ತಂದೆಯಾಗ್ತಿದ್ದಾರಾ ಅಭಿಷೇಕ್ ಬಚ್ಚನ್? ಗೆಳತಿ ನಿಮ್ರತ್ ಕೌರ್ ಗರ್ಭಿಣಿ; ಸಂಚಲನ ಸೃಷ್ಟಿಸಿದ ಸುದ್ದಿಯ ಅಸಲಿಯತ್ತೇನು?
ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಚೇದನ ಸುದ್ದಿಗೆ ಕೊನೆಯೇ ಇಲ್ಲ ಅಂತೆನಿಸುತ್ತಿದೆ. ಈ ಜೋಡಿಯ ಒಂದೊಂದು ನಡೆಯನ್ನು ಗಮನಿಸುತ್ತಿರುವ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಹೊಸ ಸುದ್ದಿಗಳ ಬಗ್ಗೆ ಗಂಭೀರವಾಗಿ ಚರ್ಚೆ ಮಾಡುತ್ತಲೇ ಇರುತ್ತಾರೆ. ಅದರಲ್ಲಿ ಸದ್ಯಕ್ಕೆ ಹಾಟ್ ಟಾಪಿಕ್ ಅಂತ ಅನಿಸಿದ್ದು ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಡಿವೋರ್ಸ್ ಸುದ್ದಿ.
ಕಳೆದ ಕೆಲವು ತಿಂಗಳಿನಿಂದ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಅನ್ನೋ ವದಂತಿ ಹಲವು ದಿನಗಳಿಂದ ಓಡಾಡುತ್ತಲೇ ಇದೆ. ಅದಕ್ಕೆ ಪೂರಕ ಎಂಬಂತೆ ಪುತ್ರಿ ಆರಾಧ್ಯ ಹುಟ್ಟುಹಬ್ಬದ ಸಂದರ್ಭದಲ್ಲೂ ಐಶ್ವರ್ಯಾ ರೈ ಬಚ್ಚನ್ ಮಾತ್ರ ಕಾಣಿಸಿಕೊಂಡಿದ್ದು, ಅಭಿಷೇಕ್ ಬಚ್ಚನ್ ಗೈರಾಗಿರುವ ಫೋಟೊಗಳು ಓಡಾಡುತ್ತಿವೆ.

ಈ ಗ್ಯಾಪ್‌ನಲ್ಲೇ ಅಭಿಷೇಕ್ ಬಚ್ಚನ್ ಜೊತೆ ಬಾಲಿವುಡ್ ನಟಿ ನಿಮ್ರತ್ ಕೌರ್ ಹೆಸರು ತಳುಕು ಹಾಕಿಕೊಂಡಿತ್ತು. ಇದೀಗ ಅಭಿಷೇಕ್ ಬಚ್ಚನ್‌ನಿಂದ ಬಾಲಿವುಡ್ ನಟಿ ನಿಮ್ರತ್ ಕೌರ್ ಗರ್ಭಿಣಿಯಾಗಿದ್ದಾರೆ ಅನ್ನುವ ಸುದ್ದಿ ಕಳೆದ ಎರಡು ದಿನಗಳಿಂದ ಸದ್ದು ಮಾಡುತ್ತಿದೆ. ಅಲ್ಲದೆ ನಿಮ್ರತ್ ಕೌರ್ ಗರ್ಭಿಣಿಯಾಗಿರುವ ಫೋಟೊ ಕೂಡ ಹರಿದಾಡುತ್ತಿದೆ. ಅಸಲಿಗೆ ಸಂಚಲನ ಸೃಷ್ಟಿಸಿರುವ ಈ ಫೋಟೊದ ಅಸಲಿಯತ್ತೇನು? ತಿಳಿಯಲು ಮುಂದೆ ಓದಿ.
ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ರೆಡ್ಡಿಟ್ ಪೋಸ್ಟ್ (Reddit post) ಒಂದು ವೈರಲ್ ಆಗಿತ್ತು. ಅದು ಅಧಿಕೃತ ಖಾತೆ ಅಲ್ಲದೆ ಹೋದರೂ, ಪೋಸ್ಟ್ ವೈರಲ್ ಆಗುವುದಕ್ಕೆ ಶುರುವಾಗಿತ್ತು. 2022ರಲ್ಲಿ ನಿಮ್ರತ್ ಕೌರ್ ಜೊತೆ 'ದಸ್ವಿ' ಸಿನಿಮಾ ಮಾಡುವಾಗ ಐಶ್ವರ್ಯಾ ರೈಗೆ ಅಭಿಷೇಕ್ ಬಚ್ಚನ್ ಮೋಸ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಇದರ ಜೊತೆಗೆ ಇನ್‌ಸ್ಟಾಗ್ರಾಂ ಖಾತೆಯೊಂದರಲ್ಲಿ ನಿಮ್ರತ್ ಕೌರ್ ಫೋಟೊ ಹಾಕಿ ಅಭಿಷೇಕ್ ಬಚ್ಚನ್‌ರಿಂದ ನಿಮ್ರತ್ ಕೌರ್ ಪ್ರೆಗ್ನೆಂಟ್ ಆಗಿದ್ದಾರೆಂದು ಹಬ್ಬಿಸಲಾಗುತ್ತಿದೆ.
ನಿಮ್ರತ್ ಕೌರ್ ಶೀಘ್ರದಲ್ಲಿಯೇ ಅಭಿಷೇಕ್ ಬಚ್ಚನ್ ಮಗುವಿಗೆ ತಾಯಿಯಾಗುತ್ತಿದ್ದಾರೆಂದು ಸೋಶಿಯಲ್ ಮೀಡಿಯಾದಲ್ಲಿ ಹಬ್ಭಿಸುತ್ತಿದ್ದಾರೆ. ನಿಮ್ರತ್ ಕೌರ್ ಬೇಬಿ ಬಂಪ್ ಫೋಟೊವನ್ನು ತಮ್ಮ ಪೋಸ್ಟ್‌ನಲ್ಲಿ ಹಾಕಿದ್ದು, ಶೀಘ್ರದಲ್ಲಿಯೇ ಹೆರಿಗೆಯಾಗಲಿದೆ ಎಂದು ಕೆಲವರು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಈ ಫೋಸ್ಟ್ ಬಗ್ಗೆ ಇದೂವರೆಗೂ ಬಾಲಿವುಡ್ ನಟಿ ನಿಮ್ರತ್ ಕೌರ್ ಆಗಲಿ, ಅಭಿಷೇಕ್ ಬಚ್ಚನ್ ಆಗಲಿ ಪ್ರತಿಕ್ರಿಯಿಸುವುದಕ್ಕೆ ಹೋಗಿಲ್ಲ.
ಅಂದ್ಹಾಗೆ ಎಲ್ಲೂ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಿಂದ ಈ ಸುದ್ದಿ ಬಂದಿಲ್ಲ. ಹೀಗಾಗಿ ಇದೊಂದು ಫೇಕ್ ನ್ಯೂಸ್ ಎಂದು ವರದಿಯಾಗಿವೆ. ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಹಾಗೂ ನಿಮ್ರತ್ ಕೌರ್ ಅವರ ಫಾಲೋವರ್ಸ್ ಅನ್ನು ಗೊಂದಲ ಗೊಳಿಸುವುದಕ್ಕೆ ಕಿಡಿಗೇಡಿಗಳು ಇಂತಹ ಕೃತ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಹರಿದಾಡುತ್ತಿರುವ ಪೋಸ್ಟ್‌ಗಳು ಫೇಕ್ ಎನ್ನಲಾಗಿದೆ.
2007ರಲ್ಲಿ ಐಶ್ವರ್ಯಾ ರೈ ಅವರನ್ನು ಅಭಿಷೇಕ್ ಬಚ್ಚನ್ ಮದುವೆ ಆಗಿದ್ದರು. ಅವರಿಗೆ ಆರಾಧ್ಯ ಎಂಬ ಮಗಳು ಇದ್ದಾಳೆ. ಕಳೆದ ಕೆಲವು ದಿನಗಳಿಂದ ಈ ಜೋಡಿಯ ಬಗ್ಗೆ ವದಂತಿಗಳು ಹಬ್ಬುತ್ತಿದ್ದರೂ, ಅಭಿಷೇಕ್ ಆಗಲಿ, ಐಶ್ವರ್ಯಾ ರೈ ಆಗಲಿ ತಮ್ಮ ಬಗ್ಗೆ ಹಬ್ಬುತ್ತಿರುವ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಸುಳ್ಳು ವದಂತಿಗಳಿಗೆ ಬ್ರೇಕ್ ಹಾಕುವುದಕ್ಕೆ ಮುಂದಾಗಿಲ್ಲ.


Click it and Unblock the Notifications











