ಅಜಯ್ VS ಅಕ್ಷಯ್ ; 09ನೇ ಬಾರಿ 'ಪಾನ ಮಸಾಲ' ಸ್ಟಾರ್ಸ್ ಮುಖಾಮುಖಿ, ಗೆಲ್ಲೋದು ಯಾರು..?

ಹೆಚ್ಚೇನಿಲ್ಲ.. ಕಳೆದ 'ಎರಡು ವರ್ಷ'ದಲ್ಲಿ ಹತ್ ಹತ್ರ 'ಎರಡು ಡಜನ್' ಸಿನಿಮಾಗಳನ್ನ ಮಾಡಿದವರು ''ಅಕ್ಷಯ್ ಕುಮಾರ್''. ಆದರೆ ಆ 'ಹನ್ನೆರಡ'ರಲ್ಲಿ ಗೆದ್ದಿದ್ದು ಕೇವಲ 'ಎರಡು' ಮಾತ್ರ. ಅದರಲ್ಲಿಯೂ ಒಂದು 'ಸಾಧಾರಣ' ಗೆಲುವು. ಇನ್ನೊಂದು 'ಅಸಾಧಾರಣ' ಗೆಲುವು. ಹೀಗಾಗಿಯೇ ಅಕ್ಷಯ್ ಕುಮಾರ್ ಗೆ 'ಅದೃಷ್ಟ' ಕೈ ಕೊಟ್ಟಿದೆ ಎಂದು ಬಾಲಿವುಡ್ಡಿಗೆ ಬಾಲಿವುಡೇ ಮಾತನಾಡುತ್ತಿದೆ. ಇದೇ ಸಮಯದಲ್ಲಿ ಅಕ್ಷಯ್ ಕುಮಾರ್ ಅಭಿನಯದ 'ಬಡೇ ಮಿಯಾ ಚೋಟೆ ಮಿಯಾ' ಇದೇ ಏಪ್ರಿಲ್ ಹತ್ತರಂದು ತೆರೆಗೆ ಬರುತ್ತಿದೆ.

ನಿಜಾ. ಈಗಾಗಲೇ ಬಿಡುಗಡೆಯಾಗಿರುವ 'ಬಡೇ ಮಿಯಾ ಚೋಟೆ ಮಿಯಾ' ಚಿತ್ರದ ತುಣುಕುಗಳು ಚಿತ್ರದ ಮೇಲಿನ ನಿರೀಕ್ಷೆಯನ್ನ ಹೆಚ್ಚಿಸಿವೆ. ಇನ್ನೂ ಸಿನಿಮಾದಲ್ಲಿ ಕೇವಲ 'ಅಕ್ಷಯ್' ಮಾತ್ರ ಅಲ್ಲ 'ಟೈಗರ್ ಶ್ರಾಫ್' ಕೂಡ ಇದ್ದಾರೆ. ಇವರಷ್ಟೇ ಅಲ್ಲ 'ಸೌತ್' ಸಿನಿಪ್ರಿಯರನ್ನ ಸೆಳೆಯಲು 'ಪೃಥ್ವಿರಾಜ್ ಸುಕುಮಾರನ್' ಕೂಡ ಇದ್ದಾರೆ. ಇನ್ನೂ 'ಗ್ಲ್ಯಾಮರ್' ಗೆ ಚಿತ್ರದಲ್ಲಿ ಕಡಿಮೆ ಇಲ್ಲ. 'ಮಾನುಷಿ ಚಿಲ್ಲರ್' ಹಾಗೂ 'ಅಲಯಾ,ಎಫ್' ಈ ಜವಾಬ್ದಾರಿಯನ್ನ ವಹಿಸಿಕೊಂಡಿದ್ದಾರೆ. ಒಂದರ್ಥದಲ್ಲಿ ಮನರಂಜನೆಯ ಕಂಪ್ಲೀಟ್ ಪ್ಯಾಕೇಜ್ ಇಲ್ಲಿದೆ.

