3 ದಿನಗಳಲ್ಲಿ 10 ಕೋಟಿ ಕಲೆಕ್ಷನ್ ಮಾಡೋಕೆ ಪರದಾಡಿದ 'ಸೆಲ್ಪಿ': ಅಕ್ಷಯ್ ಕುಮಾರ್ ಸಿನಿಮಾಗೆ ಹೀನಾಯ ಸೋಲು!
ಅಕ್ಷಯ್ ಕುಮಾರ್ ಮತ್ತೊಂದು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದೆ. ಕಳೆದ ಫೆಬ್ರವರಿ 24ರಂದು ಅಕ್ಷಯ್ ಕುಮಾರ್ ಹಾಗೂ ಇಮ್ರಾನ್ ಹಾಶ್ಮಿ ಸಿನಿಮಾ 'ಸೆಲ್ಫಿ' ರಿಲೀಸ್ ಆಗಿತ್ತು. ಈ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸೋತಿದೆ. ವೀಕೆಂಡ್‌ನಲ್ಲಿ ಕಲೆಕ್ಷನ್‌ನಲ್ಲಿ ಏರಿಕೆ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಈಗ ಅದೂ ಕೂಡ ಹುಸಿಯಾಗಿದ್ದು, ಅಕ್ಷಯ್ ಕುಮಾರ್ ವೃತ್ತಿ ಬದುಕಿನಲ್ಲಿಯೇ ಹೀನಾಯವಾಗಿ ಸೋಲುಂಡಿರುವ ಸಿನಿಮಾ ಎಂದು ಹಣೆಪಟ್ಟಿ ಹೊತ್ತುಕೊಂಡಿದೆ. ಸಿನಿಮಾ ಬಿಡುಗಡೆಯಾದ ಮೊದಲ ಮೂರು ದಿನಗಳು ಬಾಕ್ಸಾಫೀಸ್‌ನಲ್ಲಿ ಚಮತ್ಕಾರ ನಡೆದಿಲ್ಲ.
'ಸೆಲ್ಫಿ' ಅಕ್ಷಯ್ ಕುಮಾರ್ ವೃತ್ತಿ ಬದುಕಿನಲ್ಲಿ ಹೀನಾಯವಾಗಿ ನಿರಂತರ ಸೋಲುಂಡ 5ನೇ ಸಿನಿಮಾ. ಮೊದಲ ದಿನದಿಂದಲೇ ಸಿನಿಮಾದ ಗಳಿಕೆಯಲ್ಲಿ ನೆಗೆಟಿವ್ ರಿಪೋರ್ಟ್ ಬಂದಿತ್ತು. ಹೀಗಾಗಿ ಮೂರು ದಿನಗಳಲ್ಲಿ ಬಹುಕೋಟಿಯ ಸಿನಿಮಾ ಕೇವಲ 10 ಕೋಟಿಯನ್ನು ಗಳಿಸಲೂ ಪರದಾಡುವಂತಹ ಸ್ಥಿತಿ ನಿರ್ಮಾಣ ಆಗಿದೆ. ಅಂದ್ಹಾಗೆ ಇದು, ಮಲಯಾಳಂ ನಟ ಪ್ರಥ್ವಿರಾಜ್ ಸುಕುಮಾರನ್ ಹಾಗೂ ಸೂರಜ್ ವೆಂಜರಮೂಡು ಅಭಿನಯದ 'ಡ್ರೈವಿಂಗ್ ಲೈಸೆನ್ಸ್' ಸಿನಿಮಾದ ರಿಮೇಕ್. ಮಲಯಾಳಂನಲ್ಲಿ ಈ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಆದರೆ, ಅದೇ ರಿಸಲ್ಸ್ 'ಸೆಲ್ಫಿ' ಸಿನಿಮಾಗೆ ಸಿಕ್ಕಿಲ್ಲ.

