Alia-Ranbir Marriage: ಆಲಿಯಾ-ರಣ್‌ಬೀರ್ ಸಪ್ತಪದಿ ತುಳಿಯಲಿಲ್ಲ ಯಾಕೆ?
ಬಾಲಿವುಡ್‌ನ ಮೋಸ್ಟ್ ಬ್ಯೂಟಿಪುಲ್ ಲವರ್ಸ್ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಐದು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಈ ಜೋಡಿಯ ಮದುವೆ ಬಗ್ಗೆ ಚರ್ಚೆಯಾಗುತ್ತಿತ್ತು. ಕೊನೆಗೂ ಈ ಜೋಡಿ ನಿನ್ನೆ (ಏಪ್ರಿಲ್ 14) ಪತಿ-ಪತ್ನಿಯರಾಗಿದ್ದಾರೆ.
Recommended Video

ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಮದುವೆ ದಿಢೀರನೇ, ಗುಟ್ಟಾಗಿ ನಡೆದು ಹೋಗಿದೆ. ಕೇವಲ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು. ಕೆಲವು ಜನರ ಸಮ್ಮುಖದಲ್ಲಿ ಈ ಜೋಡಿಯ ಮದುವೆ ನಡೆದಿದೆ. ಸ್ವತ: ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ವಿವಾಹದ ಬಳಿಕ ಕ್ಯಾಮರಾಗಳಿಗೆ ಪೋಸ್ ಕೊಟ್ಟಿದ್ದಾರೆ.
ಇನ್ನೊಂದು ಕಡೆ ಆಲಿಯಾ ಹಾಗೂ ರಣ್‌ಬೀರ್ ಕಪೂರ್ ಮದುವೆ ಬಗ್ಗೆ ದೊಡ್ಡ ಚರ್ಚೆಯಾಗುತ್ತಿದೆ. ಈ ಜೋಡಿ ಸಪ್ತಪದಿನೇ ತುಳಿಯಲ್ಲಿ ಅನ್ನುವುದನ್ನು ಆಲಿಯಾ ಸಹೋದರ ರಾಹುಲ್ ಭಟ್ ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಆಲಿಯಾ ಹಾಗೂ ರಣ್‌ಬೀರ್ ಸಪ್ತಪದಿ ತುಳಿಯಲಿಲ್ಲ ಯಾಕೆ? ಅಂತ ತಿಳಿಯಲು ಮುಂದೆ ಓದಿ.

7 ಹೆಜ್ಜೆ ಹಾಕಿಲ್ಲ.. ಹಾಕಿದ್ದು ಬರೀ 4 ಹೆಜ್ಜೆ
ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಗುರುವಾರ (ಏಪ್ರಿಲ್ 14)ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಷ್ಟು ದಿನ ಇಬ್ಬರ ಅಭಿಮಾನಿಗಳು ಇದೊಂದು ಕ್ಷಣಕ್ಕಾಗಿ ಕಾದು ಕೂತಿದ್ದರು. ಮದುವೆ ಡ್ರೆಸ್‌ನಲ್ಲಿ ಆಲಿಯಾ ಹಾಗೂ ರಣ್‌ಬೀರ್ ಇಬ್ಬರನ್ನೂ ನೋಡಿ ಫ್ಯಾನ್ಸ್ ಕಣ್ತುಂಬಿಕೊಂಡಿದ್ದಾರೆ. ಇದೇ ವೇಳೆ ಆಲಿಯಾ ಹಾಗೂ ರಣ್‌ಬೀರ್ ಸಪ್ತಪದಿ ತುಳಿದಿಲ್ಲ. ಕೇವಲ ನಾಲ್ಕು ಹೆಜ್ಜೆ ಹಾಕಿದ್ದಾರೆ ಎಂದು ಆಲಿಯಾ ಸಹೋದರ ಸಂಬಂಧಿ ರಾಹುಲ್ ಭಟ್ ರಿವೀಲ್ ಮಾಡಿದ್ದಾರೆ.

