ಹೆಣ್ಣು ಮಗುವಿನ ಪೋಷಕರಾದ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್‌!

ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಇಬ್ಬರೂ ಐದು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು. ಆ ಬಳಿಕವಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೇ ವರ್ಷ ಏಪ್ರಿಲ್ 14ರಂದು ಈ ಜೋಡಿ ಕೌಟುಂಬಿಕ ಜೀವನಕ್ಕೆ ಕಾಲಿಟ್ಟಿತ್ತು.

ಕೇವಲ ಆತ್ಮೀಯರು ಹಾಗೂ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಈ ಜೋಡಿ ವಿವಾಹವಾಗಿತ್ತು. ಮದುವೆಯಾದ ಎರಡೇ ತಿಂಗಳಿಗೆ ಈ ಜೋಡಿ ತಮ್ಮ ಅಭಿಮಾನಿಗಳುಗೆ ಗುಡ್‌ ನ್ಯೂಸ್ ನೀಡಿತ್ತು. ಸ್ವತ: ಆಲಿಯಾ ಭಟ್ ಈ ಖುಷಿ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಬಾಲಿವುಡ್ ಮೂಲಗಳ ಪ್ರಕಾರ, ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಪೋಷಕರಾಗಿದ್ದು, ಇಂದು (ನೆವೆಂಬರ್ 06) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಅಂತ ವರದಿಯಾಗಿದೆ. ಈ ವರ್ಷ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಇಬ್ಬರಿಗೂ ಸಕ್ಸಸ್ ಸಿಕ್ಕಿದ್ದು, ಆ ಖುಷಿಯೊಂದಿಗೆ ಮತ್ತೊಂದು ಖುಷಿ ಸೇರ್ಪಡೆಯಾಗಿದೆ.

ಆಲಿಯಾ-ರಣ್‌ಬೀರ್ ಹೆಣ್ಣು ಮಗು

ಆಲಿಯಾ-ರಣ್‌ಬೀರ್ ಹೆಣ್ಣು ಮಗು

ಕಪೂರ್ ಹಾಗೂ ಭಟ್‌ ಕುಟುಂಬಕ್ಕೆ ಈ ದಿನ (ನವೆಂಬರ್ 6) ಸಂಭ್ರಮದ ದಿನ. ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಮೊದಲು ಮಗುವಿನ ನಿರೀಕ್ಷೆಯಲ್ಲಿದ್ದರು. ಅದರಂತೆ ಈ ಜೋಡಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಇಂದು (ನವೆಂಬರ್ 6) ಆಲಿಯಾ ಭಟ್‌ರನ್ನು ಮುಂಬೈನ ಹೆಚ್‌ ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬೆಳಗ್ಗೆಯಿಂದ ಕಪೂರ್ ಕುಟುಂಬ ಹಾಗೂ ಮಹೇಶ್ ಭಟ್ ಕುಟುಂಬ ಆಸ್ಪತ್ರೆಗೆ ದೌಡಾಯಿಸಿತ್ತು.

