ಅಕ್ಷಯ್ ಕುಮಾರ್ vs ಕಮಲ್ ಹಾಸನ್: ಗೆಲವು ಯಾರಿಗೆ!

ಸೌತ್ ಸಿನಿಮಾಗಳ ಬಗ್ಗೆ ಬಾಲಿವುಡ್‌ ಮಂದಿ ಯೋಚಿಸುವ ಸಂದರ್ಭ ಎದುರಾಗಿದೆ. ಸೌತ್‌ನಲ್ಲಿ ಯಾವುದೆ ದೊಡ್ಡ ಸಿನಿಮಾ ಬಂದರೂ ಅದನ್ನು ನೋಡಿ ಕೊಂಡು ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡುವ ಅನಿವಾರ್ಯತೆ ಬಾಲಿವುಡ್ ಸಿನಿಮಾಗಳಿಗೆ ಎದುರಾಗಿದೆ.

ಸದ್ಯ ಈಗ ಮುಂಬರುವ ದೊಡ್ಡ ಬಾಕ್ಸಾಫೀಸ್ ಕ್ಲ್ಯಾಶ್ ಎಂದರೆ ಜೂನ್ 3. ಈ ವರ್ಷ ಜೂನ್ 3ಕ್ಕೆ ಮೂರು ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತಾ ಇವೆ. ಮೇಜರ್, ವಿಕ್ರಂ ಮತ್ತು ಪೃಥ್ವಿರಾಜ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಖಾ ಮುಖಿ ಆಗಲಿವೆ.

ಅದರಲ್ಲೂ ಕಮಲ್ ಹಾಸನ್ ಸಿನಿಮಾ 'ವಿಕ್ರಮ್' ಸಾಕಷ್ಟು ನಿರೀಕ್ಷೆ ಹೊಂದಿದ್ದು, ಹಿಂದಿಯಲ್ಲೂ ತೆರೆಕಾಣುತ್ತಾ ಇದೆ. ಹಾಗಾಗಿ ಈ ಸಿನಿಮಾ ಅಕ್ಷಯ್ ಕುಮಾರ್ ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಎದುರಾಗಲಿದೆ ಎನ್ನಲಾಗುತ್ತಾ ಇದೆ.

'ವಿಕ್ರಮ್' vs 'ಸಾಮ್ರಾಟ್ ಪೃಥ್ವಿರಾಜ್'!

'ವಿಕ್ರಮ್' vs 'ಸಾಮ್ರಾಟ್ ಪೃಥ್ವಿರಾಜ್'!

ಸೌತ್ ಸಿನಿಮಾ ವಿಕ್ರಮ್ ಮತ್ತು ಬಾಲಿವುಡ್‌ನ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಖಾ-ಮುಖಿ ಆಗಲಿವೆ. ವಿಕ್ರಮ್ ಸಿನಿಮಾ ಹಿಂದಿಯಲ್ಲೂ ತೆರೆಕಾಣುತ್ತಾ ಇರುವ ಕಾರಣ, ಅಕ್ಷಯ್ ಕುಮಾರ್ ಸಿನಿಮಾ 'ಸಾಮ್ರಾಟ್ ಪೃಥ್ವಿರಾಜ್' ಮೇಲೆ ಪರಿಣಾಮ ಬೀರಲಿದೆ. ಇನ್ನು 'ಸಾಮ್ರಾಟ್ ಪೃಥ್ವಿರಾಜ್' ಕೇವಲ ಹಿಂದಿಯಲ್ಲಿ ಮಾತ್ರವೆ ರಿಲೀಸ್ ಆಗುತ್ತಾ ಇದೆ. ಹಾಗಾಗಿ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲ ಆದರೆ ಬಾಕ್ಸಾಫೀಸ್‌ನಲ್ಲಿ ಸೋಲು ಕಾಣೋದು ಪಕ್ಕಾ ಎನ್ನುವ ಚರ್ಚೆ ಶುರುವಾಗಿದೆ.