ಈ ಎಲ್ಲ ಕಾರಣಗಳಿಂದ 'ಬಡೇ ಮಿಯಾ ಚೋಟೆ ಮಿಯಾ' ಬಾಕ್ಸಾಫೀಸ್ ನಲ್ಲಿ ಗೆದ್ದೇ ಗೆಲ್ಲುತ್ತೆ ಎಂಬ ಭರವಸೆ ಕೂಡ ತಂಡದಲ್ಲಿದೆ. ಆ ಭರವಸೆಯ ಜೊತೆ ಹಗಲಿರುಳು ಚಿತ್ರದ 'ಪ್ರಚಾರ'ವನ್ನೂ ಕೂಡ 'ಖಿಲಾಡಿ' ಬಳಗ ಮಾಡುತ್ತಿದೆ.ಆದರೆ ನೆನಪಿರಲಿ ಈ ದಾರಿ ಅಂದುಕೊಂಡಷ್ಟು ಸುಲಭ ಇಲ್ಲ. ಯಾಕೆಂದರೆ ಅವತ್ತೇ 'ಅಜಯ್ ದೇವಗನ್' ತಮ್ಮ ಹುಡುಗರ ಜೊತೆ ಬಾಲಿವುಡ್ ನ ಬಾಕ್ಸಾಫೀಸ್ ನ 'ಮೈದಾನ'ಕ್ಕೆ ಕಣಕ್ಕಿಳಿಯಲಿದ್ದಾರೆ.

ಹೌದು, ಅಜಯ್ ದೇವಗನ್ ಅಭಿನಯದ 'ಮೈದಾನ್' ಸಿನಿಮಾ ಅಕ್ಷಯ್ ಕುಮಾರ್ ಅಭಿನಯದ 'ಬಡೇ ಮಿಯಾ ಚೋಟೆ ಮಿಯಾ' ಎದುರು ತೆರೆಗೆ ಬರುತ್ತಿದೆ. ಇನ್ನೂ ಅಜಯ್ ದೇವಗನ್ ಅವರದ್ದು ಸದ್ಯಕ್ಕೆ 'ಶುಕ್ರದಸೆ' ನಡೆಯುತ್ತಿದೆ. ಮೊನ್ನೆಯಷ್ಟೇ ಬಿಡುಗಡೆಯಾದ 'ಶೈತಾನ್' ನೂರೈವತ್ತು ಕೋಟಿಯ ಗಡಿಯನ್ನ ದಾಟಿದೆ. 25ನೇ ದಿನದತ್ತ ಮುನ್ನುಗ್ಗುತ್ತಿದೆ. ಅನೇಕ ಕಡೆ ಇವತ್ತು ಕೂಡ 'ಹೌಸ್ ಫುಲ್' ಪ್ರದರ್ಶನವನ್ನ ಕಾಣುತ್ತಿದೆ.

ಹೀಗಾಗಿ ಸತ್ಯ ಕಥೆಯನ್ನ ಆಧರಿಸಿದ ತಮ್ಮ 'ಮೈದಾನ್' ಚಿತ್ರವನ್ನ ಜಗತ್ತಿಗೆ ಪರಿಚಯಿಸಲು ಬೇಕಾದ ವಾತಾವರಣ ಅಜಯ್ ದೇವಗನ್ ಪಾಲಿಗೆ ನಿರ್ಮಾಣವಾಗಿದೆ ಅನ್ನುವ ಮಾತು 'ಬಾಲಿವುಡ್' ನಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ 'ಬಡೇ ಮಿಯಾ ಚೋಟೆ ಮೀಯಾ' ಚಿತ್ರಕ್ಕೆ ಮೊದಲ ದಿನ 'ಬ್ಲಾಕ್ ಬಸ್ಟರ್' ಓಪನಿಂಗ್ ಸಿಕ್ಕರೂ ಕೊನೆಯದಾಗಿ 'ಪ್ರತಿಷ್ಠೆ'ಯ 'ಮೈದಾನ'ದಲ್ಲಿ ಗೆಲುವಿನ 'ಬಾವುಟ' ನೆಡುವುದು ಮಾತ್ರ 'ಅಜಯ್ ದೇವಗನ್' ಎಂಬ ಅಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಇವರಿಬ್ಬರ ಸದ್ಯದ 'ಟ್ರ್ಯಾಕ್ ರೆಕಾರ್ಡ್' ಜೊತೆ ಇತಿಹಾಸದಲ್ಲಿ ದಾಖಲಾದ 'ರಿಪೋರ್ಟ್ ಕಾರ್ಡ್' ಕೂಡ ಇನ್ನೊಂದು ಕಾರಣ ಅನ್ನುವುದು ನಿಮಗೆ ಗೊತ್ತಿರಲಿ.

08 ಬಾರಿ ಮುಖಾಮುಖಿಯಾಗಿದ್ದಾರೆ ಅಜಯ್ -ಅಕ್ಷಯ್..!

