ಥೈಲ್ಯಾಂಡ್ ಜನರ ಮನಗೆದ್ದ 'ಗಂಗೂಬಾಯಿ': ಬಾಲಿವುಡ್‌ ಸಿನಿಮಾ ಗೆದ್ದಿದ್ದೇಗೆ?

ಆಲಿಯಾ ಭಟ್ ಸಿನಿಮಾ 'ಗಂಗೂಬಾಯಿ ಕಾಠಿಯಾವಾಡಿ' ಬಾಲಿವುಡ್‌ನ ಹಿಟ್ ಸಿನಿಮಾಗಳಲ್ಲೊಂದು. ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಸೂಪರ್‌ ಹಿಟ್ ಆಗಿದೆ. ಸಿನಿಮಾ ಬಿಡುಗಡೆಯಾಗಿ ಎಷ್ಟೋ ದಿನಗಳಾದ ಮೇಲೆ ಥೈಲ್ಯಾಂಡ್‌ನಲ್ಲಿ ಸಿನಿಮಾ ಜನರ ಮನಗೆದ್ದಿದೆ.

ಸೆಕ್ಸ್ ವರ್ಕರ್ ಜೀವನ ಚರಿತ್ರೆಯನ್ನು ಆಧರಿಸಿದ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾವನ್ನು ಥೈಲ್ಯಾಂಡ್‌ ಜನರು ಮನಸಾರೆ ಇಷ್ಟ ಪಟ್ಟಿದ್ದಾರೆ. ಸಹಜವಾಗಿ ಥೈಲ್ಯಾಂಡ್‌ನಲ್ಲಿ ಬಾಲಿವುಡ್‌ ಸಿನಿಮಾಗಳನ್ನು ನೋಡುವುದಕ್ಕೆ ಪೂರಕ ವಾತಾವರಣವಿರಲಿಲ್ಲ. ಆದ್ರೀಗ ಥೈಲ್ಯಾಂಡ್‌ ಒಟಿಟಿ ಇಂತಹದ್ದೊಂದು ಅವಕಾಶವನ್ನು ಮಾಡಿಕೊಟ್ಟದೆ. ಕೋವಿಡ್ ಬಳಿಕ ಭಾರತೀಯ ಸಿನಿಮಾಗಳು ಥೈಲ್ಯಾಂಡ್‌ನಲ್ಲಿ ನೋಡುವುದಕ್ಕೆ ಸಿಗುತ್ತಿವೆ. ಅಂತಹದ್ರಲ್ಲಿ 'ಗಂಗೂಬಾಯಿ ಕಾಠಿಯಾವಾಡಿ' ಕೂಡ ಒಂದು.

ಗಂಗೂಬಾಯಿ ಸಿನಿಮಾ ನೋಡಿ ಜನರು ಫಿದಾ ಆಗಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಗಂಗೂಬಾಯಿಯಂತೆಯೇ ಡ್ರೆಸ್ ಮಾಡಿಕೊಂಡು ಪೋಸ್ಟ್ ಮಾಡುತ್ತಿದೆ. ಈ ಸಿನಿಮಾ ಥೈ ನೆಟ್‌ಫ್ಲಿಕ್ಸ್‌ನಲ್ಲಿ ಪ್ರೀಮಿಯರ್‌ ಆಗುತ್ತಿದ್ದು, ಭಾರೀ ದೊಡ್ಡ ಯಶಸ್ಸು ಕಂಡಿದೆ. ಇಷ್ಟು ದೊಡ್ಡ ಹಿಟ್ ಕೊಟ್ಟ ಥೈಲ್ಯಾಂಡ್ ಜನರು ಭೇಟಿ ಮಾಡಲು ಆಲಿಯಾ ಶೀಘ್ರದಲ್ಲಿಯೇ ಪತಿಯೊಂದಿಗೆ ಪ್ರಯಾಣ ಬೆಳೆಸಲಿದ್ದಾರೆ.

ಗಂಗೂಬಾಯಿ ಬಿಗ್ ಹಿಟ್

ಗಂಗೂಬಾಯಿ ಬಿಗ್ ಹಿಟ್

'ಗಂಗೂಬಾಯಿ ಕಾಠಿಯಾವಾಡಿ' ಥೈಲ್ಯಾಂಡ್‌ನಲ್ಲಿ ಇಷ್ಟು ದೊಡ್ಡ ಹಿಟ್ ಆಗುತ್ತೆ ಎಂದು ಊಹಿಸಲೂ ಸಾಧ್ಯವಿಲ್ಲ. ಅಲ್ಲಿನ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ರಿಲೀಸ್ ಆದಲ್ಲಿಂದ ಹೆಚ್ಚು ಸಂಖ್ಯೆಯಲ್ಲಿ ಜನರು ಸಿನಿಮಾ ನೋಡುತ್ತಿದ್ದಾರೆ. ಆಲಿಯಾ ಭಟ್‌ ಸ್ಟೈಲ್‌ ಅನ್ನು ಇಷ್ಟ ಪಡುತ್ತಿದ್ದಾರೆ. ಕಾಮಾಟಿಪುರದ ರಾಣಿಯ ಖದರ್‌ಗೆ ಮರುಳಾಗಿದ್ದಾರೆ. ಥೈಲ್ಯಾಂಡಿನ ಹುಡುಗಿಯರು ಹಾಗೂ ಮಹಿಳೆಯರು ಆಲಿಯಾಳಂತೆ ಗೆಟಪ್‌ ಹಾಕಿಕೊಂಡು ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಆ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಭಾರತದಲ್ಲೂ ಹಿಟ್ ಆಗಿಲ್ಲ

