Ranbir Kapoor-Alia Bhatt wedding: 'KGF 2' ರಿಲೀಸ್ ಆಗುತ್ತಿದ್ದಂತೆ ಹಸೆಮಣೆ ಏರಲಿರುವ ಆಲಿಯಾ-ರಣ್‌ಬೀರ್!

ಬಾಲಿವುಡ್‌ ಲವ್‌ ಬರ್ಡ್ಸ್ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್. ಹಲವು ವರ್ಷ ಕೈ ಕೈ ಹಿಡಿದು ಸುತ್ತಾಡಿದ್ದರು. ವಿದೇಶಗಳಿಗೆ ಹೋಗಿ ಸುತ್ತಾಡಿ ಬಂದಿದ್ದರು. ಹೀಗೆ ಸದಾ ಸುದ್ದಿಯಲ್ಲಿದ್ದ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲು ಮುಂದಾಗಿದೆ. ಇಷ್ಟು ದಿನ ಇವರ ಮದುವೆ ಬಗ್ಗೆ ಗುಸು ಗುಸು ಸುದ್ದಿ ಕೇಳಿ ಬಂದಿತ್ತು. ಕೊನೆಗೂ ಆ ಗಾಳಿಸುದ್ದಿಗೀಗ ಬ್ರೇಕ್ ಬಿದ್ದಿದೆ.

ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಇಬ್ಬರೂ ಇದೇ ಮದುವೆ ಆಗುತ್ತಾರೆ ಅನ್ನೋದು ಕನ್ಫರ್ಮ್ ಆಗಿತ್ತು. ಆದರೆ, ಇಷ್ಟು ಬೇಗ ಕೌಟುಂಬಿಕ ಜೀವನಕ್ಕೆ ಕಾಲಿಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆದ್ರೀಗ ಬಾಲಿವುಡ್‌ನ ಈ ಲವ್ ಬರ್ಡ್ಸ್ ಸಡನ್ ಆಗಿ ಶಾಕ್ ಕೊಟ್ಟಿದೆ. ಅಂದುಕೊಟ್ಟಿದ್ದಕ್ಕಿಂತ ಬೇಗನೇ ವೈವಾಹಿಕ ಜೀವನಕ್ಕೆ ಕಾಲಿಡಲು ಮುಂದಾಗಿದೆ.

ಆಲಿಯಾ ಭಟ್ ಹಾಗೂ ರಣ್‌ಬೀರ್ ಮದುವೆ ಯಾವಾಗ ಅನ್ನುವುದು ಇನ್ನೂ ನಿಗೂಢವಾಗಿಯೇ ಇದೆ. ಆದ್ರೀಗ ಇಬ್ಬರೂ ವೈವಾಹಿಕ ಜೀವನಕ್ಕೆ ಯಾವಾಗ ಕಾಲಿಡುತ್ತಿದ್ದಾರೆ ಎನ್ನುವುದು ರಿವೀಲ್ ಆಗಿದೆ. ಇತ್ತ 'ಕೆಜಿಎಫ್ 2' ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಈ ಜೋಡಿ ಹಕ್ಕಿಗಳು ಹಸೆಮಣೆ ಏರಲು ಸಜ್ಜಾಗುತ್ತಿದೆ. ಅಷ್ಟಕ್ಕೂ ಬಾಲಿವುಡ್‌ನ ಪ್ರಯಣ ಪಕ್ಷಿಗಳು ಏಪ್ರಿಲ್ ಎರಡನೇ ವಾರದಲ್ಲಿಯೇ ರಿಲೀಸ್ ಆಗುತ್ತಿರುವುದೇಕೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಜೋಡಿ ಹಕ್ಕಿಗಳ ಮದುವೆ ಯಾವಾಗ?

ಜೋಡಿ ಹಕ್ಕಿಗಳ ಮದುವೆ ಯಾವಾಗ?

ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ ರಹಸ್ಯವಾಗಿ ಜರುಗಿತ್ತು. ಮದುವೆಗೆ ಎರಡು ಮೂರು ದಿನ ಇದೆ ಅನ್ನುವವರೆಗೂ ಈ ಜೋಡಿ ವಿವಾಹ ಆಗುತ್ತಿದೆಯೋ ಇಲ್ಲವೋ ಅನ್ನುವುದನ್ನು ಬಿಟ್ಟುಕೊಟ್ಟಿರಲಿಲ್ಲ. ಈಗ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಸರದಿ. ಯಾಕಂದರೆ, ಈ ಜೋಡಿ ಕೂಡ ತಮ್ಮ ಮದುವೆಯನ್ನು ಅಷ್ಟೇ ರಹಸ್ಯವಾಗಿ ಇಟ್ಟಿದೆ. ಏಪ್ರಿಲ್‌ ತಿಂಗಳಲ್ಲಿ ಈ ಜೋಡಿ ಸಪ್ತಪದಿ ತುಳಿಯುವುದಕ್ಕೆ ಸಜ್ಜಾಗಿ ನಿಂತಿದೆ.

