ಐಶ್ವರ್ಯಾ, ದೀಪಿಕಾ, ಪ್ರಿಯಾಂಕಾ, ಕರೀನಾ, ಕತ್ರಿನಾ; ಇವರಲ್ಲಿ ಭಾರತದ ಶ್ರೀಮಂತ ನಟಿ ಯಾರು?

ಒಂದು ಕಾಲವಿತ್ತು. ಸಿನಿಮಾರಂಗದಲ್ಲಿ ಕೇವಲ ಹೀರೊಗಳಿಗಷ್ಟೇ ಕೋಟಿ ಲೆಕ್ಕದಲ್ಲಿ ಸಂಭಾವನೆ ಸಿಗುತ್ತಿತ್ತು. ನಾಯಕಿಯರನ್ನು ಕೇವಲ ಗ್ಲಾಮರ್ ಗೊಂಬೆಗಳಂತೆ ಬಳಸಿಕೊಳ್ಳಲಾಗುತ್ತಿತ್ತು. ಆದ್ರೀಗ ಕಾಲ ಬದಲಾಗಿದೆ. ಅದರಲ್ಲೂ ಬಾಲಿವುಡ್ ನಟಿಯರಿಗೂ ಕೂಡ ಕೋಟಿ ಲೆಕ್ಕದಲ್ಲಿಯೇ ಸಂಭಾವನೆ ಸಿಗುತ್ತಿದೆ.

ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರ ದೊಡ್ಡ ಪಟ್ಟಿನೇ ಇದೆ. ಐಶ್ವರ್ಯಾ ರೈ ಬಚ್ಚನ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಕರೀನಾ ಕಪೂರ್, ಕತ್ರಿನಾ ಕೈಫ್ ದಕ್ಷಿಣ ಭಾರತದ ನಟಿ ನಯನತಾರಾ, ಸಮಂತಾ ಇವರ ಸಂಭಾವನೆ ಕೋಟಿಗಳನ್ನು ದಾಟಿ ಅದೆಷ್ಟೋ ವರ್ಷಗಳಾಗಿವೆ.

 Aishwarya Rai Bachchan, Deepika, Priyanka, Kareena Who is Richest Indian Actress

Siasat ಭಾರತದ ಟಾಪ್ 10 ಶ್ರೀಮಂತರ ಪಟ್ಟಿಯನ್ನು ರಿಲೀಸ್ ಮಾಡಿದೆ. ಈ ಪಟ್ಟಿಯಲ್ಲಿ ಐಶ್ವರ್ಯಾ ರೈಯಿಂದ ಹಿಡಿದು, ನಯನತಾರಾವರೆಗೂ ಇದ್ದಾರೆ. ಹಾಗಿದ್ದರೆ, ಸದ್ಯ ಭಾರತದ ಶ್ರೀಮಂತ ನಟಿ ಯಾರು? ಟಾಪ್ 10 ಪಟ್ಟಿಯಲ್ಲಿರೋ ನಟಿಯರು ಯಾರು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಭಾರತದ ಶ್ರೀಮಂತ ನಟಿ ಯಾರು? ಅನ್ನೋ ಕುತೂಹಲವಿರೋರಿಗಾಗಿ Siasat ಪಟ್ಟಿಯೊಂದನ್ನು ರಿಲೀಸ್ ಮಾಡಿದೆ. ಇದರ ಪ್ರಕಾರ, ಭಾರತದ ಶ್ರೀಮಂತ ನಟಿ ಐಶ್ವರ್ಯಾ ರೈ ಬಚ್ಚನ್. ಪತಿ ಅಭಿಷೇಕ್ ಬಚ್ಚನ್ ಜೊತೆ ವಿಚ್ಚೇದನದ ವದಂತಿ ಹಬ್ಬುತ್ತಿರುವಾಗಲೇ ಐಶ್ವರ್ಯಾ ರೈ ಶ್ರೀಮಂತ ನಟಿ ಅಂತ ಪಟ್ಟಿ ಮಾಡಿದೆ.

Siasat ಪ್ರಕಾರ, ಐಶ್ವರ್ಯಾ ರೈ ಬಚ್ಚನ್ ಟಾಪ್ ಸ್ಥಾನದಲ್ಲಿದ್ದಾರೆ. ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈಗೆ ಹಣ ಮೂಲ ಸಿನಿಮಾ ಹಾಗೂ ಜಾಹೀರಾತು. ಇಷ್ಟೇ ಅಲ್ಲದೆ, ಹಲವು ಸ್ಟಾರ್ಟ್‌ಅಪ್ ಕಂಪನಿಗಳಲ್ಲೂ ಐಶ್ವರ್ಯಾ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿನಿಮಾದಲ್ಲಿ ನಟಿಸುವುದು ಕಡಿಮೆ ಮಾಡಿದ್ದರೂ, ಅವರ ಸಂಪತಿನಲ್ಲಿ ಏರಿಕೆ ಆಗುತ್ತಲೇ ಇದೆ.

