'ಪ್ರೇಮಲೋಕ'ದ ಸುಂದರಿ ಮೋಹದ ಬಲೆ ಬಿದ್ದಿದ್ದ ಮಾಧವನ್: 35 ವರ್ಷಗಳ ಬಳಿಕ ವಿಷಯ ಬಿಚ್ಚಿಟ್ಟ ನಟ!

ಮ್ಯಾಡಿ ಉರ್ಫ್ ಮಾಧವನ್ ಒಂದು ಕಾಲದಲ್ಲಿ ಬಹುಬೇಡಿಕೆ ನಟ. ತಮಿಳು, ಕನ್ನಡ, ಹಿಂದಿ ಸಿನಿಮಾಗಳಲ್ಲಿ ಮಾಧವನ್ ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಿದ್ದರು. ಸಿನಿಮಾ ಒಂದು ಕಡೆಯಾದರೆ, ಇನ್ನೊಂದು ಕಡೆ ಅದೆಷ್ಟು ಹುಡುಗಿಯರ ಕನಸಿನ ಹುಡುಗನಾಗಿದ್ದರು.

ನಾವು ಮದುವೆ ಆಗೋ ಹುಡುಗ ಮಾಧವನ್‌ನಂತೆಯೇ ಇರಬೇಕು ಎಂಬುದು ಅದೆಷ್ಟು ಹುಡುಗಿಯರು ಬಯಸಿದ್ದೂ ಇದೆ. ಆದರೆ, ಮಾಧವನ್ ಕನಸಿನ ಹುಡುಗಿ ಮಾತ್ರ ಒಬ್ಬ ಬಾಲಿವುಡ್ ನಟಿಯಾಗಿದ್ದರು. ಅವರೇ ಕನ್ನಡಕ್ಕೆ ಬಂದು 'ಪ್ರೇಮಲೋಕ' ಸೃಷ್ಟಿಸಿದ್ದ ಬಾಲಿವುಡ್ ನಟಿ ಜೂಹಿ ಚಾವ್ಲಾ.

After watching Qayamat Se Qayamat Tak R. Madhavan wanted marry Juhi Chawla

ಬಾಲಿವುಡ್ ನಟಿ ಜೂಹಿ ಚಾವ್ಲಾ ಜೊತೆ ಮದುವೆ ಆಗಬೇಕು ಅಂತ ಮಾಧವನ್ ಮೊದಲ ಬಾರಿಗೆ ಬಯಸಿದ್ದರು. ಆಗಿನ್ನೂ ಮಾಧವನ್ ಸಿನಿಮಾರಂಗಕ್ಕೆ ಕಾಲಿಟ್ಟಿರಲಿಲ್ಲ. ಜೂಹಿ ಚಾವ್ಲಾ ನಟಿಸಿದ ಒಂದು ಸಿನಿಮಾ ಫಿದಾ ಆಗಿದ್ದರು. ಅಂದೇ ಅವರ ತಾಯಿಗೆ ಜೂಹಿಯನ್ನೇ ಮದುವೆ ಆಗುತ್ತೇನೆ ಎಂದಿದ್ದರು. ಈ ವಿಷಯವನ್ನು ಇತ್ತೀಚೆಗೆ ಮಾಧ್ಯಮಗಳ ಮುಂದೆ ಬಹಿರಂಗ ಪಡಿಸಿದ್ದರು.

ಆರ್ ಮಾಧವನ್ ಹಾಗೂ ಜೂಹಿ ಚಾವ್ಲಾ ಇಬ್ಬರೂ ನಟಿಯರು ತಮ್ಮದೇ ಆದ ಜನಪ್ರಿಯತೆ ಇದೆ. ತಮಿಳು, ಹಿಂದಿ ಭಾಷೆಯಲ್ಲಿ ಮಾಧವನ್ ಜನಪ್ರಿಯತೆಯನ್ನು ಗಳಿಸಿದ್ದರೆ, ಇತ್ತ ಜೂಹಿ ಚಾವ್ಲಾ ಬಾಲಿವುಡ್‌ನಲ್ಲಿ ಫೇಮಸ್ ಆಗಿದ್ದರು. 1988ರಲ್ಲಿ ತೆರೆಕಂಡಿದ್ದ 'ಖಯಾಮತ್ ಸೆ ಖಯಾಮತ್ ತಕ್' ಸಿನಿಮಾ ರಿಲೀಸ್ ಆಗಿತ್ತು. ಇದು ಆಮಿರ್ ಖಾನ್ ನಾಯಕನಾಗಿ ನಟಿಸಿದ್ದ ಮೊದಲ ಸಿನಿಮಾ. ಇದರಲ್ಲಿ ಜೂಹಿ ಚಾವ್ಲಾ ನಾಯಕಿಯಾಗಿ ನಟಿಸಿದ್ದರು.

