ಸಿನಿಮಾಗಳಲ್ಲಷ್ಟೇ ಅಲ್ಲ ಅಫೇರ್‌ಗಳಲ್ಲೂ ಕಿಲಾಡಿ; ಅಕ್ಷಯ್ ಕುಮಾರ್ ಜೊತೆ ತಳುಕು ಹಾಕೊಂಡಿದ್ದ 5 ನಟಿಯರು ಯಾರು?
ಅಕ್ಷಯ್ ಕುಮಾರ್ ಬಾಲಿವುಡ್‌ನಲ್ಲಿ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು. ಕಿಲಾಡಿ ಸೀರಿಸ್‌ಗಳಲ್ಲಿ ನಟಿಸಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದ ನಟನೀತ. ಸಿನಿಮಾಗಳಲ್ಲಿ ಡೇಂಜರಸ್ ಸ್ಟಂಟ್‌ಗಳನ್ನು ಮಾಡುವುದರಲ್ಲಿ ಎಷ್ಟು ಕಿಲಾಡಿನೋ, ಹಾಗೇ ಅಫೇರ್‌ಗಳನ್ನು ಇಟ್ಟುಕೊಳ್ಳುವುದರಲ್ಲೂ ಅಕ್ಷಯ್ ಕುಮಾರ್ ಕಿಲಾಡಿ. ಮದುವೆಗೆ ಮುನ್ನ ಹಾಗೂ ಮದುವೆಯ ನಂತರವೂ ಅಕ್ಷಯ್ ಕುಮಾರ್ ಹೆಸರು ಬಾಲಿವುಡ್ ನಟಿಯರೊಂದಿಗೆ ತಳುಕು ಹಾಕಿಕೊಳ್ಳುತ್ತಲೇ ಇತ್ತು.
ಅಕ್ಷಯ್ ಕುಮಾರ್ 90 ದಶಕದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿಯರ ಫೇವರಿಟ್ ನಟನಾಗಿದ್ದರು. ಅಕ್ಷಯ್ ಕುಮಾರ್ ಲುಕ್‌ಗೆ, ಸ್ಟಂಟ್‌ಗಳಿಗೆ, ಕಟುಮಸ್ತಾದ ದೇಹಕ್ಕೆ ಬಾಲಿವುಡ್ ನಟಿಯರು ಕ್ಲೀನ್ ಬೋಲ್ಡ್ ಆಗಿದ್ದರು. ಅಕ್ಷಯ್ ಕುಮಾರ್ ಪ್ರೀತಿಯ ಜಾಲಕ್ಕೆ ಬಿದ್ದ ನಟಿಯರು ಒಬ್ಬರಾ? ಇಬ್ಬರಾ? ಆದರೆ, ಪ್ರಮುಖವಾಗಿ ಐದು ನಟಿಯರ ಹೆಸರು ಬಾರೀ ಸದ್ದು ಮಾಡಿತ್ತು.