ಅಜಯ್ ದೇವಗನ್ ಹಾಗೂ ಅಕ್ಷಯ್ ಕುಮಾರ್ ಜೊತೆಯಲ್ಲಿ 'ಪಾನ್ ಮಸಾಲ' ಜಾಹೀರಾತನ್ನ ಮಾಡಿರಬಹುದು. 'ಖಾಕಿ' ಸೇರಿ ಕೆಲ ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರಬಹುದು. ಆದರೆ ಇವರಿಬ್ಬರ ನಡುವಿನ 'ಸ್ಟಾರ್ ವಾರ್' ಅಥವಾ 'ಫ್ಯಾನ್ ವಾರ್' ಗೆ ಬಹುದೊಡ್ಡ ಇತಿಹಾಸ ಬಾಲಿವುಡ್ ನಲ್ಲಿದೆ.

ಹೌದು, ಸನ್ 1998ರ ಮಾಹೆಯಲ್ಲಿ 'ಅಜಯ್ ದೇವಗನ್' ಹಾಗೂ 'ಅಕ್ಷಯ್ ಕುಮಾರ್' ಮೊದಲ ಬಾರಿ ಎದುರು ಬದುರಾಗಿದ್ದರು. ಅವತ್ತು 'ಅಜಯ್ ದೇವಗನ್' ಹಾಗೂ ಕಾಜೋಲ್ ಅಭಿನಯದ 'ಪ್ಯಾರ್ ತೋ ಹೋನಾ ಹಿ ಥಾ' ಚಿತ್ರದ ಎದುರು 'ಅಕ್ಷಯ್ ಕುಮಾರ್' ಅಭಿನಯದ 'ಅಂಗಾರೆ' ತೆರೆಗೆ ಬಂದಿತ್ತು ಭಾರೀ ಭಯಂಕರ ಸೋಲನ್ನು ಕಂಡಿತ್ತು. ಆ ನಂತರ ಈ ಸೋಲಿನ ಸೇಡನ್ನ ಅಕ್ಕಿ 2000ನೇ ಇಸ್ವಿಯಲ್ಲಿ ತೀರಿಸಿಕೊಂಡರು. ಆ ವರ್ಷ ಬಂದ 'ಧಡ್ಕನ್' ಅಜಯ್ ದೇವಗನ್ ಅಭಿನಯದ 'ದಿವಾನೆ' ಚಿತ್ರವನ್ನ ಮಕಾಡೆ ಮಲಗಿಸಿತ್ತು.

ಇನ್ನೂ ಅದೇ ವರ್ಷ ಇವರು ಇಬ್ಬರ ಮತ್ತೊಂದು ಸಿನಿಮಾ, ಒಟ್ಟಿಗೆ ಬಿಡುಗಡೆಯಾಗಿದ್ದವು. ಆ ಸಿನಿಮಾಗಳ ಹೆಸರು 'ರಾಜು ಚಾಚಾ' ಹಾಗೂ 'ಕಿಲಾಡಿ 420'. ವಿಶೇಷ ಅಂದರೆ ಈ ಸಮರದಲ್ಲಿ 'ವಿಜಯ ಲಕ್ಷ್ಮೀ' ಇಬ್ಬರಿಗೂ ಒಲಿದಿರಲಿಲ್ಲ. ಪುನಹ ಇಂಥಹದ್ದೇ ಭಂಡ ಧೈರ್ಯವನ್ನ ಇಬ್ಬರು 2004ರಲ್ಲಿ ಮತ್ತೆ ಮತ್ತೆ ಮಾಡಿದ್ದರು. ಆಗಲೂ ಕೂಡ ಇಬ್ಬರ ನಡುವಿನ ಪಂದ್ಯ 'ಟೈ' ಆಗಿತ್ತು. ಅಕ್ಷಯ್ ಕುಮಾರ್ ಅಭಿನಯದ 'ಅಬ್ ತುಮ್ಹಾರೇ ಹವಾಲೇ ವತನ್ ಸಾಥಿಯೋ' ಸಿನಿಮಾವನ್ನ 'ದೇಶವಾಸಿ'ಗಳು ನೋಡಲಿಲ್ಲ. ಅಜಯ್ ದೇವಗನ್ ಅಭಿನಯದ 'ರೇನ್ ಕೋಟ್' ಚಿತ್ರವನ್ನು ಜನ ಮುಗಿ ಬಿದ್ದು ನೋಡಲಿಲ್ಲ.

