»   » ಲಾಕ್ಮೆ ಫ್ಯಾಷನ್ ವೀಕ್ ನಲ್ಲಿ ಅಕ್ಷರಾ ಅಂದಚೆಂದ ಬಹಿರಂಗ

ಲಾಕ್ಮೆ ಫ್ಯಾಷನ್ ವೀಕ್ ನಲ್ಲಿ ಅಕ್ಷರಾ ಅಂದಚೆಂದ ಬಹಿರಂಗ

Posted By:
Subscribe to Filmibeat Kannada

ಬಾಲಿವುಡ್ ಚಿತ್ರ 'ಶಮಿತಾಬ್' ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ಕಮಲ್ ಹಾಸನ್ ಪುತ್ರಿ ಅಕ್ಷರಾ ಹಾಸನ್ ಇದೇ ಮೊದಲ ಬಾರಿಗೆ ಬೆಕ್ಕಿನ ಹೆಜ್ಜೆ ಹಾಕಿ ಎಲ್ಲರ ಚಿತ್ತ ತಮ್ಮತ್ತ ಸೆಳೆದಿದ್ದಾರೆ. ಮುಂಬೈನಲ್ಲಿ ನಡೆಯುತ್ತಿರುವ ಲಾಕ್ಮೆ ಫ್ಯಾಷನ್ ವೀಕ್ ಸಮ್ಮರ್ ರಿಸಾರ್ಟ್ಸ್ 2015ರಲ್ಲಿ ತಮ್ಮ ಸೌಂದರ್ಯದ ಮೂಲಕ ಎಲ್ಲರ ಗಮನಸೆಳೆದರು.

ಅವರ ಆಕರ್ಷಕ ಉಡುಪನ್ನು ಖ್ಯಾತ ಡಿಸೈನರ್ ಕನಿಕ್ಕಾ ಸಲ್ಲುಜಾ ವಿನ್ಯಾಸಪಡಿಸಿದ್ದಾರೆ. ಅಕ್ಷರಾ ಹಾಸನ್ ಹೆಜ್ಜೆ ಹಾಕುತ್ತಿದ್ದರೆ ಎಲ್ಲರ ಕಣ್ಣುಗಳು ಅವರ ಮೇಲೆ ನೆಟ್ಟಿದ್ದವು. ಐದು ದಿನಗಳ ಕಾಲ ನಡೆಯುವ ಈ ಫ್ಯಾಷನ್ ವೀಕ್ ಗೆ ಹೋಟೆಲ್ ಪಲ್ಲಾಡಿಯಂ ವೇದಿಕೆಯಾಗಿದೆ.

Akshara Haasan sizzles at Lakme Fashion Week

ಈ ಬಗ್ಗೆ ಮಾತನಾಡಿರುವ ಅಕ್ಷರಾ, "ಕನಿಕ್ಕಾ ಡಿಸೈನ್ಸ್ ಅಂದರೆ ನನಗೆ ತುಂಬಾ ಇಷ್ಟ. ಡಿಫರೆಂಟ್ ಆಗಿ ಪ್ರತ್ಯೇಕವಾಗಿರುವ ಅವರ ಡಿಸೈನ್ ಎಂದರೆ ನನಗೆಷ್ಟೋ ಇಷ್ಟ. ಅವರು ನನ್ನ ಫ್ಯಾಶನ್ ಸೋಲ್ ಮೇಟ್" ಎಂದಿದ್ದಾರೆ.

ಇನ್ನು ಅಕ್ಷರಾ ಹಾಸನ್ ಅವರ ಸಿನಿಮಾ ವಿಚಾರಕ್ಕೆ ಬಂದರೆ, ತಮಿಳು ನಟ ಧನುಷ್, ಅಮಿತಾಬ್ ಬಚ್ಚನ್ ಜೊತೆಯಾಗಿ ಅಭಿನಯಿಸಿರುವ 'ಶಮಿತಾಬ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟು, ಚೊಚ್ಚಲ ಚಿತ್ರದಲ್ಲೇ ಎಲ್ಲರ ಮೆಚ್ಚುಗೆ ಪಾತ್ರರಾದರು. ರು.40 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಶಮಿತಾಬ್ ಚಿತ್ರ ಬಾಕ್ಸ್ ಆಫೀಸಲ್ಲಿ ರು.82 ಕೋಟಿ ಬಾಚಿದೆ.

ಆರ್. ಬಾಲ್ಕಿ ನಿರ್ದೇಶನದ ಈ ಚಿತ್ರಕ್ಕೆ ಇಳಯರಾಜಾ ಸಂಗೀತ ಇದೆ. 'ಶಮಿತಾಬ್' ಚಿತ್ರದ ಬಳಿಕ ಅಕ್ಷರಾ ಹಾಸನ್ ಯಾವುದೇ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ. ಕಥೆಗಳ ಆಯ್ಕೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ ಅಕ್ಷರಾ ಹಾಸನ್. ಪ್ರಸ್ತುತ ಎರಡು ಪ್ರಾಜೆಕ್ಟ್ ಗಳಲ್ಲಿ ಅವರು ಬಿಜಿಯಾಗಿದ್ದಾರೆ. ಶೀಘ್ರದಲ್ಲೇ ಅವರು ಅಭಿನಯಿಸಲಿರುವ ಚಿತ್ರಗಳ ವಿವರಗಳು ಬಹಿರಂಗವಾಗಲಿವೆ. (ಏಜೆನ್ಸೀಸ್)

English summary
After making her big screen debut with Shamitabh, Akshara Haasan stepped onto the fashion ramp for the first time as a showstopper for Kanikka Salluja, whom she called a 'fashion soulmate'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada