ಐಶ್ವರ್ಯ ರೈ ತದ್ರೂಪಿ ಪಾಕಿಸ್ತಾನದ ಆಮ್ನಾ ಇಮ್ರಾನ್ 2021 ಸೃಷ್ಟಿಸಿದ ಸಂಚಲನವೇನು?

ಕಳೆದ ವರ್ಷ ಭಾರತದಲ್ಲಿ ಅಲ್ಲ ಪಾಕಿಸ್ತಾನದಲ್ಲಿ ಐಶ್ವರ್ಯ ರೈ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದ್ದರು. ಕಳೆದ ಮೂರು ವರ್ಷಗಳಿಂದ ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ಬಚ್ಚನ್ ಒಂದೇ ಒಂದು ಸಿನಿಮಾದಲ್ಲಿ ನಟಿಸಿಲ್ಲ. ಆದರೂ, ಪಾಕಿಸ್ತಾನದಲ್ಲಿ ಹವಾ ಹುಟ್ಟಿಸಿದ್ದು ಹೇಗೆ? ಅನ್ನುವ ಪ್ರಶ್ನೆ ಹುಟ್ಟುವುದು ಸಹಜ. ಆದರೆ, 2021ರಲ್ಲಿ ಪಾಕಿಸ್ತಾನದಲ್ಲಿ ಐಶ್ವರ್ಯ ರೈ ಹೆಸರು ಸಂಚಲನ ಸೃಷ್ಟಿಸಿದ್ದು ನೂರಕ್ಕೆ ನೂರರಷ್ಟು ನಿಜ.

2021ರಲ್ಲಿ ಐಶ್ವರ್ಯ ರೈ ಬಚ್ಚನ್ ಅಂತಹದ್ದೇನು ಮಾಡಿದರು. ಭಾರತದಲ್ಲಿ ಸುದ್ದಿಯಾಗದೇ ಪಾಕಿಸ್ತಾನದಲ್ಲಿ ಸದ್ದು ಮಾಡಿದ್ದು ಯಾಕೆ? ಪ್ರಶ್ನೆ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಮೂಡುತ್ತದೆ. ಆದರೆ, ಪಾಕ್‌ನಲ್ಲಿ ಸಂಚಲ ಸೃಷ್ಟಿಸಿದ್ದು ಐಶ್ವರ್ಯ ರೈ ಅಲ್ಲ, ಬದಲಿಗೆ ಐಶ್ವರ್ಯ ರೈ ರೀತಿಯೇ ಕಾಣುವ ತ್ರದೂಪಿ. ಹಾಗಿದ್ದರೆ, ಐಶ್ವರ್ಯ ರೈ ತದ್ರೂಪಿ ಯಾರು? ಆಕೆ ಸೃಷ್ಟಿಸಿದ ಸಂಚಲನವೇನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಐಶ್ವರ್ಯ ರೈ ತ್ರದೂಪಿ ಆಮ್ನಾ ಇಮ್ರಾನ್

ಐಶ್ವರ್ಯ ರೈ ತ್ರದೂಪಿ ಆಮ್ನಾ ಇಮ್ರಾನ್

2021 ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನದ ಆಮ್ನಾ ಇಮ್ರಾನ್ ರಾತ್ರೋ ರಾತ್ರಿ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಳು. ನೋಡಲು ಥೇಟ್ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ರಂತಯೇ ಕಾಣುವ ಆಮ್ನಾ ಇಮ್ರಾನ್ ಕಂಡು ನೆಟ್ಟಿಗರು ಫುಲ್ ಥ್ರಿಲ್ ಆಗಿದ್ದರು. ಇಲ್ಲಿದ ಪಾಕಿಸ್ತಾನದಲ್ಲಿ ಈಕೆ ಸೋಶಿಯಲ್ ಮೀಡಿಯಾದ ಪ್ರಭಾವಿಗಳ ಪಟ್ಟಿ ಸೇರಿದ್ದಾಳೆ. ಇದೇ ಆಮ್ನಾ ಇಮ್ರಾನ್ ಭಾರತದಲ್ಲೂ ಐಶ್ವರ್ಯ ರೈ ಬಚ್ಚನ್ ತದ್ರೂಪಿ ಎನ್ನುವ ಕಾರಣಕ್ಕೆ ಸಂಚಲ ಸೃಷ್ಟಿಸಿದ್ದಳು.

