ಏರ್ ಇಂಡಿಯಾ ವಿಮಾನದ ದುರಂತದಲ್ಲಿ ಸಾವನ್ನಿದ ಪೈಲೆಟ್ ಈ ಬಾಲಿವುಡ್ ನಟ ಸಂಬಂಧಿ!

ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತ ವಿಶ್ವದ ಜನರನ್ನು ಬೆಚ್ಚಿಬೀಳಿಸಿದೆ. ಈ ದುರಂತದಲ್ಲಿ ಒಬ್ಬ ಪ್ರಯಾಣಿಗನನ್ನು ಹೊರತು ಪಡಿಸಿ, ಉಳಿದವರೆಲ್ಲರೂ ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಏರ್ ಇಂಡಿಯಾ ಎಐ 171 ವಿಮಾನದಲ್ಲಿ ಇಬ್ಬರು ಪೈಲೆಟ್, ಕ್ಯಾಬಿನ್ ಸಿಬ್ಬಂದಿ ಸೇರಿ 241 ಮಂದಿ ಮೃತಪಟ್ಟಿದ್ದಾರೆ. ಇದು ಇತ್ತೀಚೆಗೆ ಭಾರತದ ನಡೆದ ಅತೀ ದೊಡ್ಡ ವಿಮಾನ ದುರಂತ ಎನ್ನಲಾಗಿದೆ.

ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಪ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದಲೇ ಇಂತಹದ್ದೊಂದು ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ದುರಂತದಲ್ಲಿ ಸಾವನ್ನಪ್ಪಿರುವ ಇಬ್ಬರು ಪೈಲೆಟ್‌ಗಳು ಕೂಡ ಅನುಭವಿಗಳು ಎಂದು ಹೇಳಲಾಗಿದ್ದು, ಇವರಲ್ಲಿ ಇಬ್ಬರು ಕ್ಲೈವ್ ಕುಂದರ್ ಬಾಲಿವುಡ್‌ನ ನಟ ಸಂಬಂಧಿ.

Air India Flight AI171 co-pilot Clive Kunder is Bollywood actor Vikrant Massey s cousin

ಈ ವಿಷಯವನ್ನು ಕುದ್ದಾಗಿ ಬಾಲಿವುಡ್‌ನ ಜನಪ್ರಿಯ ನಟ ವಿಕ್ರಾಂತ್ ಮ್ಯಾಸಿ ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ತನ್ನ ಸಂಬಂಧಿ ಹಾಗೂ ಪ್ರಯಾಣಿಕರನ್ನು ಕಳೆದುಕೊಂಡಿದ್ದಕ್ಕೆ ವಿಕ್ರಾಂತ್ ಮ್ಯಾಸಿ ಕಂಬನಿ ಮಿಡಿದಿದ್ದಾರೆ. ಏರ್ ಇಂಡಿಯ ವಿಮಾನ ದುರಂತದ ಬಗ್ಗೆ ಭಾವನಾತ್ಮಕ ಇನ್‌ಸ್ಟಾಗ್ರಾಂ ಸ್ಟೋರಿಯನ್ನು ಹಂಚಿಕೊಂಡಿದ್ದು, ನಟನಿಗೆ ನೆಟ್ಟಿಗರು ಧೈರ್ಯ ಹೇಳುತ್ತಿದ್ದಾರೆ.

ಬಾಲಿವುಡ್ ನಟಿ ವಿಕ್ರಾಂತ್ ಮ್ಯಾಸಿ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದೆ. ವಿಕ್ರಾಂತ್ ಬಾಲಿವುಡ್‌ ಅದ್ಬುತ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡಿದ್ದ '12th ಪಾಸ್' ಸಿನಿಮಾದಲ್ಲಿ ಇವರ ನಟನೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಇದೇ ನಟನ ತನ್ನ ಏರ್ ಇಂಡಿಯಾ ವಿಮಾನ ದುರಂತದಲ್ಲಿ ತನ್ನ ಸಂಬಂಧಿಯನ್ನು ಕಳೆದುಕೊಂಡು ಭಾವುಕರಾಗಿದ್ದಾರೆ.

