ಮರಳಿ ಮನೆಗೆ ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯ

ಬಾಲಿವುಡ್‌ನ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಕುಟುಂಬ ಕೊರೊನಾ ವೈರಸ್ ಸಂಕಿಗೆ ಒಳಗಾಗಿದ್ದರಿಂದ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಜಯಾ ಬಚ್ಚನ್ ಹೊರತುಪಡಿಸಿ ಉಳಿದ ನಾಲ್ವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಅಮಿತಾಬ್, ಅಭಿಷೇಕ್, ಐಶ್ವರ್ಯಾ ಹಾಗೂ ಅವರ ಮಗಳು ಆರಾಧ್ಯ ನಾಲ್ವರೂ ಆಸ್ಪತ್ರೆಗೆ ದಾಖಲಾಗಿದ್ದರು.

Recommended Video

ದರ್ಶನ್ ಅಭಿಮಾನಿಗಳು ಫುಲ್ ಹ್ಯಾಪಿ | Roberrt Poster | Filmibeat Kannada

ಆಸ್ಪತ್ರೆಗೆ ದಾಖಲಾಗಿ 15 ದಿನಗಳ ಬಳಿಕ ಐಶ್ವರ್ಯಾ ರೈ ಬಚ್ಚನ್ ಮತ್ತು ಆರಾಧ್ಯಾ ಬಚ್ಚನ್ ಇಬ್ಬರೂ ಸಂಪೂರ್ಣವಾಗಿ ಚೇತರಿಸಿಕೊಂಡು ಮನೆಗೆ ಹಿಂದಿರುಗಿದ್ದಾರೆ. ಅವರಿಗಿಂತ ಒಂದು ದಿನ ಮೊದಲೇ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಇಬ್ಬರೂ ಇನ್ನೂ ಆಸ್ಪತ್ರೆಯಲ್ಲಿಯೇ ಇದ್ದಾರೆ. ಮುಂದೆ ಓದಿ.

ನೆಗೆಟಿವ್ ಬಂದಿದೆ

ನೆಗೆಟಿವ್ ಬಂದಿದೆ

ಪತ್ನಿ ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯಾ ಇಬ್ಬರಲ್ಲಿಯೂ ಕೊರೊನಾ ವೈರಸ್ ತಪಾಸಣೆಯಲ್ಲಿ ನೆಗೆಟಿವ್ ಬಂದಿರುವುದಾಗಿ ಅಭಿಷೇಕ್ ಬಚ್ಚನ್ ಮಾಹಿತಿ ನೀಡಿದ್ದಾರೆ. ಆದರೆ ತಂದೆಯೊಂದಿಗೆ ತಾವಿನ್ನೂ ಆಸ್ಪತ್ರೆಯಲ್ಲಿ ಇರುವುದಾಗಿ ಹೇಳಿದ್ದಾರೆ.

ಇಬ್ಬರೂ ಮನೆಗೆ ವಾಪಸ್

ಇಬ್ಬರೂ ಮನೆಗೆ ವಾಪಸ್

ನಿಮ್ಮೆಲ್ಲರ ನಿರಂತರ ಪ್ರಾರ್ಥನೆ ಹಾಗೂ ಶುಭ ಹಾರೈಕೆಗಳಿಗೆ ಧನ್ಯವಾದಗಳು. ಈ ಋಣ ತೀರಿಸಲಾಗದ್ದು. ಐಶ್ವರ್ಯಾ ಮತ್ತು ಆರಾಧ್ಯಾ ಇಬ್ಬರಲ್ಲಿಯೂ ನೆಗೆಟಿವ್ ವರದಿ ಬಂದಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅವರು ಮನೆಗೆ ಮರಳಿದ್ದಾರೆ. ನಾನು ಮತ್ತು ತಂದೆ ಇಬ್ಬರೂ ವೈದ್ಯಕೀಯ ಸಿಬ್ಬಂದಿಯ ಆರೈಕೆಯಲ್ಲಿ ಆಸ್ಪತ್ರೆಯಲ್ಲಿಯೇ ಉಳಿದುಕೊಂಡಿದ್ದೇವೆ ಎಂದು ಅಭಿಷೇಕ್ ಬಚ್ಚನ್ ತಿಳಿಸಿದ್ದಾರೆ.

ವಾರದ ಬಳಿಕ ಆಸ್ಪತ್ರೆಗೆ ದಾಖಲು

ವಾರದ ಬಳಿಕ ಆಸ್ಪತ್ರೆಗೆ ದಾಖಲು

ಅಭಿಷೇಕ್ ಮತ್ತು ಅಮಿತಾಬ್ ಬಚ್ಚನ್ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದರಿಂದ ಜುಲೈ 11ರಂದು ಆಸ್ಪತ್ರೆಗೆ ಕರೆತರಲಾಗಿತ್ತು. ಮರುದಿನ ಐಶ್ವರ್ಯಾ ರೈ ಹಾಗೂ ಆರಾಧ್ಯಾಳ ತಪಾಸಣೆಯ ವರದಿ ಬಂದಿದ್ದು, ಇಬ್ಬರಲ್ಲಿಯೂ ಪಾಸಿಟಿವ್ ಇತ್ತು. ಆದರೆ ಒಂದು ವಾರ ಅವರಿಬ್ಬರೂ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದರು. ಜುಕೈ 17ರಂದು ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದರು.

ನಿವಾಸದ ಸೀಲ್‌ಡೌನ್ ತೆರವು

ನಿವಾಸದ ಸೀಲ್‌ಡೌನ್ ತೆರವು

ಜಯಾ ಬಚ್ಚನ್ ಹಾಗೂ ಕುಟುಂಬದ ಇತರೆ ಸದಸ್ಯರಲ್ಲಿ ಕೊರೊನಾ ವೈರಸ್ ನೆಗೆಟಿವ್ ಬಂದಿತ್ತು. ಹೀಗಾಗಿ ಮುಂಬೈನ ಜಲ್ಸಾ ನಿವಾಸವನ್ನು ಮುಂಬೈ ಪಾಲಿಕೆ ಸೀಲ್ ಮಾಡಿತ್ತು. ಜತೆಗೆ ಬಚ್ಚನ್ ಮಾಲೀಕತ್ವದ ಇನ್ನೂ ಮೂರು ಬಂಗಲೆಗಳನ್ನು ಸೀಲ್ ಡೌನ್ ಮಾಡಲಾಗಿತ್ತು. ಜುಲೈ 26ರಂದು ಜಲ್ಸಾ ನಿವಾಸದ ತಡೆಗೋಡೆಗಳನ್ನು ತೆರವುಗೊಳಿಸಲಾಗಿತ್ತು.

More from Filmibeat

English summary
Aishwarya Rai and her daughter Aaradhya tested negative for Coronavirus and Discharged from hospital, Abhishek Bachchan tweeted.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X