ಪಾನ್ ಮಸಾಲಾಕ್ಕಿಂತ ಇಮ್ಯುನಿಟಿ ಬೂಸ್ಟರ್ ಬೇಕಾ?: ಟ್ರೋಲ್ ಆದ ಅಜಯ್ ದೇವಗನ್

ಸಣ್ಣದೊಂದು ಸಂಗತಿ ಸಿಕ್ಕರೂ ನೆಟ್ಟಿಗರು ಸಿನಿಮಾ ತಾರೆಯರನ್ನು ಹಿಗ್ಗಾಮುಗ್ಗಾ ಜಾಲಾಡಿಬಿಡುತ್ತಾರೆ. ನೂರಾರು ಮೀಮ್‌ಗಳನ್ನು ಮಾಡಿ ಟ್ರೋಲ್ ಮಾಡುತ್ತಾರೆ. ಒಳ್ಳೆಯದು, ಕೆಟ್ಟದ್ದು ಯಾವುದಾದರೂ ಸರಿ. ಅವರಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಯಾವಾಗಲೂ ಟ್ರೋಲಿಗರಿಗೆ ಸಾಕಷ್ಟು ಆಹಾರ ಒದಗಿಸುತ್ತಿರುತ್ತಾರೆ.

Recommended Video

Darshan,ಆಷಾಢ ಶುಕ್ರವಾರ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ನಟ ದರ್ಶನ್ | Filmibeat Kannada

ಪಾನ್ ಮಸಾಲಾದ ಜಾಹೀರಾತಿನ ಕಾರಣಕ್ಕೆ ಅಜಯ್ ದೇವಗನ್ ಈ ಹಿಂದೆ ವಿಪರೀತ ಟ್ರೋಲ್‌ಗೆ ಒಳಗಾಗಿದ್ದರು. ಈಗ ಮತ್ತೊಂದು ಪದಾರ್ಥವೊಂದನ್ನು ಅವರು ಪ್ರಚಾರ ಮಾಡಿದ್ದಾರೆ. ಅದು ಕಂಡಿದ್ದೇ ತಡ, ಮೀಮ್ ಪುಟಗಳು ಪುಟಿದೆದ್ದಿವೆ. ನಕ್ಕು ನಕ್ಕು ಹುಣ್ಣಾಗಿಸುವ ಮೀಮ್‌ಗಳನ್ನು ಮಾಡಿ ಹರಿಬಿಡುತ್ತಿವೆ. ಇತ್ತೀಚೆಗೆ ನಟಿ ಪ್ರಾಚಿ ದೇಸಾಯಿ ಕೂಡ ತಮ್ಮನ್ನು ಮರೆಬಿಟ್ಟಿದ್ದೀರಿ ಎಂದು ಅಜಯ್ ದೇವಗನ್ ಅವರ ಕಾಳೆದಿದ್ದರು. ಈಗ ಅಜಯ್ ದೇವಗನ್ ಟ್ರೋಲ್ ಆಗುತ್ತಿರುವುದು ಯಾವ ಕಾರಣಕ್ಕೆ? ಮುಂದೆ ಓದಿ...

ಮನೆಯಿಂದಲೇ ಪ್ರಚಾರ

ಮನೆಯಿಂದಲೇ ಪ್ರಚಾರ

ಇತ್ತೀಚೆಗೆ ನಟ, ನಟಿಯರು ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದಾರೆ ಎಂದು ಅನೇಕರು ಭಾವಿಸಿದ್ದಾರೆ. ಆದರೆ ಮನೆಯಲ್ಲಿಯೇ ಕುಳಿತು ಅವರು ವಿವಿಧ ಉತ್ಪನ್ನಗಳ ಜಾಹೀರಾತು ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ಮೂಲಕ ದೊಡ್ಡ ಮೊತ್ತದ ಹಣ ಸಂಪಾದಿಸುತ್ತಿದ್ದಾರೆ. ಅವರಲ್ಲಿ ಅಜಯ್ ದೇವಗನ್ ಕೂಡ ಒಬ್ಬರು.

ಇಮ್ಯುನಿಟಿ ಬೂಸ್ಟರ್

ಇಮ್ಯುನಿಟಿ ಬೂಸ್ಟರ್

ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಇಮ್ಯುನಿಟಿ ಬೂಸ್ಟರ್ ಔಷಧವೊಂದನ್ನು ಅಜಯ್ ದೇವಗನ್ ಪ್ರಚಾರ ಮಾಡುತ್ತಿದ್ದಾರೆ. ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಮೇಲೆ ಭಾರಿ ಪರಿಣಾಮ ಉಂಟಾಗಿದೆ. ಇದು ಆನ್‌ಲೈನ್‌ನಲ್ಲಿ ಸಿಗಲಿದೆ. ನೀವು ಪ್ರಯತ್ನಿಸಲು ಸಿದ್ಧರಿದ್ದರೆ ತರಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ಅಜಯ್ ಸೀಕ್ರೆಟ್ ವಿಮಲ್ ಅಲ್ಲವೇ?

