ಮಹಾಕುಂಭದ ವೈರಲ್ ಹುಡುಗಿ ಸಿನಿಮಾದ ನಿರ್ದೇಶಕ ಬಂಧನ: ಕಣ್ಣೀರಿಟ್ಟ ಮೊನಾಲಿಸಾ.. ಕೇಸ್ ಹಿಂಪಡೆದ ಯುವತಿ!

ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಹುಡುಗಿ ಮೊನಾಲಿಸಾ ರಾತ್ರೋ ರಾತ್ರಿ ವೈರಲ್ ಆಗಿದ್ದಳು. ಆಕೆಯ ಕಣ್ಣುಗಳನ್ನು ನೋಡಿ ಇಡೀ ದೇಶವೇ ಮರುಳಾಗಿತ್ತು. ಎಲ್ಲರ ಬಾಯಲ್ಲೂ ಮೊನಾಲಿಸಾ ಗುಣಗಾನವೇ ಕೇಳಿಸುತ್ತಿತ್ತು. ವೈರಲ್ ಆಗುತ್ತಿದ್ದಂತೆ ಮೊನಾಲಿಸಾಗೆ ಸಿನಿಮಾದಲ್ಲಿ ನಟಿಸುವುದಕ್ಕೆ ಆಫರ್ ಕೂಡ ಸಿಕ್ಕಿತ್ತು. ಆದರೆ, ಇತ್ತೀಚೆಗೆ ಈಕೆ ನಟಿಸುತ್ತಿರುವ ಸಿನಿಮಾದ ನಿರ್ದೇಶಕನನ್ನು ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಅರೆಸ್ಟ್ ಮಾಡಲಾಗಿತ್ತು. ಈ ಸುದ್ದಿ ಕೂಡ ದೊಡ್ಡ ಮಟ್ಟಕ್ಕೆ ಸುದ್ದು ಮಾಡಿತ್ತು.

ಮಹಾಕುಂಭದ ಹುಡುಗಿ ಮೊನಾಲಿಸಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನಿರ್ದೇಶಕ ಸನೋಜ್ ಮಿಶ್ರಾ ಸಿನಿಮಾ ಆಫರ್ ಕೊಟ್ಟಿದ್ದರು. ಅಷ್ಟೇ ಅಲ್ಲದೆ ಮೊನಾಲಿಸಾಗೆ ಸಿನಿಮಾದಲ್ಲಿ ನಟಿಸುವುದಕ್ಕೆ ತರಬೇತಿಯನ್ನು ನೀಡುತ್ತಿದ್ದರು. ಇದೇ ಕೆಲವು ದಿನಗಳ ಹಿಂದಷ್ಟೇ ಮೊನಾಲಿಸಾ ನಿರ್ದೇಶಕನ ಮೇಲೆ ಮತ್ತೊಬ್ಬ ಯುವತಿ ಅತ್ಯಾಚಾರದ ಪ್ರಕರಣವನ್ನು ದಾಖಲಿಸಿದ್ದರು. ಈ ಸಂಬಂಧ ನಿರ್ದೇಶಕ ಸನೋಜ್ ಮಿಶ್ರಾರನ್ನು ಬಂಧಿಸಲಾಗಿತ್ತು.

After Mahakumbh girl Monalisa Bhonsle break down in tears woman withdraws case against Sanoj Mishra

ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ದಾಖಲಿಸಿದ ದೂರನ್ನು ಅದೇ ಹುಡುಗಿ ಹಿಂಪಡೆದಿದ್ದಾಳೆ. ಹಾಗೇ ನಿರ್ಮಾಪಕ ವಾಸಿಮ್ ರಿಜ್ವಿ ಸೇರಿದಂತೆ ನಾಲ್ಕು ಮಂದಿಯಿಂದಲೇ ದೂರನ್ನು ದಾಖಲಿಸಿದ್ದಾಗಿ ಹೇಳಿಕೊಂಡಿದ್ದಾಳೆ. ಮೊನಾಲಿಸಾ ನಿರ್ದೇಶಕನ ಮೇಲೆ ದಾಖಲಾಗಿದ್ದ ಅತ್ಯಾಚಾರ ಪ್ರಕರಣಕ್ಕೀಗ ಬಿಗ್‌ ಟ್ಟಿಸ್ಟ್ ಸಿಕ್ಕಿದೆ. ಈ ಸಂಬಂಧ ನಿರ್ದೇಶಕನ ಇನ್‌ಸ್ಟಾಗ್ರಾಂ ಖಾತೆಯಲ್ಲೇ ದೂರು ದಾಖಲಿಸಿದ ಹುಡುಗಿ ಸ್ಪಷ್ಟತೆ ಪಡೆದಿದ್ದಾರೆ.

ವೈರಲ್ ಹುಡುಗಿ ಮೊನಾಲಿಸಾ ಫೇಮಸ್ ಆಗುತ್ತಿದ್ದಂತೆ ನಿರ್ದೇಶಕ ಸನೋಜ್ ಮಿಶ್ರಾ ಸಿನಿಮಾ ಆಫರ್ ಕೊಟ್ಟಿದ್ದರು. ಮೊನಾಲಿಸಾ ಕುಟುಂಬದವರನ್ನು ಒಪ್ಪಿಸಿ ಸಿನಿಮಾಗೆ ಅವಕಾಶ ನೀಡಿದ್ದರು. ಈ ಸಿನಿಮಾದಿಂದ ಮೊನಾಲಿಸಾ ಬದುಕು ಬದಲಾಗುವುದರಲ್ಲಿ ಇತ್ತು. ಇನ್ನು ಸ್ವತ: ಸನೋಜ್ ಮಿಶ್ರಾ ಅವರೇ ಮೊನಾಲಿಸಾಗೆ ನಟನಾ ತರಬೇತಿಯನ್ನು ನೀಡುತ್ತಿದ್ದರು. ಇನ್ನೇನು ಸಿನಿಮಾ ಟೇಕಾಫ್ ಆಗಬೇಕು ಎನ್ನುವ ಸಮಯದಲ್ಲಿಯೇ ಮೊನಾಲಿಸಾ ನಿರ್ದೇಶಕನ ಯುವತಿಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದರು. ಸನೋಜ್ ಮಿಶ್ರಾರನ್ನು ಪೊಲೀಸರು ಬಂಧಿಸುತ್ತಿದ್ದಂತೆ ಮೊನಾಲಿಸಾ ಗಳಗಳನೆ ಅತ್ತಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.

ನಿರ್ದೇಶಕ ಸನೋಜ್ ಮಿಶ್ರಾ ಬಂಧನ ಆಗುತ್ತಿದ್ದಂತೆ ಮೊನಾಲಿಸಾ ತಮ್ಮ ಮನೆಗೆ ನಿರಾಸೆಯಿಂದ ಹಿಂತಿರುಗಿದ್ದರು. ತನ್ನ ಊರಿಗೆ ಮರಳುತ್ತಿದ್ದಂತೆ ಭಾವುಕರಾಗಿ ಕಣ್ಣೀರು ಹಾಕಿದ್ದರು. ಈ ವೇಳೆ ಅವರ ಕುಟುಂಬ ಮೊನಾಲಿಸಾರನ್ನು ಸಂತೈಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ನೋಡಿ ಮೊನಾಲಿಸಾ ಗ್ರೇಟ್ ಎಸ್ಕೇಪ್ ಆಗಿದ್ದರು ಎಂದು ಹೇಳಿದ್ದರು.

