಗೆ ಧನ್ಯವಾದಗಳನ್ನು ಅರ್ಪಿಸಿದ್ದರು. "ಐಶ್ವರ್ಯಾ ಮತ್ತು ಆರಾಧ್ಯಾ ಇಬ್ಬರೂ ನನ್ನ ಕನಸುಗಳನ್ನು ನನಸಾಗಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದಗಳು. ನಿಮ್ಮ ತ್ಯಾಗವೇ ನಾನು ಇಲ್ಲಿ ನಿಲ್ಲಲು ಮುಖ್ಯ ಕಾರಣಗಳಲ್ಲಿ ಒಂದು ಎಂದು ನಾನು ಭಾವಿಸುತ್ತೇನೆ" ಎಂದು ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿಗೆ ಬ್ರೇಕ್ ಹಾಕಿದ್ದರು.

More from Filmibeat

English summary
After Aishwarya Rai-Abhishek Bachchan divorce she will propose for marriage says pakistani Mufti Abdul Qavi;
Read more about: aishwarya rai divorce controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X