For Quick Alerts
  ALLOW NOTIFICATIONS  
  For Daily Alerts

  ಭಾರತದಲ್ಲಿ ಅವಮಾನಗೊಂಡ ಚಿತ್ರಕ್ಕೆ ವಿದೇಶದಲ್ಲಿ ಸನ್ಮಾನ

  By Suneel
  |

  ಪ್ರಕಾಶ್ ಝಾ ನಿರ್ಮಾಣದ, ಅಲಂಕೃತ ಶ್ರೀವತ್ಸವ ನಿರ್ದೇಶನದ 'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' ಚಿತ್ರ ಪ್ರಮಾಣ ಪತ್ರ ಪಡೆಯಲು, ಇನ್ನೂ ಸಹ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಎದುರು ಹೋರಾಟ ಮಾಡುತ್ತಲೇ ಇದೆ. ಆದರೆ ಇದೇ ಚಿತ್ರವೀಗ ಪ್ರಪಂಚದಾದ್ಯಂತ ಮೆಚ್ಚುಗೆ ಪಡೆಯುತ್ತಿದೆ.[ಪ್ರಕಾಶ್ ಝಾ ಚಿತ್ರಕ್ಕೆ ಪ್ರಮಾಣ ಪತ್ರ ನಿರಾಕರಣೆ: ಸಿಬಿಎಫ್ ಸಿ'ಗೆ ಬಾಲಿವುಡ್ ತರಾಟೆ]

  ಹೌದು, 'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' ಚಿತ್ರಕ್ಕೆ ಸಿಬಿಎಫ್ ಸಿ ಅಧ್ಯಕ್ಷ ಪಹ್ಲಜ್ ನಿಹಲಾನಿ ಅವರು ಪ್ರಮಾಣ ಪತ್ರ ನೀಡಲು ತಿರಸ್ಕರಿಸಿ, ಭಾರತದ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ನಿರಾಕರಿಸಿದ್ದರು. ಇದೇ ಸಿನಿಮಾ ಈಗ ಲಾಸ್ ಏಂಜಲೀಸ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನಕ್ಕೆ ಆಯ್ಕೆ ಆಗಿದೆ.

  'ಗೋಲ್ಡೆನ್ ಗ್ಲೋಬ್ ಪ್ರಶಸ್ತಿ'ಗಾಗಿ ಎಂಟ್ರಿ ಪಡೆದ ಸಿನಿಮಾ

  'ಗೋಲ್ಡೆನ್ ಗ್ಲೋಬ್ ಪ್ರಶಸ್ತಿ'ಗಾಗಿ ಎಂಟ್ರಿ ಪಡೆದ ಸಿನಿಮಾ

  ಭಾರತದಲ್ಲಿ ಪ್ರದರ್ಶನಕ್ಕೆ ತಿರಸ್ಕರಿಸಲ್ಪಟ್ಟ 'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' ಚಿತ್ರ, ಹಾಲಿವುಡ್ ಫಾರಿನ್ ಪ್ರೆಸ್ ಅಸೋಶಿಯೇಷನ್(ಎಚ್ಎಫ್‌ಪಿಎ) ವತಿಯಿಂದ, ಲಾಸ್ ಏಂಜಲೀಸ್ ನಲ್ಲಿ ನಡೆಯುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಅಧಿಕೃತವಾಗಿ ಎಂಟ್ರಿ ಪಡೆದಿದೆ.

  'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' ನಾಮನಿರ್ದೇಶನಕ್ಕೆ ಅವಕಾಶ

  'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' ನಾಮನಿರ್ದೇಶನಕ್ಕೆ ಅವಕಾಶ

  " ಎಚ್ಎಫ್‌ಪಿಎ 'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' ಚಿತ್ರವನ್ನು ಗೋಲ್ಡೆನ್ ಗ್ಲೋಬ್ಸ್ ಗೆ ಅಧಿಕೃತವಾಗಿ ಚಿತ್ರ ಪ್ರದರ್ಶನ ಮಾಡಲು ಆಯ್ಕೆ ಮಾಡಿದೆ. ಈ ಚಿತ್ರದ ನಿರ್ದೇಶಕರು ಈಗ 'ಗೋಲ್ಡೆನ್ ಗ್ಲೋಬ್ಸ್ ಪ್ರಶಸ್ತಿ'ಗೆ ನಾಮ ನಿರ್ದೇಶನ ಮಾಡಲು ನಿಖರವಾದ ಯೋಜನೆ ಮಾಡಿಕೊಳ್ಳಬಹುದು" ಎಂದು 'ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಲಾಸ್ ಏಂಜಲೀಸ್'ನ ನಿರ್ದೇಶಕರಾದ ಕ್ರಿಸ್ಟಿನಾ ಮರೌಡಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

