2023ರಲ್ಲಿ ಆಲಿಯಾ ಭಟ್ ಬಳಿಯಿರುವ ಒಟ್ಟು ಆಸ್ತಿ 25 ಮಿಲಿಯನ್ ಡಾಲರ್? ಇದು ಎಷ್ಟು ಕೋಟಿಗೆ ಸಮ?

ಆಲಿಯಾ ಭಟ್ ಬಾಲಿವುಡ್‌ನ ಮೋಸ್ಟ್ ಸಕ್ಸಸ್‌ಫುಲ್ ನಟಿಯರಲ್ಲಿ ಒಬ್ಬರು. ಈ ನಟಿ ಇತ್ತೀಚೆಗೆ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಗಳನ್ನೇ ಬರೆದಿವೆ. ಹೀಗಾಗಿ ಬಾಲಿವುಡ್ ಫಿಲ್ಮ್ ಮೇಕರ್‌ಗಳಿಗೆ ಆಲಿಯಾ ಭಟ್ ಅದೃಷ್ಟ ದೇವತೆಯಾಗಿದ್ದಾಳೆ.

ಕೆಲವು ದಿನ ಮದುವೆ, ಮಗು ಅಂತ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಈಗ ಮತ್ತೆ ಬಾಲಿವುಡ್‌ನಲ್ಲಿ ಆಲಿಯಾ ಭಟ್ ಸದ್ದು ಮಾಡುವುದಕ್ಕೆ ಶುರು ಮಾಡಿದ್ದಾರೆ. ರಣ್‌ವೀರ್ ಸಿಂಗ್ ಜೊತೆ ನಟಿಸಿದ 'ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ' ಬಿಡುಗಡೆಗೆ ಸಜ್ಜಾಗಿದ್ದು ಸದ್ಯ ಈ ಸಿನಿಮಾ ಪ್ರಚಾರದಲ್ಲಿ ಆಲಿಯಾ ಭಟ್ ಬ್ಯುಸಿಯಾಗಿದ್ದಾರೆ.

Alia Bhatt Net Worth 2023 Income, Salary, Career, Age and other details

ಆಲಿಯಾ ಭಟ್ ಕೇವಲ ಸಿನಿಮಾದಲ್ಲಷ್ಟೇ ಅಲ್ಲ, ಮಾಡಲ್, ಗಾಯಕಿ, ನಿರ್ಮಾಪಕಿ ಹಾಗೂ ಉದ್ಯಮಿಯೂ ಹೌದು. ಹೀಗಾಗಿ ರಣ್‌ಬೀರ್ ಕಪೂರ್ ಪತ್ನಿಯ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. 2023ಯಲ್ಲೂ ಆಲಿಯಾ ಭಟ್ ಬಳಿ ಒಟ್ಟು 25 ಮಿಲಿಯನ್ ಡಾಲರ್ ಆಸ್ತಿ ಇದೆ ಎಂದು ವರದಿಯಾಗಿದೆ. ಅಷ್ಟಕ್ಕೂ ಭಾರತದ ರೂಪಾಯಿಗೆ ಕನ್ವರ್ಟ್ ಮಾಡಿದರೆ ಎಷ್ಟು ಕೋಟಿಯಾಗುತ್ತೆ? ಈ ಹಣದ ಮೂಲ ಯಾವುದು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಆಲಿಯಾ ಭಟ್ ಬಳಿ ಎಷ್ಟು ಕೋಟಿ ಆಸ್ತಿಯಿದೆ?

ಆಲಿಯಾ ಭಟ್ ಇದೂವರೆಗೂ ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಅತೀ ಹೆಚ್ಚು ಸಕಸ್ಸ್ ಸಿನಿಮಾಗಳನ್ನು ಕೊಟ್ಟ ನಟಿಯೀಕೆ. ಹೀಗಾಗಿ ಆಲಿಯಾ ಭಟ್ ಕೇವಲ ಸಿನಿಮಾ ಅಷ್ಟೇ ಅಲ್ಲ ಬೇರೆ ಬೇರೆ ಮೂಲಗಳಿಂದ ಹಣ ಸಂಪಾಧನೆ ಮಾಡಿದ್ದಾರೆ. ಸದ್ಯದ ವರದಿ ಪ್ರಕಾರ, 2023ಯಲ್ಲಿ ಆಲಿಯಾ ಭಟ್ ಬಳಿ 25 ಮಿಲಿಯನ್ ಡಾಲರ್ ಆಸ್ತಿಯಿದೆ. 25 ಮಿಲಿಯನ್ ಡಾಲರ್ ಹಣವನ್ನು ಭಾರತದ 204 ಕೋಟಿ ರೂಪಾಯಿಗೆ ಸಮ ಎಂದು ವರದಿಯಾಗಿದೆ. ಇಷ್ಟು ದೊಡ್ಡ ಮೊತ್ತದ ಆಸ್ತಿ ಕೇವಲ ಸಿನಿಮಾದಿಂದಷ್ಟೇ ಬಂದಿದ್ದಲ್ಲ. ಇದರಲ್ಲಿ ಜಾಹೀರಾತು, ಬ್ರ್ಯಾಂಡಿಂಗ್, ಉದ್ಯಮ ಹಾಗೂ ಸಿನಿಮಾ ನಿರ್ಮಾಣ ಕೂಡ ಆದಾಯ ಮೂಲವಾಗಿದೆ.

