ನಿಮ್ಮ ಅಭಿಮಾನಿಗಳನ್ನು ನನಗೆ ಕೊಟ್ಟು ಬಿಡಿ ಎಂದು ಗೋಗೆರೆದ ಆಲಿಯಾ ಭಟ್

RRR ಸಿನಿಮಾ ಬಾಲಿವುಡ್ ನಟಿ ಆಲಿಯಾ ಭಟ್ ವೃತ್ತಿ ಬದುಕಿಗೆ ಹೊಸ ಮೈಲಿಗಲ್ಲು ಆಗಬಹುದು. ದಕ್ಷಿಣ ಭಾರತದ ಒಂದೇ ಒಂದು ಸಿನಿಮಾ ಆಲಿಯಾ ಆಲೋಚನೆಯನ್ನೇ ಬದಲಿಸಿದೆ. ದಕ್ಷಿಣ ಭಾರತದ ಸಿನಿಮಾಗಳ ಕಡೆ ಒಲವು ಬೆಳೆಯುವಂತೆ ಮಾಡಿದೆ. RRR ಸಿನಿಮಾ ಆಲಿಯಾ ಭಟ್ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಈ ಕಾರಣಕ್ಕೆ ಬಾಲಿವುಡ್ ಕೊಂಚ ಉತ್ಸಾಹದಲ್ಲೇ ಇದ್ದಾರೆ. ಇಲ್ಲಿನ ಫ್ಯಾನ್ಸ್ ಕ್ರೇಜ್ ಕಂಡು ಥ್ರಿಲ್ ಆಗಿದ್ದಾರೆ.

ಆಲಿಯಾ ಭಟ್ ತನ್ನ ಮೊದಲ ದಕ್ಷಿಣ ಭಾರತದ ಸಿನಿಮಾ RRR ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್‌ನ ಇಬ್ಬರು ಸ್ಟಾರ್ ನಟರೊಂದಿಗೆ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ರಾಮ್ ಚರಣ್ ಹಾಗೂ ಜೂ.ಎನ್‌ಟಿಆರ್ ಇಬ್ಬರಿಗೂ ಇರುವ ಅಭಿಮಾನಿಗಳ ಕ್ರೇಜ್ ಅಚ್ಚರಿ ಹುಟ್ಟಿಸಿದೆ. ಅದರಲ್ಲೂ ವಿಶೇಷವಾಗಿ ಜೂ.ಎನ್‌ಟಿಆರ್ ಅಭಿಮಾನಿಗಳ ಬಗ್ಗೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತಾಡಿದ್ದಾರೆ.

 ಜೂ.ಎನ್‌ಟಿಆರ್ ಜೊತೆ ಆಲಿಯಾ ಹೊಸ ಸಿನಿಮಾ

ಜೂ.ಎನ್‌ಟಿಆರ್ ಜೊತೆ ಆಲಿಯಾ ಹೊಸ ಸಿನಿಮಾ

ಹೌದು.. ಬಾಲಿವುಡ್ ಮಂದಿಗೆ ದಕ್ಷಿಣ ಭಾರತದ ಕಥೆಗಳು ಇಷ್ಟ ಆಗುತ್ತಿದೆ. ಅದಕ್ಕೆ ಒಂದೊಂದಾಗೇ ಬಾಲಿವುಡ್‌ಗೆ ರಿಮೇಕ್ ಕೂಡ ಆಗುತ್ತಿದೆ. RRR ಸಿನಿಮಾ ಬಳಿಕ ಆಲಿಯಾ ಭಟ್‌ಗೂ ಸೌತ್ ಸಿನಿಮಾಗಳ ಮೇಲೆ ಒಲವು ಹೆಚ್ಚಾಗಿದೆ. ಹೀಗಾಗಿ ಜೂ.ಎನ್‌ಟಿಆರ್ ಅಭಿನಯದ 30ನೇ ಸಿನಿಮಾದ ಕಥೆಯನ್ನು ನಿರ್ದೇಶಕ ಕೊರಟಾಲ ಶಿವ ಹೇಳಿದ ಕೂಡಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಈ ಬಗ್ಗೆ ಸ್ವತ: ಆಲಿಯಾನೇ ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದರು. " ಕೊರಟಾಲ ಶಿವ ಬಂದು ಕಥೆಯನ್ನು ನಿರೂಪಣೆ ಮಾಡಿದ್ದರು. ಆ ಕಥೆಯನ್ನು ಕೇಳಿ ನಾನು ಬೇರೆ ಆಲೋಚನೆ ಮಾಡಲಿಲ್ಲ. ಅವರು ಕಥೆ ಹೇಳಿ ಮುಗಿಯುತ್ತಿದ್ದಂತೆ ಈ ಸಿನಿಮಾ ಒಪ್ಪಿಕೊಂಡಿದ್ದೆ. ಜೂ.ಎನ್‌ಟಿಆರ್ ಜೊತೆ ಮತ್ತೆ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇನೆ." ಎಂದು ಆಲಿಯಾ ಭಟ್ ಹೇಳಿದ್ದರು. ಈಗ ಆಲಿಯಾ ಟಾಲಿವುಡ್‌ ಯಂಗ್ ಟೈಗರ್‌ಗೆ ತಮ್ಮ ಅಭಿಮಾನಿಗಳನ್ನು ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ.

