"ನಾನಿನ್ನೂ ಸತ್ತಿಲ್ಲ": ವಿರೋಧಿಗಳಿಗೆ ಸೋಲಿನ ಸುಳಿಗೆ ಸಿಲುಕಿರೋ ಅಕ್ಷಯ್ ಕುಮಾರ್ ತಿರುಗೇಟು
ಒಂದು ಸಮಯದಲ್ಲಿ ಬಾಲಿವುಡ್‌ನ ಮೋಸ್ಟ್ ಸಕ್ಸಸ್‌ಫುಲ್ ನಟ ಎನಿಸಿಕೊಂಡಿದ್ದ ಅಕ್ಷಯ್ ಕುಮಾರ್ ಈಗ ಸೋಲಿನ ಸುಳಿಗೆ ಸಿಲುಕಿದ್ದಾರೆ. ಬಾಲಿವುಡ್‌ನ ಈ ಸೂಪರ್‌ಸ್ಟಾರ್ ಇತ್ತೀಚೆಗೆ ನಟಿಸಿದ ಸಿನಿಮಾಗಳು ನಿರಂತರವಾಗಿ ಸೋಲು ಕಾಣುತ್ತಿದ್ದಾರೆ. ಅಕ್ಷಯ್ ಕುಮಾರ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುತ್ತಿವೆ.
ಕಳೆದ ಎರಡು ವರ್ಷಗಳಿಂದ ಅಕ್ಷಯ್ ಕುಮಾರ್‌ಗೆ ಗೆಲುವು ಅನ್ನೋದೇ ಸಿಕ್ಕಿಲ್ಲ. ಈ ಎರಡು ವರ್ಷಗಳಲ್ಲಿ ಸುಮಾರು 8 ಸಿನಿಮಾಗಳು ಸೋತಿವೆ. ಇದರಲ್ಲಿ ಕೆಲವು ಬಿಗ್ ಬಜೆಟ್ ಸಿನಿಮಾಗಳು ಕೂಡ ಸೇರಿಕೊಂಡಿವೆ. ಹಾಗಂತ ಅಕ್ಷಯ್ ಕುಮಾರ್ ಕೈಯಲ್ಲಿ ಸಿನಿಮಾಗಳೇನು ಕಮ್ಮಿಯಾಗಿಲ್ಲ. ಬಾಲಿವುಡ್‌ನ ಮತ್ತೊಂದು ಕಾಮಿಡಿ ಸಿನಿಮಾ 'ಖೇಲ್ ಖೇಲ್ ಮೇ'ದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಅಕ್ಷಯ್ ಕುಮಾರ್ ಜೊತೆ ಫರ್ದೀನ್ ಖಾನ್, ವಾಣಿ ಕಪೂರ್ ಸೇರಿದಂತೆ ಬಾಲಿವುಡ್‌ನ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿ ನಟಿಸುತ್ತಿದೆ. ಇತ್ತೀಚೆಗೆ ಇದೇ ಸಿನಿಮಾ ಟ್ರೈಲರ್ ಲಾಂಚ್ ಮಾಡಲಾಯಿತು. ಈ ವೇಳೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಸೋಲುತ್ತಿರುವ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಅಕ್ಷಯ್ ಕುಮಾರ್ "ನಾನಿನ್ನೂ ಸತ್ತಿಲ್ಲ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
'ಖೇಲ್ ಖೇಲ್ ಮೇ' ಸಿನಿಮಾದ ಟ್ರೈಲರ್ ಲಾಂಚ್ ಆದ ಬಳಿಕ ಚಿತ್ರತಂಡ ಮಾಧ್ಯಮಗಳೊಂದಿಗೆ ಸಂವಾದದಲ್ಲಿ ತೊಡಗಿತ್ತು. ಈ ವೇಳೆ ಪತ್ರಕರ್ತರು ಅಕ್ಷಯ್ ಕುಮಾರ್‌ಗೆ ಬ್ಯಾಕ್ ಟು ಬ್ಯಾಕ್ ಸೋಲಿನ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ವೇಳೆ ಅಕ್ಷಯ್ ಕುಮಾರ್ ಒಂದು ಚಿಕ್ಕ ಕಥೆಯನ್ನು ಹೇಳಿ, ಅವರ ವಿರೋಧಿಗಳು ಅವರನ್ನು ಮುಗಿಸುವವರೆಗೂ ಕೆಲಸ ಮಾಡುತ್ತಲೇ ಇರುತ್ತೇನೆ ಎಂದು ಹೇಳಿದ್ದಾರೆ.
