ಅರ್ಜುನ್ ಕಪೂರ್ ಲೈಫ್‌ನಲ್ಲಿ ಮಲೈಕಾ ಇಲ್ವಾ..? "ಅಮ್ಮ ಇದನ್ನೆಲ್ಲ ಓದದೇ ಇದ್ರೆ ಸಾಕು" ಎಂದಿದ್ದೇಕೆ ಹೊಸ ಗರ್ಲ್‌ಫ್ರೆಂಡ್?

ಬಾಲಿವುಡ್‌ನ ಹಾಟ್ ಕಪಲ್ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ. ಇವರಿಬ್ಬರ ಲವ್ ಸ್ಟೋರಿ ರಹಸ್ಯವಾಗೇನು ಉಳಿದಿಲ್ಲ. ಇನ್ನೇನು ಈ ಜೋಡಿ ಮದುವೆ ಆಗುತ್ತಾರೆ ಅನ್ನುವಾಗಲೇ ಅರ್ಜುನ್ ಹಾಗೂ ಮಲೈಕಾ ಬ್ರೇಕಪ್ ಮಾಡಿಕೊಂಡಿದ್ದಾರೆ ಅನ್ನೋ ಪುಕಾರು ಹಬ್ಬಿದೆ.

ಈ ಜೋಡಿ ಬ್ರೇಕಪ್ ಮಾಡಿಕೊಂಡಿರೋ ಸುದ್ದಿ ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆಯೋ ಇಲ್ವೋ.. ಅರ್ಜುನ್ ಕಪೂರ್ ಹೆಸರು ಮತ್ತೊಬ್ಬ ನಟಿಯ ಜೊತೆ ತಳುಕು ಹಾಕಿಕೊಂಡಾಗ ಶಾಕ್ ಆಗಿತ್ತು. ಸದ್ಯ ಅರ್ಜುನ್ ಕಪೂರ್ ಜೊತೆ ನಟಿ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಯೂಯೆನ್ಸರ್ ಕುಶಾ ಕಪಿಲಾ ಜೊತೆ ತಳುಕು ಹಾಕಿಕೊಂಡಿದೆ.

Amid Break-Up Rumours With Malaika Arora Arjun Kapoor Dating Kusha Kapila here is her reaction

ಮಲೈಕಾ ಅರೋರಾರನ್ನು ಬಿಟ್ಟು ಅರ್ಜುನ್ ಕಪೂರ್ ಮತ್ತೊಬ್ಬ ನಟಿಯೊಂದಿಗೆ ಡೇಟಿಂಗ್ ಮಾಡುತ್ತಿರೋ ವಿಷಯ ಬಾಲಿವುಡ್ ಅಂಗಳದಲ್ಲಿ ಚರ್ಚೆಯಲ್ಲಿದೆ. ಈ ಮಧ್ಯೆ ಕುಶಾ ಕಪಿಲಾ ತನ್ನ ಸುತ್ತ ಹರಿದಾಡುತ್ತಿರೋ ಗಾಳಿ ಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟಕ್ಕೂ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಬ್ರೇಕಪ್ ಮಾಡಿಕೊಂಡಿದ್ದಾರಾ? ಡೇಟಿಂಗ್ ಬಗ್ಗೆ ಕುಶಾ ಕಪಿಲಾ ಏನಂತಾರೆ? ತಿಳಿಯಲು ಮುಂದೆ ಓದಿ..

ಮಲೈಕಾ-ಅರ್ಜುನ್ ಬ್ರೇಕಪ್ ಮಾಡಿಕೊಂಡ್ರಾ?

ಇತ್ತೀಚೆಗೆ ಅರ್ಜುನ್ ಕಪೂರ್ ಒಂಟಿಯಾಗಿ ಪ್ರವಾಸ ಮಾಡಿದ್ದರು. ಆ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಇನ್ನೊಂದು ಕಡೆ ಮಲೈಕಾ ಅರೋರಾ ಕೂಡ ಒಂಟಿಯಾಗಿಯೇ ಓಡಾಡುತ್ತಿದ್ದಾರೆ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ ಬಾಲಿವುಡ್ ಮಂದಿ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ. ಅರ್ಜುನ್ ಹಾಗೂ ಮಲೈಕಾ ಇಬ್ಬರೂ ಬೇರೆ ಬೇರೆಯಾಗಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಈ ಮಧ್ಯೆ ಅರ್ಜುನ್ ಕಪೂರ್ ಜೊತೆ ಕುಶಾ ಕಪಿಲಾ ಹೆಸರು ತಳುಕು ಹಾಕಿಕೊಂಡಿದೆ.