ಭಾರತದಲ್ಲೂ ಹಿಟ್ ಆಗಿಲ್ಲ

ಥೈಲ್ಯಾಂಡ್‌ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ಟ್ರೆಂಡಿಂಗ್‌ನಲ್ಲಿದೆ. ಟ್ವಿಟರ್, ಇನ್‌ಸ್ಟಾಗ್ರಾಂ, ಟಿಕ್‌ಟಾಕ್ ಹಾಗೂ ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಸುಮಾರು 2 ಬಿಲಿಯನ್ ಹ್ಯಾಶ್‌ಟ್ಯಾಗ್‌ ವಿಡಿಯೋಗಳು ಟಿಕ್‌ಟಾಕ್‌ನಲ್ಲಿವೆ. ಸಾವಿರಾರು ವಿಡಿಯೋಗಳು ಹಾಗೂ ರೀಲ್ಸ್ ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಆಗುತ್ತಿವೆ. ಜನರು ಗಂಗೂಬಾಯಿ ಲುಕ್‌ಗೆ ಡ್ಯಾನ್ಸ್‌ಗೆ ಫಿದಾ ಆಗಿದ್ದಾರೆ. ಈ ಕ್ರೇಜ್ ಭಾರತದಲ್ಲೂ ಇರಲಿಲ್ಲ ಎನ್ನಲಾಗುತ್ತಿದೆ.

ಥೈಲ್ಯಾಂಡ್‌ಗೆ ಆಲಿಯಾ ಪ್ರವಾಸ

ಥೈಲ್ಯಾಂಡ್‌ಗೆ ಆಲಿಯಾ ಪ್ರವಾಸ

ಥೈಲ್ಯಾಂಡ್‌ನಲ್ಲಿ 'ಗಂಗೂಬಾಯಿ ಕಾಠಿಯಾವಾಡಿ ಕ್ರೇಜ್ ನೋಡಿ ಆಲಿಯಾ ಭಟ್ ಥ್ರಿಲ್ ಆಗಿದ್ದಾರೆ. ಈ ರೆಸ್ಪಾನ್ಸ್‌ಗೆ ಆಲಿಯಾ ಭಟ್ ಥೈಲ್ಯಾಂಡ್ ಜನರು ಧನ್ಯವಾದಗಳನ್ನು ಹೇಳಿದ್ದಲ್ಲದೆ ಅವರನ್ನು ನೋಡಲು ಬರುವುದಾಗಿ ಹೇಳಿದ್ದಾರೆ. ಶೀಘ್ರವೇ ಥೈಲ್ಯಾಂಡ್ ಪ್ರವಾಸ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆಲಿಯಾ ಭಟ್ ಜೊತೆ ರಣ್‌ಬೀರ್ ಕಪೂರ್ ಕೂಡ ಪಯಣ ಬೆಳೆಸುವ ಸಾಧ್ಯತೆಯಿದೆ.

ಟ್ರೆಂಡಿಂಗ್‌ನಲ್ಲಿ RRR

ಟ್ರೆಂಡಿಂಗ್‌ನಲ್ಲಿ RRR

ಹಾಗಂತ 'ಗಂಗೂಬಾಯಿ ಕಾಠಿಯಾವಾಡಿ' ಒಂದೇ ಸಿನಿಮಾ ಅಲ್ಲ. ರಾಜಮೌಳಿ ನಿರ್ದೇಶಿಸಿದ RRR ಸಿನಿಮಾ ಕೂಡ ಥೈಲ್ಯಾಂಡ್‌ ಫೇಮಸ್ ಆಗಿದೆ. ಅಲ್ಲಿನ ಜನರಿಗೆ ಈ ಸಿನಿಮಾ ಇಷ್ಟ ಆಗಿದೆ. ಈ ಎರಡು ಸಿನಿಮಾಗಳು ಥೈಲ್ಯಾಂಡ್‌ನಲ್ಲಿ ಭಾರತೀಯ ಸಿನಿಮಾಗಳ ಕ್ರೇಜ್ ಹೆಚ್ಚಿಸಿವೆ. ಈ ಮೂಲಕ ಮತ್ತೊಂದು ದೇಶದಲ್ಲಿ ಭಾರತೀಯ ಸಿನಿಮಾಗಳು ಸದ್ದು ಮಾಡುವಂತಾಗಿದೆ.

More from Filmibeat

English summary
Alia Bhatt Starrer Gangubai Kathiawadi Wins Thailand People Hearts, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X