ಎರಡೂ ಕುಟುಂಬದಲ್ಲಿ ಸಂಭ್ರಮ

ಎರಡೂ ಕುಟುಂಬದಲ್ಲಿ ಸಂಭ್ರಮ

ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಎರಡೂ ಕುಟುಂಬಗಳ ಸಂಭ್ರಮಕ್ಕೆ ಕಾರಣರಾಗಿದ್ದಾರೆ. ಬೆಳ್ಳಂಬೆಳಗ್ಗೆನೇ ರಣ್‌ಬೀರ್ ಕಪೂರ್ ಅಮ್ಮ ನೀತು ಕಪೂರ್ ಹಾಗೂ ಅತ್ತೆ ಸೋನಿ ರಜ್ದಾನ್ ಸೇರಿದಂತೆ ಶಾಹೀನ್ ಭಟ್ ಆಸ್ಪತ್ರೆಯಲ್ಲೇ ಇದ್ದರು. ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿದ್ದು, ನಿರ್ದೇಶಕ ಮಹೇಶ್ ಭಟ್, ಸೋನಿ ರಜ್ದಾನ್, ನೀತು ಕಪೂರ್ ಸೇರಿದಂತೆ ಕುಟುಂಬದ ಸದಸ್ಯರು ಸಂಭ್ರಮದಲ್ಲಿ ಮುಳುಗಿದ್ದಾರೆ. ಅಲ್ಲದೆ, ಬಾಲಿವುಡ್‌ ಸ್ಟಾರ್‌ಗಳು ಕೂಡ ಸ್ಟಾರ್ ದಂಪತಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ತಿಂಗಳುಗಳಿಂದಲೇ ಸಿದ್ಧತೆ

ತಿಂಗಳುಗಳಿಂದಲೇ ಸಿದ್ಧತೆ

ರಣ್‌ಬೀರ್ ಹಾಗೂ ಆಲಿಯಾ ಭಟ್ ಇಬ್ಬರೂ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದರು. ತಿಂಗಳುಗಳಿಂದಲೇ ಅದಕ್ಕೆ ಬೇಕಾಗಿರೋ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆಲಿಯಾ ಮಗುವನ್ನು ಹೇಗೆ ಬೆಳೆಸಬೇಕು ಅನ್ನೋ ಬಗ್ಗೆ ಪುಸ್ತಕವನ್ನು ಓದುವಂತೆ ರಣ್‌ಬೀರ್ ಮೇಲೆ ಒತ್ತಡ ಹೇರುತ್ತಿದ್ದರಂತೆ. ಆದರೆ, ಪುಸ್ತಕಗಳು ನಮಗೆ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದನ್ನು ಕಲಿಸುವುದಿಲ್ಲ ಎಂಬುದು ರಣ್‌ಬೀರ್ ವಾದವಾಗಿತ್ತಂತೆ. ಈ ಮಾತನ್ನು ಸ್ವತ: ರಣ್‌ಬೀರ್ ಕಫೂರ್ ಬಾಲಿವುಡ್‌ ವೆಬ್‌ ಸೈಟ್ ಒಂದಕ್ಕೆ ಹೇಳಿದ್ದರು.

ಆಲಿಯಾ-ರಣ್‌ಬೀರ್ ಇಬ್ಬರಿಗೂ ಲಕ್ಕಿ ವರ್ಷ

ಆಲಿಯಾ-ರಣ್‌ಬೀರ್ ಇಬ್ಬರಿಗೂ ಲಕ್ಕಿ ವರ್ಷ

ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಇಬ್ಬರಿಗೂ ಈ ವರ್ಷ ಸಿಕ್ಕಿದೆ. 'ಬ್ರಹ್ಮಾಸ್ತ್ರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದ ಖುಷಿಯಲ್ಲಿರೋರಿಗೆ ಮತ್ತೊಂದು ಖುಷಿ ಸಿಕ್ಕಿದೆ. ಆಲಿಯಾ ಸಿನಿಮಾದಿಂದ ಬ್ರೇಕ್ ತೆಗೆದುಕೊಳ್ಳುವ ಮುನ್ನ ಹಾಲಿವುಡ್‌ ಸಿನಿಮಾದಲ್ಲಿ ನಟಿಸಿದ್ದರು. ವಂಡರ್‌ವುಮನ್ ಖ್ಯಾತಿಯ ಗಾಲ್ ಗಾಡೋಟ್ ನಟಿಸಿರೊ 'ಹಾರ್ಟ್ ಆಫ್ ಸ್ಟೋನ್' ಸಿನಿಮಾದಲ್ಲಿ ನಟಿಸಿ ಬಂದಿದ್ದಾರೆ. ರಣ್‌ಬೀರ್ ಕಪೂರ್ 'ಅನಿಮಲ್' ಹಾಗೂ ಲವ್ ರಂಜನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Alia Bhatt And Ranbir Kapoor Became Parents Blessed With Baby Girl, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X