ಐಶ್ವರ್ಯ ರೈ ಬಚ್ಚನ್ ಗೆ ಇದು ಕೆಟ್ಟಕಾಲ ಇರಬಹುದು.!

By Bharath Kumar

ಅದೊಂದು ಕಾಲ ಇತ್ತು. ಐಶ್ವರ್ಯ ರೈ ಅಭಿನಯದ ಸಿನಿಮಾ ಅಂದ್ರೆ ಬಾಕ್ಸ್ ಆಫೀಸ್ ಚಿಂದಿ ಆಗ್ತಿತ್ತು. ಜನ ಮುಗಿಬಿದ್ದು ಥಿಯೇಟರ್ ಗೆ ಬರ್ತಿದ್ರು. ಹಾಗಂತ ಆ ಕ್ರೇಜ್ ಈಗ ಇಲ್ಲ ಅಂತಲ್ಲಾ. ಈಗಲು ಐಶ್ ಮನೆಮುಂದೆ ನಿರ್ಮಾಪಕರು ಕಾಲ್ ಶೀಟ್ ಗಾಗಿ ಕಾದು ನಿಂತಿದ್ದಾರೆ.

ಹೊಸ ಹೊಸ ಸಿನಿಮಾಗಳಲ್ಲಿ ನಟಿಸುವಂತೆ ಆಫರ್ ಮಾಡುತ್ತಿದ್ದಾರೆ. ಇಲ್ಲೇ ಗೊತ್ತಾಗುತ್ತೆ, ಐಶ್ವರ್ಯ ರೈಗೆ ವಯಸ್ಸಾಗಬಹುದು, ಆದ್ರೆ, ಐಶ್ ಹವಾ ಮಾತ್ರ ಕಮ್ಮಿಯಾಗಲ್ಲ ಎನ್ನಲಾಗುತ್ತಿದೆ.

ಹೀಗಿರುವಾಗ, ಐಶ್ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಕಮಾಲ್ ಮಾಡುತ್ತಿಲ್ಲ. ಬಾಕ್ಸ್ ಆಫೀಸ್ ನಲ್ಲಂತೂ ಮಕಾಡೆ ಮಲಗುತ್ತಿದೆ. ಹಾಕಿದ ಬಂಡವಾಳವೂ ವಾಪಸ್ ಬರ್ತಿಲ್ಲ ಎಂಬ ಆತಂಕ ನಿರ್ಮಾಪಕರನ್ನ ಕಾಡುತ್ತಿದೆ. ಇದರ ಲಿಸ್ಟ್ ಗೆ ಈಗ ಫನ್ನಿ ಖಾನ್ ಸಿನಿಮಾ ಸೇರಿದೆ. ಮುಂದೆ ಓದಿ....

ಫನ್ನಿ ಖಾನ್ ಗಳಿಸಿದ್ದೆಷ್ಟು.?

ಫನ್ನಿ ಖಾನ್ ಗಳಿಸಿದ್ದೆಷ್ಟು.?

ಅನಿಲ್ ಕಪೂರ್, ಐಶ್ವರ್ಯ ರೈ, ರಾಜ್ ಕುಮಾರ್ ರಾವ್ ಅಭಿನಯಿದ ಫನ್ನಿ ಖಾನ್ ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿತ್ತು. ಆದ್ರೆ, ಬಿಡುಗಡೆಯ ನಂತರ ಈ ಸಿನಿಮಾ ಸದ್ದೇ ಮಾಡುತ್ತಿಲ್ಲ. ಕಲೆಕ್ಷನ್ ಅಂತೂ ಇಲ್ಲವೆ ಇಲ್ಲ ಎಂಬುದು ದುರಂತ.