 ಜೂ.ಎನ್‌ಟಿಆರ್ ಅಭಿಮಾನಿಗಳು ನನಗೆ ಬೇಕು

ಜೂ.ಎನ್‌ಟಿಆರ್ ಅಭಿಮಾನಿಗಳು ನನಗೆ ಬೇಕು

ಆಲಿಯಾ ಭಟ್‌ಗೆ ವಿಶ್ವದ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿದ್ದಾರೆ. ಆದರೆ, ಆಲಿಯಾ ಭಟ್‌ಗೆ ಮಾತ್ರ ಜೂ.ಎನ್‌ಟಿಆರ್ ಅಭಿಮಾನಿಗಳ ಮೇಲೆ ಕಣ್ಣು. ಇತ್ತೀಚೆಗೆ RRR ಸಿನಿಮಾದ ಪ್ರಚಾರದ ವೇಳೆ ಆಲಿಯಾ ಭಟ್ ಯಂಗ್ ಟೈಗರ್ ಅಭಿಮಾನಿಗಳು ನನಗೆ ಬೇಕು ಅಂತ ಬೇಡಿಕೆ ಇಟ್ಟಿದ್ದರು. "ದಯವಿಟ್ಟು ನಿಮ್ಮ ಅಭಿಮಾನಿಗಳನ್ನು ನನಗೆ ಕೊಟ್ಟು ಬಿಡಿ. ಅವರ ಅಭಿಮಾನಿಗಳನ್ನು ನನಗೆ ಇಷ್ಟ. ಜೂ.ಎನ್‌ಟಿಆರ್ ಅಭಿಮಾನಿಗಳು ನಿಷ್ಠಾವಂತರು." ಎಂದು ಆಲಿಯಾ ಭಟ್ ಹೇಳಿದ್ದಾರೆ.

 ಸರಳ ವ್ಯಕ್ತಿತ್ವದ ನಟ ಎಂದ ಆಲಿಯಾ

ಸರಳ ವ್ಯಕ್ತಿತ್ವದ ನಟ ಎಂದ ಆಲಿಯಾ

ದಕ್ಷಿಣ ಭಾರತದಲ್ಲಿ ಜೂ.ಎನ್‌ಟಿಆರ್ ಎಷ್ಟೊಂದು ಹೆಸರು ಮಾಡಿದ್ದಾರೆ. ಎಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರೊಂದಿಗೆ ಮತ್ತೊಂದು ಸಿನಿಮಾ ಮಾಡುವುದು ನನಗೆ ಖುಷಿ. ಅವರು ತುಂಬಾನೇ ಪ್ರತಿಭಾವಂತರು. ಅವರು ನಿಜಕ್ಕೂ ಅದ್ಭುತ. ಇಷ್ಟು ದೊಡ್ಡ ನಟನಾಗಿಯೂ ಸರಳ ವ್ಯಕ್ತಿತ್ವ ಹೊಂದಿದ್ದಾರೆ. ಇಲ್ಲಿವರೆಗೂ ಅವರು ಮಾಡಿರುವ ಕೆಲಸವನ್ನು ನಾನು ಇಷ್ಟ ಪಟ್ಟಿದ್ದೇನೆ." ಎಂದು RRR ಪ್ರಚಾರದ ವೇಳೆ ಹೇಳಿದ್ದರು.

 ಎರಡು ಸಿನಿಮಾ ಪ್ರಚಾರದಲ್ಲಿ ಬ್ಯುಸಿ

ಎರಡು ಸಿನಿಮಾ ಪ್ರಚಾರದಲ್ಲಿ ಬ್ಯುಸಿ

ಆಲಿಯಾ ಭಟ್ ಎರಡು ಸಿನಿಮಾ ಒಂದು ತಿಂಗಳ ಅಂತರದಲ್ಲಿ ಬಿಡುಗಡೆಯಾಗುತ್ತಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ 'ಗಂಗೂಬಾಯಿ ಕಾಠಿಯಾವಾಡಿ' ಫೆಬ್ರವರಿ 25ಕ್ಕೆ ಬಿಡುಗಡೆಯಾಗುತ್ತಿದೆ. ಈ ಚಿತ್ರ ತೆರೆಕಂಡ ಒಂದು ತಿಂಗಳ ಬಳಿಕ ಮಾರ್ಚ್ 25ಕ್ಕೆ RRR ರಿಲೀಸ್ ಆಗಲಿದೆ. ಹೀಗಾಗಿ ಇನ್ನು ಒಂದೂವರೆ ತಿಂಗಳು ಎರಡೂ ಸಿನಿಮಾಗಳ ಭರ್ಜರಿ ಪ್ರಚಾರದಲ್ಲಿ ಆಲಿಯಾ ಭಟ್ ಭಾಗಿಯಾಗಲಿದ್ದಾರೆ. ಜೂ.ಎನ್‌ಟಿಆರ್ ಹಾಗೂ ಆಲಿಯಾ ಹೊಸ ಸಿನಿಮಾ ಏಪ್ರಿಲ್ ತಿಂಗಳಲ್ಲಿ ಸೆಟ್ಟೇರುವ ಸಾಧ್ಯತೆಯಿದೆ.

More from Filmibeat

English summary
Alia Bhatt praised J NTr fans and requested for him to give me his fans. She asked in an media interaction "Please give me your fans. I love his fans. His fans are so dedicated, so so loyal and dedicated.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X