twitter
    For Quick Alerts
    ALLOW NOTIFICATIONS  
    For Daily Alerts

    ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೂರ್ಯವಂಶಿ ಲೀಕ್

    |

    ಹೊಸ ಸಿನಿಮಾಗಳಿಗೆ ಪೈರಸಿ ದೊಡ್ಡ ತಲೆನೋವಾಗಿದೆ. ನೂರಾರು ಕೋಟಿ ಹಣ ಸುರಿದು ನಿರ್ಮಿಸಿರುವ ಸಿನಿಮಾ ಬಿಡುಗಡೆಯಾಗದ ಕೆಲವೇ ಗಂಟೆಗಳಲ್ಲಿ ಸೋರಿಕೆಯಾದ ಉದಾಹರಣೆಗಳು ಸಾಕಷ್ಟಿವೆ. ಇನ್ನು ಕೆಲವೊಮ್ಮೆ ಸಿನಿಮಾ ಬಿಡುಗಡೆಗೂ ಮುನ್ನವೇ ಇಡೀ ಸಿನಿಮಾ ಸೋರಿಕೆಯಾಗಿದ್ದೂ ಇದೆ.

    ಕೆಲವು ತಿಂಗಳ ಹಿಂದೆ ಕೆಜಿಎಫ್ ಟೀಸರ್ ಅಂದುಕೊಂಡಿದ್ದಕ್ಕಿಂತ ಮುನ್ನವೇ ಕಿಡಿಗೇಡಿಗಳು ಲೀಕ್ ಮಾಡಿದ್ದರು. ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸಿನಿಮಾ ಇನ್ನಿಲ್ಲದಂತೆ ಕಾಡುತ್ತಿರೋ ಈ ಸೋರಿಕೆ ಸಮಸ್ಯೆ ಇನ್ನೂ ನಿಂತಿಲ್ಲ. ಒಂದೂವರೆ ವರ್ಷದಿಂದ ಬಿಡುಗಡೆಗಾಗಿ ಕಾದು ಕೂತಿದ್ದ ಸೂರ್ಯವಂಶಿ ಒಂದೇ ಗಂಟೆಯಲ್ಲಿ ಲೀಕ್ ಆಗಿದೆ.

    ಅಕ್ಷಯ್ ಕುಮಾರ್, ಕತ್ರಿನಾ ಕೈಫ್ ನಟಿಸಿದ ಸೂರ್ಯವಂಶಿ ಸಿನಿಮಾ ದೀಪಾವಳಿ ಹಬ್ಬಕ್ಕೆ ಗ್ರ್ಯಾಂಡ್ ರಿಲೀಸ್ ಆಗಿತ್ತು. ನವೆಂಬರ್ 5ರಂದು ತೆರೆಕಂಡಿದ್ದ ಮಲ್ಟಿಸ್ಟಾರರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತೆ ಅನ್ನುವ ನಿರೀಕ್ಷೆಯಿತ್ತು. ಆದರೆ, ತೆರೆಕಂಡ ಒಂದು ಗಂಟೆಯಲ್ಲೇ ಸಿನಿಮಾ ಸೋರಿಕೆಯಾಗಿದೆ.

    ಥಿಯೇಟರ್‌ಗೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ಸೂರ್ಯವಂಶಿ ಸೋರಿಕೆ

    ಥಿಯೇಟರ್‌ಗೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ಸೂರ್ಯವಂಶಿ ಸೋರಿಕೆ

    ಸೂರ್ಯವಂಶಿ ಬಳ ದಿನಗಳಿಂದ ಬಿಡುಗಡೆಗಾಗಿ ಕಾದು ಕೂತಿದ್ದ ಸಿನಿಮಾ. ಅಕ್ಷಯ್ ಕುಮಾರ್, ಕತ್ರಿನಾ ಕೈಫ್ ಲೀಡ್ ರೋಲ್‌ನಲ್ಲಿ ನಟಿಸಿದ್ದರೆ, ಅಜಯ್ ದೇವಗನ್ ಹಾಗೂ ರಣ್‌ವೀರ್ ಸಿಂಗ್ ಕೀ ರೋಲ್‌ಗಳಲ್ಲಿ ಮಿಂಚಿದ್ದಾರೆ. ಇನ್ನು ಆಕ್ಷನ್ ಸಿನಿಮಾಗಳ ಸರದಾರ ರೋಹಿತ್ ಶೆಟ್ಟಿ ಸೂರ್ಯವಂಶಿ ಸಿನಿಮಾ ನಿರ್ದೇಶಿಸಿದ್ದಾರೆ. ರಿಲಯನ್ಸ್ ಎಂಟರ್‌ಟೈನ್ಮೆಂಟ್ ಈ ಸಿನಿಮಾ ನಿರ್ಮಿಸಿದ್ದು, ಒಂದೂವರೆ ವರ್ಷದಿಂದ ಬಿಡುಗಡೆಗಾಗಿ ಹೊಂಚು ಹಾಕಿತ್ತು. ಕೊನೆಗೂ ಕೊರೊನಾ, ಲಾಕ್‌ಡೌನ್‌ನಿಂದ ಮುಕ್ತಿ ಪಡೆದು ದೀಪಾವಳಿ ಹಬ್ಬಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಆದರೆ ತೆರೆಕಂಡ ಒಂದು ಗಂಟೆಯಲ್ಲೇ ಇಡೀ ಸಿನಿಮಾ ಲೀಕ್ ಆಗಿದೆ.

