ಮದುವೆ ಮುಗಿಯುತ್ತಿದ್ದಂತೆ ರಶ್ಮಿಕಾ ಜೊತೆ ಮನಾಲಿಯಲ್ಲಿ ಪ್ರತ್ಯಕ್ಷನಾದ ರಣ್‌ಬೀರ್

ಬಾಲಿವುಡ್‌ ಸೆಲೆಬ್ರೆಟಿಗಳು ಅದೇನು ಮದುವೆ ಆಗುತ್ತಾರೋ ಗೊತ್ತಿಲ್ಲ. ವಿವಾಹ ಮುಗಿಯುತ್ತಿದ್ದಂತೆ ಸೀದಾ ಶೂಟಿಂಗ್‌ ಸೆಟ್ಟಲ್ಲಿ ಪ್ರತ್ಯಕ್ಷ ಆಗಿಬಿಡುತ್ತಾರೆ. ಕತ್ರಿನಾ ಕೈಫ್‌- ವಿಕ್ಕಿ ಕೌಶಲ್, ರಣ್‌ಬೀರ್ ಆಲಿಯಾ ಭಟ್ ಜೋಡಿ ಹಸೆಮಣೆ ಏರಿದ ಕೆಲವು ದಿನಗಳಲ್ಲಿಯೇ ಶೂಟಿಂಗ್ ಸ್ಪಾಟ್‌ನಲ್ಲಿ ಪ್ರತ್ಯಕ್ಷ ಆಗಿದ್ದಾರೆ.

ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಮದುವೆಯಾಗಿ ಇನ್ನೂ 15 ದಿನಾನೂ ಆಗಿಲ್ಲ. ಅಷ್ಟರಲ್ಲೇ ಶೂಟಿಂಗ್ ಸ್ಪಾಟ್‌ನಲ್ಲಿ ರಣ್‌ಬೀರ್ ಕಪೂರ್ ಪ್ರತ್ಯಕ್ಷ ಆಗಿದ್ದಾರೆ. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ರಣ್‌ಬೀರ್ ಕಪೂರ್ ಇಬ್ಬರನ್ನೂ ಒಟ್ಟಿಗೆ ನೋಡಿ ಅಲ್ಲಿನ ಜನರು ಕೂಡ ಕಂಗಾಲಾಗಿದ್ದಾರೆ.

ಮದುವೆ ಬಳಿಕ ನವ ದಂಪತಿಗಳು ಮನಾಲಿಗೆ ಹನಿಮೂನ್‌ಗೆ ಅಂತ ಬರುತ್ತಾರೆ. ವಿವಾಹದ ಬಳಿಕ ರಣ್‌ಬೀರ್ ಕಪೂರ್ ಕೂಡ ಇದೇ ಮನಾಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಂತ ರಣ್‌ಬೀರ್ ಹನಿಮೂನ್‌ಗೆ ಬಂದಿಲ್ಲ. ಹೊಸ ಸಿನಿಮಾದ ಶೂಟಿಂಗ್‌ಗೆ ಬಂದಿದ್ದಾರೆ. ಇವ್ರೊಂದಿಗೆ ರಶ್ಮಿಕಾ ಮಂದಣ್ಣ ಕೂಡ ಆಗಮಿಸಿದ್ದು ವಿಶೇಷ.

ರಣ್‌ಬೀರ್ 'ಎನಿಮಲ್' ಶೂಟಿಂಗ್ ಆರಂಭ

ರಣ್‌ಬೀರ್ 'ಎನಿಮಲ್' ಶೂಟಿಂಗ್ ಆರಂಭ

ಬಾಲಿವುಡ್‌ನಲ್ಲಿ ಕುತೂಹಲ ಕೆರಳಿಸಿರುವ ಸಿನಿಮಾ 'ಎನಿಮಲ್'. ಇಷ್ಟೊಂದು ಕುತೂಹಲ ಕೆರಳಿಸುವುದಕ್ಕೆ ಕಾರಣ ಎರಡು. ಒಂದು ಅರ್ಜುನ್ ರೆಡ್ಡಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ. ಇಬ್ಬರು ಸೌತ್ ಸೆಲೆಬ್ರೆಟಿಗಳು ಬಾಲಿವುಡ್‌ ನಟ ರಣ್‌ಬೀರ್ ಕಪೂರ್ ಜೊತೆ ಕೆಲಸ ಮಾಡುತ್ತಿದ್ದಾರೆ. ಅದುವೇ 'ಎನಿಮಲ್'. ಇದೇ ಸಿನಿಮಾದ ಶೂಟಿಂಗ್ ಇಂದು (ಏಪ್ರಿಲ್ 22) ಮನಾಲಿಯಲ್ಲಿ ಶುರುವಾಗಿದೆ. ಈ ಕಾರಣಕ್ಕೆ ರಣ್‌ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಮನಾಲಿಯಲ್ಲಿ ಬೀಡುಬಿಟ್ಟಿದ್ದಾರೆ.