ಒಂದು ತಿಂಗಳಿಗೆ.. ಒಂದು ವರ್ಷಕ್ಕೆ ಎಷ್ಟು ಆದಾಯ?

ಸೆಲೆಬ್ರೆಟಿಗಳ ಆದಾಯ, ಸಂಭಾವನೆ ಬಗ್ಗೆ ವರದಿ ಮಾಡುವ ವೆಬ್‌ಸೈಟ್ ಒಂದು ಆಲಿಯಾ ಭಟ್ ಒಂದು ತಿಂಗಳ ಆದಾಯ ಒಂದು ಕೋಟಿಗೂ ಅಧಿಕ ಎಂದು ಹೇಳಿದೆ. ಹಾಗೇ ಆಲಿಯಾ ಭಟ್ ಒಂದು ವರ್ಷಕ್ಕೆ ಬರೋಬ್ಬರಿ 14 ಕೋಟಿ ರೂ.ಗೂ ಅಧಿಕ ಆದಾಯ ಬರುತ್ತೆ ಎಂದು ಕೂಡ ವರದಿ ಮಾಡಿದೆ. ಒಂದು ಸಿನಿಮಾದಲ್ಲಿ ನಟಿಸಿದರೆ ಆಲಿಯಾ ಭಟ್ 20 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಅಲ್ಲದೆ ಯಾವುದಾದರೂ ಜಾಹೀರಾತಿನ ಬ್ರ್ಯಾಂಡ್ ಅಂಬಾಸಿಡರ್ ಆಗುವುದಕ್ಕೆ 2 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

Alia Bhatt Net Worth 2023 Income, Salary, Career, Age and other details

ಆಲಿಯಾ ಬಳಿ ಇರುವ ಜಾಹೀರಾತು

ನಟಿ ಆಲಿಯಾ ಭಟ್ ಬಿಗ್ ಬ್ರ್ಯಾಂಡ್‌ಗಳಿಗೆ ಜಾಹೀರಾತು ಕೊಟ್ಟಿದ್ದಾರೆ. ಕೋಕಾ ಕೋಲಾ, ಔರೇಲಿಯಾ, ಬ್ಲೆಂಡರ್ಸ್ ಪ್ರೈಡ್, ಕ್ಯಾಡ್ಬರಿ, ಕಾರ್ನೆಟ್ಟೋ, ಫ್ಲಿಪ್‌ಕಾರ್ಟ್, ಲೇಸ್,ಗಾರ್ನಿಯರ್, ಮನ್ಯಾವರ್, ಪ್ರೋಟಿ, ಪೋನ್‌ ಪೇ, ಸ್ಯಾಮ್‌ಸಂಗ್,ಡುರೋಫ್ಲೆಕ್ಸ್, ಫಿಲಿಪ್ಸ್, ಹೀರೊ ಮೋಟೊಕ್ರಾಪ್,ಸನ್‌ಸಿಲ್ಕ್, ಮೇಕ್‌ಮೈ ಟ್ರಿಪ್, ಲಕ್ಸ್, ಊಬರ್ ಈಟ್ಸ್, ಸನ್‌ಫೀಸ್ಟ್ ಡಾರ್ಕ್ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಜಾಹೀರಾತಿನಲ್ಲಿ ನಟಿಸಿದ್ದಾರೆ.

ಕೋಟಿ ಲೆಕ್ಕದಲ್ಲಿ ಹೂಡಿಕೆ

ಆಲಿಯಾ ಭಟ್ ಸಿನಿಮಾ, ಜಾಹೀರಾತಿನಲ್ಲಿ ನಟನೆಯನ್ನಷ್ಟೇ ಮಾಡಿಲ್ಲ. ಕೆಲವು ಕಂಪನಿಗಳಲ್ಲಿ ಹೂಡಿಕೆಯನ್ನೂ ಮಾಡಿದ್ದಾರೆ. ಆಲಿಯಾ ಭಟ್ ಬಳಿ ಅವರದ್ದೇ ಫ್ಯಾಷನ್ ಬ್ರ್ಯಾಂಡ್ ಇದೆ. ನೈಕಾ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಕೇವಲ 30ನೇ ವಯಸ್ಸಿನಲ್ಲಿಯೇ ಆಲಿಯಾ ಭಟ್ ಅದ್ಭುತ ಯಶಸ್ಸು ಕಂಡಿದ್ದಾರೆ. ಕೋಟಿಗಳ ಲೆಕ್ಕದಲ್ಲಿ ಹೂಡಿಕೆ ಮಾಡಿದ್ದಾರೆ.

More from Filmibeat

English summary
Alia Bhatt Net Worth 2023 Income, Salary, Career Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X