'ಸೆಲ್ಪಿ' 2023ಯಲ್ಲಿ ತೆರೆಕಂಡ ಅಕ್ಷಯ್ ಕುಮಾರ್ ಅಭಿನಯದ ಮೊದಲ ಸಿನಿಮಾ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅತ್ಯುತ್ತಮ ಬ್ಯುಸಿನೆಸ್ ಮಾಡಿಲ್ಲ. ಮೊದಲ ವಾರದಲ್ಲಿಯೇ ಈ ಸಿನಿಮಾ ಕಲೆಕ್ಷನ್ ಹಾಕಿದ ಬಜೆಟ್ ಆಸು-ಪಾಸಿನಲ್ಲೂ ಇಲ್ಲ. ಮೂರನೇ ದಿನ ಅಂದರೆ, ನಿನ್ನೆ(ಫೆಬ್ರವರಿ 26) 'ಸೆಲ್ಫಿ' ಕಲೆಕ್ಷನ್ ಕೇವಲ ಶೇ.13.47ರಷ್ಟು ಇದೆ. ಮೊದಲ 3 ದಿನಗಳ ಬಾಕ್ಸಾಫೀಸ್ ಕಲೆಕ್ಷನ್ ಹೀಗಿದೆ.
ಮೊದಲ ದಿನದ ಕಲೆಕ್ಷನ್ 2.5 ಕೋಟಿ ರೂ.
ಎರಡನೇ ದಿನದ ಕಲೆಕ್ಷನ್ 3.8 ಕೋಟಿ ರೂ.
ಮೂರನೇ ದಿನದ ಕಲೆಕ್ಷನ್ 3.89 ಕೋಟಿ ರೂ. (approx)
ಒಟ್ಟು 10.24 ಕೋಟಿ ರೂ.(approx)
ಒಂದ್ಕಡೆ ಶಾರುಖ್ ಸಿನಿಮಾ 'ಪಠಾಣ್' ಹೊಸ ಭರವಸೆಯನ್ನು ಮೂಡಿಸಿದ್ರೆ, ಇನ್ನೊಂದು ಕಡೆ ಅಕ್ಷಯ್ ಕುಮಾರ್ ಸಿನಿಮಾ ಸೋಲಿನ ಸುಳಿಗೆ ಸಿಲುಕಿವೆ. 'ಬಚ್ಚನ್ ಪಾಂಡೆ', ಸಾಮ್ರಾಟ್ ಪ್ರಥ್ವಿರಾಜ್','ರಕ್ಷಾ ಬಂಧನ್','ರಾಮ ಸೇತು' ಅಂತ ಅಕ್ಷಯ್ ಕುಮಾರ್ ಸಿನಿಮಾಗಳು ಹೀನಾಯವಾಗಿ ಸೋಲುಂಡಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಭಾರತ ಬಹುತೇಕ ರಾಜ್ಯಗಳಲ್ಲಿ ಈ ಸಿನಿಮಾ ಹೀನಾವಾಗಿ ಸೋಲುಂಡಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಸಿನಿಮಾವನ್ನು ನೋಡುವುದಕ್ಕೆ ಜನರು ಬರುತ್ತಿಲ್ಲ. ಅಲ್ಲದೆ ಹಾಕಿದ ಬಂಡವಾಳ ಕೂಡ ಕವರ್ ಆಗಿಲ್ಲ. ಇದು ಅಕ್ಷಯ್ ವೃತ್ತಿ ಬದುಕಿಗೆ ದೊಡ್ಡ ಹೊಡೆತವೆಂದೇ ಹೇಳಲಾಗುತ್ತಿದೆ.

2021ರಲ್ಲಿ ಅಕ್ಷಯ್ ಕುಮಾರ್ ಕೊನೆ ಬಾರಿ ಹಿಟ್ ಸಿನಿಮಾ ಕೊಟ್ಟಿದ್ದರು. ರೋಹಿತ್ ಶೆಟ್ಟಿ ನಿರ್ದೇಶನದ 'ಸೂರ್ಯವಂಶಿ' ಅಕ್ಷಯ್ ಕುಮಾರ್‌ಗೆ ಹಿಟ್ ಕೊಟ್ಟಿತ್ತು. ಅಲ್ಲಿಂದ ಇಲ್ಲಿವರೆಗೂ ಸುಮಾರು 8 ಸಿನಿಮಾಗಳು ಬಾಕ್ಸಾಫೀಸ್ ಹಾಗೂ ಓಟಿಟಿ ಎರಡರಲ್ಲೂ ಸೋತು ಮಕಾಡೆ ಮಲಗಿವೆ. ಡಿಸ್ನಿ ಹಾಟ್‌ಸ್ಟಾರ್ ಓಟಿಟಿಯಲ್ಲಿ ತೆರೆಕಂಡಿದ್ದ 'ಅತ್ರಂಗಿ ರೇ' ಹಾಗೂ 'ಕಟ್‌ಪುತ್ಲಿ' ಸಿನಿಮಾಗಳೂ ಹೆಚ್ಚೇನು ಮೋಡಿ ಮಾಡಿಲ್ಲ. ಓಟಿಟಿ ವೇದಿಕೆಗೆ ಹೆಚ್ಚು ವೀವ್ಸ್ ಅನ್ನೇನು ತಂದುಕೊಟ್ಟಿಲ್ಲ.
ಅಕ್ಷಯ್ ಕುಮಾರ್ ಸತತ ಸೋಲಿನ ಸುಳಿಗೆ ಸಿಲುಕಿದ್ದರೂ, ಕೈಯಲ್ಲಿ 6 ಸಿನಿಮಾಗಳಿವೆ. ಅಕ್ಷಯ್ ಕರಿಯರ್‌ಗೆ ಹೊಸ ತಿರುವುಕೊಟ್ಟಿದ್ದ 'ಓ ಮೈ ಗಾಡ್' ಸಿನಿಮಾ ಎರಡನೇ ಅವತರಣಿಕೆ 'OMG 2' ಶೂಟಿಂಗ್ ನಡೆಯುತ್ತಿದೆ. ತಮಿಳಿನ ಸೂಪರ್ ಹಿಟ್ ಸಿನಿಮಾ 'ಸೂರರೈ ಪೋಟ್ರು' ಹಿಂದಿ ವರ್ಷನ್, 'ಕ್ಯಾಪ್ಸ್ಯೂಲ್ ಗಿಲ್', ಮರಾಠಿ ಸಿನಿಮಾ ಛತ್ರಪತಿ ಶಿವಾಜಿ ಬಯೋಫಿಕ್, 'ಬಡೇ ಮಿಯ್ಯಾ ಛೋಟೆ ಮಿಯ್ಯಾ' ಹಾಗೂ 'ಹೇರಾ ಪೇರಿ 3'ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಆ ಸಿನಿಮಾ ಶೂಟಿಂಗ್ ಈಗಾಗಲೇ ಶುರುವಾಗಿದೆ.


Click it and Unblock the Notifications