ರಶ್ಮಿಕಾ - ರಣ್‌ಬೀರ್ ಜುಗಲ್‌ಬಂಧಿ

ರಶ್ಮಿಕಾ ಮಂದಣ್ಣ ಹಾಗೂ ರಣ್‌ಬೀರ್ ಕಪೂರ್ ಜೋಡಿಯಾಗಿ ನಟಿಸುತ್ತಿರುವ ಮೊದಲ ಸಿನಿಮಾವಿದು. ಈಗಾಗಲೇ ರಶ್ಮಿಕಾ ಮಂದಣ್ಣ ಎರಡು ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದು, 'ಎನಿಮಲ್' ಇವರಿಗೆ ಮೂರನೇ ಸಿನಿಮಾ. ಆದರೆ ಬಾಲಿವುಡ್ ನಟ ರಣ್‌ಬೀರ್ ಕಪೂರ್ ಜೊತೆ ನಟಿಸುತ್ತಿರುವ ಮೊದಲ ಸಿನಿಮಾವಿದು. ಹೀಗಾಗಿ ಇವರಿಬ್ಬರ ಜೋಡಿಯನ್ನು ತೆರೆಮೇಲೆ ನೋಡುವುದಕ್ಕೆ ಇಡೀ ಭಾರತೀಯ ಚಿತ್ರರಂಗವೇ ಕಾದು ಕೂತಿದೆ.

ಅರ್ಜುನ್ ರೆಡ್ಡಿ ಪಾತ್ರಕ್ಕೂ ಎನಿಮಲ್‌ಗೂ ಸಂಬಂಧವಿಲ್ಲ

ಅರ್ಜುನ್ ರೆಡ್ಡಿ ಪಾತ್ರಕ್ಕೂ ಎನಿಮಲ್‌ಗೂ ಸಂಬಂಧವಿಲ್ಲ

ಅರ್ಜುನ್ ರೆಡ್ಡಿಯಂತಹ ರಗಡ್ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಸಂದೀಪ್ ರೆಡ್ಡಿ ವಂಗಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಕಾರಣಕ್ಕೆ ರಾಜಮೌಳಿ ಇತ್ತೀಚೆಗೆ ನಿರ್ದೇಶಕರಿಗೆ ಅರ್ಜುನ್ ರೆಡ್ಡಿ ಹಾಗೂ ರಣ್‌ಬೀರ್ ಪಾತ್ರಕ್ಕೂ ಸಾಮ್ಯತೆ ಇದೆಯಾ? ಎಂದು ಕೇಳಿದ್ದರು. ಆ ವೇಳೆ " ಸಿನಿಮಾದಲ್ಲಿ ವಯಲೆನ್ಸ್ ಇದೆ. ಆದರೆ, ಕ್ಯಾರೆಕ್ಟರ್ ಒಂದೇ ಅಲ್ಲ. ನನ್ನ ಸಹಾಯಕ ನಿರ್ದೇಶಕರಿಗೆ ಕಬೀರ್ ಸಿಂಗ್ ಅಥವಾ ಅರ್ಜುನ್ ರೆಡ್ಡಿ ನೆರಳು ಇದೆಯಾ ಅಂತ ಕೇಳುತ್ತಲೇ ಇದ್ದೆ. ಈ ಸಿನಿಮಾದ ಕಥೆ ಹಾಗೂ ಪಾತ್ರ ಎರಡೂ ಬೇರೆ ಬೇರೆ." ಎಂದಿದ್ದರು ಸಂದೀಪ್ ರೆಡ್ಡಿ ವಂಗಾ.

ಪರಿಣಿತಿ ಜಾಗದಲ್ಲಿ ರಶ್ಮಿಕಾ

ಪರಿಣಿತಿ ಜಾಗದಲ್ಲಿ ರಶ್ಮಿಕಾ

ಈ ಸಿನಿಮಾದ ನಾಯಕಿ ಪಾತ್ರದಲ್ಲಿ ಮೊದಲು ಪರಿಣಿತಿ ಚೋಪ್ರಾ ಆಯ್ಕೆ ಆಗಿದ್ದರು. ಆದರೆ, ಡೇಟ್ ಸಮಸ್ಯೆಯಿಂದ ಪರಿಣಿತಿ ಚೋಪ್ರಾ ಈ ಸಿನಿಮಾದಿಂದ ಹೊರ ನಡೆದಿದ್ದರು. ಇವರ ಜಾಗಕ್ಕೀಗ ರಶ್ಮಿಕಾ ಮಂದಣ್ಣರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಟಿ ಸಿರೀಸ್ ಸಂಸ್ಥೆ ಈ 'ಎನಿಮಲ್' ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ರಣ್‌ಬೀರ್, ರಶ್ಮಿಕಾ ಮಂದಣ್ಣ ಜೊತೆಗೆ ಅನಿಲ್ ಕಪೂರ್ ಹಾಗೂ ಬಾಬಿ ಡಿಯೋಲ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Ranbir And Rashmika Mandanna Start Shooting For Animal in Manali. After Marriage Ranbir Kapoor and Alia Bhatt both started shooting for their respective films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X