ಬಾಲಿವುಡ್ ಕಥೆ ಮುಗೀತು ಹಾಲಿವುಡ್ ಮೇಲೆ ಕಣ್ಣಿಟ್ಟ ಆಲಿಯಾ ಭಟ್: 'ಗಂಗೂಬಾಯಿ' ಕೊಟ್ಟ ಸುಳಿವೇನು?

ಆಲಿಯಾ ಭಟ್ ಬಾಲಿವುಡ್‌ನ ಮೋಸ್ಟ್ ಸಕ್ಸಸ್‌ಫುಲ್ ನಟಿ. ಈಕೆ ನಟಿಸಿದ ಸಿನಿಮಾಗಳು ನಿರ್ಮಾಪಕ ಮುಖ ಅರಳಿಸುತ್ತಿದೆ. ಬಾಕ್ಸಾಫೀಸ್‌ನಲ್ಲಿ ಸೂಪರ್‌ಸ್ಟಾರ್ ಸಿನಿಮಾಗಳಿಗೆ ಪೈಪೋಟಿ ಕೊಡುತ್ತಿದೆ. ಈ ಕಾರಣಕ್ಕೆ ಆಲಿಯಾ ಭಟ್‌ಗೆ ಎಲ್ಲಾ ಭಾಷೆಗಳಲ್ಲೂ ಎಲ್ಲಿಲ್ಲದ ಬೇಡಿಕೆ. ಆಲಿಯಾ ಈಗ ಕೇವಲ ಬಾಲಿವುಡ್ ಅಷ್ಟೇ ಅಲ್ಲ. ದಕ್ಷಿಣ ಭಾರತದ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಒಂದು ತಿಂಗಳ ಅಂತರದಲ್ಲಿ ಎರಡು ದುಬಾರಿ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಯಶಸ್ಸಿನ ತುತ್ತತುದಿಯಲ್ಲಿರುವ ನಟಿ ಹಾಲಿವುಡ್ ಸಿನಿಮಾಗಳ ಮೇಲೆ ಕಣ್ಣಿಟ್ಟಿದ್ದಾರೆ.

ಬಾಲಿವುಡ್‌ ಹಾಗೂ ಟಾಲಿವುಡ್ ಎರಡೂ ಚಿತ್ರರಂಗದಲ್ಲಿ ಆಲಿಯಾ ಭಟ್‌ಗೆ ಬೇಡಿಕೆ ಹೆಚ್ಚಾಗಿದೆ. 'ಗಂಗೂಬಾಯಿ ಕಾಠಿಯಾವಾಡಿ' ಹಾಗೂ 'RRR' ಸಿನಿಮಾಗಳ ಬಳಿಕ ಆಲಿಯಾ ಸ್ಟಾರ್‌ಡಮ್ ದುಪ್ಪಟ್ಟಾಗಿದೆ. ಈ ಬೆನ್ನಲ್ಲೆ ಆಲಿಯಾ ಭಟ್ ಹಾಲಿವುಡ್ ಸಿನಿಮಾಗಳ ಕಡೆ ಮುಖ ಮಾಡಲು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಆಲಿಯಾ ಭಟ್ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