4 ಹೆಜ್ಜೆ ಹಾಕಿದ್ದು ಯಾಕೆ?
ಆಲಿಯಾ ಹಾಗೂ ರಣ್‌ಬೀರ್ ಕಪೂರ್ ಹಾಕಿದ್ದೇ 4 ಹೆಜ್ಜೆ ಎಂದು ರಾಹುಲ್ ಭಟ್ ತಿಳಿಸಿದ್ದಾರೆ. " ಅದ್ಭುತ ವಿಷಯವೇನಂದ್ರೆ, ಈ ಮದುವೆಯಲ್ಲಿ 7 ಹೆಜ್ಜೆ ಹಾಕೇ ಇಲ್ಲ. ಹಾಕಿದ್ದೇ 4 ಹೆಜ್ಜೆ. ಮದುವೆ ವೇಳೆ ಸಹೋದರರು ಸಾಕ್ಷಿಯಾಗಬೇಕಾಗುತ್ತೆ. ಹೀಗಾಗಿ ನಾನು ಅಲ್ಲಿದ್ದೆ. ಪಂಡಿತರ ಸಲಹೆಯಂತೆ 4 ಹೆಜ್ಜೆಗಳನ್ನು ಹಾಕಲಾಗಿದ್ದು, ಅವರು ಪ್ರತಿಯೊಂದು ಹೆಜ್ಜೆಯ ಮಹತ್ವವನ್ನು ತಿಳಿಸಿದ್ದಾರೆ. ಒಂದು ಹೆಜ್ಜೆ ನಂಬಿಕೆಗಾಗಿ, ಇನ್ನೊಂದು ಹೆಜ್ಜೆ ಸಂತಾನಕ್ಕಾಗಿ." ಎಂದು ರಾಹುಲ್ ಭಟ್ ತಿಳಿಸಿದ್ದಾರೆ.

ಆಲಿಯಾಗೆ ರಣ್‌ಬೀರ್ ಕಿಸ್
ವಿವಾಹದಲ್ಲಿ ಕೇವಲ ಆಲಿಯಾ ಹಾಗೂ ರಣ್‌ಬೀರ್ ಸ್ನೇಹಿತರು ಹಾಗೂ ಆಪ್ತರಷ್ಟೇ ಭಾಗವಹಿಸಿದ್ದರು. ಇವರ ಸಮ್ಮುಖದಲ್ಲಿಯೇ ಆಲಿಯಾ ಭಟ್ ಹಾಗೂ ರಣ್‌ಬೀರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ನೆಚ್ಚಿನ ಟೈಂ ಪಾಸ್ ಸ್ಥಳವಾಗಿದ್ದ ಮುಂಬೈನ ಬಾಂದ್ರಾದಲ್ಲಿರುವ ಬಂಗಲೆ 'ವಾಸ್ತು'ನಲ್ಲಿ ಮದುವೆ ಆಗಿದ್ದಾರೆ.

ನವ ಜೋಡಿಗೆ ಶುಭಾಶಯ
ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಇಬ್ಬರ ವಿವಾಹವಾದ ಬಳಿಕ ಬಾಲಿವುಡ್ ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯಗಳನ್ನು ಕಳುಹಿಸುತ್ತಿದ್ದಾರೆ. ರಣ್‌ಬೀರ್ ಕಪೂರ್ ಮಾಜಿ ಗೆಳತಿ ಹಾಗೂ ವಿಕ್ಕಿ ಕೌಶಲ್ ಪತ್ನಿ ಕತ್ರಿನಾ ಕೈಫ್ " ಇಬ್ಬರಿಗೂ ಶುಭಾಶಯಗಳು. ಇಬ್ಬರಿಗೂ ಪ್ರೀತಿ ಹಾಗೂ ಖುಷಿ ಸದಾ ಸಿಗಲಿ." ಎಂದು ಹಾರೈಸಿದ್ದಾರೆ. ವಿಕ್ಕಿ ಕೌಶಲ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಶುಭ ಹಾರೈಸಿದ್ದಾರೆ.


Click it and Unblock the Notifications