Amid Break-Up Rumours With Malaika Arora Arjun Kapoor Dating Kusha Kapila here is her reaction

ಕುಶಾ ಕಪಿಲಾ ಜೊತೆ ಅರ್ಜುನ್ ಡೇಟಿಂಗ್?

ಇತ್ತೀಚೆಗೆ ಕರಣ್ ಜೋಹರ್ ಪಾರ್ಟಿಯಲ್ಲಿ ಅರ್ಜುನ್ ಕಪೂರ್ ಕಾಣಿಸಿಕೊಂಡಿದ್ದರು. ಈ ಪಾರ್ಟಿಯಲ್ಲೂ ಮಲೈಕಾ ಅರೋರಾ ಕಾಣಿಸಿಕೊಂಡಿರಲಿಲ್ಲ. ಆದರೆ, ಇದೇ ಪಾರ್ಟಿಯಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಕುಶಾ ಕಪಿಲಾ ಉಪಸ್ಥಿತಿ ಇತ್ತು. ಇಲ್ಲಿಂದ ಅರ್ಜುನ್ ಹಾಗೂ ಕುಶಾ ಕಪಿಲಾ ಡೇಟಿಂಗ್ ಮ್ಯಾಟರ್ ಚರ್ಚೆಗೆ ಬಂದಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಕುಶಾ ಕಪಿಲಾ ಪ್ರತಿಕ್ರಿಯೆ ನೀಡಿದ್ದಾರೆ.

ಡೇಟಿಂಗ್ ಬಗ್ಗೆ ಕುಶಾ ಕಪಿಲಾ ಹೇಳಿದ್ದೇನು?

ಅರ್ಜುನ್ ಕಪೂರ್ ಜೊತೆ ಕುಶಾ ಕಪಿಲಾ ಹೆಸರು ತಳುಕು ಹಾಕಿಕೊಳ್ಳುತ್ತಿದ್ದಂತೆ ವೆಬ್‌ಸೈಟ್ ಒಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. "ಪ್ರತಿ ದಿನ ನನ್ನ ಬಗ್ಗೆ ಇಂತಹ ಬೇಡದ ವಿಷಯಗಳನ್ನು ಕೇಳಿ ನನ್ನ ಬಗ್ಗೆ ನನ್ನದೇ ಸ್ಟೈಲ್‌ನಲ್ಲಿ ಪರಿಚಯ ಮಾಡಿಕೊಳ್ಳಬೇಕು ಅಂತ ಅನಿಸುತ್ತಿದೆ. ಪ್ರತಿ ಬಾರಿ ಇಂತಹದ್ದನ್ನು ಓದಿದಾಗ ನನ್ನ ಅಮ್ಮ ಇದನ್ನೆಲ್ಲ ಓದದೇ ಇರಲಿ ಅಂತ ಬಯಸುತ್ತೇನೆ." ಎಂದು ಕುಶಾ ಕಪಿಲಾ ಪ್ರತಿಕ್ರಿಯೆ ನೀಡಿದ್ದಾರೆ.

ವಿಚ್ಚೇದನ ನೀಡಿ ಸುದ್ದಿಯಲ್ಲಿದ್ರು

2017ರಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಜೋರಾವರ್‌ರನ್ನು ಕುಶಾ ಕಪಿಲಾ ಮದುವೆ ಆಗಿದ್ದರು. ಆದರೆ, ಜೂನ್ 2023ಯಲ್ಲಿ ಕುಶಾ ಕಪಿಲಾ ಇಬ್ಬರೂ ಬೇರೆಯಾಗಿದ್ದಾಗಿ ಘೋಷಣೆ ಮಾಡಿದ್ದರು. ಇಬ್ಬರೂ ಬೇರೆ ಬೇರೆಯಾಗಲು ನಿರ್ಧರಿಸಿದ್ದೇವೆ. ಈ ನಿರ್ಧಾರ ಅಷ್ಟು ಸುಲಭದ್ದಾಗಿರಲಿಲ್ಲ. ನಾವು ಈ ಸಂಬಂಧ ಇನ್ನು ಮುಂದುವರೆಯಲು ಸಾಧ್ಯವೇ ಇಲ್ಲ ಅನ್ನುವವರೆಗೂ ಪ್ರಯತ್ನ ಪಟ್ಟೆವು" ಎಂದು ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ಈ ಬೆನ್ನಲ್ಲೇ ಅರ್ಜುನ್ ಕಪೂರ್ ಜೊತೆ ಈಕೆಯ ಹೆಸರು ತಳುಕು ಹಾಕಿಕೊಳ್ಳುತ್ತಿದೆ.

More from Filmibeat

English summary
Arjun Kapoor breakup with Malaika Arora and dating rumours with Kusha Kapila; here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X