ಅಕ್ಷಯ್ ಕುಮಾರ್ ಸಿನಿಮಾಗಳು ನಿರಂತರವಾಗಿ ಸೋಲುತ್ತಿರುವುದರಿಂದ ಕೆಲವರು ಇವರಿಗೆ ಕಳಿಸಿದ ಮೆಸೇಜ್ ಬಗ್ಗೆನೂ ಹೇಳಿಕೊಂಡಿದ್ದಾರೆ. "ನಿಮಗೆ ತುಂಬಾನೇ ಕೆಟ್ಟದಾಗಿದೆ. ಯೋಚನೆ ಮಾಡಬೇಡಿ ಮತ್ತೆ ವಾಪಸ್ ಬರುತ್ತೀರ" ಎಂದು ಹೇಳುತ್ತಿದ್ದಾರಂತೆ. ಅದಕ್ಕೆ ಅಕ್ಷಯ್ ಕುಮಾರ್ ನೀಡಿದ ಪ್ರತಿಕ್ರಿಯೆಯನ್ನು ತಮಾಷೆಯಾಗಿ ಹೇಳಿದ್ದಾರೆ. "ನಾನೆಲ್ಲಿ ಓಡಿ ಹೋಗಿದ್ದೇನೆ. ಇಲ್ಲದೇ ಇದ್ದೇನೆ. ನಾನಿನ್ನು ಸತ್ತಿಲ್ಲ." ಎಂದು ಹೇಳುತ್ತೇನೆ ಎಂದು ಅಕ್ಷಯ್ ಕುಮಾರ್ ಹೇಳಿಕೊಂಡಿದ್ದಾರೆ.

"ಏನೇ ಆದರೂ ನಾನು ಕೆಲಸ ಮಾಡುತ್ತಲೇ ಇರುತ್ತೇನೆ. ನಾನು ಗಳಿಸುತ್ತಿರುವ ಹಣವನ್ನೆಲ್ಲ ನಾನೇ ಪರಿಶ್ರಮದಿಂದಲೇ ಗಳಿಸುತ್ತಿದ್ದೇನೆ. ನಾನು ಯಾರ ಸಹಾಯವನ್ನೂ ಕೇಳಿಲ್ಲ. ನನ್ನನ್ನು ವಿರೋಧಿಸುವವರು ಸಾಯಿಸುವವರೆಗೂ ನಾನು ಕೆಲಸ ಮಾಡುತ್ತಲೇ ಇರುತ್ತೇನೆ" ಎಂದು ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ತಮ್ಮ ಸೋಲಿನ ಬಗ್ಗೆ ಹೇಳಿಕೊಂಡಿದ್ದಾರೆ.
ಅಕ್ಷಯ್ ಕುಮಾರ್ ನಟಿಸಿದ 8 ಸಿನಿಮಾಗಳು ಸೋಲುಂಡಿದ್ದರೂ, ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. 'ಖೇಲ್ ಖೇಲ್ ಮೆ' ಸಿನಿಮಾ ಇದೇ ಆಗಸ್ಟ್ 15ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ಜೊತೆಗೆ 'ಸ್ಕೈ ಫೋರ್ಸ್', 'ಜಾಲಿ ಎಲ್‌ಎಲ್‌ಬಿ', 'ವೆಲ್‌ಕಮ್ ಟು ದಿ ಜಂಗಲ್', 'ಶಂಕರ', 'ಹೇರಾ ಪೇರಿ 3' ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











