ಆಲಿಯಾ ಭಟ್ ನಟನೆಯ 'ಗಂಗೂಬಾಯಿ ಕಾಠಿಯಾವಾಡಿ' ರಿಲೀಸ್ ಡೇಟ್ ರಿವೀಲ್: ಯಾವಾಗ ಬಿಡುಗಡೆ?
ಆಲಿಯಾ ಭಟ್ ಅಭಿನಯದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಗಂಗೂಬಾಯಿ ಕಾಠಿಯಾವಾಡಿ'. ಕಳೆದ ವರ್ಷ ಮಾರ್ಚ್‌ನಿಂದ ಈ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹರಸಾಹಸ ಪಡುತ್ತಲೇ ಇದ್ದಾರೆ. ಪ್ರತಿ ಬಾರಿ ಬಿಡುಗಡೆಗೆ ಮುಂದಾದಾಗಲೂ ಕೊರೊನಾ ಅವರಿಗೆ ಎದುರಾಗಿದೆ. ಹೀಗಾಗಿ ನಾಲ್ಕೈದು ಬಾರಿ ರಿಲೀಸ್ ಡೇಟ್ ಅನ್ನು ಮುಂದೂಡುತ್ತಲೇ ಬಂದಿದ್ದಾರೆ. ಕೊನೆಗೂ ಹೊಸ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದ್ದಾರೆ.
Recommended Video
'ಗಂಗೂಬಾಯಿ ಕಾಠಿಯಾವಾಡಿ' ಆಲಿಯಾ ಭಟ್ ವೃತ್ತಿ ಬದುಕಿನಲ್ಲಿಯೇ ವಿಭಿನ್ನ ಸಿನಿಮಾ. ಚಿಕ್ಕ ವಯಸ್ಸಿನಲ್ಲಿಯೇ ಆಲಿಯಾ ಭಟ್ ಇಂತಹದ್ದೊಂದು ಪ್ರಬುದ್ಧ ಪಾತ್ರದಲ್ಲಿ ನಟಿಸಿದ್ದು, ಕುತೂಹಲಕ್ಕೆ ಪ್ರಮುಖ ಕಾರಣ. ಅಲ್ಲದೆ ಸಂಜಯ್ ಲೀಲಾ ಬನ್ಸಾಲಿಯಂತಹ ನಿರ್ದೇಶಕರು ಈ ಸಿನಿಮಾ ಮಾಡಲು ಮುಂದೆ ಬಂದಿದ್ದು ಬಾಲಿವುಡ್‌ನಲ್ಲಿ ಹಲ್‌ಚಲ್ ಎಬ್ಬಿಸಿತ್ತು. ಹೀಗಾಗಿ ಸಿನಿಮಾ ನೋಡಲು ಕಾದು ಕಾದು ಸುಸ್ತಾಗಿದ್ದ ಆಲಿಯಾ ಫ್ಯಾನ್ಸ್‌ಗೆ ಕೊನೆಗೂ ಹೊಸ ರಿಲೀಸ್ ಡೇಟ್ ಸಿಕ್ಕಿದೆ.
ಫೆಬ್ರವರಿ 25ಕ್ಕೆ ಗಂಗೂಬಾಯಿ ರಿಲೀಸ್
'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ಈ ವರ್ಷ ಬಿಡುಗಡೆಯಾಗುತ್ತಿರುವ ಬಹು ನಿರೀಕ್ಷೆಯ ಸಿನಿಮಾಗಳಲ್ಲೊಂದು. ಇದಕ್ಕೆ ಇಬ್ಬರು ಕಾರಣ. ಒಬ್ಬರು ಗಂಗೂಬಾಯಿ ಪಾತ್ರಧಾರಿ ಆಲಿಯಾ ಭಟ್. ಇನ್ನೊಬ್ಬರು ಈ ಸಿನಿಮಾದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ. ಇದೇ ಮೊದಲ ಬಾರಿಗೆ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಹಲವು ಬಾರಿ ಬಿಡುಗಡೆಯನ್ನು ಪೋಸ್ಟ್‌ಪೋನ್ ಮಾಡಿದ ಬಳಿಕ ಸಂಜಯ್ ಲೀಲಾ ಬನ್ಸಾಲಿ ಫೆಬ್ರವರಿ 25ಕ್ಕೆ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿ ನಿಂತಿದೆ.