  ಅಲಂಕೃತ ಶ್ರೀವತ್ಸವ ಪ್ರತಿಕ್ರಿಯೆ

  ಅಲಂಕೃತ ಶ್ರೀವತ್ಸವ ಪ್ರತಿಕ್ರಿಯೆ

  ತಮ್ಮ ನಿರ್ದೇಶನದ ಚಿತ್ರ 'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' ಚಿತ್ರವನ್ನು ಎಚ್‌ಎಫ್‌ಪಿಎ ಆಯ್ಕೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ಅಲಂಕೃತ ಶ್ರೀವತ್ಸವ, "ನನಗೆ ಈಗಲೂ ನಂಬಲು ಆಗುತ್ತಿಲ್ಲ. ಎಚ್‌ಎಫ್‌ಪಿಎ ನಮ್ಮ ಚಿತ್ರವು ಗೋಲ್ಡೆನ್ ಗ್ಲೋಬ್ಸ್ ಗೆ ನಾಮ ನಿರ್ದೆಶನದ ಪಡೆಯಬಹುದು ಎಂದು ಚಿಂತಿಸಿರುವುದಕ್ಕೆ ನನಗೆ ಸಂತೋಷವಾಗಿದೆ. ಅಲ್ಲದೇ ಚಿತ್ರಕ್ಕೆ ಸಿಕ್ಕ ನಿಜವಾದ ಗೌರವ ಇದಾಗಿದೆ" ಎಂದಿದ್ದಾರೆ.

  ಸಿಬಿಎಫ್ ಸಿ ಪ್ರಮಾಣ ಪತ್ರ ನೀಡಲು ತಿರಸ್ಕರಿಸಿದ್ದ ಚಿತ್ರ

  ಸಿಬಿಎಫ್ ಸಿ ಪ್ರಮಾಣ ಪತ್ರ ನೀಡಲು ತಿರಸ್ಕರಿಸಿದ್ದ ಚಿತ್ರ

  " 'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' ಚಿತ್ರ ಮಹಿಳಾ ಪ್ರಧಾನವಾಗಿದ್ದು, ಅವರ ಫ್ಯಾಂಟಸಿ ಬದುಕಿನ ಕುರಿತಾಗಿದೆ. ಲೈಂಗಿಕ ದೃಶ್ಯಾವಳಿಗಳು, ನಿಂದನಾತ್ಮಕ ಪದಗಳು, ಅಶ್ಲೀಲ ಧ್ವನಿಗಳು ಮತ್ತು ಸಮಾಜದ ನಿರ್ಧಿಷ್ಟ ವರ್ಗದ ಮೇಲೆ ಪರಿಣಾಮ ಬೀರುವ ಸೂಕ್ಷ್ಮ ವಿಷಯಗಳನ್ನು ಹೊಂದಿದೆ" ಎಂಬ ಕಾರಣದಿಂದ ಸಿಬಿಎಫ್ ಸಿ ಪ್ರಮಾಣ ಪತ್ರ ನೀಡಲು ತಿರಸ್ಕರಿಸಿತ್ತು.

  ಚಿತ್ರದ ತಾರಾಬಳಗ

  ಚಿತ್ರದ ತಾರಾಬಳಗ

  ಅಲಂಕೃತಾ ಶ್ರೀವತ್ಸವ ನಿರ್ದೇಶನದ 'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' 4 ಗ್ರಾಮೀಣ ಮಹಿಳೆಯರು ಸಂಪ್ರದಾಯವನ್ನು ಮೀರಿ ತಮ್ಮ ಕನಸುಗಳು ಮತ್ತು ಆಸೆಗಳನ್ನು ತೀರಿಸಿಕೊಳ್ಳಲು ಹೋಗುವಂತ ಚಿತ್ರಕಥೆ ಹೊಂದಿರುವ ವಿಭಿನ್ನ ಸಿನಿಮಾ. ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕೊಂಕೊನಾ ಸೆನ್ ಶರ್ಮಾ, ರತ್ನ ಪಠಾಕ್ ಶಾಹ್, ಅಹನಾ ಕುಂರ ಮತ್ತು ಪ್ಲಬಿತಾ ಬೋರ್ತಾಕುರ್ ಅಭಿನಯಿಸಿದ್ದಾರೆ.

  English summary
  The Central Board of Film Certification (CBFC) may have denied the theatrical release of Prakash Jha’s Lipstick Under My Burkha in India, the film is being appreciated worldwide. In a recent development, the film has been declared eligible for an entry at the Golden Globes!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X