'ಧುರಂಧರ್' ಸಿನಿಮಾಗೆ ರಾಹುಲ್ ಗಾಂಧಿ ಕಾರ್ಯಕಾರಿ ನಿರ್ಮಾಪಕರೇ? ಓಟಿಟಿಗೆ ಬಂದ್ಮೇಲೆ ಯಾಕೀ ಚರ್ಚೆ?

ಸತತ ಸೋಲುಗಳಿಂದ ಕಂಗೆಟ್ಟು ಹೋಗಿದ್ದ ಬಾಲಿವುಡ್‌ ನಟ ರಣ್‌ವೀರ್ ಸಿಂಗ್‌ಗೆ ಮೆಗಾ ಸಕ್ಸಸ್ ಕೊಟ್ಟ ಸಿನಿಮಾ 'ಧುರಂಧರ್'. ಆರಂಭದಲ್ಲಿ ಈ ಸಿನಿಮಾ ಇನ್ನೂರು-ಮೂರು ಕೋಟಿ ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿತ್ತು. ಆದರೆ, ಈ ಎಲ್ಲಾ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿ ಬಾಕ್ಸಾಫೀಸ್ ಅನ್ನೇ ಧೂಳೀಪಟ ಮಾಡಿತ್ತು. 2025ರ ಕೊನೆಯಲ್ಲಿ ಮತ್ತೊಂದು ಮೆಗಾ ಸಕ್ಸಸ್ ಕೊಟ್ಟು ಬಾಲಿವುಡ್‌ ಮಂದಿ ನಿಟ್ಟುಸಿರು ಬಿಡುವಂತೆ ಮಾಡಿತ್ತು.

ಇಂದು (ಫೆಬ್ರವರಿ 3) 'ಧುರಂಧರ್ 2' ಸಿನಿಮಾದ ಟೀಸರ್ ಲಾಂಚ್ ಆಗಲಿದೆ. ಫಸ್ಟ್ ಪಾರ್ಟ್‌ಗೆ ಸಿಕ್ಕಿರೋ ಯಶಸ್ಸಿನ ಹುಮ್ಮಸ್ಸಿನಲ್ಲಿ 'ಟಾಕ್ಸಿಕ್' ಎದುರು ರಿಲೀಸ್ ಮಾಡುವುದಕ್ಕೆ ಸಜ್ಜಾಗಿದ್ದಾರೆ. 'ಟಾಕ್ಸಿಕ್' ಹಾಗೂ 'ಧುರಂಧರ್ 2' ಹೀಗಾಗಿ ಎರಡು ಸಿನಿಮಾಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಗೆಲ್ಲೋದು ಯಾರು? ಅನ್ನೋ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ.

After Ott release Dhurandhar is trending because Rahul Gandhi is Dhurandhar Executive Producer here is truth

'ಧುರಂಧರ್ 2' ರಿಲೀಸ್ ಒಂದು ಕಡೆಯಾದರೆ, ಇದ್ದಕ್ಕಿಂತ 'ಧುರಂಧರ್' ಟ್ರೆಂಡ್ ಆಗುವುದಕ್ಕೆ ಶುರುವಾಗಿದೆ. ಅದರಲ್ಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರು ಈ ಸಿನಿಮಾದೊಂದಿಗೆ ತಳುಕು ಹಾಕಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ. ಅಷ್ಟಕ್ಕೂ 'ಧುರಂಧರ್' ಸಿನಿಮಾಗೆ ರಾಹುಲ್ ಗಾಂಧಿ ಕಾರ್ಯಕಾರಿ ನಿರ್ಮಾಪಕರೇ? ಸಿನಿಮಾ ತಪ್ಪಾಗಿ ಹೆಸರು ಬಂದಿಬಿಟ್ಟಿತೇ? ಏನಿದು ಅಸಲಿ ಕಥೆ? ತಿಳಿಯುವುದಕ್ಕೆ ಮುಂದೆ ಓದಿ.

'ಧುರಂಧರ್' ರಾಹುಲ್ ಗಾಂಧಿ ಸಿನಿಮಾವೇ?

ರಣ್‌ವೀರ್ ಸಿಂಗ್ 'ಧುರಂಧರ್' ಸಿನಿಮಾ ಓಟಿಟಿಗೆ ಲಗ್ಗೆ ಇಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸ್ಕ್ರೀನ್‌ ಶಾಟ್‌ಗಳು ಹರಿದಾಡುವುದಕ್ಕೆ ಶುರುವಾಗಿವೆ. ಯಾಕಂದ್ರೆ, ನೆಟ್ಟಿಗರು ಶೇರ್ ಮಾಡುತ್ತಿರುವ 'ಧುರಂಧರ್' ಸ್ಕ್ರೀನ್‌ ಶಾಟ್‌ನಲ್ಲಿ ರಾಹುಲ್ ಗಾಂಧಿ ಹೆಸರಿದೆ. ಸಿನಿಮಾ ಕ್ರೆಡಿಟ್‌ ಲಿಸ್ಟ್‌ನಲ್ಲಿ ಕಾರ್ಯಕಾರಿ ನಿರ್ಮಾಪಕ ರಾಹುಲ್ ಗಾಂಧಿ ಅಂತ ಹಾಕಿದ್ದಾರೆ. ಇದು ಓಟಿಟಿ ವೀಕ್ಷಕರ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

ರಾಹುಲ್ ಗಾಂಧಿ ಹೆಸರು ಏಕೆ?

