For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಕುಮಾರ್ ಹೊಸ ಚಿತ್ರಕ್ಕು ಪ್ರಧಾನಿ ಮೋದಿಗೂ ಇದ್ಯಾ ಸಂಬಂಧ ?

  By Bharath Kumar
  |

  'ರುಸ್ತುಂ' ಚಿತ್ರದ ಅತ್ಯುತ್ತಮ ಅಭಿನಯಕ್ಕಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇತ್ತೀಚೆಗಷ್ಟೇ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು.

  ಅದರ ಬೆನ್ನಲ್ಲೆ ಈಗ ಮತ್ತೊಂದು ಪ್ರಯೋಗಾತ್ಮಕ ಚಿತ್ರಕ್ಕೆ ಮುಂದಾಗಿದ್ದಾರೆ. ಅಂದ್ಹಾಗೆ, ಈ ಚಿತ್ರಕ್ಕು ಪ್ರಧಾನಿ ನರೇಂದ್ರ ಮೋದಿಗೂ ಒಂಥರಾ ಸಂಬಂಧವಿದೆ. ಅದೇನು ಅಂತ ಸಿನಿಮಾದಲ್ಲಿ ನೋಡಬಹುದು.[ಪ್ರಪ್ರಥಮ ಬಾರಿಗೆ ರಾಷ್ಟ್ರ ಪ್ರಶಸ್ತಿ ಪಡೆದ ಅಕ್ಷಯ್ ಕುಮಾರ್ ಗೆ ಖುಷಿಯೋ ಖುಷಿ]

  ಈ ನಡುವೆ ನಟ ಅಕ್ಷಯ್ ಕುಮಾರ್ ಅವರು ಪ್ರಧಾನಿ ಮೋದಿ ಅವರನ್ನ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ. ಅಷ್ಟಕ್ಕೂ, ಅಕ್ಷಯ್ ಕುಮಾರ್ ಮುಂದಿನ ಚಿತ್ರ ಯಾವುದು? ಮೋದಿಗೂ ಈ ಚಿತ್ರಕ್ಕೂ ಏನು ಸಂಬಂಧ? ಅಂತ ಮುಂದೆ ಓದಿ.....

  ಮೋದಿ ಭೇಟಿ ಮಾಡಿದ ಅಕ್ಷಯ್!

  ಮೋದಿ ಭೇಟಿ ಮಾಡಿದ ಅಕ್ಷಯ್!

  ರಾಷ್ಟ್ರ ಪ್ರಶಸ್ತಿ ಗೆದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿದ್ದಾರೆ. ಈ ಭೇಟಿ ಕುತೂಹಲ ಮೂಡಿಸಿದ್ದು, ಅಕ್ಷಯ್ ಕುಮಾರ್ ತಮ್ಮ ಹೊಸ ಚಿತ್ರದ ಬಗ್ಗೆ ಪ್ರಸ್ತಾಪಿಸಿದ್ದಾರಂತೆ.[ರಾಷ್ಟ್ರ ಪ್ರಶಸ್ತಿ ಪಡೆದ 'ರುಸ್ತುಂ' ಮತ್ತು 'ನೀರ್ಜಾ'ಳ ಅಸಲಿ ಕಥೆ ಇಲ್ಲಿದೆ..]

  ಟೈಟಲ್ ಕೇಳಿ ನಕ್ಕಿದ ಮೋದಿ?

  ಟೈಟಲ್ ಕೇಳಿ ನಕ್ಕಿದ ಮೋದಿ?

  ಅಕ್ಷಯ್ ಕುಮಾರ್ ಅವರ ಹೊಸ ಚಿತ್ರದ ಟೈಟಲ್ ಕೇಳಿ, ಸ್ವತಃ ಮೋದಿ ಅವರು ಕೂಡ ನಕ್ಕಿದ್ದಾರಂತೆ. ಹಾಗಾದ್ರೆ, ಪ್ರಧಾನಿಯವರನ್ನ ನಗಿಸಿದ ಆ ಟೈಟಲ್ ಏನು?

  ಅಕ್ಷಯ್ ಮುಂದಿನ ಚಿತ್ರ ಯಾವುದು?

  ಅಕ್ಷಯ್ ಮುಂದಿನ ಚಿತ್ರ ಯಾವುದು?

  ಅಕ್ಷಯ್ ಕುಮಾರ್ ಅಭಿನಯಿಸುತ್ತಿರುವ ಮುಂದಿನ ಚಿತ್ರದ ಹೆಸರು ''ಟಾಯ್ಲೆಟ್: ಏಕ್ ಪ್ರಮಕಥಾ''. ಶ್ರೀ ನಾರಾಯಣ ಸಿಂಗ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಭೂಮಿ ಪೆಂಡಕರ್, ಅನುಪಮ್ ಖೇರ್, ಸನಾ ಖಾನ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.[ಅಕ್ಷಯ್ ಕುಮಾರ್ ಗೆ ಮೂರ್ತಿ ಪೂಜೆಯಲ್ಲಿ ನಂಬಿಕೆ ಇಲ್ವಂತೆ: ಏಕೆ ಗೊತ್ತಾ?]

  'ಸ್ವಚ್ಛ ಭಾರತ ಅಭಿಯಾನ' ಕುರಿತು ಸಿನಿಮಾ

  'ಸ್ವಚ್ಛ ಭಾರತ ಅಭಿಯಾನ' ಕುರಿತು ಸಿನಿಮಾ

  ಅಂದ್ಹಾಗೆ, ಇದು 'ಸ್ವಚ್ಛ ಭಾರತ ಅಭಿಯಾನ'ದ ಕುರಿತಾದ ಚಿತ್ರ. ದೇಶಕ್ಕೆ ಶೌಚಾಲಯಗಳ ಅಗತ್ಯವನ್ನು ಈ ಸಿನಿಮಾ ಚರ್ಚಿಸಲಿದೆಯಂತೆ. ವಿಶೇಷ ಅಂದ್ರೆ, ಪ್ರಧಾನಿ ಮೋದಿ ಅಧಿಕಾರಕ್ಕೆ ಬರುವುದಕ್ಕೂ ಮೊದಲೇ ಈ ಸ್ಕ್ರಿಪ್ಟ್ ಬಗ್ಗೆ ಚರ್ಚಿಸಿದ್ದರಂತೆ.

  ಅಕ್ಷಯ್ ಭೇಟಿ ನಂತರ ಮೋದಿನೂ ಖುಷ್!

  ಅಕ್ಷಯ್ ಭೇಟಿ ನಂತರ ಮೋದಿನೂ ಖುಷ್!

  ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿದ ಬಳಿಕ, ಅಕ್ಷಯ್ ಕುಮಾರ್ ಟ್ವಿಟ್ಟರ್ ನಲ್ಲಿ ಸಂತಸ ಹಂಚಿಕೊಂಡಿದ್ದರು. ಇದಕ್ಕೆ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು, ತಮ್ಮನ್ನ ಭೇಟಿ ಯಾಗಿದ್ದು ಖುಷಿ ಕೊಟ್ಟಿದೆ ಎಂದು ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ.

  English summary
  Actor Akshay Kumar met PM Narendra Modi. Akshay Kumar’s upcoming film, Toilet: Ek Prem Katha, is based on PM Modi’s clean India drive, popularly known as Swachh Bharat Abhiyan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X