»   » ಪ್ರಕಾಶ್ ಝಾ ಚಿತ್ರಕ್ಕೆ ಪ್ರಮಾಣ ಪತ್ರ ನಿರಾಕರಣೆ: ಸಿಬಿಎಫ್ ಸಿ'ಗೆ ಬಾಲಿವುಡ್ ತರಾಟೆ

ಪ್ರಕಾಶ್ ಝಾ ಚಿತ್ರಕ್ಕೆ ಪ್ರಮಾಣ ಪತ್ರ ನಿರಾಕರಣೆ: ಸಿಬಿಎಫ್ ಸಿ'ಗೆ ಬಾಲಿವುಡ್ ತರಾಟೆ

Posted By:
Subscribe to Filmibeat Kannada

ಪ್ರಕಾಶ್ ಝಾ ನಿರ್ಮಾಣದ 'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' ಚಿತ್ರ ಇತ್ತೀಚೆಗಷ್ಟೇ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಬಿಡುಗಡೆಗೆ ಸಿದ್ಧತೆ ನಡೆಸುತ್ತಿತ್ತು. ಆದರೆ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು(ಸಿಬಿಎಫ್ ಸಿ) ಪ್ರಮಾಣ ಪತ್ರ ನೀಡಲು ನಿರಾಕರಿಸಿದೆ.

ಅಲಂಕೃತಾ ಶ್ರೀವತ್ಸವ ನಿರ್ದೇಶನದ 'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' 4 ಗ್ರಾಮೀಣ ಮಹಿಳೆಯರು ಸಂಪ್ರದಾಯವನ್ನು ಮೀರಿ ತಮ್ಮ ಕನಸುಗಳು ಮತ್ತು ಆಸೆಗಳನ್ನು ತೀರಿಸಿಕೊಳ್ಳಲು ಹೋಗುವಂತ ಚಿತ್ರಕಥೆ ಹೊಂದಿರುವ ವಿಭಿನ್ನ ಸಿನಿಮಾ. ಈ ಚಿತ್ರಕ್ಕೆ ಈಗ ಸಿಬಿಎಫ್ ಸಿ ಸರ್ಟಿಫಿಕೇಟ್ ನೀಡಲು ನಿರಾಕರಿಸಿದ್ದು, ಬಾಲಿವುಡ್ ಚಿತ್ರರಂಗದ ಹಲವರು ಸಿಬಿಎಫ್ ಸಿ ನಿರ್ಧಾರವನ್ನು ಖಂಡಿಸಿದ್ದಾರೆ.

ಸಿಬಿಎಫ್ ಸಿ ಸರ್ಟಿಫೀಕೇಟ್ ನೀಡಲು ನಿರಾಕರಿಸಲು ಕಾರಣ

" 'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' ಚಿತ್ರ ಮಹಿಳಾ ಪ್ರಧಾನವಾಗಿದ್ದು, ಅವರ ಫ್ಯಾಂಟಸಿ ಬದುಕಿನ ಕುರಿತಾಗಿದೆ. ಲೈಂಗಿಕ ದೃಶ್ಯಾವಳಿಗಳು, ನಿಂದನಾತ್ಮಕ ಪದಗಳು, ಅಶ್ಲೀಲ ಧ್ವನಿಗಳು ಮತ್ತು ಸಮಾಜದ ನಿರ್ಧಿಷ್ಟ ವರ್ಗದ ಮೇಲೆ ಪರಿಣಾಮ ಬೀರುವ ಸೂಕ್ಷ್ಮ ವಿಷಯಗಳನ್ನು ಹೊಂದಿದೆ. ಆದ್ದರಿಂದ ಪ್ರಮಾಣ ಪತ್ರ ನೀಡಲು ನಿರಾಕರಿಸಲಾಗಿದೆ", ಎಂಬ ಮಾಹಿತಿ ಇರುವ ಲೆಟರ್ ಅನ್ನು ಬಾಲಿವುಡ್ ನಟ ಫರ್ಹಾನ್ ಅಖ್ತರ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಸಿನಿಮಾ ಸೆನ್ಸಾರ್ ಮಾಡಬಾರದು

'ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ' ಚಿತ್ರಕ್ಕೆ ಪ್ರಮಾಣ ಪತ್ರ ನೀಡಲು ತಿರಸ್ಕರಿಸಿರುವ ಸಿಬಿಎಫ್ ಸಿ ನಡೆಯನ್ನು, ನಿರ್ದೇಶಕ ಶ್ಯಾಮ್ ಬೆನಗಲ್ ಅವರು ಟೀಕಿಸಿದ್ದು, " ಸಿಬಿಎಫ್ ಸಿ ಚಿತ್ರವನ್ನು ಪ್ರಮಾಣೀಕರಿಸಬೇಕೇ ಹೊರತು, ಸೆನ್ಸಾರ್ ಮಾಡಬಾರದು. ಸಿನಿಮಾಗಳ ಸೆನ್ಸಾರ್ ಶಿಪ್ ಅನ್ನು ನಾನು ವಿರೋಧಿಸುತ್ತೇನೆ. ಸಿನಿಮಾ ರಿಲೀಸ್ ಆಗದಂತೆ ತಡೆಯುವುದು ಸಮರ್ಥನೀಯವಲ್ಲ ಎಂದು ಹೇಳಿದ್ದಾರೆ.

ಸಿಬಿಎಫ್ ಸಿ ಅಧ್ಯಕ್ಷರಿಗೆ ತರಾಟೆ

" ಸಿನಿಮಾಗೆ ಸೆನ್ಸಾರ್ ಸರ್ಟಿಫಿಕೇಟ್ ನೀಡಲು ನಿರಾಕರಿಸಿರುವುದನ್ನು ಖಂಡಿಸುತ್ತೇನೆ. ಇದು ಪಹ್ಲಜ್ ನಿಹಲಾನಿ ಅವರ ಅಹಂಕಾರದ ನಡೆ", ಎಂದು ಫಿಲ್ಮ್ ಮೇಕರ್ ಅಶೋಕ್ ಪಂಡಿತ್ ಟ್ವೀಟ್ ಮಾಡಿದ್ದಾರೆ.

ಯುವಜನರಿಗೆ ಹಕ್ಕಿದೆ

"ಯುವ ಪತ್ರಿಭಾವಂತೆ ನಿರ್ದೇಶಕಿ ಅಲಂಕೃತಾ ತಮ್ಮ ಸಿನಿಮಾವನ್ನು ರಿಲೀಸ್ ಮಾಡದಂತೆ ತಡೆಯಲು ಯಾರಿಗೆ ಯಾವ ಹಕ್ಕಿದೆ. ಸಿಬಿಎಫ್ ಸಿ ಇಷ್ಟಪಟ್ಟಿದೆ ಅಥವಾ ಇಲ್ಲ ಎನ್ನುವುದು ಮುಖ್ಯವಲ್ಲ. ಯುವ ಪ್ರತಿಭೆಗಳು ತಮ್ಮ ತನವನ್ನು ಅಭಿವ್ಯಕ್ತಿಗೊಳಿಸಲು ಯುವ ಜನರಿಗೆ ಹಕ್ಕಿದೆ", ಎಂದು ಹಿರಿಯ ನಿರ್ದೇಶಕರಾದ ಸುಧೀರ್ ಮಿಶ್ರಾ ಹೇಳಿದ್ದಾರೆ.

ವಿಪರ್ಯಾಸ..

" ಲಿಂಗ ಸಮಾನತೆ ಬಗ್ಗೆ ಬಿಂಬಿಸಿದ್ದಕ್ಕೆ ಪ್ರಶಸ್ತಿ ಪಡೆದ ಸಿನಿಮಾವನ್ನು 'ಮಹಿಳೆಯ ಕುರಿತಾದದ್ದು' ಎಂದು ಸ್ತ್ರೀವಾದ ವಿರೋಧಿಯಾಗಿ ನೋಡುತ್ತಿರುವುದು ಒಂದು ವಿಪರ್ಯಾಸ" - ನೀರಜ್ ಘಾಯ್ವಾನ್, ನಿರ್ದೇಶಕ

English summary
Farhan, Shyam Benegal and Ashoke Pandit slam CBFC over Lipstick Under My Burkha row

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada