'ಬ್ರಹ್ಮಾಸ್ತ್ರ' ಬಳಿಕ ಮತ್ತೆ ಒಟ್ಟಿಗೆ ನಟಿಸಿದ ರಣ್‌ಬೀರ್ ಕಪೂರ್-ಆಲಿಯಾ ಭಟ್!
ಬಾಲಿವುಡ್‌ನ ಫೇಮಸ್ ಜೋಡಿ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಇಬ್ಬರೂ ಕೊನೆಯದಾಗಿ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ನಟಿಸಿದ್ದರು. ಬಿಗ್ ಸ್ಕ್ರೀನ್ ಮೇಲೆ ಈ ಜೋಡಿಯನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದರು. ಆದ್ರೀಗ ಈ ಜೋಡಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದೆ.
ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಇಬ್ಬರೂ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ, ಜಾಹೀರಾತಿನಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದೆ. ಈ ಜೋಡಿ ಹೊಸ ಜಾಹೀರಾತು ಹೊರಬಿದ್ದಿದ್ದು. ಇಬ್ಬರ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.

ಅಂದ್ಹಾಗೆ, ರಣ್‌ಬೀರ್ ಹಾಗೂ ಆಲಿಯಾ ಇಬ್ಬರೂ ಟಿಎಂಟಿ ಕಂಬಿಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನ ವಿಡಿಯೋವನ್ನು ಟಿಎಂಟಿ ಕಂಪನಿ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಅಷ್ಟಕ್ಕೂ ಈ ಜಾಹೀರಾತಿನಲ್ಲೊಂದು ವಿಶೇಷತೆಯಿದೆ. ಈ ಆಡ್ ಅನ್ನು ನಿರ್ದೇಶನ ಮಾಡಿದ್ದು ಅಭಿಷೇಕ್ ವರ್ಮನ್. ಈಗಾಗಲೇ ಇವರು ನಿರ್ದೇಶಿಸಿದ ಎರಡೂ ಸಿನಿಮಾಗಳಲ್ಲಿಯೂ ಆಲಿಯಾ ಭಟ್ ನಟಿಸಿದ್ದಾರೆ. ಈ ಹಿಂದೆ ಅಭಿಷೇಕ್ ಬಚ್ಚನ್ '2 ಸ್ಟೇಟ್ಸ್' ಹಾಗೂ 'ಕಳಂಕ್' ಈ ಎರಡೂ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಈ ಎರಡೂ ಸಿನಿಮಾಗಳಲ್ಲಿಯೂ ಆಲಿಯಾ ಭಟ್ ನಟಿಸಿದ್ದರು.
ಈಗ ಅಭಿಷೇಕ್ ವರ್ಮನ್ ಜಾಹೀರಾತಿಗಾಗಿ ರಿಯಲ್ ಲೈಫ್ ಜೋಡಿಯನ್ನು ಕರೆದುಕೊಂಡು ಬಂದಿದ್ದಾರೆ. ಈ ಜಾಹೀರಾತಿನಲ್ಲಿಯೂ ರಣ್‌ಬೀರ್ ಹಾಗೂ ಆಲಿಯಾ ಭಟ್ ಇಬ್ಬರೂಸ ರಿಯಲ್ ಕಪಲ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಇಬ್ಬರೂ, ಕನಸಿನ ಮನೆ ಬಗ್ಗೆ ಚರ್ಚೆ ಮಾಡುವ ಸನ್ನಿವೇಶವನ್ನು ತರಲಾಗಿದೆ.

ಸದ್ಯ ಆಲಿಯಾ ಭಟ್ ಹಾಲಿವುಡ್ ಸಿನಿಮಾ 'ಹಾರ್ಟ್ ಆಫ್ ಸ್ಟೋನ್'ನಲ್ಲಿ ನಟಿಸಿದ್ದಾರೆ. ಈ ಸಿನಿಮಾ ಇನ್ನೂ ಬಿಡುಗಡೆಯಾಗಬೇಕಿದೆ. ಹಾಗೇ ರಣ್‌ವೀರ್ ಸಿಂಗ್ ಜೊತೆ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ನಟಿಸಿದ್ದಾರೆ. ಇನ್ನೊಂದು ರಣ್‌ಬೀರ್ ಕಪೂರ್ ಕೈಯಲ್ಲೂ ಎರಡು ಸಿನಿಮಾಗಳಿವೆ. ರಶ್ಮಿಕಾ ಮಂದಣ್ಣ ಜೊತೆ 'ಎನಿಮಲ್' ಹಾಗೂ ಶ್ರದ್ಧಾ ಕಪೂರ್ ಜೊತೆ ಇನ್ನೂ ಹೆಸರಿಡದ ಸಿನಿಮಾಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