ಕೆಲವರು ತಮ್ಮ ಅಫೇರ್ ಬಗ್ಗೆ ಇದೂವರೆಗೂ ತುಟಿ ಬಿಚ್ಚಿಲ್ಲ. ಇನ್ನು ಕೆಲವರು ಅಕ್ಷಯ್ ಕುಮಾರ್ ವಿರುದ್ಧ ಆಕ್ರೋಶವನ್ನು ಹೊರ ಹಾಕಿದ್ದರು. ಅದರಲ್ಲಿ 'ಕೆಜಿಎಫ್ 2'ನ ಪ್ರಧಾನ ಮಂತ್ರಿ ಅಲಿಯಾಸ್ ರವೀನಾ ಟಂಡನ್ ಹಾಗೂ ಕರಾವಳಿ ಬ್ಯೂಟಿ ಶಿಲ್ಪಾ ಶೆಟ್ಟಿ. ಇವರ ಜೊತೆ ಇನ್ನೂ ಮೂವರು ನಟಿಯರ ಹೆಸರು ಅಕ್ಷಯ್ ಕುಮಾರ್ ಜೊತೆ ಪ್ರಚಲಿತದಲ್ಲಿ ಇತ್ತು. ಆ ಐದು ನಟಿಯರ ಯಾರು ಅಂತ ನೋಡುವುದಾರೆ.
1 ರವೀನಾ ಟಂಡನ್
90 ದಶಕದ ಸಿನಿಪ್ರೇಮಿಗಳ ಫೇವರಿಟ್ ಜೋಡಿ ಅಕ್ಷಯ್ ಕುಮಾರ್ ಹಾಗೂ ರವೀನಾ ಟಂಡನ್. ಅದರಲ್ಲೂ 1994ರಲ್ಲಿ ಬಂದ 'ಮೊಹ್ರಾ' ಸಿನಿಮಾ ಇವರಿಬ್ಬರ ಪ್ರೀತಿಗೆ ಬುನಾದಿ ಹಾಕಿತ್ತು. ಇಬ್ಬರ ಡೇಟಿಂಗ್ ವಿಚಾರ ಇಡೀ ಬಾಲಿವುಡ್‌ಗೆ ಗೊತ್ತಿತ್ತು. ಸುಮಾರು 3 ವರ್ಷಗಳ ಕಾಲ ಈ ಜೋಡಿ ಲವ್ ಮಾಡಿತ್ತು. ಇನ್ನೇನು ಮದುವೆ ಆಗೇ ಬಿಡುತ್ತಾರ ಅನ್ನೋವಾಗಲೇ ಅಕ್ಷಯ್ ಕುಮಾರ್ ಬಾಳಲ್ಲಿ ಶಿಲ್ಪಾ ಶೆಟ್ಟಿ ಎಂಟ್ರಿ ಕೊಟ್ಟಾಗಿತ್ತು.

2 ರೇಖಾ
ರವೀನಾ ಟಂಡನ್‌ಗೆ ಗುಡ್ ಬೈ ಹೇಳಿ ಶಿಲ್ಪ ಶೆಟ್ಟಿ ಜೊತೆ ಡೇಟಿಂಗ್ ಮಾಡುವುದಕ್ಕೂ ಮುನ್ನ ಹಿರಿಯ ನಟಿ ರೇಖಾ ಜೊತೆ ಅಫೇರ್ ಇಟ್ಟುಕೊಂಡಿದ್ದರು ಎಂದು ವರದಿಗಳಾಗಿವೆ. ಅಕ್ಷಯ್ 'ಕಿಲಾಡಿಯೋಂಕಾ ಕಿಲಾಡಿ' ಸಿನಿಮಾ ಮಾಡುವಾಗ ಹಿರಿಯ ನಟಿ ರೇಖಾಗೆ ಅಕ್ಷಯ್ ಮೇಲೆ ಸಿಕ್ಕಾಪಟ್ಟೆ ಲವ್ ಆಗಿಬಿಟ್ಟಿತ್ತು. ರೇಖಾ ಅಂತೂ ಅಕ್ಷಯ್ ಲುಕ್‌ಗೆ ಫಿದಾ ಆಗಿದ್ದರಂತೆ. ಅದೇ ವೇಳೆ ರವೀನಾ ಟಂಡನ್ ಜೊತೆಗೂ ಡೇಟಿಂಗ್ ಮಾಡುತ್ತಿದ್ದರು. ಅದು ರವೀನಾ ಟಂಡನ್‌ಗೆ ಗೊತ್ತಾಗುತ್ತಿದ್ದಂತೆ ರಂಪಾಟ ಆಗಿತ್ತು ಎನ್ನಲಾಗಿದೆ.

