For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಚಿತ್ರದ ಟ್ರೈಲರ್‌ಗೆ ಸಿಬಿಎಫ್‌ಸಿ ಅಧ್ಯಕ್ಷ ಹೀಗಾ ಹೇಳೋದು..!

  By Suneel
  |

  ಬಾಲಿವುಡ್ ನ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಇತ್ತೀಚೆಗಷ್ಟೆ ದೇಶದ ಗಂಭೀರ ಸಮಸ್ಯೆ 'ಶೌಚಾಲಯ ವ್ಯವಸ್ಥೆ' ಕುರಿತು ಟ್ವೀಟ್ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಅದೂ ಅವರ ಮುಂಬರುವ ಸಿನಿಮಾ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರದ ಹಿನ್ನೆಲೆಯಲ್ಲಿ. ಅಲ್ಲದೇ ಚಿತ್ರದ ಟ್ರೈಲರ್ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದರು.[ದೇಶದ ಗಂಭೀರ ಸಮಸ್ಯೆ ಬಗ್ಗೆ ಅಕ್ಷಯ್ ಕುಮಾರ್ ಟ್ವೀಟ್! ಏನದು?]

  ಜೂನ್ 11 ರಂದು ಬಿಡುಗಡೆ ಆಗಲಿರುವ ಅಕ್ಕಿಯ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರದ ಟ್ರೈಲರ್ ಗಾಗಿ ದೇಶದಾದ್ಯಂತ ಸಿನಿ ಪ್ರಿಯರು ಕಾದು ಕುಳಿತಿದ್ದಾರೆ. ಈ ಚಿತ್ರದ ಬಗ್ಗೆ ದೇಶದಾದ್ಯಂತ ಇಷ್ಟೊಂದು ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಆಗಲು ಕಾರಣ ಚಿತ್ರದ ಕಥಾವಸ್ತು. ಅಂದಹಾಗೆ ಈ ಚಿತ್ರದ ಮೊದಲ ಟ್ರೈಲರ್ ಅನ್ನು ಈಗ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್‌ಸಿ) ಅಧ್ಯಕ್ಷರಾದ ಪಹ್ಲಜ್ ನಿಹಲಾನಿ ರವರು ನೋಡಿದ್ದು, ಅಕ್ಷಯ್ ಚಿತ್ರಕ್ಕೆ ಸಕರಾತ್ಮಕವಾಗಿ ಪ್ರತಿಕ್ರಿಯಿಸಿ, ಟ್ವೀಟ್ ಮಾಡಿದ್ದಾರೆ.

  "ಅಕ್ಷಯ್ ಕುಮಾರ್ ಅಭಿನಯದ 'ಟಾಯ್ಲೆಟ್ ಏಕ್ ಪ್ರೇಮ್ ಕಥಾ' ಚಿತ್ರದ ಟ್ರೈಲರ್ ನೋಡಿದೆ. ಇದು ಸತ್ಯ ಘಟನೆ ಆಧಾರಿತವಾಗಿದೆ. ಅಲ್ಲದೇ 'ಸ್ವಚ್ಛ ಭಾರತ' ಅಭಿಯಾನದ ಪ್ರಚಾರಕ್ಕೆ ಉತ್ತೇಜನ ನೀಡುತ್ತದೆ. ಈ ಸೂಪರ್ ಹಿಟ್ ಚಿತ್ರವನ್ನು ತೆರಿಗೆಯಿಂದ ಮುಕ್ತಗೊಳಿಸಿ ಬಿಡುಗಡೆಗೆ ಅವಕಾಶ ನೀಡಬೇಕು" ಎಂದು ಪಹ್ಲಜ್ ನಿಹಲಾನಿ ಟ್ವೀಟಿಸಿದ್ದಾರೆ.

  "ನೀವು ಆಯ್ಕೆ ಮಾಡಿಕೊಂಡಿರುವ ವಿಷಯ ತುಂಬಾ ಚೆನ್ನಾಗಿದೆ. ಸಕಾರಾತ್ಮಕ ಬದಲಾವಣೆಗಾಗಿ ಸಮಾಜದ ವೈವಿಧ್ಯಮಯ ವಿಷಯಗಳನ್ನು ಸ್ಪರ್ಶಿಸಿದ್ದೀರಿ. ನಿಮ್ಮ ಕೊಡುಗೆಯನ್ನು ಹೀಗೆ ಮುಂದುವರೆಸಿ" ಎಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಅಕ್ಷಯ್ ಕುಮಾರ್ ಗೆ ಪಹ್ಲಜ್ ನಿಹಲಾನಿ ಹೇಳಿದ್ದಾರೆ.

  English summary
  CBFC chief Pahlaj Nihalani has taken his twitter account to praise Akshay Kumar statter 'Toilet Ek Prem Katha' trailer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X