Dharmendra; ಧರ್ಮೇಂದ್ರ ಆಸ್ತಿಯಲ್ಲಿ ಹೇಮಾ ಮಾಲಿನಿಗೆ ಪಾಲು ಸಿಗುತ್ತಾ? ನಟಿಯ ಈ ಹೇಳಿಕೆಯಲ್ಲೇನಿದೆ?
ಬಾಲಿವುಡ್‌ನ ಹೀ-ಮ್ಯಾನ್ ಧರ್ಮೇಂದ್ರ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಇನ್ನು ಅವರ ಸಿನಿಮಾಗಳಷ್ಟೇ ನೆನಪು. ಧರ್ಮೇಂದ್ರ ಬಾಲಿವುಡ್ ಕಂಡ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು. ಇವರ ಸಿನಿಮಾ ಜರ್ನಿ ಎಷ್ಟು ರೋಚಕವಾಗಿದೆಯೋ.. ಅವರ ವೈಯಕ್ತಿಕ ಬದುಕು ಕೂಡ ಅಷ್ಟೇ ಇಂಟ್ರೆಸ್ಟಿಂಗ್ ಆಗಿದೆ. ಅದರಲ್ಲೂ ಹೇಮಾ ಮಾಲಿನಿಯೊಂದಿಗೆ ಎರಡನೇ ಮದುವೆ ಇಡೀ ದೇಶದಲ್ಲಿಯೇ ಸಂಚಲನ ಸೃಷ್ಟಿಸಿತ್ತು.
ಬಾಲಿವುಡ್‌ನಲ್ಲಿ ಹೇಮಾ ಮಾಲಿನಿ ಕೂಡ ಬಹುಬೇಡಿಕೆಯ ನಟಿಯಾಗಿದ್ದರು. ಧರ್ಮೇಂದ್ರರಂತೆಯೇ ಹೇಮಾ ಮಾಲಿನಿಗೂ ಅಪಾರ ಅಭಿಮಾನಿಗಳು ಇದ್ದರು. ಬಾಲಿವುಡ್‌ನ ಸ್ಟಾರ್ ನಟರು ಇವರನ್ನು ಮದುವೆ ಆಗುವುದಕ್ಕೆ ಕ್ಯೂನಲ್ಲಿ ನಿಂತಿದ್ದರು. ಹೀಗಿದ್ದರೂ ಅದಾಗಲೇ ಮದುವೆಯಾಗಿ ಇಬ್ಬರು ಮಕ್ಕಳ ತಂದೆಯಾಗಿದ್ದ ಧರ್ಮೇಂದ್ರ ಅವರನ್ನೇ ಇಷ್ಟ ಪಟ್ಟಿದ್ದರು.

ಧರ್ಮೇಂದ್ರ ಮೊದಲ ಪತ್ನಿ ಒಪ್ಪದೇ ಇದ್ದಾಗ, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ವಿವಾಹವಾಗಿದ್ದರು. ಮದುವೆ ಬಳಿಕ ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಇಬ್ಬರೂ ಪ್ರತ್ಯೇಕವಾಗಿ ವಾಸವಿದ್ದರು. ಆದರೂ ಇಬ್ಬರ ನಡುವಿನ ಅನ್ಯೋನ್ಯತೆ ಮಾತ್ರ ಕಮ್ಮಿಯಾಗಿರಲಿಲ್ಲ. ಬಾಲಿವುಡ್‌ನ ಈ ಶ್ರೀಮಂತ ನಟ ಈಗ ನೆನಪು ಮಾತ್ರ. ಈ ದಿಗ್ಗಜನ ಸಾವಿನ ಬಗ್ಗೆ ಹೊಸದೊಂದ ಚರ್ಚೆ ಹುಟ್ಟಿಕೊಂಡಿದೆ. ಧರ್ಮೇಂದ್ರ ಮಾಡಿದ ಆಸ್ತಿಯಲ್ಲಿ ಹೇಮಾ ಮಾಲಿನಿಗೆ ಪಾಲು ಸಿಗುತ್ತಾ? ಈ ಬಗ್ಗೆ ಹಿಂದೊಮ್ಮೆ ಡ್ರೀಮ್ ಗರ್ಲ್ ಓಪನ್ ಆಗಿ ಮಾತಾಡಿದ್ದರು. ಈಗ ಧರ್ಮೇಂದ್ರ ಬಳಿ ಎಷ್ಟು ಆಸ್ತಿಯಿದೆ? ಹೇಮಾ ಮಾಲಿನಿಗೂ ಪಾಲು ಸಿಗುತ್ತಾ? ತಿಳಿಯುವುದಕ್ಕೆ ಮುಂದೆ ಓದಿ.