3 ಶಿಲ್ಪಾ ಶೆಟ್ಟಿ
ರವೀನಾ ಟಂಡನ್ ಹಾಗೂ ರೇಖಾ ಇಬ್ಬರನ್ನು ಬಿಟ್ಟು ಅಕ್ಷಯ್ ಕುಮಾರ್ ಕರಾವಳಿ ಬ್ಯೂಟಿ ಶಿಲ್ಪಾ ಶೆಟ್ಟಿ ಜೊತೆ ತಿರುಗಾಡುವುದಕ್ಕೆ ಶುರು ಮಾಡಿದ್ದರು. 'ಮೇ ಕಿಲಾಡಿ ತು ಅನಾರಿ' ಸಿನಿಮಾ ಶೂಟಿಂಗ್ ವೇಳೆ ಇಬ್ಬರಿಗೂ ಡೇಟಿಂಗ್ ಶುರು ಮಾಡಿದ್ದರು. ಆದರೆ, ಶಿಲ್ಪಾ ಶೆಟ್ಟಿ ಜೊತೆಗೂ ಬ್ರೇಕಪ್ ಮಾಡಿಕೊಂಡರು. ಸಂದರ್ಶನವೊಂದರಲ್ಲಿ ಅಕ್ಷಯ್ ಕುಮಾರ್ ಜೊತೆಗಿನ ಬ್ರೇಕಪ್ ಬಗ್ಗೆ ಶಿಲ್ಪ ಶೆಟ್ಟಿ ಹೇಳಿಕೊಂಡು ವಿವಾದವನ್ನು ಸೃಷ್ಟಿಸಿದ್ದರು.

4 ಪ್ರಿಯಾಂಕಾ ಚೋಪ್ರಾ
ಅಕ್ಷಯ್ ಕುಮಾರ್ 2001ರಲ್ಲಿ ಟ್ವಿಂಕಲ್ ಖನ್ನಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಲ್ಲಿಂದ ಡೇಟಿಂಗ್, ಅಫೇರ್‌ಗೆಲ್ಲ ಬ್ರೇಕ್ ಬೀಳುತ್ತೆ ಅಂತ ಬಾಲಿವುಡ್ ಮಂದಿ ಎಂದುಕೊಂಡಿದ್ದರು. ಆದರೆ, ಮದುವೆಯಾದ ಎರಡೇ ವರ್ಷಕ್ಕೆ ಪ್ರಿಯಾಂಕಾ ಚೋಪ್ರಾ ಜೊತೆ ಅಕ್ಷಯ್ ಕುಮಾರ್ ಹೆಸರು ತಳುಕು ಹಾಕಿಕೊಂಡಿತ್ತು. 2003ರಲ್ಲಿ ಅಕ್ಷಯ್ ಕುಮಾರ್ ಹಾಗೂ ಪ್ರಿಯಾಂಕಾ 'ಅಂದಾಜ್' ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದರು. ಆ ಬಳಿಕ ಕೆಲವು ಸಿನಿಮಾಗಳಲ್ಲಿ ನಟಿಸಿದ ಬಳಿಕ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿತ್ತು. ಮತ್ತೆಂದೂ ಇಬ್ಬರೂ ಒಟ್ಟಿಗೆ ನಟಿಸಲೇ ಇಲ್ಲ.

5 ಕತ್ರಿನಾ ಕೈಫ್
ಕತ್ರಿನಾ ಕೈಫ್ ಜೊತೆನೂ ಅಕ್ಷಯ್ ಕುಮಾರ್ ಅಫೇರ್ ಇಟ್ಟುಕೊಂಡಿದ್ದರು ಅಂತ ವರದಿಗಳಾಗಿವೆ. 2007ರಲ್ಲಿ 'ನಮಸ್ತೆ ಲಂಡನ್' ಸಿನಿಮಾದ ವೇಳೆ ಇಬ್ಬರ ನಡುವೆ ಏನೋ ನಡೀತಿತ್ತು ಎನ್ನಲಾಗಿದೆ. ಇವರೂ ಅಷ್ಟೇ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ ಬಳಿಕ ಮತ್ತೆಂದೂ ಒಟ್ಟಿಗೆ ನಟಿಸಲೇ ಇಲ್ಲ.


Click it and Unblock the Notifications