Siasat ಪಟ್ಟಿ ಬಿಡುಗಡೆ ಮಾಡಿರುವ ಪ್ರಕಾರ, ಐಶ್ವರ್ಯಾ ರೈ ಬಚ್ಚನ್ ಒಟ್ಟು ಆಸ್ತಿ 800 ಕೋಟಿ ರೂಪಾಯಿ. ಸದ್ಯ ಇಷ್ಟೊಂದು ಸಂಪತ್ತು ಭಾರತ ಯಾವುದೇ ನಟಿಯರ ಬಳಿನೂ ಇಲ್ಲ. ಮೂಲಗಳ ಪ್ರಕಾರ, ಐಶ್ವರ್ಯಾ ಸಿನಿಮಾಗಳಲ್ಲಿ ನಟಿಸುತ್ತಿರುವಾಗಲೇ ಕೆಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದರು. ಅಲ್ಲದೆ ವಿದೇಶದಲ್ಲೂ ಹೂಡಿಕೆ ಮಾಡಿದ್ದಾರೆಂದು ವರದಿಗಳಾಗಿವೆ. ಇಷ್ಟೇ ಅಲ್ಲದೆ 50 ಸಿನಿಮಾಗಳಲ್ಲಿ ನಟಿಸಿರೋ ನಟಿ ಒಂದು ಸಿನಿಮಾಗೆ 10 ರಿಂದ 12 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಹಾಗೇ ಜಾಹೀರಾತಿಗೆ 6 ರಿಂದ 7 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡುತ್ತಾರೆ ಎಂದು ಟೈಮ್ಸ್ ಆಫ್ ಇಂಡಿಯಾದ ವರದಿಯಾಗಿದೆ.

ಇನ್ನು ಐಶ್ವರ್ಯಾ ರೈಗೆ ಕಾಂಪಿಟೇಷನ್ ಕೊಡುತ್ತಿರೋದು ಪ್ರಿಯಾಂಕಾ ಚೋಪ್ರಾ ಜೋನಸ್, ದೀಪಿಕಾ ಪಡುಕೋಣೆ ಹಾಗೂ ಕರೀನಾ ಕಪೂರ್. ಇವರು ಐಶ್ವರ್ಯಾ ರೈಯಿಂದ ತುಂಬಾನೇ ಹಿಂದೆ ಉಳಿದಿದ್ದರೂ, ಮುಂದಿನ ದಿನಗಳಲ್ಲಿ ಒಟ್ಟು ಆಸ್ತಿಯಲ್ಲಿ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಹಾಗಿದ್ರೆ ಟಾಪ್ 10 ಶ್ರೀಮಂತ ನಟಿಯರ ಪಟ್ಟಿ ಇಲ್ಲಿದೆ.

 Aishwarya Rai Bachchan, Deepika, Priyanka, Kareena Who is Richest Indian Actress

ಭಾರತದ ಶ್ರೀಮಂತ ನಟಿಯ ಪಟ್ಟಿ (Siasat)

  • ಐಶ್ವರ್ಯಾ ರೈ ಬಚ್ಚನ್ -800 ಕೋಟಿ ರೂ.
  • ಪ್ರಿಯಾಂಕಾ ಚೋಪ್ರಾ -620 ಕೋಟಿ ರೂ.
  • ದೀಪಿಕಾ ಪಡುಕೋಣೆ -500 ಕೋಟಿ ರೂ.
  • ಕರೀನಾ ಕಪೂರ್ -440 ಕೋಟಿ ರೂ.
  • ಅನುಷ್ಕಾ ಶರ್ಮಾ -255 ಕೋಟಿ ರೂ.
  • ಮಾಧುರಿ ದೀಕ್ಷಿತ್ -250 ಕೋಟಿ ರೂ.
  • ಕತ್ರಿನಾ ಕೈಫ್ -235 ಕೋಟಿ ರೂ.
  • ಆಲಿಯಾ ಭಟ್ -229 ಕೋಟಿ ರೂ.
  • ಶ್ರದ್ಧಾ ಕಪೂರ್ -123 ಕೋಟಿ ರೂ.
  • ನಯನತಾರಾ -100 ಕೋಟಿ ರೂ.

ದಕ್ಷಿಣ ಭಾರತದ ನಟಿಯರ ಪೈಕಿ ನಯನತಾರಾಗೆ ಮಾತ್ರ ಸ್ಥಾನ ಸಿಕ್ಕಿದೆ. 10ನೇ ಸ್ಥಾನದಲ್ಲಿರೋ ನಟಿ 100 ಕೋಟಿ ರೂಪಾಯಿ ಆಸ್ತಿಯ ಒಡತಿ ಎಂದು ವರದಿಯಾಗಿದೆ. ಒಂದು ಸಿನಿಮಾ 10 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಏಕೈಕ ದಕ್ಷಿಣ ಭಾರತದ ನಟಿಯೀಕೆ. ಹಾಗೇ ಇತ್ತೀಚೆಗೆ ಕಾಸ್ಮೆಟಿಕ್ ಉದ್ಯಮಕ್ಕೂ ಕೈ ಹಾಕಿದ್ದು ಅಲ್ಲಿಂದಾನೂ ಸಂಪಾದನೆ ಮಾಡುತ್ತಿದ್ದಾರೆ.

More from Filmibeat

English summary
Aishwarya Rai Bachchan is Richest India Actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X