ದೇಶದ ಗಂಭೀರ ಸಮಸ್ಯೆ ಬಗ್ಗೆ ಅಕ್ಷಯ್ ಕುಮಾರ್ ಟ್ವೀಟ್! ಏನದು?

By Suneel

ರಾಷ್ಟ್ರ ಪ್ರಶಸ್ತಿ ವಿಜೇತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇತ್ತೀಚಿನ ದಿನಗಳಲ್ಲಿ ಸಮಾಜಮುಖಿ ಕಥೆಗಳನ್ನು ಒಳಗೊಂಡ ಚಿತ್ರಗಳಲ್ಲಿಯೇ ಹೆಚ್ಚಾಗಿ ಅಭಿನಯಿಸುತ್ತಿದ್ದಾರೆ. ಅಲ್ಲದೇ ದೇಶಕ್ಕಾಗಿ ಪ್ರಾಣ ತೆತ್ತ ವೀರ ಯೋಧರ ಕುಟುಂಬಕ್ಕೆ ಧನಸಹಾಯ ಮಾಡುವ ಕಾರ್ಯಗಳಲ್ಲಿಯೂ ತೊಡಗಿ ಇತರರಿಗೆ ಮಾದರಿ ಆಗಿದ್ದಾರೆ.[ಅಕ್ಷಯ್ ಕುಮಾರ್ ಹೊಸ ಚಿತ್ರಕ್ಕು ಪ್ರಧಾನಿ ಮೋದಿಗೂ ಇದ್ಯಾ ಸಂಬಂಧ ?]

ಅಂದಹಾಗೆ ಇತ್ತೀಚೆಗಷ್ಟೆ ಪ್ರಧಾನ ಮೋದಿ ಅವರನ್ನು ಭೇಟಿ ಮಾಡಿ ಕುತೂಹಲ ಮೂಡಿಸಿದ್ದ ಅಕ್ಷಯ್ ಕುಮಾರ್ ಈಗ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ದೇಶದ ಗಂಭೀರ ಸಮಸ್ಯೆ ಬಗ್ಗೆ ಟ್ವೀಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಹಾಗಿದ್ರೆ ಅಕ್ಷಯ್ ಯಾವ ವಿಷಯದ ಬಗ್ಗೆ, ಏನೆಂದು ಟ್ವೀಟ್ ಮಾಡಿದ್ದಾರೆ ಎಂದು ತಲೆಗೆ ಹುಳ ಬಿಟ್ಟುಕೊಳ್ಳುವ ಮೊದಲು ಮುಂದೆ ಓದಿ ನಿಮಗೆ ತಿಳಿಯುತ್ತೆ..

ಟಾಯ್ಲೆಟ್ ಸಮಸ್ಯೆ ಕುರಿತು ಅಕ್ಷಯ್ ಟ್ವೀಟ್..

ಟಾಯ್ಲೆಟ್ ಸಮಸ್ಯೆ ಕುರಿತು ಅಕ್ಷಯ್ ಟ್ವೀಟ್..

ಹೌದು. ಭಾರತದ ಗಂಭೀರ ಸಮಸ್ಯೆಗಳಲ್ಲಿ ಒಂದಾದ ಮನೆಗೊಂದು ಶೌಚಾಲಯ ಇಲ್ಲದ ವ್ಯವಸ್ಥೆ ಕುರಿತು ಅಕ್ಷಯ್ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಗಂಭೀರವಾಗಿಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ನಟ, "ಮನೆಗಳಲ್ಲಿ ಟಿವಿಗಳಿವೆ, ಮೊಬೈಲ್ ಗಳಿವೆ. ಆದರೆ ಶೌಚಾಲಯಗಳಿಲ್ಲ. ನಿಮಗೆ ಗೊತ್ತಾ... ಭಾರತದಲ್ಲಿ 564 ದಶಲಕ್ಷ ಜನರು ಮುಕ್ತ ಪ್ರದೇಶಗಳಲ್ಲಿ ಮಲವಿಸರ್ಜನೆ ಮಾಡುತ್ತಾರೆ" ಎಂದು ಟ್ವೀಟಿಸಿದ್ದಾರೆ.