Air India Flight AI171 co-pilot Clive Kunder is Bollywood actor Vikrant Massey s cousin

ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ವಿಕ್ರಾಂತ್ ಸಂಬಂಧಿ ಕ್ಲೈವ್ ಕುಂದರ್ ಫಸ್ಟ್ ಆಫೀಸರ್ ಆಗಿದ್ದರು. " ಅಹಮದಾಬಾದ್‌ನಲ್ಲಿ ಇಂದು ನಡೆದ ವಿಮಾನ ದುರಂತದಲ್ಲಿ ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳು ಹಾಗೂ ಪ್ರೀತಿ ಪಾತ್ರರಾದವರಿಗೆ ನನ್ನ ಹೃದಯ ಮಿಡಿಯುತ್ತಿದೆ. ಅಂಕಲ್ ಕ್ಲಿಫರ್ಡ್‌ ಕುಂದರ್ ಅವರ ಪುತ್ರ ಕೂಡ ಈ ದುರಂತದಲ್ಲಿ ಜೀವ ಕಳೆದುಕೊಂಡಿರೋದು ಗೊತ್ತಾಗುತ್ತಿದ್ದಂತೆ ಮತ್ತಷ್ಟು ನೋವಾಗಿತ್ತು. ಇವರ ಪುತ್ರ ಕ್ಲೈವ್ ಕುಂದರ್ ಈ ದುರಂತ ವಿಮಾನದಲ್ಲಿ ಮೊದಲ ಆಫೀಸರ್ ಆಗಿದ್ದರು. ಈ ದು:ಖವನ್ನು ತಡೆದುಕೊಳ್ಳುವ ಶಕ್ತಿ ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಕೊಡಲಿ. ಹಾಗೇ ಈ ದುರಂತಕ್ಕೆ ಸಿಲುಕಿದವರಿಗೂ ದೇವರು ಶಕ್ತಿ ನೀಡಲಿ" ಎಂದಿದ್ದಾರೆ.

ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್‌ ಇಂಡಿಯಾದ ಎಐ171 ವಿಮಾದ ಫಸ್ಟ್ ಆಫೀಸರ್ ಆಗಿದ್ದರು. ಅವರಿಗೆ 1,100 ಗಂಟೆಗಳ ಕಾಲ ವಿಮಾನ ಹಾರಾಟ ಮಾಡಿದ ಅನುಭವವಿತ್ತು. ಹಾಗೇ 8,200 ಗಂಟೆಗಳ ಕಾಲ ವಿಮಾನ ಹಾರಾಟ ಮಾಡಿದ ಅನುಭವಿ ಲೈನ್ ಟ್ರೈನಿಂಗ್ ಕ್ಯಾಪ್ಟನ್ ಸಮೀತ್ ಸಬರ್ವಾಲ್ ಅವರ ತಂಡದ ಭಾಗವಾಗಿದ್ದರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಲಂಡನ್‌ಗೆ ಹೊರಟಿದ್ದ ಈ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತ್ತು. ಮಧ್ಯಾಹ್ನ 1.39 ಕ್ಕೆ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಈ ವಿಮಾನ ಪತನಗೊಂಡಿದೆ. ಇದು ವಿಶ್ವದ ಅತೀ ದೊಡ್ಡ ವಿಮಾನ ದುರಂತಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ. 241 ಮಂದಿ ಪ್ರಯಾಣಿಕರಲ್ಲಿ ಕೇವಲ ಒಬ್ಬರೇ ಬದುಕುಳಿದಿದ್ದಾರೆ. ಉಳಿದವರೆಲ್ಲರೂ ಈ ವಿಮಾನ ದುರಂತದಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದು, ಇಡೀ ವಿಶ್ವವೇ ಸಂತಾಪ ಸೂಚಿಸುತ್ತಿದೆ.

More from Filmibeat

English summary
Air India Flight AI171 co-pilot Clive Kunder is Bollywood actor Vikrant Massey's cousin.
Read more about: tragedy actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X