ಹೊರಗಡೆ ಪ್ರತ್ಯೇಕವಾಗಿ ಪೋಸ್ ಕೊಟ್ರು, ಒಳಗಡೆ ಒಟ್ಟಿಗೆ ಕೂತ್ಕೊಂಡ್ರು: ಇಬ್ಬರ ನಡುವೆ ಏನಾಗ್ತಿದೆ?

ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ನಡುವೆ ಬಿರುಕು ಬಿಟ್ಟಿದ್ದೆ ಅನ್ನೋ ಸುದ್ದು ಹಲವು ದಿನಗಳಿಂದ ಓಡಾಡುತ್ತಲೇ ಇತ್ತು. ಕೆಲವು ದಿನಗಳ ಹಿಂದೆ ಹಲವು ಕಾರ್ಯಕ್ರಮಗಳಲ್ಲಿ ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಒಟ್ಟಿಗೆ ಕಾಣಿಸಿಕೊಂಡು ಗಾಳಿಸುದ್ದಿಗಳಿಗೆ ತಾತ್ಕಾಲಿಕ ಬ್ರೇಕ್ ಹಾಕಿದ್ದರು.

ಬಾಲಿವುಡ್‌ನಲ್ಲಿ ಅದ್ಯಾವಾಗ ಯಾರು ಒಂದಾಗುತ್ತಾರೋ? ಅದ್ಯಾವಾಗ ಬೇರೆಯಾಗುತ್ತಾರೋ? ಗೊತ್ತೇ ಆಗುವುದಿಲ್ಲ. ಆ ಜೋಡಿಗಳು ಖುದ್ದಾಗಿ ಬೇರೆ ವಿಚ್ಛೇದನದ ಸುದ್ದಿಯನ್ನು ಅನೌನ್ಸ್ ಮಾಡಿ ಶಾಕ್ ಕೊಟ್ಟಿದ್ದೂ ಇದೆ. ಸದ್ಯ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ನಡುವಿನ ಸಂಬಂಧ ಚೆನ್ನಾಗಿಲ್ಲ ಅನ್ನೋ ಸುದ್ದಿ ಗುಲ್ಲೆದ್ದಿದೆ.

Aishwarya Rai Amitabh Bachchan family arrived saperatly at the Anant Ambani wedding

ಈ ಸುದ್ದಿಗೆ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರೂ ಅಧಿಕೃತವಾಗಿ ಎಲ್ಲೂ ಹೇಳಿಕೆಗಳನ್ನು ಕೊಟ್ಟಿಲ್ಲ. ಆದರೆ, ಇವರು ಯಾವ್ಯಾವ ಕಾರ್ಯಕ್ರಮಗಳಿಗೆ ಹೋಗುತ್ತಾರೋ ಆ ವೇಳೆಯೆಲ್ಲ ವಿಚ್ಛೇದನದ ಬಗ್ಗೆ ಪುಕಾರುಗಳು ಹಬ್ಬುವುದಕ್ಕೆ ಶುರುವಾಗಿಬಿಡುತ್ತೆ. ಸದ್ಯ ಅನಂತ್ ಅಂಬಾನಿ ಮದುವೆಗೆ ಹೋಗಿದ್ದಾಗಲೂ ಈ ಜೋಡಿ ಬಗ್ಗೆ ಮತ್ತೆ ಅನುಮಾನ ಮೂಡುವುದಕ್ಕೆ ಶುರು ಮಾಡಿದೆ.

ಜುಲೈ 12ರಂದು ವಿಶ್ವದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆ ಅದ್ಧೂರಿಯಾಗಿ ನಡೆದಿದೆ. ರಾಧಿಕಾ ಮರ್ಚೆಂಟ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಅನಂತ್ ಅಂಬಾನಿ ಮದುವೆಗೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಕುಟುಂಬಕ್ಕೂ ಆಹ್ವಾನ ನೀಡಲಾಗಿತ್ತು. ಈ ವೇಳೆ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಎಂಟ್ರಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Aishwarya Rai Amitabh Bachchan family arrived saperatly at the Anant Ambani wedding

