Maidaan Box Office:ಅಜಯ್ ದೇವಗನ್, ಪ್ರಿಯಾಮಣಿ ಸಿನಿಮಾ 'ಮೈದಾನ್' ರೆಸ್ಪಾನ್ಸ್ ಹೇಗಿದೆ? ಕಲೆಕ್ಷನ್ ಲೆಕ್ಕಾಚಾರವೇನು?

ಬಾಲಿವುಡ್‌ ಸಿನಿಮಾ 'ಮೈದಾನ್' ಈ ವರ್ಷ ನಿರೀಕ್ಷೆ ಹುಟ್ಟಿಸಿದ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ ಸ್ಪೋರ್ಟ್ಸ್ ಬಯೋಗ್ರಫಿಕಲ್ ಡ್ರಾಮ. ಫುಲ್‌ಬಾಲ್ ಕೋಚ್ ಪಾತ್ರದಲ್ಲಿ ಅಜಯ್ ದೇವಗನ್ ನಟಿಸಿದ್ದಾರೆ. ಇವರೊಂದಿಗೆ ದಕ್ಷಿಣ ಭಾರತದ ಬಹುಭಾಷಾ ನಟಿ ಪ್ರಿಯಾಮಣಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ದಕ್ಷಿಣ ಭಾರತೀಯರಿಗೂ ಈ ಸಿನಿಮಾ ಮೇಲೊಂದು ಕುತೂಹಲವಿತ್ತು.

'ಮೈದಾನ್' ಸಿನಿಮಾ ಸೈಯದ್ ಅಬ್ದುಲ್ ರಹೀಂ ಅವರ ಚರಿತ್ರೆಯನ್ನು ಆಧರಿಸಿದ ಸಿನಿಮಾ. 1952 ರಿಂದ 1962ರವರೆಗೆ ಭಾರತದ ಫುಲ್‌ಬಾಲ್ ಕೋಚ್ ಆಗಿದ್ದರು. ಅವರ ತರಬೇತಿಯಲ್ಲಿ ಭಾರತದ ಎರಡು ಚಿನ್ನದ ಪದಕವನ್ನು ಗೆದ್ದಿತ್ತು. ಹೀಗಾಗಿ 'ಮೈದಾನ್' ಸಿನಿಮಾ ಮತ್ತೊಂದು ಸಕ್ಸಸ್‌ಫುಲ್ ಸ್ಪೋರ್ಟ್ಸ್ ಡ್ರಾಮ ಆಗಬಹುದೆಂಬ ನಿರೀಕ್ಷೆಯನ್ನು ಬಿಡುಗಡೆಗೂ ಮುನ್ನವೇ ಹುಟ್ಟಾಕಿತ್ತು.

Maidaan box office collection day 1 prediction

ಇಂದು (ಏಪ್ರಿಲ್ 10) ಅಜಯ್ ದೇವಗನ್, ಪ್ರಿಯಾಮಣಿ ನಟನೆಯ 'ಮೈದಾನ್' ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಈದ್ ಹಬ್ಬದ ಹಿನ್ನೆಲೆಯಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾ ದೇಶಭಕ್ತಿ ಟಚ್ ಕೊಡಲಾಗಿದ್ದು, ವಿಶೇಷ ಪ್ರದರ್ಶನದಲ್ಲಿ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಕಾರಣಕ್ಕೆ ಮೊದಲ ದಿನ ಕಲೆಕ್ಷನ್ ಮೇಲೆ ಬಾಲಿವುಡ್ ಮಂದಿ ಕಣ್ಣಿಟ್ಟಿದ್ದಾರೆ.

ಅಡ್ವಾನ್‌ ಬುಕಿಂಗ್‌ ಪ್ರತಿಕ್ರಿಯೆ ನೀರಸ

ಈ ಹಿಂದೆ ಅಜಯ್ ದೇವಗನ್ ನಟಿಸಿದ 'ಸೈತಾನ್' ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಮಸ್ತ್ ರೆಸ್ಪಾನ್ಸ್ ಸಿಕ್ಕಿತ್ತು. ಇದೇ ಜೋಷನ್‌ನಲ್ಲಿ ಬೋನಿ ಕಪೂರ್ 'ಮೈದಾನ್' ರಿಲೀಸ್‌ಗೆ ಮುಂದಾಗಿದ್ದರು. ಅಡ್ವಾನ್ಸ್ ಬುಕಿಂಗ್ ಅನ್ನು ಓಪನ್ ಮಾಡಲಾಗಿತ್ತು. ಆದರೆ, ಅಡ್ವಾನ್ಸ್ ಬುಕಿಂಗ್‌ಗೆ ಪ್ರೇಕ್ಷಕರು ನೀರಸ ಪ್ರತಿಕ್ರಿಯೆ ನೀಡಿದ್ದಾರೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಅಡ್ವಾನ್ಸ್ ಬುಕಿಂಗ್ ಕೇವಲ 41 ಲಕ್ಷ ರೂಪಾಯಿ ಎಂದು ಹೇಳಲಾಗಿದೆ.