ಆಲಿಯಾ ಭಟ್ ಟಾರ್ಗೆಟ್ ಹಾಲಿವುಡ್ ಸಿನಿಮಾ

ಆಲಿಯಾ ಭಟ್ ಟಾರ್ಗೆಟ್ ಹಾಲಿವುಡ್ ಸಿನಿಮಾ

ಪುರುಸೊತ್ತಿಲ್ಲದೆ ಸಿನಿಮಾ ಮಾಡುತ್ತಿರುವ ನಟಿಯರಲ್ಲಿ ಆಲಿಯಾ ಭಟ್ ಕೂಡ ಒಬ್ಬರು. ಒಂದ್ಕಡೆ ಈಕೆಯ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದರೆ, ಇನ್ನು ಕೆಲವು ಸಿನಿಮಾಗಳು ಶೂಟಿಂಗ್ ಹಂತದಲ್ಲಿವೆ. ಈ ಎಲ್ಲಾ ಸಿನಿಮಾಗಳೂ ದುಬಾರಿ ಸಿನಿಮಾಗಳೇ. ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳು ಮುಗಿದ ಬಳಿಕ ಆಲಿಯಾ ಭಟ್ ಹಾಲಿವುಡ್‌ ಸಿನಿಮಾಗಳ ಕಡೆ ಗಮನ ಹರಿಸಲಿದ್ದಾರೆ. ಆಲಿಯಾ ಮುಂದಿನ ಟಾರ್ಗೆಟ್ ಹಾಲಿವುಡ್‌ ಎಂದು ಆಗಾಗ ಬಾಲಿವುಡ್‌ನಲ್ಲಿ ಚರ್ಚೆಯಾಗುತ್ತಲೇ ಇತ್ತು. ಅದಕ್ಕೆ ತಕ್ಕಂತೆ ಆಲಿಯಾ ಕೂಡ ಸಕರಾತ್ಮಕವಾಗಿ ಸ್ಪಂಧಿಸಿದ್ದಾರೆ.

ಹಾಲಿವುಡ್ ಬಗ್ಗೆ ಆಲಿಯಾ ಭಟ್ ಹೇಳಿದ್ದೇನು?

ಹಾಲಿವುಡ್ ಬಗ್ಗೆ ಆಲಿಯಾ ಭಟ್ ಹೇಳಿದ್ದೇನು?

ಆಲಿಯಾ ಭಟ್ ಮುಂದಿನ ಟಾರ್ಗೆಟ್ ಹಾಲಿವುಡ್ ಸಿನಿಮಾ ಅನ್ನುವುದು ಬಹುತೇಕ ಎಲ್ಲರಿಗೂ ಗೊತ್ತಿದೆ. ಆದರೆ, ಆಲಿಯಾ ಭಟ್ ಈ ಬಗ್ಗೆ ಎಲ್ಲೂ ಹೇಳಿಕೆ ನೀಡಿರಲಿಲ್ಲ. ಆದ್ರೀಗ ಹಾಲಿವುಡ್ ಎಂಟ್ರಿ ಬಗ್ಗೆ ಆಲಿಯಾ ಭಟ್ ಸಂದರ್ಶನವೊಂದರಲ್ಲಿ ಸುಳಿವು ನೀಡಿದ್ದಾರೆ. "ಅದೇ ನಂಬಿಕೆಯಲ್ಲಿ ಇದ್ದೇನೆ. ಮುಂದೆ ನಾನು ಇದನ್ನೇ ಎದುರು ನೋಡುತ್ತಿದ್ದೇನೆ. ಅದು ಯಾವಾಗ ಆಗುತ್ತೋ, ಆ ಆಗಲೇ ಆಗುತ್ತೆ. ಈಗಲೇ ಹಾಲಿವುಡ್ ಸಿನಿಮಾ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ." ಎಂದು ಸಂದರ್ಶನವೊಂದರಲ್ಲಿ ಆಲಿಯಾ ಭಟ್ ಹೇಳಿಕೆ ನೀಡಿದ್ದಾರೆ.