4000 ಸ್ಕ್ರೀನ್‌ಗಳಲ್ಲಿ 'ಸಾಮ್ರಾಟ್ ಪೃಥ್ವಿರಾಜ್' ಅಬ್ಬರ!

4000 ಸ್ಕ್ರೀನ್‌ಗಳಲ್ಲಿ 'ಸಾಮ್ರಾಟ್ ಪೃಥ್ವಿರಾಜ್' ಅಬ್ಬರ!

ಇನ್ನು 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗಳಿಕೆ ಮೊತ್ತವನ್ನು ಹೆಚ್ಚು ಮಾಡಲು, ಹೊಸ ತಂತ್ರವನ್ನು ಹೂಡಿದೆ. ಸಿನಿಮಾವನ್ನು ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲು ಯೋಜನೆ ರೂಪಿಸಿದೆ. 'ಸಾಮ್ರಾಟ್ ಪೃಥ್ವಿ ರಾಜ್' ಸಿನಿಮಾ ಒಟ್ಟಾರೆ 4000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತಾ ಇದೆ.

ಮೊದಲ ದಿನ 30 ಕೋಟಿ ಗಳಿಕೆಯ ನಿರೀಕ್ಷೆ!

ಮೊದಲ ದಿನ 30 ಕೋಟಿ ಗಳಿಕೆಯ ನಿರೀಕ್ಷೆ!

ಇನ್ನು ಬಾಲಿವುಡ್ ಲೆಕ್ಕಾಚಾರದ ಪ್ರಚಾರ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಮೊದಲ ದಿನ ಓಪನಿಂಗ್ ದೊಡ್ಡ ಮಟ್ಟದಲ್ಲಿ ಇರಲಿದೆ ಎನ್ನಲಾಗುತ್ತಿದೆ. ಸಿನಿಮಾ ಮೊದಲ ದಿನ 30 ಕೋಟಿ ಗಳಿಕೆ ಮಾಡಲಿದೆ ಎನ್ನುವ ಲೆಕ್ಕಾಚಾರಗಳು ವ್ಯಕ್ತವಾಗಿವೆ. ಆದರೆ ಮೊದಲ ದಿನ ಎಷ್ಟು ಗಳಿಕೆ ಮಾಡಲಿದೆ ಎನ್ನುವುದ ಮೇಲೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೇಗೆ ನಿಲ್ಲಲಿದೆ ಎನ್ನುವ ಬಗ್ಗೆ ತಿಳಿಯಲಿದೆ.

ಸಾಲು, ಸಾಲು ಸೋಲು ಕಂಡ ಬಾಲಿವುಡ್!

ಸಾಲು, ಸಾಲು ಸೋಲು ಕಂಡ ಬಾಲಿವುಡ್!

ಇನ್ನು RRR, ಕೆಜಿಎಫ್ 2 ಸಿನಿಮಾಗಳು ಬಂದ ಮೇಲೆ ಬಾಲಿವುಡ್‌ನ ಲೆಕ್ಕಾಚಾರಗಳು ಉಲ್ಟಾ ಆಗಿವೆ. 'ರನ್‌ ವೇ 34', 'ಹೀರೋಪಂತಿ 2', 'ಜಯೇಶ್‌ಭಾಯ್ ಜೋರ್ದಾರ್', 'ಧಾಕಡ್' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋಲು ಕಂಡಿವೆ. ಇನ್ನು ಇತ್ತೀಚೆಗೆ ಬಂದ 'ಭೂಲ್ ಭುಲಯ್ಯ 2' ಸಿನಿಮಾ ಮಾತ್ರ ಕೊಂಚ ಮಟ್ಟಿಗೆ ಹೆಸರು ಮಾಡಿದೆ. ಹಾಗಾಗಿ ಅಕ್ಷಯ್ ಕುಮಾರ್ ಈ ಸಿನಿಮಾ ಗೆಲ್ಲುವ ಅನಿವಾರ್ಯತೆ ಇದೆ.

More from Filmibeat

English summary
Bollywood Akshay Kumar VS Kollywood Kamal Haasan Big Fight At Box Office From June 3rd, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X