ಹಾಕಿದ ಬಂಡವಾಳವೂ ಇಲ್ಲವಾಗಿದೆ

ಹಾಕಿದ ಬಂಡವಾಳವೂ ಇಲ್ಲವಾಗಿದೆ

ಸದ್ಯದ ಮಾಹಿತಿ ಪ್ರಕಾರ ಫನ್ನಿ ಖಾನ್ ಚಿತ್ರದ ಮೊದಲ ವಾರದ ಗಳಿಕೆ ಕೇಳಿದ್ರೆ ಶಾಕ್ ಆಗ್ತೀರಾ. ಕೇವಲ 9 ಕೋಟಿ ಎಂದು ಅಂದಾಜಿಸಲಾಗಿದೆ. ಇದು ಐಶ್ವರ್ಯ ರೈ, ಅನಿಲ್ ಕಪೂರ್ ಸಿನಿಮಾ ಎಂಬ ಶೀರ್ಷಿಕೆ ಇದ್ದರೂ ಈ ಮಟ್ಟಕ್ಕೆ ಗಳಿಕೆ ಕಂಡಿರುವುದು ಭಾರಿ ಹಿನ್ನಡೆಯಾಗಿದೆ.

ತುಂಬಾ ಕಷ್ಟಪಟ್ಟಿದ್ದರು

ತುಂಬಾ ಕಷ್ಟಪಟ್ಟಿದ್ದರು

ಅಂದ್ಹಾಗೆ, ಫನ್ನಿ ಖಾನ್ ಚಿತ್ರಕ್ಕಾಗಿ ಐಶ್ವರ್ಯ ರೈ ಹೆಚ್ಚು ಗಮನ ಹರಿಸಿದ್ದರು. ಈ ಸಿನಿಮಾಗಾಗಿ ಬೇರೆ ಪ್ರಾಜೆಕ್ಟ್ ಗಳನ್ನ ಕೂಡ ಮುಂದಕ್ಕೆ ಹಾಕಿದ್ದರು. ಕೆಲವು ಸಿನಿಮಾವನ್ನ ಡ್ರಾಪ್ ಮಾಡಿದ್ದರು ಕೂಡ. ಆದ್ರೆ, ಕಥೆ ವಿಚಾರದಲ್ಲಿ ನಿರ್ದೇಶಕರು ಎಡವಿದ್ದು, ಪ್ರೇಕ್ಷಕರಿಗೆ ಇಷ್ಟವಾಗಿಲ್ಲ. ಹೀಗಾಗಿ, ಸಿನಿಮಾ ಫ್ಲಾಫ್ ಲಿಸ್ಟ್ ಗೆ ಸೇರಿದೆ. ಈ ಮೂಲಕ ಐಶ್ವರ್ಯ ರೈ ಕರಿಯರ್ ನಲ್ಲಿ ಫನ್ನಿಖಾನ್ ಕಳಪೆ ಸಿನಿಮಾ ಎಂದು ಘೋಷಿತವಾಗಿದೆ.

ಹಿಂದಿನ ಚಿತ್ರಗಳು ಅದೇ ಗತಿ

ಹಿಂದಿನ ಚಿತ್ರಗಳು ಅದೇ ಗತಿ

ಐಶ್ವರ್ಯ ರೈ ಅಭಿನಯದ ಈ ಹಿಂದಿನ ಚಿತ್ರಗಳಿಗೆ ಕೂಡ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ರಣ್ಬೀರ್ ಸಿಂಗ್, ಅನುಷ್ಕಾ ಶರ್ಮಾ ಜೊತೆ ಐಶ್ ಕಾಣಿಸಿಕೊಂಡಿದ್ದ 'ಹೇ ದಿಲ್ ಹೈ ಮುಷ್ಕಿಲ್' ಚಿತ್ರ ನೂರು ಕೋಟಿ ದಾಟಿತ್ತು ಅಷ್ಟೇ. ಅದಕ್ಕು ಹಿಂದೆ ರಿಲೀಸ್ ಆಗಿದ್ದ ಸರ್ಬಜಿತ್ ಸಿನಿಮಾ (33 ಕೋಟಿ) ಹಾಗೂ ಜಜ್ಬಾ ಸಿನಿಮಾ (31 ಕೋಟಿ) ಗಳಿಕೆ ಕಂಡಿತ್ತು ಅಷ್ಟೇ. ಇದನ್ನೆಲ್ಲಾ ಗಮನಿಸಿದ್ರೆ ಐಶ್ ಬೇಬಿಗೆ ಇದು ಕೆಟ್ಟಕಾಲ ಅನಿಸುತ್ತಿದೆ.

More from Filmibeat

English summary
Aishwarya Rai Bachchan might be getting multiple offers from the filmmakers; but the actress is failing back in proving her worth in the industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X