ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಖರೀದಿಸಿದ 7.8 ಕೋಟಿ ಫ್ಲ್ಯಾಟ್‌ನಲ್ಲಿ ಏನೇನಿದೆ?

ಅಕ್ಷಯ್ ಕುಮಾರ್ ಸಿನಿಮಾಗಳಲ್ಲಷ್ಟೇ ಕಿಲಾಡಿ ಅಲ್ಲ. ರಿಯಲ್ ಲೈಫ್‌ನಲ್ಲಿ ಕಿಲಾಡಿನೇ. ಈ ನಟ ಮುಟ್ಟಿದ ಸಿನಿಮಾಗಳೆಲ್ಲಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿವೆ. ಒಂದೊಂದು ಸಿನಿಮಾ ಬಾಕ್ಸಾಫೀಸ್‌ನಲ್ಲಿ 250 ರಿಂದ 300 ಕೋಟಿ ದೋಚುವುದು ಗ್ಯಾರಂಟಿ. ಹೀಗಾಗಿ ಬಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್‌ಗೆ ಬೇಡಿಕೆ ಹೆಚ್ಚಿದೆ. ವರ್ಷಕ್ಕೆ ಕಮ್ಮಿ ಅಂದರೂ ಎರಡರಿಂದ ಮೂರು ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡುತ್ತೆ.

Recommended Video

Akshay Kumar only Indian in the top 100 richest celebrities list | Akshay Kumar | Forbes

ಅಕ್ಷಯ್ ಕುಮಾರ್ ಬಾಲಿವುಡ್‌ನ ಬ್ಯುಸಿ ಮತ್ತು ಶ್ರೀಮಂತ ನಟ. ದುಬಾರಿ ಸಂಭಾವನೆ ಪಡೆಯುವ ಈ ನಟ ದಾನದಲ್ಲಿ ಹೇಗೆ ಶೂರನೋ ಹಾಗೇ ಆಸ್ತಿ ಖರೀದಿಯಲ್ಲಿಯೂ ನಿಸ್ಸೀಮ. ಬಾಲಿವುಡ್ ಮೂಲಗಳ ಪ್ರಕಾರ ಅಕ್ಷಯ್ ಕುಮಾರ್ ಒಂದು ಸಿನಿಮಾ 150 ಕೋಟಿ ಸಂಭಾವನೆ ಪಡೆಯುತ್ತಾರೆ. ಹೀಗಾಗಿ ವರ್ಷಕ್ಕೆ ಒಂದಲ್ಲಾ ಒಂದು ಆಸ್ತಿಯನ್ನು ಖರೀದಿ ಮಾಡುತ್ತಲೇ ಇರುತ್ತಾರೆ. ಈ ವರ್ಷ ಕೂಡ ಮುಂಬೈನಲ್ಲಿ ದುಬಾರಿ ಏರಿಯಾದಲ್ಲೊಂದು 7.8 ಕೋಟಿ ಕೊಟ್ಟು ಫ್ಲ್ಯಾಟ್ ಖರೀದಿಸಿದ್ದಾರೆ. ಅದರ ವಿಶೇಷಗಳೇನು? ಅನ್ನುವ ಮಾಹಿತಿ ಇಲ್ಲಿದೆ.

ಅಕ್ಷಯ್ ಫ್ಲ್ಯಾಟ್ ಖರೀದಿಸಿದ್ದು ಯಾವಾಗ?

ಅಕ್ಷಯ್ ಫ್ಲ್ಯಾಟ್ ಖರೀದಿಸಿದ್ದು ಯಾವಾಗ?

ಅಕ್ಷಯ್ ಕುಮಾರ್ ಮುಂಬೈನ ಪಶ್ಚಿಮ ಖಾರ್ ಏರಿಯಾದಲ್ಲಿ ಫ್ಲ್ಯಾಟ್ ಅನ್ನು ಖರೀದಿ ಮಾಡಿದ್ದಾರೆ. ಜನವರಿ ಏಳರಂದು ಈ ಫ್ಲ್ಯಾಟ್ ನೋಂದಣಿ ಕೂಡ ಆಗಿದೆ. 1878 ಚದರ ಅಡಿಯ ಈ ಫ್ಲ್ಯಾಟ್‌ ಅಕ್ಷಯ್ ಕುಮಾರ್ ಆಸ್ತಿಗಳ ಪಟ್ಟಿ ಸೇರಿದೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ. ಅಕ್ಷಯ್ ಕುಮಾರ್ ಜಾಯ್ ಬಿಲ್ಡರ್ಸ್ ಅವರಿಂದ ಸುಮಾರು 7.8 ಕೋಟಿ ವೆಚ್ಚದ ಭವ್ಯ ಫ್ಲ್ಯಾಟ್ ಅನ್ನು ಖರೀದಿಸಿದ್ದಾರೆ. ಈ ಅಪಾರ್ಟ್ಮೆಂಟ್‌ಗೆ ಅಷ್ಟೊಂದು ಹಣ ನೀಡಿದ್ದು ಯಾಕೆ? ಅದರಲ್ಲಿ ಏನಿದೆ ವಿಶೇಷತೆ ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಅಕ್ಷಯ್ ಕುಮಾರ್ ಫ್ಲ್ಯಾಟ್ ಹೈಲೈಟ್ ಏನು?

ಅಕ್ಷಯ್ ಕುಮಾರ್ ಫ್ಲ್ಯಾಟ್ ಹೈಲೈಟ್ ಏನು?