ಅಷ್ಟಕ್ಕೂ ಇಷ್ಟೆಲ್ಲ ನಡೆಯುವುದಕ್ಕೆ ಪರೋಕ್ಷವಾಗಿ ಕಾರಣ ಮೊನಾಲಿಸಾ. ಮಹಾಕುಂಭ ಮೇಳದಲ್ಲಿ ಮೊನಾಲಿಸಾ ವೈರಲ್ ಆಗುತ್ತಿದ್ದಂತೆ ನಿರ್ದೇಶಕ ಸನೋಜ್ ಮಿಶ್ರಾ ಈಕೆಯ ಕಡೆ ವಾಲಿದ್ದರು. ಅಲ್ಲಿವರೆಗೂ ದೂರು ಕೊಟ್ಟ ಯುವತಿ ಸನೋಜ್ ಮಿಶ್ರಾ ಜೊತೆ 'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್' ಸಿನಿಮಾಗಾಗಿ ಕೆಲಸ ಮಾಡುತ್ತಿದ್ದರು. ಆ ಸಿನಿಮಾ ಮುಗಿಯುತ್ತಿದ್ದಂತೆ ಸನೋಜ್ ಮಿಶ್ರಾ ಮತ್ತೊಂದು ಸಿನಿಮಾಗೆ ಮೊನಾಲಿಸಾ ಹಿಂದೆ ಬಿದ್ದಿದ್ದರು. ಆಗ ಕೆಲವರು ತನಗೆ ಪ್ರಚೋದನೆ ನೀಡಿದ್ದರು ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

"ದಿ ಡೈರಿ ಆಫ್ ವೆಸ್ಟ್‌ ಬೆಂಗಾಲ್ ಸಿನಿಮಾದಲ್ಲಿ ನಿರ್ದೇಶಕ ಸನೋಜ್ ಮಿಶ್ರಾ ಜೊತೆ ಕೆಲಸ ಮಾಡುತ್ತಿದ್ದೆ. ಸಿನಿಮಾ ಶೂಟ್ ಆದ ಬಳಿಕ ಜನರು ನನಗೆ ಪ್ರಚೋದನೆ ನೀಡಿದ್ದರು. ಅದೇ ಸಮಯದಲ್ಲಿ ಮೊನಾಲಿಸಾ ಜೊತೆ ಸನೋಜ್ ಮಿಶ್ರ ಕಾಣಿಸಿಕೊಂಡು ವೈರಲ್ ಆಗಿದ್ದರು. ಆ ವೇಳೆ ಜನರು ನನಗೆ ಕೆಲವು ನಕಲಿ ಫೋಟೊಗಳನ್ನು ಕಳುಹಿಸಿಕೊಟ್ಟಿದ್ದರು. ಕೆಲವು ಸನ್ನಿವೇಶಗಳನ್ನು ಹುಟ್ಟಾಕಿ ಮಾನಸಿಕವಾಗಿ ಹಿಂಸೆ ನೀಡುವುದಕ್ಕೆ ಶುರು ಮಾಡಿದ್ದರು. ಅದೇ ಕೋಪದಲ್ಲಿ ನಾನು ಸನೋಜ್ ಮಿಶ್ರಾ ಅವರ ವಿರುದ್ಧ ದೂರನ್ನು ದಾಖಲಿಸಿದ್ದೆ. ಆ ಬಳಿಕ ನನಗೆ ಸತ್ಯ ಗೊತ್ತಾಯ್ತು. ಆ ಕೂಡಲೇ ನಾನು ಕೋರ್ಟ್‌ಗೆ ಹೋಗಿ ಕೇಸ್ ಹಿಂಪಡೆಯುವಂತೆ ಅಫಿಡವಿಟ್ ಅನ್ನು ಸಲ್ಲಿಸಿದ್ದಾರೆ. ಈ ವೇಳೆ ಕೆಲವರು ನನಗೆ ನೀನು ಜೈಲ್‌ಗೆ ಹೋಗುತ್ತೀಯ ಎಂದು ಹೆದರಿಸಿದ್ದರು." ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

More from Filmibeat

English summary
After Mahakumbh girl Monalisa Bhonsle break down in tears woman withdraws case against Sanoj Mishra;
Read more about: monalisa case
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X