'ಖಯಾಮತ್ ಸೆ ಖಯಾಮತ್ ತಕ್' ಬಾಲಿವುಡ್‌ನ ಎವರ್‌ಗ್ರೀನ್ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ ನೋಡಿದ ಮೇಲೆ ಜೂಹಿಯನ್ನೇ ಮದುವೆ ಆಗಬೇಕು ಎಂದು ಆರ್ ಮಾಧವನ್ ನಿರ್ಧರಿಸಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. " ನಾನು ನಿಮ್ಮೆಲ್ಲರ ಮುಂದೆ ತಪ್ಪೊಪ್ಪಿಗೆ ಮಾಡಿಕೊಳ್ಳುವುದಿದೆ. ನಾನು 'ಖಯಾಮತ್ ಸೆ ಖಯಾಮತ್ ತಕ್' ಸಿನಿಮಾ ನೋಡಿದ ಬಳಿಕ, ನನ್ನ ತಾಯಿಗೆ ಜೂಹಿ ಚಾವ್ಲಾರನ್ನು ಮದುವೆ ಆಗಬೇಕೆಂದಿದ್ದೇನೆ ಎಂದು ಹೇಳಿದ್ದೆ. ಜೂಹಿ ಚಾವ್ಲಾರನ್ನು ಮದುವೆ ಆಗುವುದೇ ನನ್ನ ಗುರಿಯಾಗಿತ್ತು." ಎಂದು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

After watching Qayamat Se Qayamat Tak R. Madhavan wanted marry Juhi Chawla

ಮಾಧವನ್ ಗುರಿ ಈಡೇರಲಿಲ್ಲ. ಆದ್ಯಾಕೆ ತಮ್ಮ ಗುರಿಯನ್ನು ತಲುಪಲಿಲ್ಲ ಅನ್ನೋದನ್ನು ಮಾಧವನ್ ಬಹಿರಂಗ ಪಡಿಸಿಲ್ಲ. ಆದರೆ, ಇಷ್ಟು ದಿನಗಳಾದ್ಮೇಲೆ ತಾನು ಮೊದಲು ಮದುವೆ ಆಗಬೇಕು ಅಂತ ಬಯಸಿದ್ದ ನಟಿಯ ವೆಬ್ ಸೀರಿಸ್‌ನಲ್ಲಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಈ ಸೀರಿಸ್ ಸ್ಟ್ರೀಮಿಂಗ್ ಆಗುತ್ತಿದ್ದು, ವೀಕ್ಷಕರಿಗೆ ಮೆಚ್ಚುಗೆ ಪಡೆದಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ 'ದಿ ರೈಲ್ವೆ ಮೆನ್' ವೆನ್ ಸೀರಿಸ್‌ಗೆ ವೀಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಇದೇ ಸೀರಿಸ್‌ನಲ್ಲಿ ಆರ್. ಮಾಧವನ್ ಹಾಗೂ ಜೂಹಿ ಚಾವ್ಲಾ ಇಬ್ಬರೂ ನಟಿಸಿದ್ದಾರೆ. ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೇನೋ ಸರಿ, ಆದರೆ, ಒಟ್ಟಿಗೆ ನಟಿಸುವುದಕ್ಕೆ ಸಾಧ್ಯವಾಗಿಲ್ಲ. ಯಾಕಂದ್ರೆ, ಈ ಸೀರಿಸ್‌ಗಾಗಿ ಆರ್. ಮಾಧವನ್ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿದ್ದರು. ಆ ಬಳಿಕ ಜೂಹಿ ಚಾವ್ಲಾ 'ದಿ ರೈಲ್ವೆ ಮೆನ್' ವೆಬ್ ಸೀರಿಸ್‌ಗೆ ಜಾಯಿನ್ ಆಗಿದ್ದರು.

ಜೂಹಿ ಚಾವ್ಲಾರನ್ನು ಮದುವೆ ಆಗಬೇಕು ಅಂದು ಕೊಂಡಾಗ, ಮಾಧವನ್ ಇನ್ನೂ ಚಿತ್ರರಂಗಕ್ಕೆ ಕಾಲಿಟ್ಟಿರಲಿಲ್ಲ. 'ಖಯಾಮತ್ ಸೆ ಖಯಾಮತ್ ತಕ್' ಸಿನಿಮಾ 1988ರಲ್ಲಿ ತೆರೆಕಂಡಿದ್ದರೆ, ಆರ್. ಮಾಧವನ್ 1996ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

More from Filmibeat

English summary
R. Madhavan wanted marry Juhi Chawla. Let's find out what he said
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X