ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಒಟ್ಟು ಆಸ್ತಿ ₹776 ಕೋಟಿ? ಇಷ್ಟು ಹಣ ಎಲ್ಲಿಂದ ಬಂತು?

ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಬಾಲಿವುಡ್‌ನ ಎವರ್‌ಗ್ರೀನ್ ಬ್ಯೂಟಿ. ಇಂದಿಗೂ ಬಾಲಿವುಡ್‌ನಲ್ಲಿ ಐಶ್‌ಗೆ ಎಲ್ಲಿಲ್ಲದ ಬೇಡಿಕೆ ಇದೆ. ಅದಕ್ಕೆ ಇತ್ತೀಚೆಗೆ ತೆರೆಕಂಡ 'ಪೊನ್ನಿಯಿನ್ ಸೆಲ್ವನ್ 2' ಸಿನಿಮಾನೇ ನೋಡಿದವರಿಗೆ ಗೊತ್ತು.

1997ರಲ್ಲಿ ಮಣಿರತ್ನ ನಿರ್ದೇಶಿಸಿದ್ಧ ಸಿನಿಮಾ 'ಇರುವರ್' ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದರು. ಇತ್ತೀಚೆಗೆ ಮಣಿರತ್ನಂ ನಿರ್ದೇಶಿಸಿದ 'ಪೊನ್ನಿಯನ್ ಸೆಲ್ವನ್ 2' ಐಶ್ವರ್ಯಾ ರೈ ನಟಿಸಿ, ಎವರ್‌ಗ್ರೀನ್ ನಟಿ ಅನ್ನೋದನ್ನು ಸಾಬೀತು ಮಾಡಿದ್ದಾರೆ. ಬಾಕ್ಸಾಫೀಸ್‌ನಲ್ಲೂ ಈ ಸಿನಿಮಾ ಓಳ್ಳೆ ಕಲೆಕ್ಷನ್ ಮಾಡಿದೆ.

Aishwarya Rai Bachchan Rs 776 Crore net worth: Business, real estate, remuneration, cars details

ಐಶ್ವರ್ಯಾ ರೈ ಬಚ್ಚನ್ ಭಾರತೀಯ ಚಿತ್ರರಂಗದ ದಿಗ್ಗಜರ ಪಟ್ಟಿಯಲ್ಲಿರೋ ಹೆಸರು. ವಿಶ್ವ ಸುಂದರಿ ಆದಲ್ಲಿಂದ ಸಿನಿಮಾಗೆ ಕಾಲಿಟ್ಟ ನಟಿ ಜಾಹೀರಾತು, ಬ್ಯುಸಿನೆಸ್, ಪ್ರಾಪರ್ಟಿ ಸೇರಿದಂತೆ ಹಲವೆಡೆ ಹಣ ಹೂಡಿಕೆ ಮಾಡಿದ್ದಾರೆ. ದುಬಾರಿ ಕಾರು, ಬಂಗಲೆ ಐಶ್ವರ್ಯಾ ಕೈಯಲ್ಲಿವೆ. ಇವರ ಬಳಿ ಸುಮಾರು 776 ಕೋಟಿ ರೂ. ಆಸ್ತಿಯಿದೆ ಎಂದು ವರದಿಯಾಗಿದೆ. ಅಷ್ಟಕ್ಕೂ ಇಷ್ಟೊಂದು ಹಣ ಸಂಪಾಧಿಸಿದ್ದು ಹೇಗೆ? ಇಲ್ಲಿದೆ ಡಿಟೈಲ್ಸ್.

ಉದ್ಯಮಗಳಲ್ಲಿ ಹಣ ಹೂಡಿಕೆ

ಐಶ್ವರ್ಯಾ ರೈ ಕೇವಲ ನಟಿಯಷ್ಟೇ ಅಲ್ಲ. ಉದ್ಯಮಿ ಕೂಡ ಹೌದು. ಹಲವು ಸ್ಟಾರ್ಟ್‌ಅಪ್‌ಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ. 'Ambee' ಅನ್ನೋ ಸ್ಟಾರ್ಟ್‌ಅಪ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಇದು ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಕಂಪನಿ. ಅಲ್ಲದೆ 'ಪಾಸಿಬಲ್' ಅನ್ನೋ ನ್ಯೂಟ್ರಿಷನ್ ಹೆಲ್ತ್‌ಕೇರ್‌ನಲ್ಲೂ ಹೂಡಿಕೆ ಮಾಡಿದ್ದಾರೆ. 'ಪಾಸಿಬಲ್' ಕಂಪನಿ ಐಶ್ವರ್ಯಾ ರೈರಿಂದ ಸುಮಾರು 5 ಕೋಟಿ ರೂ. ಹೂಡಿಕೆ ಮಾಡಿಸಿದೆ ಎಂದು ಎಕಾನಮಿಕ್ ಟೈಮ್ಸ್ ವರದಿ ಮಾಡಿದೆ.

ಸಿನಿಮಾದ ಸಂಭಾವನೆ ಎಷ್ಟು?