Maidaan box office collection day 1 prediction

ಡೇ 1 ಅಂದಾಜು ಕಲೆಕ್ಷನ್ ಎಷ್ಟು?

ಅಜಯ್ ದೇವಗನ್ ಅಂತ ಸ್ಟಾರ್ ನಟನ ಸಿನಿಮಾ ಬಗ್ಗೆ ಸಹಜವಾಗಿಯೇ ನೀರಿಕ್ಷೆ ದುಪ್ಪಟ್ಟು ಇರುತ್ತೆ. ಆದರೆ, ಅಡ್ವಾನ್ಸ್ ಬುಕಿಂಗ್ ಸ್ಲೋ ಇದ್ದಿದ್ದರಿಂದ ಮೊದಲ ದಿನ ಗಳಿಕೆ ಮೇಲೂ ಪರಿಣಾಮ ಬೀರಬಹುದು ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಹಾಕಿದ್ದಾರೆ. ಟ್ರೇಡ್ ಎಕ್ಸ್‌ಪರ್ಟ್ ಸಮಿತ್ ಕಡೆಲ್ ಪ್ರಕಾರ, 'ಮೈದಾನ್' ಮೊದಲ ದಿನ ಅಂದಾಜು ಗಳಿಕೆ 10 ಕೋಟಿ ರೂಪಾಯಿಯಿಂದ 12 ಕೋಟಿ ರೂಪಾಯಿ ಅಂತರದಲ್ಲಿ ಕಲೆಕ್ಷನ್ ಮಾಡಬಹುದು ಎಂದು ಹೇಳಿದ್ದಾರೆ.

'ಸೈತಾನ್' ಕಲೆಕ್ಷನ್ ಎಷ್ಟಾಗಿತ್ತು?

'ಮೈದಾನ್'ಗೂ ಮುನ್ನ ತೆರೆಕಂಡಿದ್ದ ಅಜಯ್ ದೇವಗನ್ ನಟಿಸಿದ 'ಸೈತಾನ್' ಸಿನಿಮಾದ ಮೊದಲ ದಿನ ಕಲೆಕ್ಷನ್ 14.75 ಕೋಟಿ ರೂಪಾಯಿ ಆಗಿತ್ತು. ಹೀಗಾಗಿ 'ಸೈತಾನ್' ಕಲೆಕ್ಷನ್ ಅನ್ನು ಹಿಂದಕ್ಕ ಬಹುದಾ? ಅನ್ನೋ ಪ್ರಶ್ನೆ ಎದ್ದಿದೆ. ಆದರೆ, ನಾಳೆ (ಏಪ್ರಿಲ್ 11) ಈದ್ ಇರುವುದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್‌ಗೆ ಬರುವ ಸಾಧ್ಯತೆಯಿದೆ. ಅಲ್ಲದೆ, ವೀಕೆಂಡ್‌ಗಳಲ್ಲಿ ಉತ್ತಮ ಗಳಿಕೆ ಆಗಬಹುದೆಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ನೀರಿಕ್ಷೆ ಮಾಡಿದ್ದಾರೆ.

ಅಕ್ಷಯ್ ಸಿನಿಮಾಗೆ ಪೈಪೋಟಿ

'ಮೈದಾನ್' ಸಿನಿಮಾ ನೋಡಿದವರು ಉತ್ತಮ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಲೆಕ್ಷನ್‌ನಲ್ಲಿ ಏರಿಕೆ ಆಗಬಹುದೆಂಬ ನಿರೀಕ್ಷೆಯಿದೆ. ಆದರೆ, ನಾಳೆ (ಏಪ್ರಿಲ್ 11) ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಅಭಿನಯದ 'ಬಡೇ ಮಿಯ್ಯಾ ಚೋಟೆ ಮಿಯ್ಯಾ' ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಈ ಎರಡು ಸಿನಿಮಾಗಳು ಕ್ಲಾಶ್ ಆಗುವ ಸಾಧ್ಯತೆಯಿದೆ.

More from Filmibeat

English summary
Ajay Devgn Priyamani starrer movie Maidaan box office collection day 1 prediction report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X