ಸ್ವಚ್ಛತೆ ಕುರಿತು ಪ್ರತಿಯೊಬ್ಬರು ಎಚ್ಚರವಹಿಸಲೇಬೇಕು

ಸ್ವಚ್ಛತೆ ಕುರಿತು ಪ್ರತಿಯೊಬ್ಬರು ಎಚ್ಚರವಹಿಸಲೇಬೇಕು

" ಶೇ.100 ರಷ್ಟು ಆಶ್ಚರ್ಯಕರ ವಿಷಯವೆಂದರೆ, ಪ್ರಪಂಚದ ಶೇ.60 ರಷ್ಟು ಜನಸಂಖ್ಯೆ ಶೌಚಾಲಯಗಳನ್ನು ಹೊಂದಿಲ್ಲ. ವಿಪರ್ಯಾಸ ಅಷ್ಟು ಜನತೆ ಭಾರತದಲ್ಲಿಯೇ ಇದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಸ್ವಚ್ಛತೆ ಬಗ್ಗೆ ಎಚ್ಚರವ ಹಿಸಲೇಬೇಕಾಗಿದೆ" - ಅಕ್ಷಯ್ ಕುಮಾರ್, ನಟ

ಅತ್ಯಾಚಾರ ಸಂಖ್ಯೆ ತಗ್ಗಿಸಲು ಟಾಯ್ಲೆಟ್ ನಿರ್ಮಾಣ ಅಗತ್ಯ

ಅತ್ಯಾಚಾರ ಸಂಖ್ಯೆ ತಗ್ಗಿಸಲು ಟಾಯ್ಲೆಟ್ ನಿರ್ಮಾಣ ಅಗತ್ಯ

"ಎಲ್ಲರೂ ಅಲೋಚಿಸಬೇಕಾದ ವಿಚಾರ.... ಅಂದ್ರೆ ಶೌಚಾಲಯ ನಿರ್ಮಾಣದಿಂದ ಶೇಕಡ 50 ರಷ್ಟು ಅತ್ಯಾಚಾರ ಪ್ರಕರಣ ಸಂಖ್ಯೆಗಳನ್ನು ಕಡಿಮೆ ಮಾಡಬಹುದು" -ಅಕ್ಷಯ್ ಕುಮಾರ್, ನಟ

ಪ್ರತಿಯೊಂದು ಮನೆಗೆ ಟಾಯ್ಲೆಟ್ ಅತ್ಯಾವಶ್ಯಕ

ಪ್ರತಿಯೊಂದು ಮನೆಗೆ ಟಾಯ್ಲೆಟ್ ಅತ್ಯಾವಶ್ಯಕ

ನಟ ಅಕ್ಷಯ್ ಕುಮಾರ್ ತಮ್ಮ ಅಭಿನಯದ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರದ ಹಿನ್ನೆಲೆಯಲ್ಲಿ ಈ ಮೇಲಿನ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಅಲ್ಲದೇ ಪ್ರತಿಯೊಂದು ಮನೆಗೆ ಟಾಯ್ಲೆಟ್ ಅತ್ಯಾವಶ್ಯಕವಾಗಿದೆ. ಅದು ಏಕೆ ಎಂದು ತಿಳಿದುಕೊಳ್ಳಲು ಜೂನ್ 11 ರಂದು 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರದ ಟ್ರೈಲರ್ ನೋಡಿ ಎಂದು ಹೇಳಿದ್ದಾರೆ.

ಸ್ಟಾರ್ ಸ್ಫೋರ್ಟ್ಸ್ ಇಂಡಿಯಾದಲ್ಲಿ ಟ್ರೈಲರ್ ಪ್ರಸಾರ

ಸ್ಟಾರ್ ಸ್ಫೋರ್ಟ್ಸ್ ಇಂಡಿಯಾದಲ್ಲಿ ಟ್ರೈಲರ್ ಪ್ರಸಾರ

'ಸ್ವಚ್ಛ ಭಾರತ ಅಭಿಯಾನ'ದ ಕುರಿತು ನಿರ್ಮಾಣವಾಗುತ್ತಿರುವ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರ ದೇಶಕ್ಕೆ ಶೌಚಾಲಯಗಳ ಅಗತ್ಯವನ್ನು ಚರ್ಚಿಸಲಿದೆಯಂತೆ. ಅಕ್ಷಯ್ ಕುಮಾರ್, ಭೂಮಿ ಪೆಡ್ನೇಕರ್, ಅನುಪಮ್ ಖೇರ್, ಸನಾ ಖಾನ್ ಮುಖ್ಯ ಭೂಮಿಕೆಯ ಈ ಚಿತ್ರಕ್ಕೆ, ಶ್ರೀ ನಾರಾಯಣ್ ಸಿಂಗ್ ಆಕ್ಷನ್ ಕಟ್ ಹೇಳಿದ್ದಾರೆ. ಅಕ್ಷಯ್ ಸ್ವತಃ ನೀರಜ್ ಪಾಂಡೆ ಜೊತೆ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅಂದಹಾಗೆ ಜೂನ್ 11 ರಂದು ಈ ಚಿತ್ರದ ಟ್ರೈಲರ್ ಸ್ಟಾರ್ ಸ್ಪೋರ್ಟ್ಸ್ ಇಂಡಿಯಾ ವಾಹಿನಿಯಲ್ಲಿ ಪ್ರಸಾರವಾಗಲಿದೆಯಂತೆ.

More from Filmibeat

English summary
Bollywood Actor Akshay Kumar has taken his twitter account to urges everyone to help build toilets.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X