ಐಶ್ವರ್ಯಾ ರೈ ಬಚ್ಚನ್ ಮದುವೆ ಬಳಿಕವೂ ಸ್ಟಾರ್‌ಗಿರಿಯನ್ನು ಉಳಿಸಿಕೊಂಡಿದ್ದಾರೆ. ಐಶ್ವರ್ಯಾ ರೈ ಬಚ್ಚನ್ ಬಾಲಿವುಡ್‌ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಮೂಲಗಳ ಪ್ರಕಾರ, 10 ರಿಂದ 12 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

Aishwarya Rai Bachchan Rs 776 Crore net worth: Business, real estate, remuneration, cars details

ಜಾಹೀರಾತಿನಿಂದಲೂ ಹಣ ಸಂಪಾದನೆ!

ಐಶ್ವರ್ಯಾ ರೈ ಬಚ್ಚನ್ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ವರ್ಷಗಳಿಂದ ಕಾಸ್ಮೆಟಿಕ್ ಬ್ರ್ಯಾಂಡ್‌ಗಳಾದ 'ಲಾರಿಯಲ್', ಸ್ವಿಸ್‌ನ ದುಬಾರಿ ವಾಚ್‌ಗಳಿಗೆ ರಾಯಬಾರಿಯಾಗಿದ್ದರು. ಐಶ್ವರ್ಯಾ ರೈ ಜಾಹೀರಾತುಗಳಿಂದ ದಿನಕ್ಕೆ 6 ರಿಂದ 7 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಜಾಹೀರಾತಿನಿಂದಲೇ ಸುಮಾರು 8 ರಿಂದ 90 ಕೋಟಿ ದುಡಿಯುತ್ತಾರೆ ಎಂದು ಎಕ್ಸ್‌ಚೇಂಜ್‌4ಮೀಡಿಯಾ ಹೇಳಿದೆ.

ಬಂಗಲೆ 'ಜಲ್ಸಾ' ಬೆಲೆ ಎಷ್ಟು?

ಐಶ್ವರ್ಯಾ ರೈ ಹಾಗೂ ಪತಿ ಅಭಿಷೇಕ್ ಬಚ್ಚನ್ 'ಜಲ್ಸಾ'ದಲ್ಲಿ ವಾಸವಿದ್ದಾರೆ. ಇದೇ ಮನೆಯಲ್ಲಿಯೇ ಅಮಿತಾಬ್ ಬಚ್ಚನ್ ಹಾಗೂ ಜಯಾಬಚ್ಚನ್ ನೆಲೆಸಿದ್ದಾರೆ. ಮುಂಬೈನ ಜುಹುವುನಲ್ಲಿರುವ ಈ ಬಂಗಲೆ ಬೆಲೆ 112 ಕೋಟಿ ರೂ. ಎಂದು ಮಿಡ್‌ ಡೇನಲ್ಲಿ ವರದಿಯಾಗಿದೆ.

ದುಬಾರಿ ಬಂಗಲೆಗಳು

ಐಶ್ವರ್ಯಾ ರೈ ಹೆಸರಲ್ಲಿ ದುಬಾರಿ ಬಂಗಲೆಗಳಿವೆ. 'ಜಮೇರಿಯಾ ಗಾಲ್ಫ್ ಎಸ್ಟೇಟ್‌'ನಲ್ಲಿ ಐಶ್ವರ್ಯಾ ರೈ ಬಂಗಲೆ ಖರೀದಿ ಮಾಡಿದ್ದು ಎನ್ನಲಾಗಿದೆ. ಮುಂಬೈನ ಕುರ್ಲಾದಲ್ಲಿ 5 ಬೆಡ್‌ರೂಮ್‌ ಫ್ಲ್ಯಾಟ್ ಇದೆ. ಇದರ ಬೆಲೆ ಸುಮಾರು 21 ಕೋಟಿ ರೂ. ಹಾಗೇ ವರ್ಲಿಯಲ್ಲಿ 41 ಕೋಟಿ ರೂ. ಬೆಲೆಯ ಬಂಗಲೆ ಇದೆ ಎನ್ನಲಾಗಿದೆ.

ಮನೆಯಲ್ಲಿದೆ ದುಬಾರಿ ಕಾರುಗಳು

ಐಶ್ವರ್ಯಾ ರೈ ಮನೆಯಲ್ಲಿ ದುಬಾರಿ ಕಾರುಗಳಿವೆ. 8 ಕೋಟಿ ರೂ. ಬೆಲೆಯ ರೋಲ್ಸ್ ರಾಯ್ಸ್ ಘೋಸ್ಟ್ ಇದೆ. ಇದನ್ನು ಅಮಿತಾಬ್ ಬಚ್ಚನ್ ಬಳಸುತ್ತಾರೆ. ಹಾಗೇ 2.23 ಕೋಟಿ ಬೆಲೆಯ ಲೆಕ್ಸಸ್ ಎಲ್‌ಎಕ್ಸ್ 570 ಇದೆ. 1.56 ಕೋಟಿ ರೂ. ಬೆಲೆಯ ಆಡಿ ಎ8 ಇದೆ. 1.60 ಕೋಟಿಯ ಮರ್ಸಿಡೀಸ್ ಬೆನ್ಜ್ ಎಸ್3 ಇದೆ ಎಂದು ಬಾಲಿವುಡ್‌ ಸುದ್ದಿಗಳನ್ನು ಬಿತ್ತರಿಸುವ ಮಾಧ್ಯಮಗಳು ವರದಿ ಮಾಡಿವೆ.

More from Filmibeat

English summary
Aishwarya Rai Bachchan Rs 776 Crore net worth: Business, real estate, remuneration, cars details, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X