ಅಜಯ್ ಸೀಕ್ರೆಟ್ ವಿಮಲ್ ಅಲ್ಲವೇ?

ಇದನ್ನು ಕಂಡಿದ್ದೇ ತಡ, ನೆಟ್ಟಿಗರು ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಈ ಹಿಂದೆ ಪಾನ್ ಮಸಾಲಾದ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಅಜಯ್, ಅವರ ಇಮ್ಯುನಿಟಿಯ ಸೀಕ್ರೆಟ್ ಇಡೀ ದೇಶಕ್ಕೆ ಗೊತ್ತು. ಅದು ವಿಮಲ್ ಪಾನ್ ಮಸಾಲಾ ಎಂದು ಕೆಲವರು ಲೇವಡಿ ಮಾಡಿದ್ದಾರೆ. ವಿಮಲ್ ಕೂಡ ಇಮ್ಯುನಿಟಿ ಹೆಚ್ಚಿಸಬಲ್ಲದೇ? ಎಂದು ಕೆಲವರು ಪ್ರಶ್ನಿಸಿದ್ದಾರೆ.

ಬೋಲ್ ಬಚ್ಚನ್ ಚಿತ್ರ

ಬೋಲ್ ಬಚ್ಚನ್ ಚಿತ್ರ

ಇತ್ತೀಚೆಗೆ ನಟಿ ಪ್ರಾಚಿ ದೇಸಾಯಿ ಕೂಡ ಅಜಯ್ ದೇವಗನ್ ಅವರನ್ನು ಕೆಣಕಿದ್ದರು. ಆದರೆ ಇದು ಪಾನ್ ಮಸಾಲಾ ಅಥವಾ ಇಮ್ಯುನಿಟಿ ಬೂಸ್ಟರ್ ಜಾಹೀರಾತಿನ ಕಾರಣಕ್ಕೆ ಅಲ್ಲ. 'ಬೋಲ್ ಬಚ್ಚನ್' ಚಿತ್ರಕ್ಕೆ ಎಂಟು ವರ್ಷ ತುಂಬಿದ ಸಂದರ್ಭದಲ್ಲಿ ಅಜಯ್ ದೇವಗನ್ ಒಂದು ಪೋಸ್ಟ್ ಹಾಕಿದ್ದರು. 'ಬಚ್ಚನ್ಸ್ ಮಾತನಾಡುವಾಗ ನಾನು ಕೇಳಿಸಿಕೊಳ್ಳುತ್ತೇನೆ (ಮುಖ್ಯವಾಗಿ ಅಮಿತ್‌ಜಿ) ಎಂದು ಬೋಲ್ ಬಚ್ಚನ್‌ ಚಿತ್ರದ ಕೆಲವು ಫೋಟೊಗಳನ್ನು ಹಾಕಿದ್ದ ಅವರು, ಅದಕ್ಕೆ ಅಭಿಷೇಕ್ ಬಚ್ಚನ್, ಅಮಿತಾಬ್ ಬಚ್ಚನ್ ಮತ್ತು ನಿರ್ದೇಶಕ ರೋಹಿತ್ ಶೆಟ್ಟಿ ಅವರನ್ನು ಟ್ಯಾಗ್ ಮಾಡಿದ್ದರು.

ಕಾಲೆಳೆದ ಪ್ರಾಚಿ

ಕಾಲೆಳೆದ ಪ್ರಾಚಿ

ಆದರೆ, ಅಜಯ್ ದೇವಗನ್ ಅವರ ಪೋಸ್ಟ್‌ನಲ್ಲಿ, ಚಿತ್ರದಲ್ಲಿ ಅವರ ತಂಗಿಯಾಗಿ ಮತ್ತು ಅಭಿಷೇಕ್ ಬಚ್ಚನ್ ಪ್ರೇಯಸಿಯಾಗಿ ನಟಿಸಿದ್ದ ಪ್ರಾಚಿ ದೇಸಾಯಿ ಅವರ ಪ್ರಸ್ತಾಪವೇ ಇರಲಿಲ್ಲ. ಇದನ್ನು ಕಂಡು ಪ್ರಾಚಿ, ಆಸಿನ್, ಕೃಷ್ಣ ಅಭಿಷೇಕ್, ಅರ್ಚನಾ ಪೂರಣ್ ಸಿಂಗ್, ಅಸ್ರಾನ್ ಜಿ, ನೀರಜ್ ವೊಹ್ರಾ, ಜೀತು ವರ್ಮಾ ಮತ್ತು ಚಿತ್ರದಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ಉಲ್ಲೇಖಿಸುವುದನ್ನು ಮರೆತಿದ್ದೀರಿ ಎನಿಸುತ್ತದೆ ಎಂದು ಟ್ವೀಟ್ ಮಾಡಿದ್ದರು.

More from Filmibeat

English summary
Memes were created on Bollywood actor Ajay Devgn for promoting Immunity booster as he was advertising pan masala.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X