ಧರ್ಮೇಂದ್ರ- ಹೇಮಾ ಮಾಲಿನಿ
ಇಬ್ಬರೂ ಪ್ರೀತಿಸಿ, ಹೋರಾಟ ಮಾಡಿ ಮದುವೆ ಆದ್ಮೇಲೆ ಧರ್ಮೇಂದ್ರ ಹಾಗೂ ಹೇಮಾ ಮಾಲಿನಿ ಇಬ್ಬರೂ ಪ್ರತ್ಯೇಕವಾಗಿ ವಾಸವಿದ್ದಿದ್ದು ಯಾಕೆ? ಇದು ಬಾಲಿವುಡ್ ಮಂದಿಯನ್ನಷ್ಟೇ ಅಲ್ಲ. ಅವರ ಅಭಿಮಾನಿಗಳನ್ನೂ ಕಾಡುತ್ತಿತ್ತು. ಒಂದಿಷ್ಟು ದಿನಗಳ ಬಳಿಕ ಹೇಮಾ ಮಾಲಿನಿ ಈ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದರು. " ನನಗೆ ಯಾರ ಮನಸ್ಸಿಗೆ ನೋವು ಕೊಡುವುದಕ್ಕೆ ಇಷ್ಟವಿಲ್ಲ. ಹೀಗಾಗಿ ಪ್ರತ್ಯೇಕವಾಗಿ ಇರುವುದು ಖುಷಿ ಹಾಗೂ ನೆಮ್ಮದಿ ಕೊಟ್ಟಿದೆ. ಧರಂ ಜೀ ನನ್ನ ಹಾಗೂ ನನ್ನ ಮಕ್ಕಳ ಮೇಲೆ ಪ್ರೀತಿ ಇಟ್ಟುಕೊಂಡಿದ್ದಾರೆ. ಅಷ್ಟು ಸಾಕು" ಎಂದು ಹೇಮಾ ಮಾಲಿನಿ ಕಾರಣ ಕೊಟ್ಟು ಗಾಳಿ ಸುದ್ದಿಗಳಿಗೆ ಬ್ರೇಕ್ ಹಾಕಿದ್ದರು.
ಧರ್ಮೇಂದ್ರ ಆಸ್ತಿ ಬಗ್ಗೆ ಚರ್ಚೆ
ಬಾಲಿವುಡ್ ಲೆಜೆಂಡ್ ಧರ್ಮೇಂದ್ರ ತಾವು ದುಡಿದ ಹಣವನ್ನು ಪ್ರಾಪರ್ಟಿ ಹಾಗೂ ಬ್ಯುಸಿನೆಸ್ ಮೇಲೆ ಹಾಕಿದ್ದರು. ಇತ್ತೀಚೆಗೆ ಹಲವು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಧರ್ಮೇಂದ್ರ ಅವರ ಬಳಿ ಸುಮಾರು ₹450 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ದೇಶದ ಹಲವೆಡೆ ಅವರು ಪ್ರಾಪರ್ಟಿಯನ್ನು ಹೊಂದಿದ್ದಾರೆ. ಈ ಆಸ್ತಿಯೆಲ್ಲ ಯಾರಿಗೆ ಸೇರುತ್ತೆ? ಅನ್ನೋ ಕುತೂಹಲವನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ.