ಗಂಗೂಬಾಯಿ ಕಾಠಿಯಾವಾಡಿ ಕಥೆಯೇನು?
'ಗಂಗೂಬಾಯಿ ಕಾಠಿಯಾವಾಡಿ' ಹುಸೈನ್ ಜೈದಿ ಬರೆದ ಪುಸ್ತಕವನ್ನು ಆಧರಿಸಿದ ಬಯೋಗ್ರಾಫಿಕಲ್ ಕೈಂ ಡ್ರಾಮಾ. ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಸೆಕ್ಸ್ ವರ್ಕರ್ ಆಗಿದ್ದ ಮಾಫಿಯಾ ಕ್ವೀನ್ ಜೀವನವನ್ನು ಆಧರಿಸಿದ ಸಿನಿಮಾ. ಸಿನಿಮಾದಲ್ಲಿ ನಟಿಸುವ ಕನಸು ಹೊತ್ತು ಮುಂಬೈಗೆ ಬಂದಿದ್ದ ಯುವತಿ ಮೋಸಕ್ಕೆ ಬಿದ್ದು ಮುಂಬೈನ ರೆಡ್ ಲೈಟ್ ಏರಿಯಾ ಸೇರುವ ಕಥೆ. ಮುಂದೊಂದು ದಿನ ಅದೇ ಕಾಮಾಟಿಪುರದ ಅಧಿ ನಾಯಕಿಯಾಗಿ ಬೆಳೆಯುವ ಪಾತ್ರದಲ್ಲಿ ಅಲಿಯಾ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್ ಪ್ರೇಕ್ಷಕರಿಗೆ ಇಷ್ಟ ಆಗಿದೆ.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ
'ಗಂಗೂಬಾಯಿ ಕಾಠಿಯಾವಾಡಿ' ಭಾರತದಲ್ಲಿ ಬಿಡುಗಡೆಯಾಗುವುದಕ್ಕೂ ಮುನ್ನ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ. 72ನೇ ಬರ್ಲಿನ್ ಚಲನ ಚಿತ್ರೋತ್ಸವದಲ್ಲಿ ಈ ಸಿನಿಮಾ ಆಯ್ಕೆಯಾಗಿದೆ ಎಂದು ನ್ಯೂಸ್ ಎಜೆನ್ಸಿ ಪಿಟಿಐ ವರದಿ ಮಾಡಿದೆ. ಹೀಗಾಗಿ ಫೆಬ್ರವರಿ 25ರಂದು ಬಿಡುಗಡೆಗೂ ಮುನ್ನ ಆಲಿಯಾ ಭಟ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ.

ಆಲಿಯಾಳ 3-4 ಸಿನಿಮಾ ರಿಲೀಸ್
ಈ ವರ್ಷ ಆಲಿಯಾ ಭಟ್ ಸಿನಿಮಾ ಬ್ಯಾಕ್ ಟು ಬ್ಯಾಕ್ ಬಿಡುಗಡೆಯಾಗಲಿದೆ. 'ಗಂಗೂಬಾಯಿ ಕಾಠಿಯಾವಾಡಿ' ಈ ವರ್ಷ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾಗಿದ್ದರೆ. ಇನ್ನೊಂದೆಡೆ, RRR ಸಿನಿಮಾ ಮಾರ್ಚ್ ಇಲ್ಲವೇ ಏಪ್ರಿಲ್ ತಿಂಗಳ ಅಂತ್ಯದಲ್ಲಿ ರಿಲೀಸ್ ಆಗುತ್ತಿದೆ. ಹಾಗೇ ಬಾಯ್‌ಫ್ರೆಂಡ್ ರಣ್‌ಬೀರ್ ಕಪೂರ್ ಜೊತೆ ನಟಿಸಿದ 'ಬ್ರಹ್ಮಾಸ್ತ್ರ' ಕೂಡ ಇದೇ ವರ್ಷ ರಿಲೀಸ್ ಆಗಲಿದೆ. ಆಲಿಯಾ ಅಭಿಮಾನಿಗಳಿಗೆ ಈ ವರ್ಷ ಬಂಪರ್ ಆಫರ್ ಸಿಕ್ಕಿದೆ ಎನ್ನಬಹುದು.


Click it and Unblock the Notifications