'ಧುರಂಧರ್' ಕ್ರೆಡಿಟ್‌ ಲಿಸ್ಟ್‌ನಲ್ಲಿ ರಾಹುಲ್ ಗಾಂಧಿ ಹೆಸರು ಬರುತ್ತಿದ್ದಂತೆ ಜನರು ಗೊಂದಲಕ್ಕೆ ಬಿದ್ದಿದ್ದರು. ಆದರೆ, ಇದು ಕಾಂಗ್ರೆಸ್ ಮುಖಂಡ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಲ್ಲ. ಬಾಲಿವುಡ್‌ನಲ್ಲಿ ಈಗಾಗಲೇ ಹಲವು ಸಿನಿಮಾಗಳಿಗೆ ಕಾರ್ಯಾಕಾರಿ ನಿರ್ಮಾಪಕರಾಗಿ ಕೆಲಸ ಮಾಡಿರುವ ವ್ಯಕ್ತಿಯ ಹೆಸರು ಕೂಡ ರಾಹುಲ್ ಗಾಂಧಿ. ಹೀಗಾಗಿ ಈ ಗೊಂದಲ ಆಗಿದೆ ಎಂದು ವರದಿಗಳಾಗಿವೆ.

ಯಾವ್ಯಾವ ಸಿನಿಮಾದಲ್ಲಿ ಕೆಲಸ?

'ಧರುಂಧರ್' ಸಿನಿಮಾ ಥಿಯೇಟರ್‌ನಲ್ಲಿ ಹೆಚ್ಚು ಕಡಿಮೆ 2 ತಿಂಗಳು ಪ್ರದರ್ಶನ ಕಂಡಿತ್ತು. ಆಗ ಕಾಣದ ಹೆಸರು ಓಟಿಟಿಗೆ ಎಂಟ್ರಿ ಕೊಟ್ಟಾಗ ಕಾಣಿಸಿರೋದು ವಿಶೇಷ. ಅಸಲಿಗೆ ಬಾಲಿವುಡ್‌ನ ಈ ರಾಹುಲ್ ಗಾಂಧಿಗೆ 'ಧುರಂಧರ್' ಮೊದಲ ಸಿನಿಮಾವೇನಲ್ಲ. ಈ ಹಿಂದೆ 'ರುಸ್ತುಂ', 'ದಿ ಫ್ಯಾಮಿಲಿ ಮ್ಯಾನ್' 'ರಾಕೆಟ್ ಬಾಯ್ಸ್' ಇತ್ತೀಚೆಗೆ ತೆರೆಕಂಡಿದ್ದ 'ಲಕ್ಕಿ ಭಾಸ್ಕರ್ ಅಂತ ಸಿನಿಮಾಗಳಿಗೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.

ನೆಟ್ಟಿಗರ ಕಾಮೆಂಟ್‌ಗಳೇನು?

'ಧುರಂಧರ್' ಸಿನಿಮಾದ ಕಾರ್ಯಕಾರಿ ನಿರ್ಮಾಪಕ ರಾಹುಲ್ ಗಾಂಧಿ ಅಂತ ಹೆಸರು ಕಣ್ಣಿಗೆ ಬಿದ್ದಾಗ ಕಾಮೆಂಟ್‌ಗಳು ಅಷ್ಟೇ ಇಂಟ್ರೆಸ್ಟಿಂಗ್ ಆಗಿವೆ. " ಮತ್ತೊಮ್ಮೆ ನೆಟ್‌ಫ್ಲಿಕ್ಸ್‌ನಲ್ಲಿ ಧುರಂಧರ್ ಸಿನಿಮಾ ನೋಡಿ. ಅದರಲ್ಲಿ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ರಾಹುಲ್ ಗಾಂಧಿ ಅಂತಿದೆ. ರಾಹುಲ್ ಗಾಂಧಿ ಒಬ್ಬ ಅದ್ಭುತ ರಾಷ್ಟ್ರೀಯವಾದಿ ಅನ್ನೋದು ಗೊತ್ತಿದೆ. ಯಾವಾಗಲೂ ಸೈಲೆಂಟ್ ಆಗಿದ್ದು, ಕೆಲಸ ಮಾತಾಡಬೇಕು ಅನ್ನೋ ವ್ಯಕ್ತಿತ್ವ ಅವರದ್ದು" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು " ರಾಹುಲ್ ಗಾಂಧಿ ಧುರಂಧರ್ ಸಿನಿಮಾ ಕಾರ್ಯಕಾರಿ ನಿರ್ಮಾಪಕ ಅನ್ನೋದನ್ನು ಝೂಮ್ ಮಾಡಿ ನೋಡಿ" ಎಂದು ಕಾಮೆಂಟ್ ಮಾಡಿದ್ದಾರೆ.

More from Filmibeat

English summary
After Ott release Dhurandhar is trending because Rahul Gandhi is Dhurandhar Executive Producer. Here is truth;
Read more about: ranveer singh movie rahul gandhi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X