    ತಮಿಳ್‌ರಾಕರ್ಸ್, ಟೆಲಿಗ್ರಾಂನಲ್ಲಿ ಅಪ್ಲೋಡ್

    ತಮಿಳ್‌ರಾಕರ್ಸ್, ಟೆಲಿಗ್ರಾಂನಲ್ಲಿ ಅಪ್ಲೋಡ್

    150 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸೂರ್ಯವಂಶಿ ತಮಿಳ್‌ರಾಕರ್ಸ್, ಟೆಲೆಗ್ರಾಂ ಹಾಗೂ ಇತರೆ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ. ಸೂರ್ಯವಂಶಿಯ ಪುಲ್ ಹೆಚ್‌ಡಿ ಸಿನಿಮಾವನ್ನು ಲೀಕ್ ಮಾಡಿದ್ದು, ಚಿತ್ರತಂಡಕ್ಕೆ ಮೊದಲ ದಿನವೇ ಭಾರೀ ನಷ್ಟ ಆಗಿದೆ. ಬ್ಯಾಕ್ ಟು ಬ್ಯಾಕ್ ಹಬ್ಬವಿದ್ದರಿಂದ ಬಾಕ್ಸಾಫೀಸ್‌ನಲ್ಲಿ ಸೂರ್ಯವಂಶಿ ಧೂಳೆಬ್ಬಿಸುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಸಿನಿಮಾ ಸೋರಿಕೆಯಿಂದ ಸಿನಿಮಾ ಗಳಿಕೆ ಮೇಲೆ ಪರಿಣಾಮ ಬೀರುತ್ತೆ ಎಂದು ಅಂದಾಜಿಸಲಾಗಿದೆ.

    ಮೂರು ದಿನಗಳಲ್ಲಿ 100 ಕೋಟಿ ಗಳಿಸುವ ನಿರೀಕ್ಷೆಯಿತ್ತು

    ಮೂರು ದಿನಗಳಲ್ಲಿ 100 ಕೋಟಿ ಗಳಿಸುವ ನಿರೀಕ್ಷೆಯಿತ್ತು

    ಅಕ್ಷಯ್ ಕುಮಾರ್ ಸಿನಿಮಾ ಸಾಮಾನ್ಯ ದಿನಗಳಲ್ಲಿ 100 ರಿಂದ 200 ಕೋಟಿ ಗಳಿಕೆ ಮಾಡುತ್ತೆ. ಅದೇ ಹಬ್ಬದ ದಿನಗಳಲ್ಲಿ ಕೇವಲ ಮೂರು ದಿನಕ್ಕೆ 100 ಕೋಟಿ ಗಳಿಸಿದ ಉದಾಹರಣೆಗಳೂ ಇದೆ. ಇದೇ ಲೆಕ್ಕಾಚಾರದಲ್ಲಿ ಸೂರ್ಯವಂಶಿ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ದೀಪಾವಳಿ ರಜೆಯಲ್ಲಿ ವಾರಾಂತ್ಯಕ್ಕೆ 100 ಕೋಟಿ ಗಳಿಸುತ್ತೆ ಅನ್ನುವ ನಿರೀಕ್ಷೆಯಿದೆ. ಆದರೆ, ಇಡೀ ಸಿನಿಮಾ ಲೀಕ್ ಆಗಿರುವುದರಿಂದ ಸಿನಿಮಾದ ಗಳಿಕೆ ಮೇಲೆ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ.

    ರಜನಿ ಅಣ್ಣಾತೆ, ಸೂರ್ಯ ಜೈ ಭೀಮ್‌ಗೂ ಪೈರಸಿ ಕಾಟ

    ರಜನಿ ಅಣ್ಣಾತೆ, ಸೂರ್ಯ ಜೈ ಭೀಮ್‌ಗೂ ಪೈರಸಿ ಕಾಟ

    ಅಕ್ಷಯ್ ಕುಮಾರ್ ನಟಿಸಿದ ಸೂರ್ಯವಂಶಿ ಅಷ್ಟೇ ಅಲ್ಲ. ದೀಪಾವಳಿ ಹಬ್ಬಕ್ಕೆ ತೆರೆಕಂಡಿದ್ದ ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಅನ್ನಾತೆ ಕೂಡ ಪೈರಸಿ ಆಗಿದೆ. ಸೂರ್ಯ ನಟನೆಯ ಜೈ ಭೀಮ್ ಓಟಿಟಿಯಲ್ಲಿ ರಿಲೀಸ್ ಮಾಡಲಾಗಿತ್ತು. ಆ ಸಿನಿಮಾವನ್ನೂ ವೆಬ್‌ಸ್ಟೈಟ್‌ಗಳಲ್ಲಿ ಸೋರಿಕೆ ಮಾಡಲಾಗಿದೆ. ಕೊರೊನಾ ಕೊಟ್ಟ ಪೆಟ್ಟಿನಿಂದ ಚೇತರಿಸಿಕೊಳ್ಳುತ್ತಿರೋ ಚಿತ್ರರಂಗಕ್ಕೆ ಪೈರಸಿ ಮತ್ತೆ ಮಾರಕವಾಗಿ ಕಾಡುತ್ತಿದೆ. ಪೈರಸಿಗೆ ಮುಂದಿನ ದಿನಗಳಲ್ಲಿ ಕಡಿವಾಣ ಹಾಕದೇ ಹೋದರೆ, ಬಾಲಿವುಡ್, ಟಾಲಿವುಡ್, ಕಾಲಿವುಡ್ ಅಂತಹ ದೊಡ್ಡ ಚಿತ್ರರಂಗಕ್ಕೆ ದೊಡ್ಡ ಪೆಟ್ಟು ಬೀಳುವ ಸಾಧ್ಯತೆಯಿದೆ.

    English summary
    Akshay Kumar, Katrina Kaif starrer Rohit Shetty directed big Bollywood release Sooryavanshi is new victim of piracy.
    Friday, November 5, 2021, 17:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X