ಮಗಳ ಫೋಟೊಗಳನ್ನು ಡಿಲೀಟ್ ಮಾಡಿದ ಆಲಿಯಾ ಭಟ್: ಕಪೂರ್ ಕುಟುಂಬದಲ್ಲಿ ಏನಾಗ್ತಿದೆ?
ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಬಾಲಿವುಡ್‌ನ ಪವರ್‌ಫುಲ್ ಕಪಲ್. ಇಬ್ಬರೂ ಬಾಲಿವುಡ್‌ನ ಜನಪ್ರಿಯ ಕುಟುಂಬಕ್ಕೆ ಸೇರಿದವರು. ಆಲಿಯಾ ಹಾಗೂ ರಣ್‌ಬೀರ್ ಕಪೂರ್ ಇಬ್ಬರೂ ಕೆಲವು ದಿನಗಳು ಡೇಟಿಂಗ್ ಮಾಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಗೆ ರಾಗಾ ಕಪೂರ್ ಎಂಬ ಮುದ್ದಾದ ಪುತ್ರಿ ಕೂಡ ಇದ್ದಾಳೆ. ದಿಢೀರನೇ ಆಲಿಯಾ ಭಟ್ ಮಗಳ ಫೋಟೊಗಳನ್ನೆಲ್ಲ ಡಿಲೀಟ್ ಮಾಡಿದ್ದಾರೆ.
ಆಲಿಯಾ ಭಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ತಮ್ಮ ಫೋಟೊಗಳನ್ನು ಆಗಾಗ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡುತ್ತಿರುತ್ತಾರೆ. ಪತಿ ರಣ್‌ಬೀರ್ ಕಪೂರ್ ಜೊತೆಗಿರುವ ಫೋಟೊಗಳು, ಪುತ್ರಿ ರಾಹಾ ಕಪೂರ್ ಜೊತೆಗಿನ ಫೋಟೊಗಳನ್ನು ನಿರಂತರವಾಗಿ ಶೇರ್ ಮಾಡುತ್ತಲೇ ಇದ್ದರು. ಆದರೆ, ಇದ್ದಕ್ಕಿಂತೆ ಆ ಫೋಟೊಗಳನ್ನೆಲ್ಲ ಏಕಾಏಕಿ ಡಿಲೀಟ್ ಮಾಡಿದ್ದಾರೆ.

ಆಲಿಯಾ ಭಟ್ ತಮ್ಮ ಬದುಕಿನ ಪ್ರತಿಯೊಂದು ಮಹತ್ವದ ಮಾಹಿತಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ರಣ್‌ಬೀರ್ ಕಪೂರ್ ಜೊತೆಗಿನ ಮದುವೆ, ಪ್ರೆಗ್ನೆನ್ಸಿ, ಮಗು, ಸಿನಿಮಾಗೆ ಸಂಬಂಧಿಸಿದ ವಿಷಯಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆದರೆ, ಮಗಳ ವಿಷಯ ಬಂದಾಗ ಆಲಿಯಾ ಭಟ್ ಸಿಕ್ಕಾಪಟ್ಟೆ ಕಟ್ಟುನಿಟ್ಟಿನ ನಿಯಮಗಳನ್ನು ಹಾಕಿಕೊಂಡಿದ್ದಾರೆ. ಈಗ ಆಲಿಯಾ ಭಟ್ ಮಗಳ ಫೋಟೊಗಳನ್ನು ಡಿಲೀಟ್ ಮಾಡಿದ್ದು ಯಾಕೆ ಅನ್ನೋ ಗೊಂದಲ ಅವರ ಅಭಿಮಾನಿಗಳಿಗೆ ಕಾಡುವುದಕ್ಕೆ ಶುರುವಾಗಿದೆ. ಆದರೆ, ರಾಹಾ ಕಪೂರ್ ಫೋಟೊಗಳನ್ನು ಏಕಾಏಕಿ ಡಿಲೀಟ್ ಮಾಡಿದ್ದಕ್ಕೆ ಆಲಿಯಾ ಇನ್ನೂ ಸ್ಪಷ್ಟನೆ ಕೊಟ್ಟಿಲ್ಲ.
ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಇಬ್ಬರೂ ಖಾಸಗಿ ಜೀವನವನ್ನು ಗೌರವಿಸುತ್ತಾರೆ. ಪುತ್ರ ರಾಹಾ ಜನಿಸಿದ ಮೊದಲ ದಿನದಿಂದಲೂ ಅವರು ಕ್ಯಾಮರಾ ಮುಂದೆ ಕರೆದುಕೊಂಡು ಬರುತ್ತಿರಲಿಲ್ಲ. ಆದರೆ, ನಂತರದ ದಿನಗಳಲ್ಲಿ ಪಾಪಾರಾಜಿಗಳಿಗೆ ಪುತ್ರಿ ರಾಹಾ ಕಪೂರ್ ಅನ್ನು ಪರಿಚಿಸಿದ್ದರು. ಯಾವುದೇ ಕಾರ್ಯಕ್ರಮಗಳಿಗೆ ರಾಹಾಳನ್ನು ಕರೆದುಕೊಂಡು ಹೋದರೂ ಪುತ್ರಿಯೊಂದಿಗೆ ಪೋಸ್ ಕೊಡುತ್ತಿದ್ದರು.
2023 ಕ್ರಿಸ್‌ಮಸ್‌ಗೆ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ತಮ್ಮ ಪುತ್ರಿ ರಾಹಾ ಕಪೂರ್ ಅನ್ನು ಪರಿಚಯಿಸಿದ್ದರು. ಅಲ್ಲಿಂದ ಇಲ್ಲಿವರೆಗೂ ಆಲಿಯಾ ಭಟ್ ಪುತ್ರಿಗೆ ಪ್ರತ್ಯೇಕ ಫ್ಯಾನ್ ಫಾಲೋವಿಂಗ್ ಹುಟ್ಟಿಕೊಂಡಿತ್ತು. ಆದ್ರೀಗ ಆಲಿಯಾ ಭಟ್ ಏಕಾಏಕಿ ತಮ್ಮ ಪುತ್ರಿಯ ಫೋಟೊಗಳನ್ನು ಇನ್‌ಸ್ಟಾಗ್ರಾಂ ಖಾತೆಯಿಂದ ಡಿಲೀಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಮಗಳ ಮುಖ ಕಾಣುವಂತಹ ಎಲ್ಲಾ ಫೋಟೊಗಳನ್ನು ಡಿಲೀಟ್ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಿಕ್ಕಾ ಪಟ್ಟೆ ಚರ್ಚೆಯಾಗುತ್ತಿದ್ದು, ಸೈಫ್ ಅಲಿಖಾನ್ ಪ್ರಕರಣದ ಬಳಿಕ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಅಲರ್ಟ್ ಆಗಿದ್ದಾರೆ. ತಮ್ಮ ಮಕ್ಕಳ ರಕ್ಷಣೆಯನ್ನು ಮನಗಂಡು ಇಂತಹದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಬಾಲಿವುಡ್‌ನ ಸ್ಟಾರ್ ದಂಪತಿ ಇನ್ನೂ ಕ್ಲಾರಿಟಿ ಕೊಟ್ಟಿಲ್ಲ. ಆದರೆ, ಆಲಿಯಾ ಭಟ್ ಈ ನಿರ್ಧಾರಕ್ಕೆ ಅಭಿಮಾನಿಗಳು ಬೆಂಬಲ ಸೂಚಿಸಿದ್ದಾರೆ.
" ನಿಜವಾಗಲೂ ಆಲಿಯಾ ಭಟ್ ಉತ್ತಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಪಾಪರಾಜಿಗಳಿಗೆ ಈ ಅರ್ಥ ಆಗಿದೆ ಎಂದು ನನಗೆ ಈಗ ಅನಿಸುತ್ತೆ" ಎಂದು ಒಬ್ಬರ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಸೈಫ್ ಅಲಿ ಖಾನ್ ಪ್ರಕರಣ ಇದಕ್ಕೆಲ್ಲ ಕಾರಣ. ಅವರು ಪಾಪರಾಜಿಗಳಿಗೆ ರಾಹಾ ಕಪೂರ್ ಫೋಟೊಗಳನ್ನು ಕ್ಲಿಕ್ ಮಾಡದೇ ಇರುವಂತೆ ಮನವಿ ಮಾಡಿಕೊಂಡಿದ್ದಾರೆ" ಎಂದು ಹೇಳಿದ್ದಾರೆ.


Click it and Unblock the Notifications