ಆ ನಂತರ 2009ರಲ್ಲಿ ಅಜಯ್ ದೇವಗನ್ ಅಭಿನಯದ 'ಆಲ್ ದಿ ಬೆಸ್ಟ್' ಸಿನಿಮಾ ಅಕ್ಷಯ್ ಕುಮಾರ್ ಅಭಿನಯದ 'ಬ್ಲೂ'ಗೆ ಸೆಡ್ಡು ಹೊಡೆದಿತ್ತು. 2010ರಲ್ಲಿ 'ಗೋಲ್ ಮಾಲ್ 3', 'ಆಕ್ಷನ್ ರಿಪ್ಲೈ' ಚಿತ್ರವನ್ನ ಬಗ್ಗು ಬಡಿದಿತ್ತು. ಇನ್ನೂ ಅದೇ ವರ್ಷ ಬಂದಿದ್ದ 'ತೂನ್ ಪೂರ್ ಕಾ ಸೂಪರ್ ಹೀರೋ' ಹಾಗೂ 'ತೀಸ್ ಮಾರ್ ಖಾನ್' ಚಿತ್ರಗಳನ್ನ 'ಅಜಯ್ ದೇವಗನ್' ಹಾಗೂ 'ಅಕ್ಷಯ್ ಕುಮಾರ್' ಮರೆತಿದ್ದರು ಮರೆತಿರಬಹುದು.

ಹೀಗೆ ಕಾಲ ಕಾಲಕ್ಕೆ ಬಾಕ್ಸಾಫೀಸ್ ನಲ್ಲಿ ಸೆಣಸಾಡುತ್ತಾನೇ ಬಂದ ಇಬ್ಬರು, 2022ರಲ್ಲಿ ಕೊನೆಯದಾಗಿ ಮುಖಾಮುಖಿಯಾಗಿದ್ದರು. 'ರಾಮ್ ಸೇತು' ಹಾಗೂ 'ಥ್ಯಾಂಕ್ ಗಾಡ್' ಚಿತ್ರಗಳ ಸೋಲಿನಿಂದ ಮುಖವನ್ನೂ ಮುಚ್ಚಿಕೊಂಡಿದ್ದರು. ಇಂಥ ಅಜಯ್ ದೇವಗನ್ ಹಾಗೂ ಅಕ್ಷಯ್ ಕುಮಾರ್ ಈ 'ಏಪ್ರಿಲ್ ಹತ್ತರಂದು' 'ಈದ್' ಹಬ್ಬದ ನೆಪದಲ್ಲಿ ಮತ್ತೊಮ್ಮೆ ಅಕ್ಕಪಕ್ಕದ ಚಿತ್ರಮಂದಿರಗಳಿಂದ ಸ್ಪರ್ಧೆಯನ್ನ ಮಾಡಲಿದ್ದಾರೆ. ಹೀಗಾಗಿ ಈ ಬಾರಿ ಗೆಲ್ಲುವುದು ಯಾರು..? ಅನ್ನುವ ಕುತೂಹಲ ಅನೇಕರನ್ನ ಈಗ ಕಾಡುತ್ತಿದೆ. 'ಮೈದಾನ್' ಹಾಗೂ 'ಬಡೇ ಮಿಯಾ ಚೋಟೆ ಮಿಯಾ' ಚಿತ್ರಗಳ ಪೈಕಿ ಯಾವ ಚಿತ್ರ ಪ್ರೇಕ್ಷಕರ ಹೃದಯ ಗೆಲ್ಲುತ್ತೆ ಎಂಬ ವಿಚಾರದಲ್ಲಿ 'ಬಾಲಿವುಡ್' ನಲ್ಲಿ 'ಚಾಯ್ ಪೇ ಚರ್ಚಾ' ಕೂಡ ನಡೆಯುತ್ತಿದೆ. ಬಾಕ್ಸಾಫೀಸ್ ವಿವರದ ಸಮೇತ ವಿಜೇತರ ಹೆಸರು ಸದ್ಯದಲ್ಲಿಯೇ ಬಹಿರಂಗವಾಗಲಿದೆ. ಅಲ್ಲಿಯವರೆಗೆ ಜಸ್ಟ್ ಚಿಲ್...

More from Filmibeat

English summary
Ajay Devgn And Akshay Kumar To Clash For Ninth Time At Bollywood Box Office. Their Upcoming Films Maidaan And Bade Miya Chote Miya To Release On April 10
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X