ಟ್ಯಾಲೆಂಟ್ ಏಜೆನ್ಸಿಗೆ ಜೈ ಎಂದ ಆಲಿಯಾ

ಟ್ಯಾಲೆಂಟ್ ಏಜೆನ್ಸಿಗೆ ಜೈ ಎಂದ ಆಲಿಯಾ

ಎಲ್ಲಾ ಲಾಕ್‌ಡೌನ್ ಅಂತ ತಲೆ ಮೇಲೆ ಕೈ ಹೊತ್ತು ಕೂತಿದ್ದರೆ, ಇತ್ತ ಆಲಿಯಾ ಭಟ್ ಹಾಲಿವುಡ್ ಸಿನಿಮಾಗಳ ಬಗ್ಗೆ ಕನಸು ಕಾಣುತ್ತಿದ್ದರು. 2021, ಜುಲೈ ತಿಂಗಳಲ್ಲಿ ಆಲಿಯಾ ಭಟ್ ಅಂತರರಾಷ್ಟ್ರೀಯ ಟ್ಯಾಲೆಂಟ್ ಏಜೆನ್ಸಿ ವಿಲಿಯಂ ಮೊರೀಸ್ ಎನ್‌ಡೀವೊರ್‌ (WME) ಜೊತೆ ಒಡಂಬಡಿಕೆ ಮಾಡಿಕೊಂಡಿದ್ದರು. ಈ ಸಂಸ್ಥೆ ಹಾಲಿವುಡ್ ಸಿನಿಮಾಗಳಿಗೆ ವಿಶ್ವದ ಮೂಲೆ ಮೂಲೆಯಲ್ಲಿ ನಾಯಕಿಯನ್ನು ಹುಡುಕಿ ಹಾಲಿವುಡ್ ನಿರ್ಮಾಣ ಸಂಸ್ಥೆಗಳಿಗೆ ಪರಿಚಯಿಸುತ್ತೆ. ಎಮ್ಮ ಸ್ಟೋನ್, ಓಪ್‌ರ್ಹ, ಚಾರ್ಲೀಸ್ ಥೆರೊನ್ ಅಂತ ಕಲಾವಿದರನ್ನು ಪರಿಚಯಿಸಿದ್ದು ಇದೇ ಕಂಪನಿ. ಹೀಗಾಗಿ ಒಂದು ವರ್ಷದ ಹಿಂದೆನೇ ಆಲಿಯಾ ಭಟ್ ಹಾಲಿವುಡ್‌ ಎಂಟ್ರಿ ಬಗ್ಗೆ ಚಿಂತಿಸುತ್ತಿದ್ದಾರೆ.

ಆಲಿಯಾ ಕೈಯಲ್ಲಿರುವ ಸಿನಿಮಾಗಳೆಷ್ಟು?

ಆಲಿಯಾ ಕೈಯಲ್ಲಿರುವ ಸಿನಿಮಾಗಳೆಷ್ಟು?

ಆಲಿಯಾ ಭಟ್ ಕೈಯಲ್ಲಿ ಬಿಗ್ ಪ್ರಾಜೆಕ್ಟ್‌ಗಳಿವೆ. 'ಗಂಗೂಬಾಯಿ ಕಾಠಿಯಾವಾಡಿ' ಇದೇ ಫೆಬ್ರವರಿ 25ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ತೆರೆಕಂಡು ಒಂದು ತಿಂಗಳ ಬಳಿಕ ರಾಜಮೌಳಿ ನಿರ್ದೇಶನದ RRR ಸಿನಿಮಾ ಬಿಡುಗಡೆಯಾಗಲಿದೆ. ರಣ್‌ಬೀರ್ ಕಪೂರ್‌ ಜೊತೆ ನಟಿಸುತ್ತಿರುವ 'ಬ್ರಹ್ಮಾಸ್ತ್ರ, ರಣ್‌ವೀರ್ ಸಿಂಗ್ ಜೊತೆ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ', ಶಾರುಖ್ ಜೊತೆ ಸೇರಿ ನಿರ್ಮಿಸುತ್ತಿರುವ 'ಡಾರ್ಲಿಂಗ್ಸ್' ಸಿನಿಮಾ ಕೈಯಲ್ಲಿವೆ. ಜೊತೆ ಜೂ.ಎನ್‌ಟಿಆರ್ ಜೊತೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಎಲ್ಲಾ ಸಿನಿಮಾಗಳ ಮಧ್ಯೆ ಹಾಲಿವುಡ್ ಸಿನಿಮಾಗೆ ಆಫರ್ ಸಿಗುವ ನಿರೀಕ್ಷೆಯಲ್ಲಿ ಆಲಿಯಾ ಭಟ್ ಇದ್ದಾರೆ.

More from Filmibeat

English summary
After Gangubai Kathiawadi Alia Bhatt to star in a Hollywood film. I hope. I mean that's is something that is expected next says Alia Bhatt.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X