"ಸಲ್ಮಾನ್ ಖಾನ್ ಸೆಕ್ಸಿಯೆಸ್ಟ್ ಮತ್ತು ಸೌಂದರ್ಯವುಳ್ಳ ವ್ಯಕ್ತಿ" ಎಂದಿದ್ದ ಐಶ್ವರ್ಯಾ ರೈ: ವಿಡಿಯೋ ವೈರಲ್!

ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಕಳೆದೆರಡು ದಿನಗಳಿಂದ ಸುದ್ದಿಯಾಗುತ್ತಿದ್ದಾರೆ. ಈ ಬಾಲಿವುಡ್ ನಟಿ ಒಂದೊಂದೇ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳು ಈ ವಿಡಿಯೋವನ್ನೇ ಇಟ್ಟುಕೊಂಡು ಚರ್ಚೆ ಕೂಡ ಮಾಡುತ್ತಿದ್ದಾರೆ. ಅದರಲ್ಲೊಂದು ಇಂಟ್ರೆಸ್ಟಿಂಗ್ ವಿಡಿಯೋ ಮತ್ತೆ ಚರ್ಚೆಯಾಗುತ್ತಿದೆ.

ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಇಬ್ಬರೂ ಒಂದು ಕಾಲದಲ್ಲಿ ಲವ್‌ ಬರ್ಡ್ಸ್ ಆಗಿದ್ದರು ಅನ್ನೋದು ಗೊತ್ತೇ ಇದೆ. ಆದ್ರೀಗ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮನೆಯ ಸೊಸೆ. ಒಂದೇ ಚಿತ್ರರಂಗದಲ್ಲಿ ಇದ್ದರೂ, ತಮ್ಮ ಪ್ರೀತಿಯ ವಿಷಯದ ಬಗ್ಗೆ ಎಲ್ಲೂ ಬಹಿರಂಗವಾಗಿ ಮಾತಾಡಿಲ್ಲ.

Aishwarya Rai called Salman Khan the sexiest and most gorgeous man Throwback video goes viral

ಆರಂಭದ ದಿನಗಳಲ್ಲಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಸಲ್ಮಾನ್ ಖಾನ್ ಜೊತೆಗಿದ್ದ ಕೆಲವು ಫೋಟೊಗಳು ಹರಿದಾಡಿದ್ದವು. ಅದನ್ನು ಬಿಟ್ಟರೆ, ಇವರ ಲವ್‌ ಸ್ಟೋರಿ ಹಾಗೂ ಬ್ರೇಕಪ್ ಸ್ಟೋರಿಗಳು ಸದ್ದು ಮಾಡಿದ್ದೇ ಹೆಚ್ಚು. ಈಗ ಸಲ್ಮಾನ್ ಖಾನ್‌ ಬಗ್ಗೆ ಸಂದರ್ಶನವೊಂದರಲ್ಲಿ ಐಶ್ವರ್ಯಾ ರೈ ಹೇಳಿದ್ದ ವಿಡಿಯೋವೊಂದು ವೈರಲ್ ಆಗುತ್ತಿದೆ.

ಎರಡು ದಶಕಗಳ ಹಿಂದಿನ ಲವ್‌ ಬರ್ಡ್ಸ್

ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಇಬ್ಬರ ಪ್ರೀತಿ ಎರಡು ದಶಕಗಳ ಹಿಂದಿನ ಪ್ರೀತಿ. ಆಗಿನ್ನೂ ಐಶ್ವರ್ಯಾ ರೈ ಚಿತ್ರರಂಗದಲ್ಲಿ ನೆಲೆಯೂರಿದ್ದರು. ಆದರೆ, ಈ ಲವ್‌ ಸ್ಟೋರಿ ಹೆಚ್ಚು ದಿನ ಉಳಿಯಲಿಲ್ಲ. ಬ್ರೇಕಪ್ ಬಳಿಕ ಇಬ್ಬರೂ ತಮ್ಮ ದಾರಿ ಹಿಡಿದು ಹೋದ್ರು. ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ಇಬ್ಬರೂ ಬಂದು ಹೋಗಿದ್ದಾರೆ.

ನಿತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಗಾಟನೆ ವೇಳೆ ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಪ್ರತ್ಯೇಕವಾಗಿ ಆಗಮಿಸಿದ್ದರು. ಸಲ್ಮಾನ್ ಖಾನ್ ಒಂಟಿಯಾಗಿ ಬಂದರೆ, ಇತ್ತ ಐಶ್ವರ್ಯಾ ರೈ ಬಚ್ಚನ್ ಪುತ್ರಿಯೊಂದಿಗೆ ಆಗಮಿಸಿದ್ದರು. ಇವರನ್ನು ನೋಡಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಆಕ್ಟಿವ್ ಆಗಿದ್ದು, ಹಳೆ ವಿಡಿಯೋ ಒಂದನ್ನು ಶೇರ್ ಮಾಡುತ್ತಿದ್ದಾರೆ.