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭಕ್ಕೆ ಪುತ್ರಿ ಆರಾಧ್ಯ ಜೊತೆ ಐಶ್ವರ್ಯಾ ರೈ ಬಚ್ಚನ್ ಪ್ರತ್ಯೇಕವಾಗಿ ಎಂಟ್ರಿ ಕೊಟ್ಟಿದ್ದರು. ಇತ್ತ ಅಭಿಷೇಕ್ ಬಚ್ಚನ್ ತಂದೆ ಅಮಿತಾಭ್ ಬಚ್ಚನ್, ತಾಯಿ ಜಯಾ ಬಚ್ಚನ್ ಹಾಗೂ ತಂಗಿ ಕುಟುಂಬದೊಂದಿಗೆ ಬಂದಿದ್ದರು. ಕ್ಯಾಮರಾಗೂ ಪ್ರತ್ಯೇಕವಾಗಿ ಪೋಸ್ ಕೊಟ್ಟಿದ್ದರು. ಇದು ಮತ್ತೆ ವಿಚ್ಛೇದನದ ಸುದ್ದಿಯನ್ನು ಜೀವಂತವಾಗಿರಿಸಿದೆ.

ಆದರೆ, ಮದುವೆ ಮನೆ ಒಳಗೆ ಎಂಟ್ರಿ ಕೊಡುತ್ತಿದ್ದಂತೆ ಈ ಸನ್ನಿವೇಶವೇ ಬದಲಾಗಿ ಹೋಗಿತ್ತು. ಅಭಿಷೇಕ್ ಬಚ್ಚನ್ ಪಕ್ಕದಲ್ಲಿ ಐಶ್ವರ್ಯಾ ರೈ ಹಾಗೂ ಪುತ್ರಿ ಆರಾಧ್ಯ ಕೂತಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇಬ್ಬರ ಅಭಿಮಾನಿಗಳು ಮತ್ತೆ ಗೊಂದಲಕ್ಕೆ ಬಿದ್ದಿದ್ದಾರೆ. ಅಸಲಿಗೆ ಇವರಿಬ್ಬರೂ ಪ್ರತ್ಯೇಕವಾಗಿ ಬಂದಿದ್ದೇಕೆ? ಒಳಗೆ ಒಟ್ಟಿಗೆ ಕಾಣಿಸಿಕೊಂಡಿದ್ದೇಕೆ? ಅನ್ನೋ ಪ್ರಶ್ನೆಗಳಿಗೆ ಉತ್ತರ ಹುಡುಕುವುದಕ್ಕೆ ಶುರು ಮಾಡಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ ಅಭಿಷೇಕ್ ಬಚ್ಚನ್ ಪಕ್ಕದಲ್ಲಿ ಐಶ್ವರ್ಯಾ ರೈ ಕೂತಿದ್ದರೂ, ಹೃತಿಕ್ ರೋಷನ್ ಜೊತೆನೇ ಸಂಭಾಷಣೆಯಲ್ಲಿ ತೊಡಗಿದ್ದಾರೆ. ಈ ಬಗ್ಗೆನೂ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಅಷ್ಟೇ ಅಲ್ಲದೆ, ಜುಲೈ 13ರಂದು ನಡೆದ 'ಶುಭ ಆಶೀರ್ವಾದ' ಸಮಾರಂಭದಲ್ಲೂ ಕೂಡ ಬಚ್ಚನ್ ಕುಟುಂಬದ ಸದಸ್ಯರೊಂದಿಗೆ ಐಶ್ವರ್ಯಾ ರೈ ಬಚ್ಚನ್ ಕಾಣಿಸಿಕೊಂಡಿಲ್ಲ. ಒಟ್ನಲ್ಲಿ ಅನಂತ್ ಅಂಬಾನಿ ಮದುವೆಯಲ್ಲಿ ಐಶ್ವರ್ಯಾ ರೈ ವಿಚ್ಛೇದನದ ಬಗ್ಗೆನೇ ಹೆಚ್ಚು ಚರ್ಚೆಯಾಗುತ್ತಿದೆ.

More from Filmibeat

English summary
Aishwarya Rai and Amitabh Bachchan family members arrived saperatly at the Anant Ambani wedding amid divorce rumours:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X