ಐಶ್ವರ್ಯ ರೈ ನಟನೆಯ 'ಫನ್ನಿ ಖಾನ್' ಟೀಸರ್ ನೋಡಿ ಪತಿ ಏನಂದ್ರು.?

By Bharath Kumar

Recommended Video

ಐಶ್ ಬೇಬಿ ಫನ್ನಿ ಖಾನ್ ಟೀಸರ್ ನೋಡಿ ಪತಿ ಹೇಳಿದ್ದೇನು..? | Filmibeat Kannada

ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ಬಚ್ಚನ್ ಹಾಗೂ ಸೂಪರ್ ಸ್ಟಾರ್ ನಟ ಅನಿಲ್ ಕಪೂರ್ ಅಭಿನಯದ 'ಫನ್ನಿಖಾನ್' ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಒಂದು ನಿಮಿಷದ ಟೀಸರ್ ವಿಶೇಷವಾಗಿದ್ದು, ಟೈಟಲ್ ಗೆ ತಕ್ಕಂತೆ ಫುಲ್ ಎಂಟರ್ ಟೈನ್ ಮೆಂಟ್ ಆಗಿ ಮೂಡಿಬಂದಿದೆ. ಬಿಡುಗಡೆಯಾದ 19 ಗಂಟೆಯಲ್ಲಿ ಸುಮಾರು 36 ಲಕ್ಷ ಜನರು ಟೀಸರ್ ನೋಡಿದ್ದಾರೆ. ಜೊತೆಗೆ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಈ ಸಿನಿಮಾ ಟೀಸರ್ ಐದನೇ ಸ್ಥಾನದಲ್ಲಿದೆ.

ಇನ್ನು 'ಫನ್ನಿ ಖಾನ್' ಟೀಸರ್ ನೋಡಿದ ಐಶ್ವರ್ಯ ರೈ ಅವರ ಪತಿ ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿದ್ದಾರೆ. ''ನೋಡೋದಕ್ಕೆ ಅದ್ಭುತವಾಗಿದೆ, ನೋಡಿ ಎಂಜಾಯ್ ಮಾಡಿ'' ಎಂದಿದ್ದಾರೆ.

Aishwarya Rai Bachchan fanney khan teaser released

ಐಶ್ವರ್ಯ ರೈ ಮತ್ತು ನಟ ಅನಿಲ್ ಕಪೂರ್ ಸುಮಾರು 19 ವರ್ಷದ ನಂತರ ಒಟ್ಟಿಗೆ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ. 2000ರಲ್ಲಿ ಅನಿಲ್ -ಐಶ್ ಒಟ್ಟಿಗೆ 'ಹಮಾರಾ ದಿಲ್ ಆಪಕೇ ಪಾಸ್ ಹೇ' ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದರು. 1999 ರಲ್ಲಿ ತೆರೆ ಕಂಡ 'ತಾಲ್' ಚಿತ್ರದಲ್ಲಿ ಕೂಡ ಐಶ್-ಅನಿಲ್ ಬಣ್ಣ ಹಚ್ಚಿದ್ದರು.

ಈ ಚಿತ್ರದಲ್ಲಿ ಅನಿಲ್ ಕಪೂರ್, ಐಶ್ವರ್ಯ ರೈ ಅವರ ತಂದೆ ಪಾತ್ರ ನಿರ್ವಹಿಸಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಇನ್ನುಳಿದಂತೆ ಚಿತ್ರದ ಪ್ರಮುಖ ಪಾತ್ರದಲ್ಲಿ ರಾಜ್ ಕುಮಾರ್ ರಾವ್ ಅಭಿನಯಿಸಿದ್ದಾರೆ. ಇವರ ಜೊತೆ ದಿವ್ಯಾ ದತ್ತಾ, ಕರಣ್ ಮುಖ್ಯ ಪಾತ್ರದಲ್ಲಿದ್ದಾರೆ. ಆಗಸ್ಟ್ 3 ರಂದು ಈ ಸಿನಿಮಾ ತೆರೆಕಾಣುತ್ತಿದೆ.

More from Filmibeat

English summary
Bollywood actress Aishwarya Rai Bachchan and anil kapoor starrer fanney khan movie teaser released. teaser has Aishwarya Rai shining bright, Anil Kapoor as a dreamer. Watch video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X