Aishwarya Rai called Salman Khan the sexiest and most gorgeous man Throwback video goes viral

ಸಲ್ಮಾನ್ ಖಾನ್ ಸೆಕ್ಸಿಯೆಸ್ಟ್ ವ್ಯಕ್ತಿ

ಸೋಶಿಯಲ್ ಮೀಡಿಯಾದಲ್ಲಿ ಐಶ್ವರ್ಯಾ ರೈ ಮಾಜಿ ಪ್ರಿಯಕರ ಸಲ್ಮಾನ್ ಖಾನ್ ಬಗ್ಗೆ ಆಡಿದ ಮಾತೊಂದು ವೈರಲ್ ಆಗುತ್ತಿದೆ. ಹಲವು ವರ್ಷಗಳ ಹಿಂದೆ ಸಿಮಿ ಗರೆವಾಲ್ ಅವರೊಂದಿಗಿನ ಸಂದರ್ಶನದಲ್ಲಿ ಭಾಗವಹಿಸಿದ್ದರು. ಆ ವೇಳೆ ಐಶ್ವರ್ಯಾಗೆ " ಬಾಲಿವುಡ್‌ನಲ್ಲಿರುವ ಸೆಕ್ಸಿಯೆಸ್ಟ್ ಮತ್ತು ಸೌಂದರ್ಯವುಳ್ಳ ವ್ಯಕ್ತಿ ಯಾರು?" ಎಂದು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಐಶ್ವರ್ಯಾ ರೈ ನಾಚಿ ನೀರಾಗಿದ್ದರು.

ಕೆಲವು ಸೆಕೆಂಡ್‌ಗಳ ಆಲೋಚನೆ ಮಾಡಿದ ಬಳಿಕ " ಸರಿ.. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಪುರುಷರ ಪಟ್ಟಿಯನ್ನು ನೋಡುವುದಾದರೆ, ನಿಸ್ಸಂದೇಹವಾಗಿ ಆ ವ್ಯಕ್ತಿಯ ಹೆಸರನ್ನು ತೆಗೆದುಕೊಳ್ಳೋಣ- ಸಲ್ಮಾನ್" ಎಂದು ಐಶ್ವರ್ಯಾ ರೈ ಬಚ್ಚನ್ ಹೇಳುತ್ತಾರೆ. ಈ ವಿಡಿಯೋವನ್ನೇ ಈಗ ವೈರಲ್ ಮಾಡಲಾಗುತ್ತಿದೆ.

ವಿಡಿಯೋ ಬಗ್ಗೆ ಏನಂತಾರೆ ಫ್ಯಾನ್ಸ್?

ಐಶ್ವರ್ಯಾ ರೈ ಸಂದರ್ಶನ ಈ ಚಿಕ್ಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ. ಸಲ್ಮಾನ್ ಖಾನ್ ಅಭಿಮಾನಿಗಳು ಈ ವಿಡಿಯೋ ಬಗ್ಗೆ ಚರ್ಚೆಯನ್ನೂ ಮಾಡುತ್ತಿದ್ದಾರೆ. ಒಬ್ಬರು " ಆಗ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದರು" ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು " ನನಗೆ ಅನಿಸುತ್ತೆ ಸಲ್ಮಾನ್ ಖಾನ್ ಅನ್ನು ಡೇಟಿಂಗ್ ಮಾಡುತ್ತಿದ್ದ ವೇಳೆ ಹೇಳಿದ್ದು" ಎಂದು ಇಬ್ಬರು ಕಮೆಂಟ್ ಮಾಡುತ್ತಿದ್ದಾರೆ.

ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದರು. ಆದರೆ, ಯಾಕೆ ಅನ್ನೋದನ್ನು ಇಬ್ಬರೂ ಇದೂವರೆಗೂ ಬಿಟ್ಟುಕೊಟ್ಟಿಲ್ಲ. ಸಲ್ಮಾನ್ ಖಾನ್ ಆಗಲಿ, ಐಶ್ವರ್ಯಾ ರೈ ಬಚ್ಚನ್ ಆಗಲಿ ಈ ಬಗ್ಗೆ ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿಲ್ಲ.

More from Filmibeat

English summary
Aishwarya Rai called Salman Khan the sexiest and most gorgeous man Throwback video goes viral, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X