ಅಕ್ಷಯ್ ಕುಮಾರ್ ಖರೀದಿಸಿದ ಜಾಯ್ ಬಿಲ್ಡರ್ಸ್ ವೈಬ್ ಸೈಟ್ ಜಾಯ್ ಲೆಜೆಂಟ್‌ನಲ್ಲಿ ಅವರ ಫ್ಲ್ಯಾಟ್‌ ಬಗ್ಗೆ ಮಾಹಿತಿ ನೀಡಲಾಗಿದೆ. ಇದರ ಪ್ರಕಾರ, ಇದು ಅಲ್ಟ್ರಾ ಮಾಡರ್ನ್ ಫ್ಲ್ಯಾಟ್ ಆಗಿದ್ದು, 3 ರಿಂದ 4 ಐಶಾರಾಮಿ ಬೆಡ್ ರೂಮ್ ಹೊಂದಿದೆ. ಆದರೆ, ಅಕ್ಷಯ್ ಖರೀದಿಸಿದ್ದು, ಮೂರು ಅಥವಾ ನಾಲ್ಕು ಬೆಡ್‌ ರೂಮಿನ ಫ್ಲ್ಯಾಟ್ ಅನ್ನುವುದು ತಿಳಿದು ಬಂದಿಲ್ಲ. ಈ ಫ್ಲ್ಯಾಟ್‌ನಲ್ಲಿ ಲಿವಿಂಗ್ ರೂಮ್, ಮಾಸ್ಟರ್ ಬೆಡ್ ರೂಮ್, ಗೆಸ್ಟ್‌ ರೂಮ್, ಮಕ್ಕಳಿಗೊಂದು ಬೆಡ್ ರೂಮ್, ಅಡುಗೆ ಮನೆ ಸೇರಿದಂತೆ ಇತರ ಸೌಲಭ್ಯಗಳನ್ನು ಹೊಂದಿದೆ.

ಅಕ್ಷಯ್ ಬಂಗಲೆ ಎಲ್ಲೆಲ್ಲಿ ಇದೆ?

ಅಕ್ಷಯ್ ಬಂಗಲೆ ಎಲ್ಲೆಲ್ಲಿ ಇದೆ?

ಅಕ್ಷಯ್ ಕುಮಾರ್ ಹಲವೆಡೆ ಬಂಗಲೆಯನ್ನು ಖರೀದಿ ಮಾಡಿದ್ದಾರೆ. ಸದ್ಯ ಮುಂಬೈನಲ್ಲಿ ಡುಪ್ಲೆಕ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿ ಟ್ವಿಂಕಲ್ ಖನ್ನಾ, ಪುತ್ರ ಆರವ್ ಹಾಗೂ ಪುತ್ರಿ ನಿತಾರಾ ಜೊತೆ ವಾಸವಿದ್ದಾರೆ. ಇದರ ಜೊತೆ ಇತ್ತೀಚೆಗೆ ಖರೀದಿಸಿದ 7.8 ಕೋಟಿ ಫ್ಲ್ಯಾಟ್ ಸೇರಿಕೊಂಡಿದೆ. ಜೊತೆಗೆ ಗೋವಾದಲ್ಲೊಂದು ಮನೆ ಹಾಗೂ ಮಾರಿಷಿಯಸ್‌ನಲ್ಲೊಂದು ಮನೆಯನ್ನು ಅಕ್ಷಯ್ ಕುಮಾರ್ ಖರೀದಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಅಕ್ಷಯ್ ಕೈಯಲ್ಲಿವೆ 8 ಸಿನಿಮಾಗಳು

ಅಕ್ಷಯ್ ಕೈಯಲ್ಲಿವೆ 8 ಸಿನಿಮಾಗಳು

ಅಕ್ಷಯ್ ಕುಮಾರ್ ಬಾಲಿವುಡ್‌ನ ಬ್ಯುಸಿ ನಟ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಅಕ್ಷಯ್ ಕುಮಾರ್ ಸಹಿ ಮಾಡುತ್ತಿದ್ದಾರೆ. ಸದ್ಯ 'ಬಚ್ಚನ್ ಪಾಂಡೆ' ಹಾಗೂ 'ಪೃಥ್ವಿರಾಜ್' ಸಿನಿಮಾ ಬಿಡುಗಡೆ ಸಜ್ಜಾಗಿ ನಿಂತಿವೆ. ಇದರೊಂದಿಗೆ ಆನಂದ್ ಎಲ್ ರಾಯ್ ನಿರ್ದೇಶನದ 'ರಕ್ಷಾ ಬಂಧನ್', ಅಭಿಶೇಕ್ ಶರ್ಮಾ ನಿರ್ದೇಶನದ 'ರಾಮ್ ಸೇತು', 'ಮಿಷನ್ ಸಿಂಡ್ರೆಲ್ಲಾ', 'ಓ ಮೈ ಗಾಢ್', 'ಗೂರ್ಕಾ' ಹಾಗೂ ಇಮ್ರಾನ್ ಹಾಶ್ಮಿ ಜೊತೆ 'ಸೆಲ್ಫಿ' ಸಿನಿಮಾದಲ್ಲಿ ಅಕ್ಷಯ್ ನಟಿಸುತ್ತಿದ್ದಾರೆ.

More from Filmibeat

English summary
Akshay Kumar has reportedly bought apartment in Mumbai cost is around 7.8 crore. Apartment is in Mumbai's Khar West area. The flat is on the 19th floor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X