ಆಲಿಯಾ-ರಣ್‌ಬೀರ್ 5 ವರ್ಷ ಡೇಟಿಂಗ್

ಆಲಿಯಾ-ರಣ್‌ಬೀರ್ 5 ವರ್ಷ ಡೇಟಿಂಗ್

ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಸುಮಾರು 5 ವರ್ಷ ಡೇಟಿಂಗ್ ಮಾಡಿದ್ದರು. ಇಬ್ಬರೂ ಪ್ರೀತಿಸುತ್ತಿರುವ ವಿಷಯ ಅದ್ಯಾವಾಗ ಬೆಳಕಿಗೆ ಬಂತೋ ಅಲ್ಲಿಂದಲೇ ಇಬ್ಬರು ಮದುವೆ ಬಗ್ಗೆ ಚರ್ಚೆಯಾಗುತ್ತಿತ್ತು. ಆದ್ರೀಗ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದೆ. ಏಪ್ರಿಲ್ 13 ರಿಂದಲೇ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಮದುವೆ ಸಂಭ್ರಮ ಆರಂಭ ಆಗಲಿದೆಯಂತೆ.

ಆಲಿಯಾ-ರಣ್‌ಬೀರ್ ಮದುವೆ ಡೇಟ್ ಯಾವಾಗ?

ಆಲಿಯಾ-ರಣ್‌ಬೀರ್ ಮದುವೆ ಡೇಟ್ ಯಾವಾಗ?

ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಮದುವೆ ಸಮಾರಂಭ ಏಪ್ರಿಲ್ 13 ರಿಂದ ಆರಂಭ ಆಗಲಿದೆ. ಏಪ್ರಿಲ್ 13ರಂದು ಮೆಹೆಂದಿ ಕಾರ್ಯಕ್ರಮ ಜರುಗಲಿದೆ. ಏಪ್ರಿಲ್ 14ಕ್ಕೆ ಸಂಗೀತ್ ಕಾರ್ಯಕ್ರಮ ನಡೆಯಲಿದ್ದು, ಏಪ್ರಿಲ್ 15ರಂದು ಈ ಜೋಡಿ ಹಸೆಮಣೆ ಏರಲಿದೆ ಎನ್ನಲಾಗಿದೆ.

'ಕೆಜಿಎಫ್ 2' or 'ಆಲಿಯಾ-ರಣ್‌ಬೀರ್' ಮದುವೆ

'ಕೆಜಿಎಫ್ 2' or 'ಆಲಿಯಾ-ರಣ್‌ಬೀರ್' ಮದುವೆ

ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಏಪ್ರಿಲ್ 15 ರಂದು ವಿವಾಹವಾಗಲಿದ್ದು, ಇಬ್ಬರ ಮದುವೆ ಸಂಭ್ರಮ ಏಪ್ರಿಲ್ 17ರವರೆಗೂ ನಡೆಯುತ್ತೆ ಎನ್ನಲಾಗಿದೆ. ಈ ಮಧ್ಯೆ ಕೆಜಿಎಫ್ 2 ಸಿನಿಮಾ ಏಪ್ರಿಲ್ 14ರಂದು ಬಾಲಿವುಡ್‌ನಲ್ಲೂ ರಿಲೀಸ್ ಆಗುತ್ತಿದೆ. ಹೀಗಾಗಿ ಬಾಲಿವುಡ್ ಮಂದಿ ಆಲಿಯಾ-ರಣ್‌ಬೀರ್ ಮದುವೆ ಸಂಭ್ರಮದ ಮೂಡ್ನಲ್ಲಿರುವುದರಿಂದ 'ಕೆಜಿಎಫ್ 2' ಸಿನಿಮಾ ನೋಡಿ ಎಂಜಾಯ್ ಮಾಡುತ್ತಾರಾ? ಎನ್ನುವ ಕುತೂಲಹವಿದೆ.

More from Filmibeat

English summary
Alia Bhatt Ranbir Kapoor Will Marry On KGF 2 Release Day On April 14th. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X