ಹೇಮಾ ಮಾಲಿನಿಗೆ ಪಾಲು ಸಿಗುತ್ತಾ?
ಹಿಂದೂ ವಿವಾಹ ಖಾಯ್ದೆ ಪ್ರಕಾರ, ಧರ್ಮೇಂದ್ರ ಹಾಗೂ ಹೇಮಾ ಮಾಲಿನಿ ಮದುವೆ ಸಿಂಧುವಲ್ಲ. ಯಾಕಂದ್ರೆ, ಮೊದಲನೇ ಪತ್ನಿಗೆ ವಿಚ್ಛೇದನ ನೀಡದೇ ಇನ್ನೊಂದು ಮದುವೆಯಾದರೆ, ಅದನ್ನು ಕಾನೂನು ಪರಿಗಣಿಸುವುದಿಲ್ಲ. ಆದರೆ, ಇಬ್ಬರೂ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮದುವೆ ಆಗಿದ್ದರಿಂದ ಆಸ್ತಿಯಲ್ಲಿ ಪಾಲು ಕೇಳಬಹುದಾ? ಅನ್ನೋ ಗೊಂದಲವಿದೆ. ಒಂದು ವೇಳೆ ಆಸ್ತಿಯಲ್ಲಿ ಅರ್ಹತೆ ಇದ್ದರೆ, ಧರ್ಮೇಂದ್ರ ಮೊದಲ ಪತ್ನಿಯ ನಾಲ್ವರು ಮಕ್ಕಳು ಹಾಗೂ ಹೇಮಾ ಮಾಲಿನಿಯ ಇಬ್ಬರು ಮಕ್ಕಳು ಸೇರಿ ಒಟ್ಟು ಆರು ಮಂದಿಗೆ ಆಸ್ತಿಯಲ್ಲಿ ವಿಂಗಡನೆಯಾಗುತ್ತೆ ಎಂದು ಟೈಮ್ ಬುಲ್ ವೆಬ್‌ಸೈಟ್ ವರದಿ ಮಾಡಿದೆ.
ಹೇಮಾ ಮಾಲಿನಿ ಏನಂದಿದ್ರು?
ಹೇಮಾ ಮಾಲಿನಿ ಈ ಹಿಂದೆನೇ ಧರ್ಮೇಂದ್ರ ಅವರ ಆಸ್ತಿಯ ಬಗ್ಗೆ ಕ್ಲಾರಿಟಿ ಕೊಟ್ಟಿದ್ದರು. ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಜೊತೆಗಿನ ಸಂದರ್ಶನದಲ್ಲಿ "ನನಗೆ ಈ ಮದುವೆ ಮುಂದಿನ ದಿನಗಳಲ್ಲಿ ಸಮಸ್ಯೆ ಆಗಬಹುದೆಂದು ಗೊತ್ತಿತ್ತು. ಆದರೆ, ನಾನು ಧರ್ಮೇಂದ್ರ ಅವರಿಂದ ಪ್ರೀತಿಯನ್ನು ಬಿಟ್ಟು ಬೇರೆ ಏನನ್ನೂ ನಿರೀಕ್ಷೆ ಮಾಡಿರಲಿಲ್ಲ. ಅವರು ಯಾವಾಗಲೂ ನನ್ನ ಪರವಾಗಿ ಇದ್ದರು. ಅದಕ್ಕಿಂತ ಇನ್ನೇನು ಬೇಕು. ನನಗೆ ಅವರ ಆಸ್ತಿ ಬೇಡ. ಹಣ ಬೇಡ. ಬೇರೆ ಏನೂ ಬೇಡ. ನನಗೆ ಒಂದು ಪ್ರೀತಿ ಬೇಕು ಅಷ್ಟೇ." ಎಂದು ಹೇಮಾ ಮಾಲಿನಿ ಹೇಳಿಕೆ ಕೊಟ್ಟಿದ್ದರು.


Click it and Unblock the Notifications