ಆಮ್ನಾಗೆ 27 ಸಾವಿರಕ್ಕೇರಿದ ಫಾಲೋವರ್ಸ್

ಆಮ್ನಾಗೆ 27 ಸಾವಿರಕ್ಕೇರಿದ ಫಾಲೋವರ್ಸ್

ಆಮ್ನಾ ಇಮ್ರಾನ್ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸುವುದಕ್ಕೂ ಮುನ್ನ ಈಕೆಯನ್ನು ಇನ್‌ಸ್ಟಾಗ್ರಾಂನಲ್ಲಿ ಕೇವಲ 2 ಸಾವಿರ ಮಂದಿ ಫಾಲೋ ಮಾಡುತ್ತಿದ್ದರು. ಆದರೆ, ಇನ್ನೂ ಒಂದೂ ವರ್ಷವೂ ಕಳೆದಿಲ್ಲ. ಆಗಲೇ ಈಕೆಯ ಇನ್‌ಸ್ಟಾಗ್ರಾಂನಲ್ಲಿ ಸುಮಾರು 27 ಸಾವಿರ ಮಂದಿ ಫಾಲೋ ಮಾಡುತ್ತಿದ್ದಾರೆ. ಹೀಗಾಗಿ ಆಮ್ನಾ ಇಮ್ರಾನ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವೈರಲ್ ವರ್ಲ್ಡ್‌ ವೈಡ್ 2021 & 2022 ಎಂದು ಬರೆದುಕೊಂಡಿದ್ದಾರೆ.

ಐಶ್ವರ್ಯ ತದ್ರೂಪಿಗೆ ಭಾರತದ ನಂಟು

ಐಶ್ವರ್ಯ ತದ್ರೂಪಿಗೆ ಭಾರತದ ನಂಟು

ಐಶ್ವರ್ಯ ರೈ ತದ್ರೂಪಿ ಪಾಕಿಸ್ತಾನದ ನಾಗರೀಕಳಾಗಿದ್ದರೂ, ಈಕೆ ಭಾರತದ ನಂಟಿದೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಈಕೆ ಇಂಟರ್‌ನೆಟ್‌ನಲ್ಲಿ ಸೆನ್ಸೆಷನ್ ಆಗುತ್ತಿದ್ದಂತೆ ಭಾರತದೊಂದಿಗಿರುವ ನಂಟಿನ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಳು. "ನನ್ನ ತಂದೆ ಪಾಕಿಸ್ತಾನಿ, ಆದರೆ ಅವರ ಪೋಷಕರು ಭಾರತೀಯರಾಗಿದ್ದರು. ನನ್ನ ತಾಯಿ ಹಾಗೂ ಅವರ ಪೋಷಕರು ಆಫ್ಗಾನಿಸ್ತಾನದವರು. ನಾನು ಇಂಗ್ಲೀಷ್ ಮತ್ತು ಉರ್ದು ಭಾಷೆಯನ್ನು ಸುಲಲಿತವಾಗಿ ಮಾಡಬಲ್ಲೆ, ಪರ್ಷಿಯನ್ ಹಾಗೂ ಪಂಜಾಬಿ ಭಾಷೆಯ ಅರಿವಿದೆ." ಎಂದು ಆಮ್ನಾ ಇಮ್ರಾನ್ ತಿಳಿಸಿದ್ದಳು.

ಮಣಿರತ್ನಂ ಸಿನಿಮಾದಲ್ಲಿ ಐಶ್ವರ್ಯ ರೈ

ಮಣಿರತ್ನಂ ಸಿನಿಮಾದಲ್ಲಿ ಐಶ್ವರ್ಯ ರೈ

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ 'ಪೊನ್ನಿಯನ್ ಸೆಲ್ವನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದೊಡ್ಡ ತಾರಾ ಬಳಗವೇ ಇರುವ ಈ ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ. ವಿಕ್ರಂ, ಕಾರ್ತಿ, ಜಯಂ ರವಿ, ತ್ರಿಶಾ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್‌ಗಳು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಐಶ್ವರ್ಯ ರೈ ಬಚ್ಚನ್‌ರನ್ನು ಸಿನಿಮಾದಲ್ಲಿ ನೋಡಲು ಹಂಬಲಿಸುತ್ತಿರುವ ಅಭಿಮಾನಿಗಳಿಗೆ 'ಪೊನ್ನಿಯನ್ ಸೆಲ್ವನ್" ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ.

More from Filmibeat

English summary
Aishwarya Rai Pakistani duplicate Aamna Imran breaks internet. Pakistani social media sensation Aamna Imran Instagram profile says she is Viral Worldwide 2021 & 2022.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X